ಇವತ್ತು ಜಗತ್ತು ಓಡುತ್ತಿರುವ ವೇಗದ ಲೆಕ್ಕಾಚಾರದಲ್ಲಿ ಈ ಮಾತು ನೂರಕ್ಕೆ ನೂರು ನಿಜ. ಬಂಧು-ಬಳಗ ದೂರದ ಮಾತಾಯಿತು. ಒಡಹುಟ್ಟಿದವರು ಕೂಡ ಒಬ್ಬರ ಮುಖ ಒಬ್ಬರು ನೋಡಿ ವರ್ಷಗಳು ಕಳೆದಿರುತ್ತವೆ. ಕೆಲಸ-ಬದುಕು ಅರಸಿ ಭೂಪಟದ ಒಂದೊಂದು ಮೂಲೆಯಲ್ಲಿ ಬದುಕುವ ಜನರದ್ದು ಒಂದು ಮಾತಾದರೆ, ಪಕ್ಕದ ರಸ್ತೆಯಲ್ಲಿದ್ದೂ ಮುಖ ನೋಡದ ಸಂಬಂಧ ಇನ್ನಷ್ಟು ಜನರದ್ದು. ಭೂಮಿಯ ಬೆಲೆ...
ಸ್ಪ್ಯಾನಿಷ್ ಗಾದೆಗಳು
ಕುರುಡರ ಸಾಮ್ರಾಜ್ಯದಲ್ಲಿ ಒಕ್ಕಣ್ಣನೆ ರಾಜ
ಇವತ್ತು ಬಹಳಷ್ಟು ಕ್ಷೇತ್ರಕ್ಕೆ ಈ ಮಾತು ಅನ್ವಯವಾಗುತ್ತದೆ. ವಿಷಯದ ತಳ ಮುಟ್ಟುವುದು ಇಂದು ಯಾರಿಗೂ ಬೇಡದ ಕೆಲಸ. ಅಂದಿನ ದಿನ ಜೈ ಎನ್ನಿಸಿಕೊಳ್ಳಲು ಎಷ್ಟು ಬೇಕು ಅಷ್ಟು ಮಾತ್ರ ಮಾಡಿ, ಕೈ ತೊಳೆದುಕೊಂಡರೆ ಸಾಕು ಎನ್ನುವರ ಸಂಖ್ಯೆ ದೊಡ್ಡದಿದೆ. ಇಂತಹ ಸಂದರ್ಭದಲ್ಲಿ ಅಲ್ಪಸ್ವಲ್ಪ ತಿಳಿದುಕೊಂಡವರೇ ಮೇಧಾವಿ ಪಟ್ಟಕ್ಕೆ ಏರಿಬಿಡುತ್ತಾರೆ. ಆಗೆಲ್ಲಾ ಸಾಮಾನ್ಯವಾಗಿ ಅಂತಹ...
ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ
ದೂರದಲ್ಲಿರುವ ಬೆಟ್ಟ ಸಮತಟ್ಟವಾಗಿ ಕಾಣುತ್ತದೆ. ದೂರದಿಂದ ಅದನ್ನು ಹತ್ತುವುದು ಕೂಡ ಬಹಳ ಸುಲಭ ಎನ್ನುವ ಭಾವನೆಯನ್ನು ನೀಡುತ್ತದೆ. ನಿಜದ ಅರಿವು ಆಗಬೇಕೆಂದರೆ ಅದರ ಹತ್ತಿರ ಹೋಗಬೇಕು. ಹತ್ತಿರದಿಂದ ಬೆಟ್ಟದ ಮೇಲಿರುವ ಕಲ್ಲುಮುಳ್ಳುಗಳು ದುರ್ಗಮ ರಸ್ತೆ ಕಾಣಸಿಗುತ್ತದೆ. ದೂರದಿಂದ ಅಂದುಕೊಂಡಷ್ಟು ಸುಲಭವಾಗಿ ಅದನ್ನ ಹತ್ತಲು ಸಾಧ್ಯವಿಲ್ಲ ಎನ್ನುವ ಅರಿವಾಗುತ್ತದೆ ಕೂಡ...
ಹಾಸಿಗೆ ಇದ್ದಷ್ಟು ಕಾಲು ಚಾಚು
ಪಾಲಿಗೆ ಬಂದದ್ದು ಪಂಚಾಮೃತ, ಇದ್ದಿದ್ದರಲ್ಲಿ ಬದುಕುವುದು ಕಲಿಯಬೇಕು ಎನ್ನುವುದನ್ನ ತಲೆಮಾರಿನಿಂದ ತಲೆಮಾರಿಗೆ ಹೇಳಿಕೊಡುತ್ತ ಬಂದರು. ನಾವು ಕೂಡ ನಮ್ಮ ಹಿರಿಯರು ಹೇಳಿದ್ದ ಪಾಲಿಸುತ್ತಾ ಬಂದೆವು. ಆದರೆ ಕಳೆದ ಎರಡು ಅಥವಾ ಮೂರು ದಶಕದಲ್ಲಿ ಜಗತ್ತು ಬದುಕುವ ರೀತಿಯೇ ಬದಲಾಗಿ ಹೋಗಿದೆ. ಇದ್ದಿದ್ದರಲ್ಲಿ ಬದುಕಬೇಕು ಎನ್ನುವ ಜಾಗದಲ್ಲಿ ಸಾಲ ಮಾಡಿಯಾದರೂ ಸರಿಯೇ ಗಡಿಗೆ ತುಪ್ಪ...
ಮರಳಿ ಯತ್ನವ ಮಾಡು ನೀ ಮನುಜ
ಬದುಕು ಹರಿಯುವ ನೀರಿನಂತೆ ಇರಬೇಕು. ನಿಂತ ನೀರಿನಲ್ಲಿ ಕ್ರಿಮಿಗಳು ಜನಿಸಲು ಶುರುವಾಗುತ್ತವೆ, ವಾಸನೆ ಬೀರಲು ಕೂಡ ಪ್ರಾರಂಭವಾಗುತ್ತದೆ. ಹರಿಯುವ ನೀರಿನಲ್ಲಿ ಈ ಸಮಸ್ಯೆಗಳು ಇರುವುದಿಲ್ಲ. ಬದುಕೆಂದರೆ ಸದಾ ಒಂದೇ ರೀತಿಯಲ್ಲಿ ಇರುತ್ತದೆ ಎಂದು ಹೇಳಲು ಕೂಡ ಬರುವುದಿಲ್ಲ. ಸಹಜವಾಗೇ ಏಳುಬೀಳುಗಳು ಇದ್ದೆ ಇರುತ್ತವೆ. ಸೋಲು ಮತ್ತು ಗೆಲುವು ಒಂದರ ಹಿಂದೆ ಇನ್ನೊಂದು ಸಜ್ಜಾಗಿ...
ಮುಳ್ಳಿಲ್ಲದ ಗುಲಾಬಿ ಉಂಟೆ?
ಬದುಕೆಂದರೆ ಅದೊಂದು ಸುಖ-ದುಃಖದ ಮಿಶ್ರಣ. ಸುಖದ ಮಹತ್ತ್ವ ತಿಳಿಯಲು ದುಃಖದ ಆವಶ್ಯಕತೆಯಿದೆ. ದುಃಖವೇ ಇರದಿದ್ದರೆ ಸುಖಕ್ಕೆ ಅರ್ಥವೇ ಇರುತ್ತಿರಲಿಲ್ಲ. ಜನ ಸುಖವನ್ನ ಬಯಸುತ್ತಲೂ ಇರಲಿಲ್ಲ. ಆ ಮಟ್ಟಿಗೆ ಸುಖದ ಆಸ್ವಾದನೆಗೆ, ಸುಖದ ಮಹತ್ತ್ವದ ಅರಿವು ಸಿಗಲಾದರೂ ಒಂದಷ್ಟು ದುಃಖ ಬದುಕಿಗೆ ಬೇಕು. ಇದಕ್ಕೊಂದು ಉತ್ತಮ ಉದಾಹರಣೆ ಎಂದರೆ ಚಿನ್ನ. ಪೂರ್ಣ ಚಿನ್ನದಿಂದ ಆಭರಣ...
ಕೂಸು ಹುಟ್ಟುವುದಕ್ಕಿಂತ ಮುಂಚೆ ಕುಲಾವಿ ಹೊಲಿಸಿದರಂತೆ
ಈವತ್ತು ನಮ್ಮ ಬದುಕು, ನಮ್ಮ ಹಿರಿಯರು ಬದುಕಿದ ರೀತಿಗಿಂತ ಬಹಳ ಭಿನ್ನವಾಗಿದೆ. ಅವರು ವಿಷಯ ಯಾವುದೇ ಇರಲಿ ಅದನ್ನು ಸಲೀಸಾಗಿ ತೆಗೆದುಕೊಳ್ಳುತ್ತಿರಲಿಲ್ಲ. ವಿಷಯ ಸಾಧನೆ ಆಗುವವರೆಗೆ ಗೆದ್ದೆವೆಂದು ಬೀಗುತ್ತಿರಲಿಲ್ಲ. ಸಮಾಜದಲ್ಲಿ ಎಂದಿನಿಂದಲೂ ಒಂದಷ್ಟು ಸಂಖ್ಯೆಯ ಜನ ಕೆಲಸ ಆಗುವುದಕ್ಕೆ ಮುಂಚೆಯೇ ವಿಜಯಿಯಾದಂತೆ ಮರೆದಾಡುವವರು ಇದ್ದರು. ಅಂತವರನ್ನು ಕುರಿತು ಗೆಲುವಿಗೆ...
ಬರಿ ಕೈಗಿಂತ ಹಿತ್ತಾಳೆ ಕಡಗ ವಾಸಿ
ಬದುಕಲ್ಲಿ ನಾವು ಬಯಸಿದ್ದೆಲ್ಲಾ ಖಂಡಿತ ಸಿಗುವುದಿಲ್ಲ. ಹಾಗೆಂದು ನಿರಾಶರಾಗಬೇಕಿಲ್ಲ. ಬದುಕಿನ ನಿಯಮವೇ ಅದು. ಬಯಸಿದ್ದೆಲ್ಲ ಸಿಕ್ಕರೆ ಅದಕ್ಕೆ ನಾವು ಕೊಡುವ ಗೌರವ ಕೂಡ ಕಡಿಮೆಯಾಗುತ್ತದೆ. ಕೊನೆಗೂ ಬದುಕೆಂದರೆ ಪ್ರಯತ್ನವಷ್ಟೆ. ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿರಬೇಕು, ನಾವು ಅಂದು ಕೊಂಡದ್ದ ಮಾಡಲು ಸದಾ ಶ್ರಮಿಸುತ್ತಿರಬೇಕು. ಆ ದಾರಿಯಲ್ಲಿ ಹಲವು ಬಾರಿ ನಿರೀಕ್ಷಿತ...
ಸಮಯಕ್ಕಿಂತ ಬೇರೆ ಔಷಧವಿಲ್ಲ!
ಮನುಷ್ಯನ ಜೀವನದಲ್ಲಿ ಒಂದಲ್ಲ ಹಲವು ನೋವುಗಳು ಸಹಜ. ಬದುಕಿನುದ್ದಕ್ಕೂ ಒಂದಲ್ಲ ಒಂದು ಹಂತದಲ್ಲಿ ನೋವು ಎಲ್ಲರನ್ನೂ ಕಾಡಿಯೇ ಕಾಡಿರುತ್ತದೆ. ನೋವಿನ ಆ ದಿನ ಮತ್ತು ಮನಸ್ಥಿತಿ ಸದಾ ಇದ್ದರೆ? ಬದುಕು ಅಸಹನೀಯವಾಗುತ್ತದೆ. ಬದುಕಿನಲ್ಲಿ ನಾವು ಸಾಧಿಸಬೇಕು ಎಂದುಕೊಂಡದ್ದನ್ನು ಮಾಡಲು ಅಸಾಧ್ಯವಾಗುತ್ತದೆ. ಇಂತಹ ನೋವು ಅಥವಾ ಕಹಿ ಘಟನೆ ಮರೆಯಲು ಮತ್ತು ಎಂದಿನಂತೆ ಜೀವನ ಸಾಗಿಸಲು...
ಹಾಲಪ್ಪ ಅಂತ ಹೆಸರಿದ್ದರೂ ಮಜ್ಜಿಗೆಗೆ ಗತಿ ಇಲ್ಲ!
ಬದುಕು ಎಷ್ಟು ವಿಚಿತ್ರ ಅಂತ ಹಲವು ಸಲ ಅನ್ನಿಸುತ್ತೆ. ಅದಕ್ಕೆ ಕಾರಣ ಕಷ್ಟಪಟ್ಟು ದುಡಿಯುವ ವ್ಯಕ್ತಿಗೆ ಸಿಗಬೇಕಾದ ಮನ್ನಣೆ ಆತನಿಗೆ ಸಿಗಬೇಕಾದ ಹಣ ಸಿಗದೇ ಹೋಗುವುದು. ಇದು ಹಿಂದಿನಿಂದಲೂ ನಡೆದು ಬಂದಿದೆ ಅನ್ನುವುದಕ್ಕೆ ಮೇಲಿನ ಗಾದೆಯೇ ಸಾಕ್ಷಿ. ಹಿಂದೆ ವೃತ್ತಿಯಿಂದ ವ್ಯಕ್ತಿಯ ಪರಿಚಯ ಆ ಸಮುದಾಯದಲ್ಲಿ ಇರುತ್ತಿತ್ತು. ಹಾಲು ಮಾರುವವನನ್ನ ಹಾಲಪ್ಪ ಎಂದು, ಮಡಿಕೆ...