Author - Guest Author

ಅಂಕಣ

ಜಟಕಾ ಬಂಡಿಯಿಂದ ಅಟೋರಿಕ್ಷಾ ವರೆಗಿನ ಕಥೆ…ವ್ಯಥೆ.!

‘ಅಟೋ…!’ ಎಂದು ಕೂಗಿದರೆ ಸಾಕು. ಕ್ಷಣಮಾತ್ರದಲ್ಲಿ ನಮ್ಮ ಮುಂದೆ ಹಾಜರಾಗುವವರು ಅಟೋ ಚಾಲಕರು. ನಾಲ್ಕು ದಶಕಗಳ ಹಿಂದೆ ರಸ್ತೆಗಿಳಿದಾಗ ಇದ್ದ ಸ್ಥಿತಿ ಈಗ ಇಲ್ಲದೇ ಇದ್ದರೂ ಈ ಅಟೋರಿಕ್ಷ ಇಂದಿಗೂ ಜನಪ್ರಿಯ ಮತ್ತು ಸುಲಭ ಸಂಚಾರ ವಾಹನವಾಗಿದೆ. ಅಟೋ ಚಾಲಕ ಮತ್ತು ಅಟೋ ರಿಕ್ಷಾ ಇವೆರಡೂ ಬಡವರ ಬಂಧು ಎಂದೇ ನಮ್ಮ ಮನದಲ್ಲಿ ಬಿಂಬಿತವಾಗಿದೆ. ಬಹುಶಃ ಬೇರಾವುದೇ...

ಅಂಕಣ

ಸಮಸ್ಯೆಗಳಿಗೆ ಸ್ಪಂದಿಸುವ ಮನಸ್ಸನ್ನು ನಮ್ಮ ಯುವಜನತೆ ತೋರಿಸಬೇಕಿದೆ

ಇಂದು ನಮ್ಮ ಯುವ ಜನಾಂಗದ ಕುರಿತು ಮಾತನಾಡಲು ಸೂಕ್ತವಾದ ಸಮಯ ಅಂದುಕೊಳ್ಳುತ್ತೇನೆ. ದೇಶದಲ್ಲಿ ಯುವಕರಿಗಾಗಿಯೇ ಹಲವಾರು ಉದ್ಯೋಗಗಳು ಸೃಷ್ಠಿಯಾಗುತ್ತಿವೆ. ವಿದೇಶಿ ಕಂಪನಿಗಳಾಗಿರಬಹುದು ಆದರೆ ಅದರ ಸಂಪೂರ್ಣ ಉಪಯೋಗವನ್ನು ಪಡೆಯುತ್ತಿರುವವರು ಮಾತ್ರ ಭಾರತಿಯರಲ್ಲವೇ. ಹಾಗಾಗಿ ಇತಂಹ ಅವಕಾಶವನ್ನು ಹೇಗೆ ಬಳಸಿಕೊಳ್ಳುತ್ತೇವೆ ಎನ್ನುವುದು ನಮಗೆ ಬಿಟ್ಟಿರುವ ವಿಷಯ. ನಾವು ಒಂದು...

ಅಂಕಣ

ಬಗಲ್‍ನಲ್ಲಿರುವ ದುಷ್ಮನ್‍ನ ಸುತ್ತ…!

ಪಾಕಿಸ್ತಾನ ಅದೇನೆಂದು ಒಂದು ರಾಷ್ಟ್ರವಾಗಲು ಬಯಸಿಬಿಟ್ಟಿತೋ?! ಅದೀಗ ಕಲಿಯುಗದ ನರಕವಾಗಿಬಿಟ್ಟಿದೆ. ಕಾರಣ ಜಿಹಾದಿ ಉಗ್ರವಾದ. ಹಾಗಾಗಿಯೇ ಬಹುಪಾಲು ಪಾಕಿಗಳು  ಪಾಪಿಗಳಾಗಿ ಪರಮ ಕ್ರೂರಿಗಳಾಗಿಹರು.ಅವರಿಗೆ ಮಾನವೀಯ ಮೌಲ್ಯಗಳ ಬೆಲೆ ಕಿಂಚಿತ್ತೂ ತಿಳಿದಿಲ್ಲ, ಮತಾಂಧತೆಯಿಂದ ಹತ್ಯಾಕಾಂಡ,ರಕ್ತಪಾತ ಮಾಡುವುದೊಂದೇ ತಿಳಿದಿರುವುದು ಅವರಿಗೆ! ಈ ದುಃಸ್ಥಿತಿಗೆ ಬೇಕಿತ್ತಾ...

ಅಂಕಣ

ಸ್ವದೇಶೀ ಚಿಂತನೆಯ ಬಿತ್ತಿ ಹೋದ ರಾಜೀವ..

ಭಾರತವನ್ನು ಶಕ್ತಿಯುತ, ಸ್ವಾವಲಂಬೀ ದೇಶವನ್ನಾಗಿ ಪುನರುತ್ಥಾನಗೊಳಿಸಿ ವಿಶ್ವಶಕ್ತಿಯನ್ನಾಗಿಸುವ ಕನಸುಗಳನ್ನು ಕಂಡಿದ್ದ ಮಹಾತ್ಮರನೇಕರು. ಹಿಂದೂಸ್ಥಾನದ ಸ್ಚಾತಂತ್ರ ಹೋರಾಟಕ್ಕಾಗಿ, ಧರ್ಮ ರಕ್ಷಣೆಗಾಗಿ, ನೆಲ, ಜಲ, ಸಂಸ್ಕತಿಯ ಅಭ್ಯುದಯಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ತಾಯಿ ಭಾರತಿಯ ಮಡಿಲಲ್ಲೇ ಸ್ಚಾರ್ಥರಹಿತವಾಗಿ ಹೋರಾಡಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿ...

ಅಂಕಣ

ದೊಡ್ಡಣ್ಣನಿಗೆ ಸವಾಲೊಡ್ಡಿದ ಕೆಚ್ಚೆದೆಯ ಸಾಹಸಿ ‘ಫಿಡೆಲ್ ಕ್ಯಾಸ್ಟ್ರೋ’

ಇವನ ಹೆಸರು ಕೇಳಿದೊಡನೆಯೇ ವಿಶ್ವದ ದೊಡ್ಡಣ್ಣ ಎನಿಸಿಕೊಂಡಿರುವ ಅಮೇರಿಕಾ ಕೂಡಾ ಒಮ್ಮೆ ಬೆಚ್ಚಿ ಬೀಳುತ್ತದೆ. ನಿದ್ರೆಯಲ್ಲಿಯೂ ಕೂಡಾ ಈ ಹೆಸರು ಕೇಳಿದೊಡನೆ ಅಮೇರಿಕಾ ದೇಶ ತನ್ನ ನಿದ್ರೆಯನ್ನು ಅರ್ಧದಲ್ಲಿಯೇ ನಿಲ್ಲಿಸಿ ಬಿಡುತ್ತದೆ. ಇಂತಹ ಅಪ್ರತಿಮ ವ್ಯಕ್ತಿ ಯಾರು ? ಎನ್ನುವ ಭಾವನೆ ನಿಮ್ಮಿಲ್ಲಿ ಬಂದಿರಬಹುದು. ಹೌದು ಆತನೇ ಪುಟ್ಟ ಕ್ಯೂಬಾ ರಾಷ್ಟ್ರದ ‘ಫಿಡೆಲ್...

ಅಂಕಣ

ಕನ್ನಡ ಧಾರಾವಾಹಿಗಳು ಮತ್ತು ಗೋಳು: ಬಿಡಿಸಲಾಗದ ಬಂಧ

ನನ್ನ ಈ ಬರಹ ಕನ್ನಡದ ಧಾರಾವಾಹಿಗಳಿಗೆ ಮೀಸಲು. ನಾನು ಧಾರಾವಾಹಿಗಳನ್ನು ನೋಡ್ತೀನಿ ಅಂತ ತಪ್ಪು ತಿಳೀಬೇಡಿ. ಸಾಮಾನ್ಯವಾಗಿ ೨-೩ ತಿಂಗಳಿಗೊಮ್ಮೆ ಊರಿಗೆ ಹೋಗುತ್ತೇನೆ. ಅಲ್ಲಿ ಮೊಬೈಲ್ ನೆಟ್ವರ್ಕ್ ಸರಿಯಾಗಿ ಸಿಗದೇ ಇರುವ ಕಾರಣ, ಬೇಡವೆಂದರೂ ಈ ಧಾರಾವಾಹಿಗಳ ಮಾತು ಕೇಳಿಸಿಕೊಳ್ಳುವುದು, ಒಮ್ಮೊಮ್ಮೆ ನೋಡುವುದು ಅನಿವಾರ್ಯವಾಗುತ್ತದೆ. ಈ ಧಾರಾವಾಹಿಗಳಲ್ಲಿ ನಾನು ಗಮನಿಸಿದ...

ಅಂಕಣ

ಬೆಂಗ್ಳೂರಿಗೇನು ಕೊಟ್ಟೆ?

ದೇವಿ: ಕಂದಾ, ನಿನ್ನ ತಪಸ್ಸಿಗೆ ಮೆಚ್ಚಿದ್ದೇನೆ. ನಿನಗೇನು ಬೇಕು ಕೇಳು. ಭಕ್ತ: ಅಮ್ಮಾ, ಡಿಗ್ರಿ ಮುಗಿದ ತಕ್ಷಣ ಬೆಂಗ್ಳೂರಲ್ಲಿ ಒಂದು ಕೆಲಸ ಸಿಗುವ ಹಾಗೆ ಮಾಡು. ದೇವಿ: ತಥಾಸ್ತು. ಎರಡು ವರ್ಷದ ನಂತರ ಮತ್ತೆ ತಪಸ್ಸಿಗೆ ಕುಳಿತ. ದೇವಿ: ಈಗೇನು ಬೇಕು ಕಂದ? ಭಕ್ತ: ಬಸ್ಸಿನಲ್ಲಿ ಓಡಾಡಿ ಸಾಕಾಗಿದೆ, ನನಗೊಂದು ಬೈಕ್ ಬೇಕು ತಾಯಿ. ದೇವಿ: ತಥಾಸ್ತು. ಎರಡು ವರ್ಷದ ನಂತರ...

ಅಂಕಣ

ವೃತ್ತಿ ಬದುಕಿನ ಜಂಜಾಟದಲ್ಲಿ ನಮ್ಮವರ ಮರೆತ ಮನುಜರು ನಾವಿಲ್ಲಿ.

ಮಾನವ ಜೀವನ ಚಕ್ರದ ಮೊದಲ ಇಪ್ಪತ್ತೋ ಇಪ್ಪತ್ತೈದು ವರ್ಷಗಳನ್ನು ಶಿಕ್ಷಣದ ಹೆಸರಿನಲ್ಲಿ ಕೆಳೆಯುವ ನಾವು, ನಮ್ಮವರ ಬಗ್ಗೆ ಯೋಚಿಸುವುದು ತುಂಬಾ ಕಡಿಮೆ. ಅಪ್ಪ ಬದುಕಿರುವುದೇ ನಮಗೆ ದುಡ್ಡು ಕೊಡೋದಕ್ಕೆ, ಅಮ್ಮನ ಅಸ್ಥಿತ್ವ ಕೇವಲ ನಮಗೆ ಅಡುಗೆ ಮಾಡಿ ಬಡಿಸಲು ಮತ್ತು ಅಪ್ಪನ ಬೈಗುಳಗಳಿಂದ ತಪ್ಪಿಸಲು ಅಂತ ತಿಳಿಯುವ ನಾವು ಎಂದಿಗೂ ಕೂಡ ಅವರ ಅಸೆ ಆಕಾಂಕ್ಷೆಗಳ ಕಡೆ ಗಮನ...

ಕವಿತೆ

ಕೂಸು

ಎಷ್ಟೋ ಖುಷಿಯು,ಎಷ್ಟೋ ಕನಸೂ ಕೈಕುಲುಕಿ ಶುರುವಾಗಿದೆ ನಿನ್ನೊಂದಿಗೇ…!!! ಹನಿಯನು ಮೊಗೆದ ಹಸಿರೆಲೆಯಂತೆ,ತಾಯಿನೂ ಹುಟ್ಟುವಳು ಕೂಸೊಂದಿಗೆ…!! ತನ್ನ ಪಿಳಿ ಕಂಗಳಲ್ಲಿ ಮಗು ನೋಡಿತು ಮೊದಲ ನೋಟ..!! ಹೆಸರೊಂದನು ಜತೆಸೇರಿಸಿ ಕರೆಯಿತು ಲೋಕ..!! ಎದೆಹಾಲು.,ತಾಯ್ಮಡಿಲು.,ಕೈತುತ್ತು ಪ್ರತಿ ಇರುಳು ಚುಕ್ಕಿ ಚಂದ್ರನ ಸಹಿತ…!! ಪ್ರಕೃತಿಯ ಒತ್ತಾಳು...

ಪ್ರಚಲಿತ

ರಾಜಕಾರಣಿಗೆ ನೀಡಿದ ‘ಓಟು’ ಆಗತಾನೇ ಸತ್ತಿತ್ತು

‘ಕಳೆದ ಒಂದು ವಾರದಿಂದ ಯಾವ ಎಂಪಿ-ಎಮ್ಎಲ್ಎ ರಸ್ತೆಗಿಳಿದಿಲ್ಲ, ಯಾಕಂದ್ರೆ ಎಲ್ಲಾ ರಾಜಕಾರಣಿಗಳು ನೋಟ್ ಎಣ್ಸೋದ್ರಲ್ಲಿ ಬ್ಯುಸಿ ಇದ್ದಾರೆ’ ಹೀಗಂತ ಮೊನ್ನೆ ವಾಟ್ಸಪ್ ಅಲ್ಲಿ ಮೆಸೇಜ್ ಬಂತು. ನೋಡೊಕೆ ಜೋಕಿನಂತೆ ಕಂಡು ಬಂದರೂ ಈಗಿನ ಪರಿಸ್ಥಿತಿ ನೋಡಿದ್ರೆ ಅದು ಬಹುಷಃ ನಿಜ ಎಂದು ಅನ್ನಿಸುತ್ತಿದೆ. ಈ ದೇಶದ ಪ್ರಧಾನಮಂತ್ರಿ ಕಳೆದ 8 ನೇ ತಾರೀಖಿನ ರಾತ್ರಿ 8...