ಅಶನ ವಶನವಷ್ಟೇ ಮನುಜ ಜೀವನದ ಗುರಿಯೆ ? ___________________________________ ಧರೆಯ ಬದುಕೇನದರ ಗುರಿಯೇನು? ಫಲವೇನು ? | ಬರಿ ಬಳಸು ಬಡಿದಾಟ ಬರಿ ಪರಿಭ್ರಮಣೆ || ತಿರುತಿರುಗಿ ಹೊಟ್ಟೆ ಹೊರಕೊಳುವ ಮೃಗಖಗಕಿಂತ | ನರನು ಸಾಧಿಪುದೇನು ? ಮಂಕುತಿಮ್ಮ || ೨೭ || ಈ ಲೌಕಿಕ ಜಗದಲ್ಲಿ ಮೊದಮೊದಲ ಅಶನವಶನದ (ಹೊಟ್ಟೆ ಬಟ್ಟೆಯ) ಹೋರಾಟದ ಹಂತವನ್ನು ದಾಟಿ ತುಸು ಸ್ವತಂತ್ರವಾಗಿ...
Author - Nagesha MN
ಬ್ರಹ್ಮಸೃಷ್ಟಿಯೂ ಹೊರತಲ್ಲವೀ ದ್ವಂದ್ವದಿಂದ !
(ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೨೬) ಸೃಷ್ಟಿಯಾಶಯವದೇನಸ್ಪಷ್ಟ ಸಂಶ್ಲಿಷ್ಟ | ಇಷ್ಟ ಮೋಹಕ ದಿವ್ಯ ಗುಣಗಳೊಂದು ಕಡೆ || ಕಷ್ಟ ಭೀಭತ್ಸ ಘೋರಂಗಳಿನ್ನೊಂದು ಕಡೆ | ಕ್ಲಿಷ್ಟವೀ ಬ್ರಹ್ಮಕೃತಿ – ಮಂಕುತಿಮ್ಮ || ೦೨೬ || ಮಸಲ, ಸೃಷ್ಟಿಯಾಶಯ ಮೋಹಕವೆ ? ಭೀಭತ್ಸಕವೆ ? ದ್ವಂದ್ವವೆನ್ನುವುದು ಈ ಇಹಜೀವನದಲ್ಲಿ ಪ್ರಧಾನವಾಗಿ ಎದ್ದು ಕಾಣುವ ಅಂಶ. ಸುಖ-ದುಃಖ, ದಿನ...
ಅನ್ವೇಷಣೆಯ ಅಭಿಯಾನ ….
ಒಳಗಿನದೇನೊ ಚಮತ್ಕಾರದ ಶಕ್ತಿ ತೇಜ – ಮನಸೊ, ಚಿತ್ತವೊ, ಅಂತರಾತ್ಮವೊ ಅಥವಾ ಸ್ವೇಚ್ಛೆಯಲಿರ ಬಯಸುವ ನಮ್ಮೊಳಗವಿತ ನಮ್ಮದೆ ಪ್ರತಿಬಿಂಬವೊ – ಅದರ ವಿವಿಧಾವತಾರದ ಅಗಣಿತ ಪ್ರಜ್ಞೆ ಪ್ರಪುಲ್ಲಗೊಳಿಸಿದಷ್ಟೆ ಸಹಜವಾಗಿ ಪ್ರಕ್ಷುಬ್ದಗೊಳಿಸುವ ಬಗೆ ಉಪಮಾತೀತ. ಅದು ಪ್ರಶ್ನೆ ಕೇಳುವುದೊ, ಕೇಳಿಸುವುದೊ, ಉತ್ತರಕಾಗಿ ಹುಡುಕುವುದೊ, ಹುಡುಕಿಸುವುದೊ ಎಲ್ಲವು ಮನೊ ಭ್ರಾಂತಿಯ ಪಿತ್ತ...
ಏನೀ ಮಂಕುತಿಮ್ಮನ ರೇಖಾಲೇಖ ?
ಜೀವಗತಿಗೊಂದು ರೇಖಾಲೇಖವಿರಬೇಕು | ನಾವಿಕನಿಗಿರುವಂತೆ ದಿಕ್ಕು ದಿನವೆಣಿಸೆ || ಭಾವಿಸುವುದೆಂತದನು ಮೊದಲು ಕೊನೆ ತೋರದಿರೆ ? | ಆವುದೀ ಜಗಕಾದಿ? – ಮಂಕುತಿಮ್ಮ || ೦೨೫ || ಜೀವನಕ್ಕೊಂದು ಗುರಿಯಿರಿರಬೇಕು, ಗಮ್ಯವಿರಬೇಕು ಅದೇ ಜೀವನೋತ್ಸಾಹದ ಸ್ಪೂರ್ತಿಯ ಗುಟುಕು ಎನ್ನುತ್ತಾರೆ ಬಲ್ಲವರು. ಜೀವನ ಹೀಗೆ ಯಾವುದೊ ಗಮ್ಯದ ದಿಕ್ಕು, ದೆಸೆ ಹಿಡಿದು ಹೊರಟರು ಅದನ್ನು...
ಕಗ್ಗಕೊಂದು ಹಗ್ಗ ಹೊಸೆದು…
ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೨೪ ___________________________________ ನರರ ಭಯ ಬಯಕೆಗಳೆ ಸುರರ ತಾಯ್ತಂದೆಗಳೋ ? | ಸುರರಟ್ಟಹಾಸದಿನೆ ನರಭಕ್ತಿಯೊರಲೋ? || ಪರಿಕಿಸುವರೇನವರ್ಗಳನ್ಯೋನ್ಯಶಕ್ತಿಗಳ ? | ಧರುಮವೆಲ್ಲಿದರಲ್ಲಿ ? – ಮಂಕುತಿಮ್ಮ || ೦೨೪ || ಸುರರ ಜತೆಗಿನ ನರರ ಬಂಧವನ್ನು ಬಿಂಬಿಸುತಲೆ ಅದರಲ್ಲಿರುವ ತಾರತಮ್ಯವನ್ನು ಟೀಕಿಸುವ ಹುನ್ನಾರ ಈ...
ಗಜಾನನ ಗಜ-ಮೂಷಿಕಾಸುರ ಕಥೆ
ತುಸು ಭಿನ್ನ ಹಿನ್ನಲೆಯ ಗಜಾಸುರನಿಗೆ ಸಂಬಂಧಿಸಿದ ಗೌರಿ ಗಣೇಶರ ಕಥೆ ಈ ಕೆಳಗಿದೆ. ಪೌರಾಣಿಕ ಹಿನ್ನಲೆಯಾಗಿ ಗಣೇಶ ಗಜಮುಖನಾದ ಕಥೆ ಚಿರಪರಿಚಿತವಾದರೂ, ಅವನ ಹುಟ್ಟಿಗೆ ಮತ್ತು ಗಜಾಸುರನ ಸಾವಿಗಿರುವ ಸಂಬಂಧ, ಮೂಷಿಕಾಸುರ ಗರ್ವಭಂಗದಷ್ಟು ಪ್ರಸಿದ್ದವಲ್ಲ. ಆ ಹುಟ್ಟಿನ ಹಿನ್ನಲೆಯಾದ ಮೂಷಿಕಾಸುರ ವರಗರ್ವ, ಸತ್ತು ಅಸ್ವಾಭಾವಿಕ ಮರುಹುಟ್ಟು ಪಡೆದು ಗಜಾಸುರನ ಶಿರದೊಡನೆ ಗಜಾನನ...
ಕಗ್ಗಕೊಂದು ಹಗ್ಗ ಹೊಸೆದು…
ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೨೩ ___________________________________ ತಿರು ತಿರುಗಿ ತೊಳಲುವುದು ತಿರಿದನ್ನವುಣ್ಣುವುದು | ಮೆರೆದು ಮೈ ಮರೆಯುವುದು ಹಲ್ಲ ಕಿರಿಯುವುದು || ಮರಳಿ ಕೊರಗಾಡುವುದು ಕೆರಳುವುದು ನರಳುವುದು | ಇರವಿದೇನೊಣರಗಳೆ? – ಮಂಕುತಿಮ್ಮ || ೦೨೩ || ಇಡೀ ಬದುಕಿನ ಕಿತ್ತಾಟವೆಲ್ಲ ನಾಲ್ಕೆ ಸಾಲುಗಳಲ್ಲಿ ಎಷ್ಟು ಸೊಗಸಾಗಿ...
ತಂತ್ರಜ್ಞೆ ಮಂತ್ರಜ್ಞೆ ಗೌರಿ
ತಾಯಿ ಗೌರಿ ತಂತ್ರಜ್ಞೆ ಅದ್ಭುತ ಮಂತ್ರಜ್ಞೆ ತಂತ್ರ ಮಂತ್ರ ಯಂತ್ರ ಜತೆ ಕೂಡಿಸಲದೆ ಗಣಪತಿಯಾಯ್ತೆ || ಶಕ್ತಿಯವಳು ಶಿವನ ಸತಿ ಅದ್ಭುತ ಕಲಾಕೃತಿ ಮೈ ಬೆವರು ಅರಿಶಿನ ಕೊಳೆ ಕಸದಿಂದ ರಸ ಬಾಲನಾದ ಕಲೆ || ಉಮೆಯವಳು ಅಭಿಯಂತೆ ಜೀವಕೆ ನೀರ್ಜಿವ ಬೆರೆತೆ ಸೃಜಿಸಿರಬೇಕು ದೇವ ಜೀವಿಯ ಮಗನ ಹೆಸರಲಿ ತಾಂತ್ರಿಕ ವಿಜಯ || ಅಲೆಮಾರಿ ಪರಶಿವನಾತ ಗೌರಮ್ಮನಿಗೆ...
ಇದಲ್ಲವೇ ಜೀವನಾನುಭವ ?
ಸ್ವಲ್ಪ ಹೊತ್ತು ಬಿಡಿ ವಾದ ವಿವಾದ, ಚರ್ಚೆ ಹೋಗಿದ್ದು ಸರಿ ತಪ್ಪು ಜಿಜ್ಞಾಸೆ ಹೆತ್ತವರದಿಲ್ಲವೇ ಹಕ್ಕು ? ಮಕ್ಕಳ ಒತ್ತಡ ಸರಿಯಲ್ಲ ಇತ್ಯಾದಿ.. ಅರೆ ! ನೋಡಿದಿರಾ ಇಲ್ಲಿ ? ಹದಿಮೂರಕ್ಕೊಂದು ಅದ್ಭುತ ಜೀವನಾನುಭವ ಹೃದ್ಗತ ! ಎಷ್ಟಿತ್ತೊ ಹೊರಟ ರೋಷ ಹೋರಾಟ ದ್ವಂದ್ವ ಸಿಟ್ಟಿನ ರಟ್ಟೆ.. ಏಕಾಂಗಿ ಭಂಢ ಧೈರ್ಯ ಯಾವುದೊ ಗಮ್ಯ ನಿರ್ಧಾರ ಎಲ್ಲಿಂದಲೊ ತಂದ ಮೂಲ...
ಕಗ್ಗಕೊಂದು ಹಗ್ಗ ಹೊಸೆದು…
ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೨೨ ___________________________________ ಕೃತಿಮವೊಂ ಜಗವೆಲ್ಲ | ಸತ್ಯತೆಯದೆಲ್ಲಿಹುದೋ? | ಕರ್ತೃವೆನಿಸಿದನೆ ತಾಂ ಗುಪ್ತನಾಗಿಹನು || ಚತ್ರವಿ ಜಗವಿದರೊಳಾರ ಗುಣವೆಂತಹುದೊ ! ಯಾತ್ರಿಕನೆ ಜಾಗರಿರೊ – ಮಂಕುತಿಮ್ಮ || ತನ್ನೆಚ್ಚರದಲ್ಲಿ ತಾನು ಸದಾ ಜಾಗೃತನಾಗಿರಬೇಕೆಂದು ಸಾರುವ ಕವಿವಾಣಿ ಈ ಪದ್ಯದ ತಾತ್ಪರ್ಯ. ಈ...