ಹರೆಯದ ನೆರೆ ಮತ್ತು ಕಾಲದ ಜೊತೆಗೆ : ಎರಡು ಕವನಗಳು
ಹರೆಯದ ನೆರೆ ಹರೆಯದ ನೆರೆ ಬಂದಿದೆ ಆಸೆಯ ಹೊರೆ ಹೆಚ್ಚಿದೆ ಚಿಗುರು ಮೀಸೆ ಮೇಲೆ ಕಯ್ಯಿ ತೀಡಿ ತೀಡಿ ತಿರುವಿದೆ ಜಗದ ಬಗೆಯ ಸುಖವನೆಲ್ಲ ತನ್ನದೆಂದೆ ತಿಳಿಯುತ ಬೀಗಿ ಬೀಗಿ ನಡೆಯುತಿರುವ ಎಲ್ಲ ಗಮನ ಸೆಳೆಯುತ ಕೆಂಪು ಅಂಗಿ ಹಸಿರು ಲುಂಗಿ ಕ್ಷಣ ಕ್ಷಣಕು ವಿವಿಧ ಭಂಗಿ ಮೇಲೆ ಕೋಟು ತೊಟ್ಟು ಎಂದುಕೊಂಡ ತಾನೆ ಕೆಂಪು ಪರಂಗಿ ಪೈಸೆ ಕೆಲಸ ಮಾಡಲೊಲ್ಲ ಗೆಳೆಯ-ಗುಂಪು ಬಿಡಲು ಒಲ್ಲ ಅವ್ವ ಬೈದರಂತು ತಾನೆ ಏರಿಸಿರುವ ತನ್ನ ಸೊಲ್ಲ ತರಹೇವಾರಿ ಮೆಟ್ಟು ಬೂಟು ಕೆದರಿಕೊಂಡು ತಲೆಯ ಜುಟ್ಟು ಹಟವ ಬಿಡನು ಏನೇ ಆಗಲಿ ಹಿಡಿದದ್ದೇ ಪಟ್ಟು ಹೊಸದು ಸಿನಿಮ ನೋಡಿ ಬಂದ ಇವನಿಗುಂಟು ಎಲ್ಲ ಶೋಕಿ ಹರೆಯದ…