ಸ್ಪ್ಯಾನಿಷ್ ಗಾದೆಗಳು

ಬಾಯಲ್ಲಿ ಬಸಪ್ಪ ಹೊಟ್ಟೆಯಲ್ಲಿ ವಿಷಪ್ಪ…

ಸ್ಪಾನಿಷ್ ಗಾದೆ : ಅ ಪಲಾಬ್ರಾಸ್ ನೇಸಿಯಾಸ್ ಒಯಿದೋಸ್ ಸೊರ್ದೋಸ್ . (A palabras necias, oidos sordos.)

ಸನಿಹದ ಕನ್ನಡ ಗಾದೆ : ಬಾಯಲ್ಲಿ ಬಸಪ್ಪ ಹೊಟ್ಟೆಯಲ್ಲಿ ವಿಷಪ್ಪ.

ಮೂರ್ಖತನದಿಂದ ಕೂಡಿದ ಮಾತುಗಳಿಗೆ ಕಿವುಡರಾಗಿ  ಎನ್ನುವುದು ಯಥಾವತ್ತಾಗಿ ಅನುವಾದಿಸಿದರೆ ಸಿಗುವ ಅರ್ಥ. ದೇಶ ಭಾಷೆ ಗಡಿಗಳ ಮೀರಿ ಜನರು ಹೇಳುವುದಕ್ಕೂ ಮಾಡುವುದಕ್ಕೂ ಬಹಳವೇ ವ್ಯತ್ಯಾಸವಿರುತ್ತದೆ . ಹೀಗಾಗಿ ನಾವು ಯಾವುದೇ ಕೆಲಸ ಮಾಡಲು ಹೊರಟರೆ ಜನರು ಹೇಳುವುದು ಕೇಳಿ ಮಾಡುವುದಕ್ಕೆ ಆಗುವುದಿಲ್ಲ . ಕೆಲವರು ಪ್ರೋತ್ಸಾಹದ ಮಾತುಗಳನ್ನೇ ಆಡಬಹದು ಆದರೆ ಮನಸ್ಸಿನಲ್ಲಿ ಈ ಕಾರ್ಯ ಮಾಡಲು ಹೋಗಿ ಸೋಲಲಿ ಎನ್ನುವ ಭಾವನೆಯಿಂದ ಪ್ರೋತ್ಸಾಹ ನೀಡುತ್ತಾರೆ . ಇನ್ನು ಕೆಲವರು ನಾವು ಮಾಡುವ ಕೆಲಸ ಎಷ್ಟೇ ಉತ್ತಮವಾಗಿರಲಿ ಇದೇನು ಮಹಾ ಅಂತಲೋ ಅಥವಾ ಇದಕ್ಕಿಂತ ಹೆಚ್ಚಿನದು ಮಾಡಬಹುದಿತ್ತು ಎನ್ನುವ ರೀತಿಯಲ್ಲಿ ಮಾತನಾಡುವುದು ನಮ್ಮ ಜೀವನದಲ್ಲಿ ನಾವು ನೋಡಿಯೇ ಇರುತ್ತೀವಿ . ಅಲ್ಲದೆ ವಿಷಯ , ವಸ್ತು ಏನೇ ಇರಲಿ ಜನ ಕೇಳದೆ ತಮ್ಮ ನಿಲುವು ಹೇಳುವುದು ಅಥವಾ ಸಲಹೆ ನೀಡುವುದು ಅತಿ ಸಾಮಾನ್ಯ . ಇವುಗಳಲ್ಲಿ ಮುಕ್ಕಾಲು ಪಾಲು ಮಾತುಗಳು ಕೆಲಸಕ್ಕೆ ಬಾರದವು , ತೊಂಬತ್ತು ಪ್ರತಿಶತ ಸಲಹೆಗಳು ಅರ್ಥವಿಲ್ಲದ ಅಸಡ್ಡೆ ಮಾತುಗಳು ಇಂತಹ ಮಾತುಗಳನ್ನ ಮನಸ್ಸಿಗೆ ತೆಗೆದುಕೊಳ್ಳಬೇಡಿ ಅನ್ನುವ ಅರ್ಥದಲ್ಲಿ  ಮೂರ್ಖತನದಿಂದ ಕೂಡಿದ ಮಾತುಗಳಿಗೆ ಕಿವುಡರಾಗಿ ಎನ್ನುತ್ತದೆ ಸ್ಪಾನಿಷ್ ಗಾದೆ .

ಕನ್ನಡದಲ್ಲಿ ಇದಕ್ಕೆ ಸನಿಹದಲ್ಲಿರುವ ಗಾದೆ ಹೆಚ್ಚು ಕಡಿಮೆ ಅದೇ ಅರ್ಥ ಕೊಡುತ್ತೆ . ಮುಕ್ಕಾಲು ಪಾಲು ನಮ್ಮ ಸಾಧನೆ ಅಥವಾ ಉನ್ನತಿ ನೋಡಿ ಹೊಟ್ಟೆಕಿಚ್ಚು ಬೆಳಸಿಕೊಳ್ಳುವರು ನಮ್ಮ ಸನಿಹದವರೇ ಆಗಿರುತ್ತಾರೆ . ಆದರೆ ಅವರ ಮಾತಿನಲ್ಲಿ ಮಾತ್ರ ಅತಿ ವಿನಯ ಮತ್ತು ಪ್ರೀತಿ ಇರುತ್ತದೆ ಮನಸ್ಸಿನಲ್ಲಿ ವಿಷವಿರುತ್ತದೆ . ಇಂತಹ ಜನರ ಬಗ್ಗೆ ಹುಷಾರಾಗಿರಿ ಎನ್ನುವ ಅರ್ಥ ಕೊಡುವ ನಮ್ಮ ಗಾದೆ ಬಾಯಲ್ಲಿ ಬಸಪ್ಪ ಹೊಟ್ಟೆಯಲ್ಲಿ ವಿಷಪ್ಪ.

ಇನ್ನು ಇಂಗ್ಲಿಷ್ ಭಾಷಿಕರಲ್ಲಿ Take no notice of the stupid things people say. ಹುಚ್ಚು ಜನರು ಆಡುವ ಮಾತುಗಳಿಗೆ ಕಿವಿಕೊಡಬೇಡಿ ಅಥವಾ ಗಮನಕೊಡಬೇಡಿ ಎನ್ನುವ ಮಾತನ್ನ ಬಳಸುತ್ತಾರೆ .

ಭಾಷೆ ಬೇರೆಯಾದರು ನಮ್ಮ ಹಿರಿಯರ ಉದ್ದೇಶ ಮಾತ್ರ ನಮ್ಮ ಗಮನ ನಮ್ಮ ಕೆಲಸದ ಮೇಲಷ್ಟೇ ಇರಲಿ ಜನರು ಆಡುವ ಮಾತಿನ ಮೇಲಲ್ಲ ಎನ್ನುವುದ ತಿಳಿಸಿ ಹೇಳುವುದೇ ಆಗಿತ್ತು .

ಸ್ಪಾನಿಷ್ ಪದಗಳ ಅರ್ಥ :

೧) palabras : ಪದ  ಎನ್ನುವ ಅರ್ಥ ಕೊಡುತ್ತದೆ .

೨)necias  : ಮೂರ್ಖತನ , foolish ಎನ್ನುವ ಅರ್ಥ ಕೊಡುತ್ತದೆ .

೩)oidos  : ಕಿವಿ ಎನ್ನುವ ಅರ್ಥ ಕೊಡುತ್ತದೆ .  ಕೇಳು , ಕೇಳಿಸಿತಾ ಎನ್ನುವ ಅರ್ಥ ಸಮಯಕ್ಕೆ ತಕ್ಕ ಹಾಗೆ ಬದಲಾಗುತ್ತದೆ .

೪)sordos.  : ಕಿವುಡು ಎನ್ನುವ ಅರ್ಥ ಕೊಡುತ್ತದೆ . ಸಂದರ್ಭಕ್ಕೆ ತಕ್ಕ ಹಾಗೆ ಕಿವುಡ , ಕಿವುಡರಾಗಿ ಎನ್ನುವ ಅರ್ಥ ಕೊಡುತ್ತದೆ .

 

Facebook ಕಾಮೆಂಟ್ಸ್

ಲೇಖಕರ ಕುರಿತು

Rangaswamy mookanahalli

ಎರಡು ಸಾವಿರದ ಇಸವಿಯಲ್ಲಿ ಸ್ಪೇನ್’ನ ಒಂದು ರಾಜ್ಯ ಕತಲೂನ್ಯದ ರಾಜಧಾನಿ ಬಾರ್ಸಿಲೋನಾದಲ್ಲಿ ಇಳಿದಾಗ ಸ್ಪಾನೀಷ್ ಭಾಷೆಯ ಗಂಧಗಾಳಿ ಇಲ್ಲದ, ಜೀವನ ಕರೆದತ್ತ ಮುಖಮಾಡಿ ಹೊರಟ ಲೇಖಕರು ಇಂದು ಸ್ಪಾನಿಷ್ ಭಾಷೆಯನ್ನ ಕನ್ನಡದಷ್ಟೇ ಸುಲಲಿತವಾಗಿ ಮಾತಾಡಬಲ್ಲರು . ಒಂದೂವರೆ ದಶಕಕ್ಕೂ ಹೆಚ್ಚಿನ ಅಲ್ಲಿನ ನೆಲದ ನಂಟು ಅಲ್ಲಿನ ಜನರೊಂದಿನ ಒಡನಾಟ ಅಲ್ಲಿನ ಗಾದೆಗಳನ್ನ ಕಲಿಸುತ್ತದೆ . ಅಲ್ಲಿನ ಗಾದೆಗಳು ನಮ್ಮ ಗಾದೆಗಳಂತೆಯೆ ಇದೆಯಲ್ಲ ಎನ್ನುವ ಸಹಜ ಕುತೂಹಲ ಕನ್ನಡಿಗರಿಗೆ ಸ್ಪಾನಿಷ್ ಗಾದೆಗಳು ಬರೆಯಲು ಪ್ರೇರಣೆ .

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!