X

ಬೆಂಗಳೂರಿನ ರಸ್ತೆಯ ಬಗ್ಗೆ ಕಾಂಗ್ರೆಸ್ಸಿನ ನಾಯಕಿ ರಮ್ಯ ಹೇಳಿದ್ದೇನು ಗೊತ್ತಾ?

ಒಂದು ಕಾಲದಲ್ಲಿ ವ್ಯವಸ್ಥಿತ ರಸ್ತೆಗಳು, ಸರೋವರಗಳು, ಉದ್ಯಾನವನಗಳು ಹಾಗೂ ಸ್ವಚ್ಛತೆಗಾಗಿ ಪ್ರಸಿದ್ಧಿಯಾಗಿತ್ತು ನಮ್ಮ ಸಿಲಿಕಾನ್ ಸಿಟಿ ಬೆಂಗಳೂರು. ೧೬ನೇ ಶತಮಾನದ ನಾಯಕ ಕೆಂಪೇಗೌಡರ ದೂರದೃಷ್ಟಿಯ ಫಲವಿದು. ಆದರೆ ಕೆಲ ದಶಕಗಳಲ್ಲಿ ಅಪರಿಮಿತ ಪ್ರಮಾಣದಲ್ಲಾದ ಬೆಳವಣಿಗೆ ಬೆಂಗಳೂರಿನ ರೂಪುರೇಷೆಯನ್ನೇ ಬದಲಾಯಿಸಿದೆ. ಆದರೆ ಇಂದು ನಾವು ಪ್ರಸಿದ್ಧಿಯಾಗಿರುವುದು ಕಾಂಕ್ರೀಟಿನ ಉದ್ಯಾನವನ, ಕೊಳಚೆ, ವಾಸನೆಭರಿತ ಚರಂಡಿಗಳಿಗೆ, ಹೊಗೆಯಾಡುವ ಸರೋವರ ಹಾಗೂ ಗುಂಡಿಯಲ್ಲಿರುವ ರಸ್ತೆಗೆ!

ನೀವು ಸರಿಯಾಗಿಯೇ ಓದಿದ್ದೀರಿ. ಪ್ರಸ್ತುತ ಬೆಂಗಳೂರಿನ ಪರಿಸ್ಥಿತಿ ಹೀಗೆಯೇ ಇರುವುದು. ಬೆಂಗಳೂರಿನ ಸಾಕಷ್ಟು ರಸ್ತೆಗಳು ವಾಹನ ಚಲಾವಣೆಗೆ ಅನುಕೂಲಕರವಾಗಿಲ್ಲ ಎನ್ನುವುದನ್ನ ಒಪ್ಪಲೇಬೇಕು. ಎಷ್ಟೋ ರಸ್ತೆಗಳಲ್ಲಿ ಮನುಷ್ಯನಷ್ಟೇ ಗಾತ್ರದ ಗುಂಡಿಗಳಾಗಿವೆ. ಅದರ ಜೊತೆಗೆ ಮಳೆ ನೀರಿನ ನಿರ್ವಹಣೆಯಲ್ಲಿನ ವೈಫಲ್ಯ ರಸ್ತೆಯಲ್ಲೇ ಪ್ರವಾಹವನ್ನುಂಟುಮಾಡಿ ಓಡಾಡುವುದಕ್ಕೆ ತೊಂದರೆ ಮಾಡುವುದಲ್ಲದೇ, ಗುಂಡಿಗಳನ್ನು ಕೂಡ ಇನ್ನೂ ದೊಡ್ಡದಾಗುವಂತೆ ಮಾಡುತ್ತಿದೆ. ಕಳೆದೊಂದು ವಾರದಲ್ಲಿ ಸುಮಾರು ೫ ದ್ವಿಚಕ್ರವಾಹನ ಚಾಲಕರ ಸಾವನ್ನಪ್ಪಿದ್ದಾರೆ ಈ ಗುಂಡಿಗಳ ದೆಸೆಯಿಂದ!

ಆದರೆ ಬೆಂಗಳೂರಿನ ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಮಾತ್ರ ನಿರ್ಲಜ್ಜೆಯಿಂದ ಗುಂಡಿಗಳಿಗೂ ಆ ಅಪಘಾತಗಳಿಗೂ ಸಂಬಂಧವೇ ಇಲ್ಲ ಎನ್ನುತ್ತಿದ್ದಾರೆ. ಮೊನ್ನೆ, ಬೆಂಗಳೂರಿನ ವ್ಯವಸ್ಥೆಗಳು ನ್ಯೂಯಾರ್ಕನ್ನೂ ಮೀರಿಸುವಂತಿದೆ ಎಂದಿದ್ದರು ಇದೇ ಜಾರ್ಜ್!  ಆದರೆ ನಟಿ ಹಾಗೂ ಕಾಂಗ್ರೆಸ್’ನ ಐಟಿ ಸಂಚಾಲಕಿಯಾಗಿರುವ ರಮ್ಯ ದಿವ್ಯಸ್ಪಂದನ  ರಸ್ತೆಗಳ ದುರವಸ್ಥೆಯನ್ನು ಕುರಿತು ಮಾಡಿರುವ ಟ್ವೀಟ್ ನಿಮ್ಮನ್ನು ಬೆಚ್ಚಿ ಬೇಳಿಸಲಿದೆ.  ಅಷ್ಟಕ್ಕೂ ಅವರೇನು ಟ್ವೀಟ್ ಮಾಡಿದ್ದಾರೆ? ನೀವೇ ನೋಡಿ!

ಸರಿ ಹಾಗಾದ್ರೆ, ಮೇಡಂ ಹೇಳಿದ್ಮೇಲೆ ಮುಗೀತು, ಬೆಂಗ್ಳೂರಿನ ರಸ್ತೆಗಳನ್ನು ಸರಿ ಮಾಡೋವರೆಗೆ ನಾವ್ಯಾರೂ ತೆರಿಗೆ ಕಟ್ಟೋದು ಬೇಡ!

 

ಈ ಸಂಶೋಧನೆಗೊಂದು ಡಾಕ್ಟರೇಟ್ ಕೋಡ್ಲೇ ಬೇಕ್!

 

 

ಪಾಪ.. ಹೀಗೆ ನಮ್ಮ ಸಿದ್ದಣ್ಣನೂ ಕೊಡ್ತಾ ಹೊದ್ರೆ ಅದೆಷ್ಟೂ ಅಂತ ಕೊಡ್ಬೋದು?!

 

 

ಅಂದ ಹಾಗೆ ಬೆಂಗಳೂರಿನ ಕೆಟ್ಟ ರಸ್ತೆಗಳ ಬಗ್ಗೆ ಹೀಗೆ ಮನಬಿಚ್ಚಿ ಮಾತನಾಡಿದ್ದು ಹಿಂದೆ ಬಿಜೆಪಿ ಸರಕಾರವಿದ್ದಾಗ. ಈಗ ಅವರದ್ದೇ ಸರಕಾರವಿದೆ, ಕೆಟ್ಟ ರಸ್ತೆಗಳ ಪರಿಣಾಮವಾಗಿ  ಐದು ದಿನಗಳಲ್ಲಿ ಐದು ಸಾವಾಗಿದೆ. ಇದೂವರೆಗೂ ಒಂದೇ ಒಂದು ಟ್ವೀಟ್ ಬಂದಿಲ್ಲ ಮೇಡಂ ಕಡೆಯಿಂದ. ಆವತ್ತು ಜನರ ಪರವಾಗಿ  ಹೇಳಿದ ಮಾತುಗಳು  ಮತ್ತೆ ತಿರುಗಿ ಅವರ ಬಳಿಗೇ ಬಂದು ನಿಂತತಿದೆ!

Facebook ಕಾಮೆಂಟ್ಸ್

Team readoo kannada:
Related Post