ನಾನು ನನ್ನ ಜಾತಿಯನ್ನ ಮುಂದಿಟ್ಟುಕೊಂಡು ಯಾವತ್ತೂ ಯಾವ ಸವಲತ್ತನ್ನೂ ಪಡೆದವನಲ್ಲ , ನನ್ನ ಜನಿವಾರವನ್ನೊಮ್ಮೆ ಹೊರಹಾಕಿ ಪಂಚೆಯನ್ನುಟ್ಟು ಎಂದಿಗೂ ದಾನ ಪಡೆದವನಲ್ಲ, ಅದೆಷ್ಟೋ ಬಾರಿ ಬಹಳ ತಪ್ಪಿಸಿಕೊಂಡರೂ ಕರೆದು ಕೂರಿಸಿ ಕೊಟ್ಟ ದಕ್ಶಿಣೆಯನ್ನ ಹುಂಡಿಗೆ ಹಾಕಿದವನು ನಾನು. ನನ್ನ ಬ್ರಾಹ್ಮಣ್ಯದ ಮಾತು ಬಂದರೆ ದಿನಕ್ಕೆ ೧೦೦೮ ಗಾಯತ್ರಿ ಮಂತ್ರವನ್ನು ಪಠಣ ಮಾಡಿದ ದಿನಗಳೂ ಬಹಳ ಇವೆ. ನನ್ನ ಅನುಷ್ಟಾನಗಳು ಅರ್ಘ್ಯಗಳು ನಾನು ನಂಬಿದ ಪದ್ದತಿಗಳು ನನ್ನ ಆಯ್ಕೆಗಳೇ ಹೊರತು ಅವುಗಳನ್ನು ಯಾರೋ ನನ್ನ ಮೇಲೆ ಹೇರಿದ್ದಲ್ಲ! ನಾನು ಮಾಡುವ ಈ ಅನುಷ್ಟಾನಗಳಿಂದ ಯಾರಿಗೂ ತೊಂದರೆಯಾದದ್ದಿಲ್ಲ. ನಾನು ಉದಾಯಕಾಲದಲ್ಲೆದ್ದು ಮೈಕಿನ ಮೂಲಕ ಆದಿತ್ಯ ಹ್ರದಾಯವನ್ನಾಗಲಿ ಗಾಯಿತ್ರಿ ಮಂತ್ರವನ್ನಾಗಲೀ ಪಠಿಸಲಿಲ್ಲ.
ಇನ್ನೊಂದು ಮಾತು. ನಾನು ಯಾವತ್ತೂ ಯಾವುದಕ್ಕೂ ಸರ್ಕಾರದ ಬಳಿ ಕೈಚಾಚಿಲ್ಲ. ಯಾವುದೇ ಸರ್ಕಾರಿ ಸೌಲಭ್ಯವೂ ನನಗೆ ಸಿಕ್ಕಿಲ್ಲ.
ನಾನು ನನ್ನ ಶಾಲೆಯನ್ನ ಸೇರಿದ್ದು ನನ್ನ ಹೆತ್ತವರ ದುಡ್ಡಿಂದ. ಯಾವ ಆರ್.ಟಿ.ಈ ಯ ಅಗತ್ಯವೂ ಲಭ್ಯತೆಯೂ ನನಗಿರಲಿಲ್ಲ. ಮುಂದೆ ತಾಂತ್ರಿಕ ಶಿಕ್ಷಣವನ್ನು ಪಡೆದದ್ದು ನನ್ನ ಶಕ್ತಿಯಿಂದ. ನನಗ್ಯಾರೂ ಮೀಸಲಾತಿಯ ಸೀಟನ್ನಾಗಲಿ ಅಥವಾ ನನ್ನ ವೆಚ್ಚವನ್ನು ಭರಿಸುವ ಭರವಸೆಯನ್ನಾಗಲಿ ಕೊಟ್ಟಿರಲಿಲ್ಲ. ಮತ್ತೆ ದುಡ್ಡು ತುಂಬಿದ್ದು ನನ್ನ ಅಪ್ಪ- ಅಮ್ಮ. ಅಂದಹಾಗೆ ನನ್ನ ಅಪ್ಪ ಪುರೋಹಿತರಲ್ಲ! ಇವತ್ತಿಗೂ ಒಂದು ಮೊಣಕಾಲಿನ ನೋವಿಲ್ಲದಿದ್ದರೆ ೮೦-೧೦೦ ಕೇಜಿಯ ೧೦೦೦ ಕಟ್ಟು ಸೊಪ್ಪನ್ನು ಹೊತ್ತು ತಂದು ತೊಟಕ್ಕೆ ಸುರಿದು ಹಾಕಬಲ್ಲರು. ಆ ರಟ್ಟೆಯ ಬಲ ಸ್ವಂತದ್ದು!! ಸರ್ಕಾರ ಕೊಡೊ ೫ ಮೊಟ್ಟೆಯಿಂದ ಬಂದದ್ದಲ್ಲ. ನನ್ನಮ್ಮ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಾದಾಗ ಅವರಷ್ಟು ಶಿಕ್ಷಣ ಪಡೆದವರು ಕೇವಲ ೩ ಜನ ಇಡೀ ರಾಜ್ಯದಲ್ಲಿದ್ದದ್ದು. ಅದೂ ಸ್ವಂತ ಬಲದ ಶಿಕ್ಷಣ. ನಾನು ರಾಜ್ಯದ ಪ್ರತಿಷ್ಟಿತ ಸಂಸ್ಥೆಯಲ್ಲಿ ನನ್ನ ಸ್ನಾತಕೋತ್ತರ ಪದವಿಯ ಒಂದು ಸೀಟನ್ನು ಪಡೆಯಲು ಬರೋಬ್ಬರಿ ೨ ಲಕ್ಷ ೨೦ ಸಾವಿರ ಜನರೊಟ್ಟಿಗೆ ಹೋರಾಡಿದ್ದೆ. ಆ ಶಿಕ್ಷಣದ ಮೂಲಕ ಅತ್ಯುತ್ತಮ ಕಂಪನಿಯೊಂದರ ಕೆನೆಪದರದಂತಿರುವ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದಲ್ಲಿ ಕೆಲಸ ಪಡೆದಿದ್ದು ಕೇವಲ ಸ್ವಂತ ಅರ್ಹತೆಯಿಂದ. ನಾನು ಇಲ್ಲಿಯವರೆಗೆ ಯಾರೊಬ್ಬರ ಬಳಿಯೂ ‘ ಅಣ್ಣಾ ಸ್ವಲ್ಪ ಸಹಾಯ ಮಾಡಿ ಅಂತಲೋ, ಯಾವುದೇ ಸರ್ಕಾರದ ಬಳಿಯೂ ನನಗೆ ಮೀಸಲಾತಿ ಬೇಕು ಅಂತ ಬೇಡಿಲ್ಲ. ನನಗಿರೋ ೩೦- ೪೦ % ಸೀಟುಗಳಲ್ಲಿ, ಅವಕಾಶಗಳಲ್ಲಿ ಗೆದ್ದು ಬಂದಿರುವವನು ನಾನು. ೭೦ ವರ್ಷಗಳಿಂದ ನೀವು ಸಮಾನತೆ ಅನ್ನೋ ಹೆಸರಲ್ಲಿ ಮಾಡಿಕೊಂಡು ಬಂದಿರುವ ದೌರ್ಜನ್ಯಗಳನ್ನು ಎದುರಿಸಿ ಗೆದ್ದು ಬಂದವನು ನಾನು. ನನ್ನ ಸಾಮರ್ಥ್ಯ ಮತ್ತು ಏನನ್ನಾದರೂ ಎದುರಿಸುತ್ತೇನೆ ಅನ್ನೋ ಭಂಡ ಧೈರ್ಯವೇ ನನ್ನನ್ನು ಮತ್ತು ನನ್ನಂತಿರುವ ಬ್ರಾಹ್ಮಣರನ್ನು ನಾವಿರುವ ಸ್ಥಿತಿಗೆ ತಂದಿರುವುದು. ನಾವು ಯಾರಿಗೂ ಕೇಡು ಬಯಸಿದವರಲ್ಲ ಬಯಸುವವರೂ ಅಲ್ಲ. ಇವತ್ತಿಗೂ ಯಾರಾದರೂ ಕಾಲಿಗೆ ಬಿದ್ದರೆ ಮನಃಪೂರ್ವಕವಾಗಿ ಆಶೀರ್ವದಿಸುವನು ನಾನು! ಹೇಗೆ ” ೪ ಜನ ಮಾಡುವ ಕೆಲಸಕ್ಕೆ ಇಡೀ ಧರ್ಮವನ್ನು ಭಯೋತ್ಪಾದಕರು ಅನ್ನೋದು ತಪ್ಪೋ”, ಅದೇ ರೀತಿ ೩ ರೂಪಾಯಿ ದುಡ್ಡು ಕೊಟ್ಟು ೬ಎಳೆಯ ಜನಿವಾರ ಹಾಕಿ ಒಂದು ಮಡಿವಸ್ತ್ರ ಉಟ್ಟು ನಿಮ್ಮನ್ನ ದೋಚುವ ನಾಲ್ಕು ಜನರನ್ನ ನೋಡಿ ಇಡೀ ಬ್ರಾಹ್ಮಣರನ್ನೂ ಶ್ರೇಷ್ಟವಾಗಿರುವ ಬ್ರಾಹ್ಮಣ್ಯವನ್ನು ದೂಷಿಸುವುದು ಎಷ್ಟು ಸರಿ ?
ಮತ್ತೊಮ್ಮೆ ಹೇಳ್ತೀನಿ ಕೇಳಿ , ನಮ್ಮನ್ನ ಗೇಲಿ ಮಾಡುವವರು, ನಾನೂ ಬ್ರಾಹ್ಮಣನಾಗಬೇಕು ಎನ್ನುವವರು ಮತ್ತು ಎಲ್ಲರೂ ಇದನ್ನೊಮ್ಮೆ ಓದಿ. ಬ್ರಾಹ್ಮಣರಾಗಲು ಇಚ್ಚಿಸುವವರು ಮುಂದೆ ಬನ್ನಿ, ಧೀಕ್ಷೆ ಕೊಡೋಣ. ಶಾಸ್ತ್ರಗಳ ಉಲ್ಲೇಖವಿದೆ. ಚಂದೋಗ್ಯ ಉಪನಿಶತ್ತಿನಲ್ಲಿ ಗೌತಮ ಋಷಿಯು ಸತ್ಯಕಾಮ ಎಂಬ ಶೂದ್ರ ಬಾಲಕನನ್ನು ಶಿಷ್ಯನಾಗಿ ಬ್ರಾಹ್ಮಣನಾಗಿ ಸ್ವೀಕರಿಸುತ್ತಾನೆ. ಅಲ್ಲಿ ಉಲ್ಲೇಖಿಸುವಂತೆ ಬ್ರಾಹ್ಮಣ್ಯ ಒಂದು ಗುಣ. ಅದು ಒಂದು ಜನಿವಾರದ ಎಳೆಯಿಂದ ನಿರ್ಧಾರವಾಗುವಂತದ್ದಲ್ಲ. ಒಬ್ಬ ಬ್ರಾಹ್ಮಣನ ಗುಣ ವಿಶೇಷಣಗಳು ಏನು ಅಂತಾ ಪ್ರಶ್ನೆಯೇ? ಇಲ್ಲಿದೆ ಉತ್ತರ. ಸತ್ಯಕ್ಕಾಗಿ ಜೀವನ, ತಾಳ್ಮೆ, ದಯೆ, ಕರುಣೆ, ವಾತ್ಸಲ್ಯ, ಜೀವನ ಪ್ರೀತಿ, ಮಾಡುವ ಕೆಲಸದಲ್ಲಿ ಶ್ರದ್ಧೆ, ಅಂತಃಕರಣ ಶುದ್ದಿ, ಶಾಂತಿ, ಮಮತೆ, ಸಂಯಮ. ಭಗವಾನ್ ಶ್ರೀ ಕೃಷ್ಣ ಹೇಳಿದಂತೆ ಇದೆಲ್ಲಾ ಅನುಷ್ಟಾನಗೊಳ್ಳಬೇಕಾದರೆ ಸಾತ್ವಿಕ ಆಹಾರ ಪದ್ದತಿ. ದನದ ಮಾಂಸಾನೂ ಬೇಕು ಬ್ರಾಹ್ಮಣ್ಯವೂ ಬೇಕು ಅಂದ್ರಾಗಲ್ಲ. ಅವ್ರು ತಿಂತಾರಲ್ಲಾ ಅಂತಾ ತೋರಿಸಿದ್ರಾ, ಮೇಲೆ ಹೇಳಿದಂತೆ ಬ್ರಾಹ್ಮಣರಾಗೋದು ೩ ರುಪಾಯಿಯ ಜನಿವಾರದಿಂದಲ್ಲ. ಮತ್ತೊಂದು ಮಾತು. ಅದೇ ತುಳಿತದ ಬಗ್ಗೆ ಮಾತಾಡೋರು ಇಲ್ಲಿ ಕೇಳಿ. ನಮ್ಗೆ ಯಾವ ಮೀಸಲಾತಿಯೂ ಇಲ್ಲಾ. ನಾವು ಕೇಳೋದೂ ಇಲ್ಲಾ. ಇವತ್ತಿಗೂ ನೀವು ಅಸೂಯೆ ಪಡೋ ರೀತೀಲಿ ಬದುಕ್ತಾ ಇದೀವಿ ಅಂದ್ರೆ ಅದು ನಮ್ಮ ಸ್ವಂತ ಶಕ್ತಿಯಿಂದ. ನಾವು ನಂಬಿದ ಆ ದೈವದ, ನಾವು ಮಾಡಿದ ಅನುಷ್ಟಾನಗಳ ಶಕ್ತಿಯದು. ಅಂತಾ ಧೀಃಶಕ್ತಿ ಪ್ರತಿಯೊಬ್ಬರಿಗೂ ಬರಲ್ಲ, ಬಂದಿದೆ ಅಂದ್ರೆ ನೀವೂ ಬ್ರಾಹ್ಮಣರೇ ಅಂದ್ಕೋಳಿ. ಮತ್ತೊಂದು ಮಾತು, ಬ್ರಾಹ್ಮಣ ಅಂತಾಗ್ಬೇಕು ಅನ್ನೋರು ಮತ್ತೆ ನಂದು ಕ್ಯಾಟಗರೀ ಮಾರಾಯ ಅಂತಾ ಮೀಸಲಾತಿಯನ್ನ ಮೂಸಿಕೊಂಡು ಕೂರುವಂತಿಲ್ಲಾ, ನೀವೂ ಜನರಲ್ ಕ್ಯಾಟಗರಿಯಲ್ಲಿ ಹೋರಾಡಿ. ನಾವುಂಡ ಎಲೆಯ ಬಗ್ಗೆ ಮಾತಾಡುವ ಮೊದಲು ನಾವ್ಮಾಡಿದ ಸಾಧನೆಗಳ ಬಗ್ಗೆ ,ನೀವು ನಮ್ಮನ್ನ ತುಳಿಯಕ್ಕೆ ಅಷ್ಟು ಪ್ರಯತ್ನ ಮಾಡಹೊರಟು ಸೋತು ಮತ್ತೆ ಕೆಸರು ಎರಚಕ್ಕೆ ಹೊರಟಾಗ್ಲೂ ಕೂಡಾ ನಿಮ್ಗೆ ಅತ್ಯಂತ ಸ್ಥಿತಪ್ರಜ್ಞತೆಯಿಂದ ಮತ್ತು ಸಂಯಮದಿಂದ ಉತ್ತರಿಸ್ತಾ ಇದ್ದೀವಲ್ಲಾ ಅದ್ರ ಬಗ್ಗೆ ಮಾತಾಡಿ. ಬ್ರಾಹ್ಮಣ ಆಗ್ಬೇಕು ಅನ್ನೋದು ಸುಲಭ. ನೀನು ಹುಳಿಗೊಜ್ಜು ತಿನ್ನೋನು ಅಂತಾ ಜರೆಯೋದು ಸುಲಭ. ಆದ್ರೆ ತಟ್ಟೇ ಮುಂದೆ ಕಬಾಬ್ ತುಂಡಿದ್ದಾಗ ಅದನ್ನ ನೋಡದೇ ಆ ಹುಳಿಗೊಜ್ಜು ತಿನ್ನೋದು ನಿಜವಾದ ತಪಸ್ಸು. ಅದನ್ನ ಮಾಡಿ ನೋಡಿ, ಮತ್ತೆ ಬನ್ನಿ ಬ್ರಾಹ್ಮಣರಾಗೋಣ. ಆಗ್ಲಿಕ್ಕಿಲ್ವಾ?
Facebook ಕಾಮೆಂಟ್ಸ್