ನಾವು ನಿಮ್ಮ ಹಾಗೆ ಅಲ್ಲ, ನಮಗೆ ನಮ್ಮದೆ ಆದ ಕಟ್ಟುಪಾಡುಗಳಿವೆ. ನಮ್ಮ ಜಗತ್ತು ನಿಮಗೆ ಸ್ವಲ್ಪ ವಿಚಿತ್ರ ಅನಿಸಬಹುದು ಆದರೆ ನಾವು ಇರುವುದೆ ಹೀಗೆ. ನಾನು ಜೆರಿ ಪಾಟರ್, ನಮ್ಮ ಊರು ಮಿಸಿಸಿಪ್ಪಿಯ ಸಮೀಪದ ಓಲ್ಡ್ ಲೇಕ್, ನನಗೆ ಈಗ ಮೂರು ದಿನ ವಯಸ್ಸು. ನಮ್ಮಲ್ಲಿ ಹುಡುಗರು ಹತ್ತು ದಿನ ಜೀವಿಸಿದ್ದರೆ ಹುಡುಗಿಯರು ಐವತ್ತು ದಿನ. ನಮ್ಮಲ್ಲಿ ಕಡಿಮೆ ಸಮಯ ಇರುತ್ತದೆ, ಆದರೆ ಆ ಹುಡುಗಿ ಸೊಳ್ಳೆಗಳು ಪ್ರೀತಿ, ಪ್ರಣಯ ಅಂಥಾನೆ ದಿನಾ ಹಾಳು ಮಾಡುತ್ತಾರೆ. ಅವರು ಇನ್ನು ಹಾಗೆ ಇರುತ್ತಾರೆ ನಾವು ಮುದುಕರಾಗಿ ಮಸಣ ಸೇರುತ್ತೇವೆ. ಇಂತಹ ಹಲವಾರು ಸಮಸ್ಯೆ ಇರುವಾಗ ನನದೆ ಬೇರೆ ಕಥೆ ಇದೆ.
ಹುಟ್ಟಿದ ದಿನದಂದೆ ಈ ಮನೆಯ ಪಿಂಕಿಯ ಹಳೆಯ ಅಂಗಿಯಲ್ಲಿ ಇದ್ದ ನಾನು ವಿದೇಶದಿಂದ ಈಗ ನಿಮ್ಮ ರಾಜ್ಯದ ವಿಜಯಪುರಕ್ಕೆ ಬಂದಿದ್ದೇನೆ. ಇಲ್ಲಿ ನನಗೆ ಯಾರ ಪರಿಚಯ ಇಲ್ಲಾ, ಭಾಷೆಯು ನನಗೆ ತಿಳಿಯದು. ಇಲ್ಲಿಯ ಭಾಷೆಯಲ್ಲಿ ಆರು ಅಕ್ಷರಗಳಿವೆ, ಅದರಲ್ಲೂ ಒಂದೇ ಒಂದು ಸ್ವರ ಇದೆ. ಊಟಕ್ಕೂ ತೊಂದರೆ ಇದೆ. ಇಲ್ಲಿ ರಕ್ತ ಗಟ್ಟಿಯಾಗಿ ಇದೆ, ನನ್ನ ಹೊಟ್ಟೆಗೆ ಅದು ಭಾರ ಆಗುತ್ತದೆ. ಜೀರ್ಣಕ್ರಿಯೆಗೂ ತೊಂದರೆ ಇದೆ.ಎಲ್ಲೆಂದರಲ್ಲಿ ನನಗೆ ಒತ್ತಡ ಬಂದು ಬಿಡುತ್ತದೆ, ಇಲ್ಲಿ ಹೆಚ್ಚಿಗೆ ಹೈಜಿನ್ ಬಗ್ಗೆ ಯಾರು ಗಮನ ಹರಿಸಲ್ಲ. ಅದಕ್ಕೆ ಅನಿಸುತ್ತದೆ ನನಗೆ ಬೇಗ ಬೇಗ ವಯಸ್ಸು ಆದಂತೆ ಕಾಣುತ್ತಿದೆ. ಸರಿಯಾಗಿ ನಿದ್ರೆ ಇಲ್ಲದೆ ಡಾರ್ಕ್ ಸರ್ಕಲ್ ಜಾಸ್ತಿ ಆಗಿವೆ. ಹರೆಯ ಕಾಡುತ್ತಿದೆ ಆದರೆ ಇಲ್ಲಿ ಯಾವ ಹೆಣ್ಣು ಸೊಳ್ಳೆಯು ನನ್ನ ತಿರುಗಿ ಕೂಡಾ ನೋಡಿಲ್ಲ.
ಸದ್ಯಕ್ಕೆ ನಾನು ಸಿಂಕ್ ಕೆಳಗಡೆ ಇರುವ ಪೈಪ್’ನ ಮೇಲೆ ಅಡ್ಡ ಮಾಡಿಕೊಂಡು ಇದ್ದೇನೆ. ಬೆಳಿಗ್ಗೆ ಆಚೆ ಕಡೆ ಹೋಗಿದ್ದೆ. ಅಲ್ಲಿ ಸಿಕ್ಕಾಪಟ್ಟೆ ಕೊಚ್ಚೆನೀರು ನೋಡಿ ಆಸೆ ಪಟ್ಟು ಹೋಗಿದ್ದೆ. ಅಲ್ಲಿ ಆಧಾರ ಕಾರ್ಡ ಕೇಳಿಕೊಂಡು ನಿಂತಿದ್ದು ನೋಡಿ ಸುಮ್ಮನೆ ವಾಪಸ್ ಬಂದೆ.ಈ ಸಿಂಕ್ನಲ್ಲು ನೀರು ಬರೋದು ಕಡಿಮೆ ಪಿಂಕಿ ಮತ್ತು ಆ ಶುಗರ್ ಪೆಸೆಂಟ್ ತಾತ ಮಾತ್ರ ಪಾಯಿಖಾನೆ ಕಡೆ ಬರುವುದು. ಬೇರೆ ಎಲ್ಲಾ ಜನ ಅದೆಲ್ಲಿ ಹೋಗತಾರೂ ಅಂಥ ಈ ಹಳ್ಳಿ ಪಿ.ಡಿ.ಓ ಗೆ ಗೊತ್ತು.
ಹಸಿವು ಆಗುತ್ತಿದೆ, ಆಗ ಆ ತಾತ ಬಂದಾಗ ಕಚ್ಚಿ ತಿಂದ ರಕ್ತ ಸಿಹಿಯಾಗಿತ್ತು ಆದರೆ ಅದರಲ್ಲಿ ಸಕ್ಕರೆಯ ಅಂಶ ತುಂಬಾ ಇದೆ. ನನ್ನ ಡಯಟ್ಗೆ ತೊಂದರೆ ಅದಕ್ಕೆ ಸುಮನೆ ಬೇರೆ ಕಡೆ ಹೋಗೋಣ ಅಂಥ ಬೆಳಕು ಇಲ್ಲದ ಕಡೆ ಹೋಗತಾ ಇದ್ದೆ. ದೂರದಿಂದ ಸುಯ್ ಸುಯ್ ಅಂಥ ಹಾಡು ಹಾಡುತ್ತ ಒಂದು ಹೆಣ್ಣು ಸೊಳ್ಳೆ ಬರುತ್ತಿತ್ತು. ನೋಡೋಣ ಅವಳನ್ನೆ ಕೇಳಿದರೆ ಆಯಿತು ಅಂಥಾ ಅವಳ ಹತ್ತಿರನೆ ಹೋದೆ. ಆದರೆ ಅವಳನ್ನ ನೋಡಿದ ತಕ್ಷಣವೇ ನಾನು ನನ್ನನ್ನೆ ಮರೆತು ರೆಕ್ಕೆ ಬಡಿಯುವದನ್ನು ನಿಲ್ಲಿಸಿದ್ದೆ. ಆಯ ತಪ್ಪಿ ಇನ್ನೇನೂ ಬಿಸಿ ಚಹಾದಲ್ಲಿ ಬೀಳುತ್ತಿದ್ದೆ ಅಷ್ಟರಲ್ಲಿ ಅವಳು ಬಂದು ಎಳೆದು ಗೋಡೆ ಮೇಲೆ ಇರುವ ಕಟ್ಟಿಗೆ ಈಪೋಟೋದ ಮೇಲೆ ಕೂಡಿಸಿದಳು. ಕಣ್ಣು ಕಣ್ಣು ಮಿಲಾಯಿಸಿತ್ತು, ಸುತ್ತು ಗಾಯಕ ಸೊಳ್ಳೆಗಳು ಹಾಡು ಹಾಡಿದ ಅನುಭವ. ಅದೇನೋ ಲವ್ ಆಗಿಬಿಡತ್ತೆ ಎನಿಸುವಷ್ಟರಲ್ಲಿ ಒತ್ತಡ ಹೆಚ್ಚಾಗಿ ಹೋಟ್ಟೆ ಗಿರ್ ಎಂದಿತ್ತು. ಕಣ್ಣಾಟ ಬಿಟ್ಟು ಹಸಿವಾಗಿದೆ ಅಂಥ ಹೇಳಿದೆ.ಅವಳಿಗೆ ನನ್ನ ಭಾಷೆ ಅರ್ಥ ಆಗಿರಲಿಲ್ಲ. ಸನ್ನೆ ಮಾಡಿ ತೋರಿಸಿದೆ. ಸುತ್ತಲೂ ನೋಡಿದರೆ ಯಾರು ಇಲ್ಲ. ಆದರೆ ಮಂಚದ ಮೇಲೆ ಮಗು ಮಲಗಿದೆ,ಒಳ್ಳೆಯ ಪೌಷ್ಟಿಕ ಆಹಾರ ನನಗೆ. ಆದರೆ ಆ ಮಗು ಮಲಗಿರುವ ಮಂಚಕ್ಕೆ ಮಚ್ಚರದಾನಿ ಹಾಕಿದ್ದಾರೆ. ಇಬ್ಬರಿಗೂ ಹಸಿವಾಗಿದೆ,ಕತ್ತಲೆಯ ಕೋಣೆಯಲ್ಲಿ ಒಂದೇ ಒಂದು ಮೇಣದ ಬತ್ತಿ. ಮುಂದೆ ಆಹಾರ ಇದ್ದರು ತಿನ್ನಲಾಗದ ಅಸಹಾಯಕತೆ. ಭಾಷೆ ಬರದ ಆ ಹೆಣ್ಣು ಸೋಳ್ಳೆ ಹಾರಿ ಹೋಗಿ ಮಚ್ಚರದಾನಿ ಮೇಲೆ ಕುತಿತ್ತು,ಸಣ್ಣ್ ದಾದ ಕಿಂಡಿಯಲ್ಲಿ ಜೋತಾಡುತ್ತ ಹಿಂದೆ ಇರುವ ಪ್ಯಾನ್ ನ ಗಾಳಿ ಬಂದಾಗ ಗಾಳಿ ಜೋತೆ ತೂರಿ, ರೆಕ್ಕೆ ಬಡಿದು ಕೈಕಾಲುಗಳಿಂದ ಆ ಕಿಂಡಿಯ ದಾರಗಳನ್ನ ವಿರುದ್ಧದ ದಿಕ್ಕಿನಲ್ಲಿ ನೋಕಿ ಒಳಗೆ ಹೋಗಿತ್ತು. ವ್ಹಾ ಅದೆಂತ ಆಟ ಅವಳದು. ನಾನು ಬೇರಗಾಗಿ ನಿಂತೆ.ಒಳಗಡೆಯಿಂದಲೆ ಸನ್ನೆಮಾಡಿ ಕರೆದ ಅವಳು ನಾನು ಒಳಗೆ ಹೋಗಲು ದಾರಿ ತೋರಿಸಿದಳು.
ಒಳಗಡೆ ಭರ್ಜರಿ ಊಟ ಇದ್ದರೂ ಅವಳ ಜೊತೆ ಕುಳಿತು ಕ್ಯಾಂಡಲ್ ಲೈಟ್ ಡಿನ್ನರ್ ಮಾಡಿದ್ದೆ. ನನ್ನ ಬಗ್ಗೆ ಎಲ್ಲಾ ವಿಷಯ ಅವಳಿಗೆ ಹೇಳಿದೆ. ಫಾರಿನ್ ಹುಡುಗ ಅಂಥಾ ಸಿಕ್ಕಾಪಟ್ಟೆ ನಾಚಿ ಪ್ರೀತಿಗೆ ಒಪ್ಪಿಗೆಯನ್ನ ಕಣ್ಣ ಸನ್ನೆಯಲ್ಲೆ ಕೊಟ್ಟಳು.
ಇನ್ನೇನು ಎರಡು ದಿನಾ ಅದೆ ಗುಂಗು, ಅವಳು ನಾನು ಮತ್ತು ಪ್ರೀತಿ. ಆವಾಗ ಆವಾಗ ಸಿಕ್ತಾ ಇದ್ದಳು ಒಳ್ಳೆಯ ಊಟ ಮಾಡಿ ಮನೆ ಎಲ್ಲಾ ಸುತ್ತಾಡಿ ಮಜಾಮಾಡತ್ತ ಇದ್ದೆವು. ಕದ್ದುಮುಚ್ಚಿ ಚರಂಡಿ ಸಮೀಪ, ಹಳೆ ಟೈರ್ ನಲ್ಲಿ ನಿಂತ ನೀರು, ನಾಯಿ ಮನೆಯ ಮೂಲೆಯಲ್ಲಿ ಕಳಿತು ನಾಯಿ ರಕ್ತ ಹೀರೋದು ಒಂಥಾರ ಮಜಾ ಇತ್ತು.ಹೀಗೆ ಕಾಲಕಳದದ್ದೆ ಗೊತ್ತಾಗಲಿಲ್ಲ.
ಒಂದು ಸಾರಿ ನಾನು ಅವಳು ಹಾರುತ್ತ ಹೋಗುವಾಗ ನನಗೆ ಸ್ವಲ್ಪ ದಣಿವು ಅನಿಸಿತು. ಅಲ್ಲಿಯೇ ಕುಳಿತು ಆಮೇಲೆ ಹೋಗೋಣ ಅಂಥ ಹತ್ತಿರದಲ್ಲೇ ಇದ್ದ ಶುಗರ್ ಪೆಷೆಂಟ ತಾತನ ಮೇಲೆ ಕುಳಿತೆವು. ಸ್ವಲ್ಪ ರಕ್ತ ಹೀರಿದೆ ಅದು ತಡೆದುಕೊಳ್ಳಲು ಆಗದೆ ಹೋರ ಬಂದಿತು. ಅವಳಿಗೆ ಅರ್ಥವಾಗಿತ್ತು ನನ್ನ ವಯಸ್ಸು ಆಗಿದೆ ಅಂಥ. ನೋಡ ನೋಡುತ್ತಿದ್ದಂತೆ ಅವಳು ಹಾರಿ ಬೇರೆ ಕಡೆ ಹೋದಳು. ನಾನು ಹಾರಿ ಹೋದೆ,ಆಗ ಅವಳು ಸನ್ನೆ ಮಾಡಿ ನೀ ಹೋಗು ನಾ ಬರುವೆ ಅಂಥ ಹೇಳಿ ಹಾರಿ ಹೋದಳು. ನಾನು ಸ್ವಲ್ಪ ಸಮಯದ ನಂತರ ಸಿಂಕ್ ನ ಪೈಪ್ ಹತ್ತಿರ ಹೋದೆ.ಅವಳು ಬರುವ ದಾರಿ ನೋಡುತ ಕುಳಿತ ನನಗೆ ಎರಡು ಸೊಳ್ಳೆಗಳು ಕಾಣಿಸಿದವು. ಅದರಲ್ಲಿ ಒಂದು ಅವಳು ಇನ್ನೊಂದು ಅವಳ ಹೊಸ ಗೆಳೆಯ.ಅವರಿಬ್ಬರೂ ಬಂದು ನನಗಾಗಿ ತಂದಿದ್ದ ರಕ್ತವನ್ನು ಕೋಟ್ಟು ಹೊರಟು ಹೋದರು.
ಕೊನೆಗಾಲದಲ್ಲಿ ಏನು ಮಾಡುವದು ಅಂಥ ಸುಮ್ಮನೆ ಕುತಿದ್ದೆ ಪಿಂಕಿ ಹೋಗುವುದು ಕಾಣುತ್ತಿತ್ತು,ಹಾರಿ ಹೋಗಿ ಅವಳ ಬ್ಯಾಗ್ ನಲ್ಲಿ ಕುಳಿತೆ,ಅವಳು ಮಿಸಿಸಿಪ್ಪಿ ತಲುಪವ ಬರೆಗೆ ನನ್ನ ಜೀವವನ್ನ ಕೈಯಲ್ಲಿ ಹಿಡಿದುಕೊಂಡು ಕುತಿದ್ದೆ.ಕಣ್ಣು ಮುಚ್ಚಿದರೆ ಎಲ್ಲಿ ಸಾಯುತ್ತೆನೆ ಎಂಬ ಭಯ.ಅಂತು ಬ್ಯಾಗ್ ಒಪನ್ ಆಯ್ತು,ನಾನು ಹಾರಿ ಹೋಗಿ ನೋಡಿದರೆ ಓಲ್ಡ್ ಲೆಕ್ ಹತ್ತಿರ ಏಲ್ಲಾ ಹೊಸ ಬರೆ ಇದ್ದರು.ಅಲ್ಲಿಯೇ ಒಂದು ಎಲೆಯ ಮೇಲೆ ಮಂಡಿ ಊರಿ ಕುಳಿತು ಕಣ್ಣ ಮುಚ್ಚಿದೆ,ಕಣ್ಣ ಮುಂದೆ ಅವಳೆ ನಸು ನಕ್ಕುನಿಂತ ಭಾವ….
ದಣಿದ ದೇಹಕೆ ನಿದ್ದೆ ಬೇಕಿತ್ತು….. ನಿದ್ದೆಗೆ ಜಾರಿದೆ…. ಎಚ್ಚರ ಆದರೆ ಒಳ್ಳೆದು ಆಗದೆ ಇದ್ರೆ ಇದೆ ಚಿರ ನಿದ್ರೆ….
Facebook ಕಾಮೆಂಟ್ಸ್