X

ಕೊನೆಗೂ ಪ್ರಶ್ನೆಯಾಗಿಯೇ ಉಳಿದೆಯಾ ಇಂದಿರಾ?

ಈಕೆ ಭಾರತವೆಂಬ ರಾಷ್ಟ್ರವನ್ನು ಸರ್ವಾಧಿಕಾರಿಯಂತೆ ಆಳಿದ ಮೊದಲ ಮತ್ತು ಕೊನೆಯ ಪ್ರಧಾನಿ.ಈಕೆಯ ಬಗ್ಗೆ ಓದಲು ಶುರುಮಾಡಿ, ನೋಡಿ ಅಬ್ಬಾ!! ಅನ್ನಿಸುವಷ್ಟು ಆವರಿಸಿಕೊಳ್ಳುತ್ತಾಳೆ ಈಕೆ. ತನ್ನ ಸುಪರ್ದಿಯಲ್ಲಿ ದೇಶ ಕಟ್ಟಿದಳೋ ಅಥವಾ ಕೆಡವಿದಳೋ ಅದು ಎರಡನೇ ಪ್ರಶ್ನೆ ಅದಲ್ಲಕ್ಕಿಂತಲೂ interesting ಅವಳ ಖಾಸಗೀ ಜೀವನ. ಒಬ್ಬ ಜವಾಬ್ದಾರೀ(ನೆಹರು ಬೇಜವಾಬ್ದಾರಿ ಆಗಿದ್ದರೂ ದೇಶ ಆತನ ನಂಬಿತ್ತು) ಕುಟುಂಬದ ಹೆಣ್ಣುಮಗಳು ಹೀಗೂ ಬದುಕಿದ್ದಳಾ ಎಂಬ ಪ್ರಶ್ನೆ ನಿಜಕ್ಕೂ ನಮ್ಮನ್ನು ಆವರಿಸುತ್ತದೆ.

ಫಿರೋಜ಼್ ಖಾನ್ ಎಂಬ Converted ಪಾರ್ಸಿಯನ್ನು (ಆತನ ತಂದೆ ಮುಸ್ಲಿಂ ಮತ್ತು ತಾಯಿ ಪಾರ್ಸಿ ಆಗಿದ್ದಳು. ಆದರೆ ಕೊನೆಗೆ ಆತನ ಕುಟುಂಬವೇ ಮುಸ್ಲಿಂ ಮತಕ್ಕೆ ಮತಾಂತರ ಆದರು ಎಂಬ ಮಾತಿದೆ.) ಅಪ್ಪನ ವಿರೋಧಗಳ ನಡುವೆಯೂ ಇಂದಿರಾ ಮದುವೆ ಆದಳು.ಇಂದಿರ ಕೂಡ ತನ್ನ ಮದುವೆಯಾದ ನಂತರ ಮುಸ್ಲಿಂ ಆಗಿ ಮತಾಂತರಗೊಂಡು “ಮೈಮುನಾ ಬೇಗಂ” ಎಂದು ಹೆಸರು ಬದಲಿಸಿಕೊಂಡಿದ್ದಳಾ? ಇದು ಕೂಡ ನಿಗೂಢವಾಗಿಯೇ ಉಳಿಯಿತು. ಕೊನೆಗೆ ಇದು ಕೂಡ ಸುಳ್ಳು ಇತಿಹಾಸವ( ಕಾಂಗ್ರೆಸ್ ಸುಳ್ಳು ಎಂದು ಘೋಷಿಸುವ ಇತಿಹಾಸ ) ಸೇರಿತೋ ಏನೋ? ಆದರೆ ಕಾಲಕ್ರಮೇಣ ಫಿರೋಜ಼್ ಮತ್ತು ಇಂದಿರಾಳ ಸಂಬಂಧ ಹದಗೆಟ್ಟು ಹೋಯಿತು. ನೆಹರು ಎಂಬ ಪ್ರಧಾನಿ ತನ್ನ ಹೆಂಡತಿಯನ್ನು ಕನಿಷ್ಟ ಹೆಣ್ಣು ಎಂದೂ ಗೌರವಿಸದೆ ದೂರ ತಳ್ಳಿದಾಗ ಇದೆ ಫಿರೋಜ಼್ ಅತ್ತೆಯನ್ನು ಪ್ರೀತಿಯಿಂದ ನೋಡಿಕೊಂಡ. ಆದರೆ ಅದೇ ನೆಹರು ಇನ್ನೊಂದು ಹೆಣ್ಣಿನೊಂದಿಗೆ ಸರಸ ಸಲ್ಲಾಪಗಳಲ್ಲಿ ನಿರಂತರ ತೊಡಗಿಕೊಂಡು ಹಾಯಾಗಿದ್ದ ಎಂದರೆ ನಂಬಲೇಬೇಕು. ಅಪ್ಪನಂತೆ ಬದುಕಿದಳ ಇಂದಿರಾ? ಹೌದು. ಒಂದು ಮೂಲಗಳ ಪ್ರಕಾರ ಅಪ್ಪ ನೆಹರುವಿನಂತೆ ವಿಲಾಸಿಯಾಗಿ ಬದುಕಿದಳು ಇಂದಿರ. ಫಿರೋಜ಼್ ಇಂದಿರಾಳಿಗೆ ಮೋಸ ಮಾಡಲು ಶುರು ಮಾಡಿದ(ಅಥವಾ ಇಂದಿರಾಳೇ ಮಾಡಿದಳೋ ಗೊತ್ತಿಲ್ಲ),ಹೆಣ್ಣು ದೇಹವ ಅರಸಿ ಹೊರಟ.ತಾರಕೇಶ್ವರಿ ಸಿನ್ಹಾ, ಮೆಹಮುನಾ ಸುಲ್ತಾನ ಮತ್ತು ಸುಬದ್ರ ಜೋಶಿ ಹೀಗೆಯೇ ಅನೇಕರ ಜೊತೆ ಫಿರೋಜ಼್ ಗೆ ದೈಹಿಕ ಸಂಬಂಧವಿತ್ತು ಎಂಬ ಮಾತಿತ್ತು. ಅದು ಸತ್ಯವೇ? ಆಗಿರಲೂ ಬಹುದು. ಫಿರೋಜ಼್ ಎಂಬ ಮುಸ್ಲಿಂ ತಂದೆಯ ಮಗ ಗಾಂಧಿಯಾಗಿದ್ದು ಹೇಗೆ ಎಂಬುದು ನಿಜಕ್ಕೂ ದೊಡ್ಡ ಪ್ರಶ್ನೆ. ಜೊತೆಗೆ ಭಾರತದ ಜನರ ಭಾವನೆಗಳ ಜೊತೆಗೆ ಫಿರೋಜ಼್ ಮತ್ತು ಇಂದಿರ ಚಂದವಾಗಿ ಆಟವಾಡಿದ್ದಂತೂ ದುರಂತ ಸತ್ಯ. ನವಾಬ್ ಖಾನ್ ನ ಮಗನಾಗಿದ್ದ ಫಿರೋಜ಼್ ಇಂದಿರಾಳನ್ನು ಮದುವೆಯಾಗಲು ಹೊರಟಾಗ ನೆಹರು ವಿರೋಧಿಸಿದ್ದರು. ಆದರೆ ಕೊನೆಗೆ ಮಹಾತ್ಮ ಗಾಂಧಿಯೆಂಬ “ಮಹಾತ್ಮ”, ಫಿರೋಜ಼್ ನನ್ನು ದತ್ತು ತೆಗೆದುಕೊಂಡು “ಗಾಂಧಿ” ಹೆಸರನ್ನು ಆತನಿಗೆ ಬಳುವಳಿಯಾಗಿ ನೀಡಿದರ? ಹೀಗೊಂದು ಅಂತೆ ಕಂತೆಯ ಸುದ್ದಿ ಈಗಲೂ ಜೀವಂತವಾಗಿದೆ.ನಿಜವಾಗಲೂ ಫಿರೋಜ಼್ ವಿಚಾರದಲ್ಲಿ ಕೆಲವು ಸತ್ಯಗಳು ಹೊರಜಗತ್ತಿಗೆ ಗೊತ್ತಾಗಲೇ ಇಲ್ಲವಾ? ನೆಹರು ಮಹಾತ್ಮ ಗಾಂಧಿಯನ್ನು ತನ್ನ ಸರ್ವ ಕೆಲಸಕ್ಕೂ ಬಳಸಿಕೊಂಡಿದ್ದು ವಿಪರ್ಯಾಸವೇ ಸರಿ.ಹಾಗಾಗಿಯೇ ನಾನು ಹೇಳುವುದು ಈ ಕಾಂಗ್ರೆಸ್ ನವರು ಸತ್ಯದ ಸಮಾಧಿಯ ಮೇಲೆ ಆಳ್ವಿಕೆ ನಡೆಸುತ್ತಿರುವವರು.

ಭಾರತದ ಜನರನ್ನು ಮೂರ್ಖವಾಗಿಸುತ್ತಲೆ ಅಧಿಕಾರವನ್ನು ಅನುಭವಿಸಿದ ಈ ಗಾಂಧಿ ಕುಟುಂಬ(ನೆಹರು ಎಂಬ ವಿಲಾಸಿ ಪ್ರಧಾನಮಂತ್ರಿಯ ಕುಟುಂಬದ ಬಗ್ಗೆ ನಾನು ಹೇಳೋದು) ಜನರ ಈ ಪರಿಯ ಬುದ್ದಿವಂತಿಕೆಯನ್ನು ನೋಡಿ ಈಗ ಪರಿತಪಿಸುತ್ತಿರಬಹುದು. ಭಾರತದ ಜನರಿಗೇ ಭಾರತದ ಅದೆಷ್ಟೋ ಇತಿಹಾಸದ ವಿಷಯಗಳು ಇನ್ನೂ ಪ್ರಶ್ನೆಯಾಗಿರುವುದು ದೊಡ್ಡ ದುರಂತವೇ ಸರಿ. ಇದೆ ತರದ ದುರಂತದ ಸಾಲಿನಲ್ಲಿ ನಿಂತಿದ್ದು “ಗಾಂಧಿ” ಎಂಬ ಹೆಸರಿನಲ್ಲಿ ಜನರ ಭಾವನೆಯ ಜೊತೆ ಆಟವಾಡಿದ ಒಂದು ಕುಟುಂಬದ ಕಥೆಯೂ ಕೂಡ ಎಂದರೆ ನಂಬಲೇಬೇಕು.

ಈಗ ಇಂದಿರಾಗಾಂಧಿಯನ್ನು ಏಕೆ ನೆನೆಯಬೇಕು? ಮೊನ್ನೆ ನೆಹರು ಎಂಬ ಮೊದಲ ಪ್ರಧಾನಿಯ ಆಪ್ತ ಕಾರ್ಯದರ್ಶಿಯಾಗಿದ್ದ ಮಥಾಯಿ ಬರೆದಿದ್ದ ಅವರ ಆತ್ಮಕಥೆಯ ಒಂದು ಭಾಗವಾಗಿದ್ದ “ಶೀ” ಎಂಬ ಅಧ್ಯಾಯವ ಓದಿದೆ. ಅದನ್ನು ಓದುವಾಗ ಅದೇಕೋ ಏನೋ ಇಂದಿರಾಗಾಂಧಿ ನೆನಪಾಗಿ ಹೋದಳು.ನೆಹರು ಪ್ರಧಾನಿಯಾಗಿದ್ದಾಗ ನೆಹರೂಗೆ ಆಪ್ತ ಕಾರ್ಯದರ್ಶಿಯಾಗಿದ್ದವರು ಇದೇ ಮಥಾಯಿ. ಹಾಗಾದರೆ ಮಥಾಯಿ ಅವರು ಬರೆದ ಆ “ಶೀ” ಇದೇ ಇಂದಿರಾಗಾಂಧಿಯ? ನನಗಂತೂ ಗೊತ್ತಿಲ್ಲ. ಆದರೆ ನಿಮಗೆಲ್ಲ ಕಲ್ಪನೆಗೆ ಬರುವ “ಶೀ” ಮಾತ್ರ ಅದೇ ಇಂದಿರಾಗಾಂಧಿ ಆಗಿದ್ದರೆ ಕಾಂಗ್ರೆಸಿಗರ ದೃಷ್ಟಿಯಲ್ಲಿ ನೀವು ದೇಶದ್ರೋಹಿಯಾಗಬಹುದು ಎಚ್ಚರ!!! ಇದೆ ತೆರನಾದ ಸಾವಿರ ಸಾವಿರ ಸತ್ಯಗಳನ್ನು ಬಿಚ್ಚಿಡಬಹುದಾದ ಎರಡು ಪುಸ್ತಕಗಳೆಂದರೆ ಕೆ ಎನ್ ರಾವ್ ಅವರು ಬರೆದಿದ್ದ “ನೆಹರು ಡೈನಾಸ್ಟಿ” ಮತ್ತು ಕ್ಯಾಥರೀನ್ ಫ್ರ್ಯಾಂಕ್ ಎಂಬ ಬರಹಗಾರ್ತಿ ಬರೆದ “ದಿ ಲೈಫ್ ಆಫ್ ಇಂದಿರ ನೆಹರು ಗಾಂಧಿ”. ಇವೆರಡೂ ಕಾಂಗ್ರೆಸ್ ನ ಕರಾಳ ಇತಿಹಾಸವ ಬಿಚ್ಚಿಡುವ ಪುಸ್ತಕಗಳು.

ಆ ಅಧ್ಯಾಯವೇ ಅತ್ಯಂತ ರೋಚಕ. ಇಂದಿರಾ ಎಂಬ ಹೆಣ್ಣಿನ ಮತ್ತೊಂದು ಮುಖ ಇದಾದರೂ ಆಗಿರಬಹುದು. ಅಷ್ಟಕ್ಕೂ ಈ “ಶೀ” ಅಧ್ಯಾಯ ಮತ್ತೆ ತೆರೆದುಕೊಳ್ಳಲು ಕಾರಣ ಸಾಗರಿಕಾ ಘೋಸ್ ಎಂಬ ಬುದ್ದಿವ್ಯಾ(ವಾ)ಧಿ. ಹೊಸ ಪುಸ್ತಕ ಬರೆದು ಇಂದಿರಾಗಾಂಧಿಯನ್ನು ಹೊಸ ತಲೆಮಾರಿಗೆ ಪರಿಚಯ ಮಾಡಲು ಹೊರಟಿದ್ದ ಈಕೆ ಅದರಲ್ಲಿ “ಶೀ” ಅಧ್ಯಾಯವ ಪ್ರಕಟಿಸಿದ್ದಾಳೆ ಎಂಬ ಸುದ್ದಿಯಾಯ್ತಲ್ಲ ಹಾಗಾಗಿ ಮತ್ತೆ ಇಂದಿರಳ ಬದುಕನ್ನು ಓದಬೇಕೆನಿಸಿತು.. ಆದರೆ ಆಕೆಯು ಮಥಾಯಿ ಅವರು ಬರೆದ ಅಧ್ಯಾಯವನ್ನೇ ತಿರುಚಿ ಬರೆದರೆ ಖಂಡಿತ ಆಶ್ಚರ್ಯ ಅಂತೂ ಅಲ್ಲ.

ಮಥಾಯಿ ಅವರೇ ಬರೆದಿರುವ ‘ರೆಮಿನಿಸೆನ್ಸಸ್ ಆಫ್ ನೆಹರೂ ಏಜ್’ ಎಂಬ ಆತ್ಮಕಥೆಯಲ್ಲಿ “ಶೀ” ಎಂಬ ಒಂದು ಅಧ್ಯಾಯ ಬರುತ್ತದೆ. ಅದರಲ್ಲಿ ಮಥಾಯಿ ಅವರು ಹನ್ನೆರಡು ವರ್ಷಗಳ ಕಾಲ ಅತ್ಯಂತ ‘ಪ್ಯಾಷನೇಟ್’ ಆಗಿದ್ದ ಇಂದಿರಾ ಗಾಂಧಿ ಅವರೊಂದಿಗೆ ತಮಗಿದ್ದ ಪ್ರೀತಿಗೀತಿ, ಪ್ರೇಮಕಾಮ, ವಾಂಛೆ, ಸಲುಗೆಯ ಬಗ್ಗೆ ಅತ್ಯಂತ ಸ್ವಚ್ಛಂದವಾಗಿ ಬರೆದುಕೊಂಡಿದ್ದಾರೆ.ಮಥಾಯಿ ಅವರು ಬರೆದ ‘ರೆಮಿನಿಸೆನ್ಸಸ್ ಆಫ್ ನೆಹರೂ ಏಜ್’ ಮತ್ತು ‘ಮೈ ಡೇಸ್ ವಿತ್ ನೆಹರು’ ಎಂಬ ಎರಡು ಪುಸ್ತಕಗಳು ಕೂಡ ಕಾಂಗ್ರೆಸ್ ನ ಮತ್ತು ನೆಹರು ಎಂಬ ವೈಭವೋಪೇತ ಪ್ರಧಾನಿಯ ಸುಮಾರು ಗುಟ್ಟುಗಳನ್ನಂತೂ ಹೊರಹಾಕುವಂತದ್ದು.ಮಥಾಯಿ ಬಿಡುಗಡೆ ಮಾಡಿದ್ದ ಅವರ ಆತ್ಮಕಥೆಯಿಂದ ಈ “ಶೀ” ಅಧ್ಯಾಯವನ್ನು ದೂರ ಇಡಲು ಕಾಂಗ್ರೆಸ್ ಯಶಸ್ವಿಯಾಗಿದ್ದರ ಪರಿಣಾಮ ಅತ್ಯಂತ ಮುಖ್ಯವಾದ ಅಧ್ಯಾಯ ಆ ಪುಸ್ತಕದಲ್ಲಿ ಅಚ್ಚಾಗಲೇ ಇಲ್ಲ.

ಮಥಾಯಿ ಬರೆಯುತ್ತಾರೆ ‘ಆಕೆಗೆ’ ಕ್ರಿಯೋಪಾತ್ರಾಳಂಥ ಮೂಗಿದೆ, ಪೌಲೀನ್ ಬೊನಾಪಾರ್ಟಿಯಂಥ ಕಣ್ಣುಗಳಿವೆ, ವೀನಸ್ ಳಂಥ ಸ್ತನಗಳಿವೆ… ಮುಂದುವರಿಯುತ್ತ… ‘ಆಕೆ’ ಹಾಸಿಗೆಯಲ್ಲಿ ಅದ್ಭುತವಾಗಿದ್ದರು, ಲೈಂಗಿಕತೆಯಲ್ಲಿ ಒಬ್ಬ ಫ್ರೆಂಚ್ ಮಹಿಳೆ ಮತ್ತು ಕೇರಳದ ನಾಯರ್ ಮಹಿಳೆಗಿದ್ದ ಕಲೆಗಾರಿಕೆ ಇಂದಿರಾಗಿತ್ತು. ‘ಆಕೆ’ ಸುದೀರ್ಘ ಚುಂಬನವನ್ನು ತುಂಬಾ ಇಷ್ಟಪಡುತ್ತಿದ್ದರು. ಅವರಿಬ್ಬರ ಸಂಗಮದಿಂದ ಒಂದು ಬಾರಿ ಗರ್ಭಪಾತ ಕೂಡ ‘ಆಕೆ’ ಮಾಡಿಸಿಕೊಳ್ಳಬೇಕಾಯಿತು.ಹೀಗೆ ‘ಆಕೆ’ಯೊಡನೆಯ ರೋಚಕ ಕ್ಷಣಗಳನ್ನು ಮಥಾಯಿ ಬಿಚ್ಚಿಡುತ್ತಾರೆ.

ಎಡಿಟ್ ಮಾಡಿಲ್ಲದ “ಶೀ” ಅಧ್ಯಾಯದಲ್ಲಿ, ಇಂದಿರಾ ಗಾಂಧಿಯವರು ತಾವು ಹಿಂದೂವನ್ನು ಮದುವೆಯಾಗಲು ಎಂದೂ ಇಚ್ಛಿಸಿದ್ದಿಲ್ಲ, ತಾವು ಒಂದು ರಾಣಿ ಜೇನಿನಂತೆ. ಅತೀ ಎತ್ತರದಲ್ಲಿ ಆಕಾಶದಲ್ಲಿ ಪ್ರೇಮಿಸಲು ಇಚ್ಛಿಸುತ್ತೇನೆ ಎಂದು ಹೇಳಿರುವುದಾಗಿ ಬರೆಯಲಾಗಿದೆ. ಆ ಅಧ್ಯಾಯದ ಕೊನೆಯಲ್ಲಿ ಆ ಮಹಿಳೆಯನ್ನು ತುಂಬಾ ಪ್ರೀತಿಸುತ್ತಿದ್ದೆ ಎಂದು ಮಥಾಯಿಸ್ ಬರೆದಿದ್ದಾರೆ.

ಈಗ ಸ್ವಲ್ಪ ಹಿಂದಿನ ಕಾಲಕ್ಕೆ ಹೋಗೋಣ.ಇಂದಿರಾ, ಸಂಜಯ್ ಗಾಂಧಿ ಎನ್ನೋ ತನ್ನದೇ ಮಗನ ಅದ್ಯಾವುದೋ ಬ್ಲ್ಯಾಕ್ ಮೇಲ್ ತಂತ್ರಕ್ಕೆ ಬಲಿಯಾಗಿದ್ದಳ? ಇದು ನನಗೆ ಈಗಲೂ ಕಾಡುವ ಪ್ರಶ್ನೆ , ಏಕೆಂದರೆ ತನ್ನ ಸುತ್ತ ಇರುವ ಅದೆಷ್ಟೋ ಗಂಡಸರನ್ನೇ ತನ್ನ ಕಾಲ್ಕಸಕ್ಕಿಂತಲೂ ಕಡೆಯಾಗಿ ಕಾಣುತ್ತಿದ್ದ ಮತ್ತು ಎಲ್ಲರ ಮೇಲೂ ಹಿಡಿತ ಸಾಧಿಸುತ್ತಿದ್ದ ‘ದಿ ಮೋಸ್ಟ್ ಪವರ್‌ಫುಲ್ ಲೇಡೀ’ ಸಂಜಯ್ ನನ್ನು ಕಂಡರೆ ಏಕೆ ಹೆದರುತ್ತಿದ್ದಳು? ತುರ್ತುಪರಿಸ್ಥಿತಿಯಂತಹ ಅತ್ಯಂತ ಕೆಟ್ಟ ನಿರ್ಧಾರವನ್ನು ಇಂದಿರಾಳೇ ತೆಗೆದುಕೊಂಡಿದ್ದೋ ಅಥವಾ ಸಂಜಯ್ ಎಂಬ ಅನಧಿಕೃತ ಪ್ರಧಾನಿ ತೆಗೆದುಕೊಂಡಿದ್ದೋ? ಹಾಗಾದರೆ ಸಂಜಯ್ ಗೆ ಮೊಹಮ್ಮದ್ ಯೂನಸ್ ಮತ್ತು ಇಂದಿರಾಳ ನಡುವಿನ ಸಂಬಂಧ ತಿಳಿದಿತ್ತೋ? ಸಂಜಯ್ ಗಾಂಧಿಯನ್ನು ವಿದೇಶದಿಂದ ಬಹುಮುಖ್ಯವಾಗಿ ಆತ ಅಲ್ಲಿ ಮಾಡಿದ್ದ ಮಹಾ ಎಡವಟ್ಟಿನಿಂದ ಪಾರು ಮಾಡಿದ್ದನಲ್ಲ ಅದು ಇದೇ ಮಹಮ್ಮದ್ ಯೂನುಸ್ಸಾ? ಸಂಜೀವ್ ಗಾಂಧಿ ಸಂಜಯ್ ಗಾಂಧಿಯಾಗಿದ್ದು ಹೇಗೆ? ಸಾವಿರ ಸಾವಿರ ಪ್ರಶ್ನೆಗಳು ಇಂದಿರಾಳ ಸುತ್ತಲೇ ಇನ್ನೂ ಸುತ್ತುತ್ತಿವೆ. ಧೀರೇಂದ್ರ ಬ್ರಹ್ಮಚಾರಿ ಎಂಬ ಸ್ವಯಂಘೋಷಿತ ದೇವಮಾನವ ಇಂದಿರೆಯ ಹಿಂದೆಯೇ ಸುತ್ತುತ್ತಿದ್ದನೇತಕೆ? ಅಂದು ಶಾಂತಿನಿಕೇತನದಲ್ಲಿ ಇಂದಿರ ಯಾರ ಜೊತೆ ಇದ್ದಳು ಮತ್ತು ಯಾರು ನೋಡಿದರು? ಇಂದಿರಾಳ ಹೆಸರು ಅದೇಕೆ ದಿನೇಶ್ ಸಿಂಗ್ ಜೊತೆ ತಳುಕು ಹಾಕಿಕೊಂಡಿತು? ಕೆಲವೊಂದು ಗೊತ್ತಿರದ ಮತ್ತು ಬಹುಮುಖ್ಯವಾಗಿ ಗೊತ್ತಾಗಬಾರದ ವಿಚಾರಗಳು ಯಾವತ್ತೂ ಹೊರ ಬರದಂತೆ ಅತ್ಯಂತ ಯಶಸ್ವೀಯಾಗಿ ‘ಆ ಕುಟುಂಬ’ ನೋಡಿಕೊಂಡಿತು. ಎಲ್ಲ ಬಿಡಿ, ಇಡೀ ಭಾರತೀಯರನ್ನೇ ಕತ್ತಲೆಯ ಕೂಪಕ್ಕೆ ತಳ್ಳಿದ ಆ ತುರ್ತು ಪರಿಸ್ಥಿತಿಯ ಬಗ್ಗೆ ನೀವು ಗಟ್ಟಿಯಾಗಿ ಈಗ ಮಾತನಾಡಿದರೂ ನಿಮ್ಮನ್ನು ಹತ್ತಿಕ್ಕುವ ಸಾಮರ್ಥ್ಯವನ್ನು ನಮ್ಮ ‘ಚೇಲಾ’ಗಳು ಅವರಿಗೆ ನೀಡಿವೆ(ಮಧುರ್ ಬಂಡಾರ್ಕರ್ ಎಂಬ ಅದ್ಭುತ ನಿರ್ದೇಶಕ ‘ಇಂದು ಸರ್ಕಾರ್’ ಎಂಬ ಚಲನಚಿತ್ರ ಮಾಡಿ ಅನುಭವಿಸುತ್ತಿರುವ ಕಷ್ಟ ನೋಡಿ ಹಾಗನಿಸಿತು). ಒಟ್ಟಿನಲ್ಲಿ ಇತಿಹಾಸ ಸುಳ್ಳಿನ ಸರಮಾಲೆಯಾಗಿ ಹೊರ ಬಂತು. ನಮಗೆ ನೆಹರು ಚಾಚಾ ಎಂದು ಪಾಠ ಮಾಡಿದ್ದ ಶಿಕ್ಷಕರಿಗೇ ನೆಹರು ಮಾಡಿದ್ದ ಮಹಾ ಎಡವಟ್ಟುಗಳ ಬಗ್ಗೆ ಕನಿಷ್ಟವೂ ಗೊತ್ತಿರಲಿಲ್ಲವಾ? ಅಥವಾ ಸುಳ್ಳು ಇತಿಹಾಸಗಳ ಪಾಠ ಮಾಡುವುದೇ ನಮ್ಮ ಶೈಕ್ಷಣಿಕ ವ್ಯವಸ್ಥೆಯಾಗಿದ್ದರ ಪರಿಣಾಮ ಇದೋ? ಗೊತ್ತಿಲ್ಲ.

ಈ ಕುಟುಂಬ ಭಾರತೀಯರನ್ನು ಅದೆಷ್ಟು ಮೂರ್ಖರನ್ನಾಗಿಸಿತು ಅಂದರೆ ಇನ್ನೂ ಎಷ್ಟೋ ಜನ ಅದರಿಂದೀಚೆಗೆ ಬಂದಿಲ್ಲ, ಅಷ್ಟರ ಮಟ್ಟಿಗೆ ಅವರು ಆ ಕುಟುಂಬದ ಚೇಲಾಗಳಾಗಿ ಹೋದರು. ಇದು ನಮ್ಮ ದೇಶದ ದುರಂತ. ತುರ್ತು ಪರಿಸ್ಥಿತಿಯಂತಹ ಕರಾಳ ನಿರ್ಧಾರ ತೆಗೆದುಕೊಂಡ ಇಂದಿರ ತನ್ನನ್ನು ತಾನು ಸಂಪೂರ್ಣವಾಗಿ ಸಮರ್ಥಿಸಿಕೊಂಡ ಬಗೆ ನಿಜಕ್ಕೂ ಹೇಸಿಗೆ ಹುಟ್ಟಿಸುವಂತದ್ದು.ಮಥಾಯಿ ಹೇಳಿದಂತೆ ಆಕೆ “ಪೊಲಿಟಿಕಲ್ ಅನಿಮಲ್” ಆಗಿ ಬದಲಾಗಿ ಹೋದಳು. ಅಧಿಕಾರವೆಂಬ ಅಮಲಿನ ಪದಾರ್ಥ ಆಕೆಯ ಮನಸ್ಸನ್ನು ಆಳವಾಗಿ ಹೊಕ್ಕಿತ್ತು ಪರಿಣಾಮ ಆಕೆ ಪಕ್ಕ ಸರ್ವಾಧಿಕಾರಿಯಂತೆ ವರ್ತಿಸತೊಡಗಿದಳು. ದೇಹ ಬಯಸುತ್ತಿದ್ದ ಕಾಮಕ್ಕಾಗಿ ಆಕೆ ಅಡ್ಡದಾರಿ ಹಿಡಿದಳೋ ಏನೋ ಅದು ಯಾವತ್ತಿಗೂ ದೊಡ್ಡ ಪ್ರಶ್ನೆಯಾಗಿಯೇ ಇರುವಂತದ್ದು.

ಮೈಮುನಾ ಬೇಗಂ ಇಂದಿರಾ ಗಾಂಧಿಯಾಗಿ ದೇಶವನ್ನಾಳುತ್ತಾಳೆ ಮತ್ತು ಆಂಟೋನಿಯ ಮೈನೋ ಸೋನಿಯಾ ಗಾಂಧಿಯಾಗಿ ಕಾಂಗ್ರೆಸ್ ನ ಕುಟುಂಬ ರಾಜಕಾರಣದ ನೊಗವನ್ನು ಯಶಸ್ವೀಯಾಗಿ ಎಳೆಯುತ್ತಾಳೆ. ಹೌದು ಇದು ಇಲ್ಲಿ ಮಾತ್ರ ಸಾಧ್ಯ. ಭಾರತವೆಂಬ ಭಾರತದಲ್ಲಿ ಮಾತ್ರ ಇದೆಲ್ಲ ಸಾಧ್ಯ.ಇದು ಹೀಗೆ ಮುಂದುವರಿದರೆ ಆಶ್ಚರ್ಯವಂತೂ ಇಲ್ಲ. ಭಾರತದ ಇತಿಹಾಸವನ್ನು ಬಗೆದಷ್ಟೂ ಹೊಸ ಹೊಸ ಪ್ರಶ್ನೆಗಳು ಜೊತೆಗೊಂದಿಷ್ಟು ಉತ್ತರಗಳೂ ನಮ್ಮೊಳಗೆ ಪ್ರವಹಿಸುತ್ತದೆ. ಇಂದಿರ ಕೊನೆಗೂ ನನಗೆ ಪ್ರಶ್ನೆಯಾಗಿಯೇ ಉಳಿದು ಹೋದಳು. ನಾನು ಓದಿದ್ದು ಸತ್ಯವೋ ಅಥವಾ ಇಷ್ಟು ದಿನ ಅಂದುಕೊಂಡಿದ್ದೇ ಸತ್ಯವೋ ನನಗೇ ತಿಳಿಯದೆ ಮೌನವಾಗಿದ್ದಂತೂ ಸತ್ಯ.

ಒಟ್ಟಿನಲ್ಲಿ ಇಂದಿರ “ದಿ ಮೋಸ್ಟ್ ಪವರ್‌ಫುಲ್ ಲೇಡೀ” ಅನ್ನುವುದಂತೂ ಸಾರ್ವಕಾಲಿಕ ಸತ್ಯ.

Reference: http://myblogkirannaik.blogspot.com/2011/09/she-written-by-m-o-mathai.html?m=1

Facebook ಕಾಮೆಂಟ್ಸ್

Prasanna Hegde: ಹೆಸರು ಪ್ರಸನ್ನ ಹೆಗಡೆ.ಹುಟ್ಟಿದ್ದು,ಬೆಳೆದಿದ್ದು ಬದುಕನ್ನ ಅನುಭವಿಸಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸಮೀಪದ ಹಳ್ಳಿಯೊಂದರಲ್ಲಿ.ನನ್ನ camera,ಪ್ರೀತಿಯ ನನ್ನ ನಾಯಿ ಜೊತೆಗಿದ್ದರೆ ನನ್ನನ್ನೂ ನಾ ಮರೆಯುತ್ತೇನೆ.ಹಾಗಾಗಿ ಪಕ್ಕಾ ಮಲೆನಾಡಿನ ಹುಡುಗ.ಅವಶ್ಯಕತೆ,ಅನಿವಾರ್ಯತೆಯ ಕಾರಣ ಬದುಕುತ್ತಿರುವುದು ಮೈಸೂರಿನಲ್ಲಿ.Chartered Accountancy ಯ ಭಾಗವಾದ Articleship ಅನ್ನು ಮಾಡುತ್ತಿದ್ದೇನೆ.ಬರೆಯುವುದು ಕೇವಲ ಹವ್ಯಾಸವಲ್ಲ ನನ್ನ ಜೀವನದ ಅವಿಭಾಜ್ಯ ಅಂಗ.ರಾಜಕೀಯವನ್ನ ನಾನು ಇಷ್ಟಪಡುತ್ತೇನೆ...ಆಸೆಯಿದೆ ಸಮಾಜಕ್ಕೆ ನನ್ನ ಕೈಲಾದಷ್ಟು ನೀಡಬೇಕೆಂಬುದು.. ಮತ್ತೇನು ನನ್ನ ಬಗ್ಗೆ ಹೇಳಿಕೊಳ್ಳುವಂತದ್ದಿಲ್ಲ
Related Post