ಪ್ರಕೃತಿ ಸರ್ವಮೂಲ.. ಅದೆಷ್ಟೋ ಚೈತನ್ಯವನ್ನ ತನ್ನೊಳಗೆ ಹುದುಗಿಸಿಕೊಂಡ ಬೃಹತ್ ಸ್ವರೂಪಿ.. ಅದೇ ನಿಸರ್ಗದ ಕೂಸಾದ ಪ್ರತಿಯೊಬ್ಬ ಮನುಷ್ಯನ ಒಳಗೂ ಒಬ್ಬ ಪಯಣಿಗನಿರ್ತಾನೆ.. ಪ್ರತೀ ಪಯಣವೂ ಒಂದು ಚಿಕ್ಕ ಹೆಜ್ಜೆಯಿಂದ ಶುರುವಾಗುತ್ತ ಸುದೀರ್ಘ ಕತೆಯಾಗುತ್ತದೆ.. ಈ ಯಾನಕ್ಕೆ ಸಾಥ್ ಕೊಡೋದು ಪ್ರಕೃತಿ! ಬದುಕಿನಲ್ಲಿ ಹತಾಶೆ, ಸೋಲು ಎಲ್ಲವೂ ಒಮ್ಮೆಲೇ ಬೆನ್ನಟ್ಟಿದಾಗ ಅತ್ಯಂತ ಆಪ್ತವಾಗಬಲ್ಲದು ಹಸಿರ ಮಡಿಲು ಅನ್ನುವ ಆಶಯವನ್ನಿಟ್ಟುಕೊಂಡು, ಜೀವನ ಪ್ರೀತಿ ಪ್ರಕೃತಿಯಲ್ಲಿಯೇ ಬೆರೆತಿರುವಂಥದ್ದು, ನಮ್ಮ ಖುಷಿ, ನಮ್ಮ ನೆಮ್ಮದಿಯನ್ನು ಹುಡುಕಿಕೊಳ್ಳಬೇಕಾದವರೂ ನಾವೇ ಅನ್ನುತ್ತಾ, ಚಿಕ್ಕ ಚಿಕ್ಕ ಸಂಗತಿಗಳಲ್ಲಿರುವ ಖುಷಿಯೂ ಇಡೀ ಸಮುದಾಯದ ಆಹ್ಲಾದಕ್ಕೆ ನೆರವಾಗುತ್ತದೆ ಅಂತ ಸೂಚ್ಯವಾಗಿ ಹೇಳ್ತಾ , ಬದುಕಿನ ಸಂಭ್ರಮಕ್ಕೆ ಸಾಕ್ಷಿ ಈ `ಯಾತ್ರಿಕಾ’
`ಯಾತ್ರಿಕಾ’ , ಮೊನ್ನೆ ಮೊನ್ನೆಯಷ್ಟೇ ಬಿಡುಗಡೆಯಾದ ಒಂದು ಇಂಡಿಪೆಂಡೆಂಟ್ ವಿಡಿಯೋ ಆಲ್ಬಂ. ನಿಖಿತಾ ಗಣೇಶನ್ ನಿರ್ದೇಶನ, ಅಲ್ ರುಫಿಯನ್ ಸಂಗೀತ, ಶ್ರೀರಾಮ್ ರಾಘವನ್ ಛಾಯಾಗ್ರಹಣ, ವೈಶಾಲಿ ಮುಖ್ಯ ಪಾತ್ರದಲ್ಲಿ ಇರುವಂಥ ಈ ದೃಶ್ಯ ಲಹರಿಗೆ ಸಿಯಾ ಶ್ರೀ ವಸ್ತ್ರ ವಿನ್ಯಾಸವಿದೆ. ಸ್ವಾತಿ ಅನ್ನೋ ಹೊಸಧ್ವನಿಗೆ ಶ್ರೀ ತಲಗೇರಿ ಕನ್ನಡ ಆವೃತ್ತಿಗೆ ಸಾಹಿತ್ಯ ಒದಗಿಸಿದ್ದಾರೆ. ಕನ್ನಡ ತಮಿಳು ತೆಲುಗು ಮಲಯಾಳಂ ಮತ್ತು ಹಿಂದಿ ಹೀಗೆ ಒಟ್ಟು ೫ ಭಾಷೆಗಳಲ್ಲಿ ಹೊರಬಂದಿರುವ ಈ ಹಾಡಿನ ಕನ್ನಡ ಆವೃತ್ತಿಗೆ ಕೊಂಡಿ ಇಲ್ಲಿದೆ :
Facebook ಕಾಮೆಂಟ್ಸ್