X
    Categories: ಕಥೆ

ಡೀಲ್ ಭಾಗ ೭

ಡೀಲ್ ಭಾಗ ೬

ಶ್ಯಾಮಲೆ ಈಗ ಗುಂಪಿನ ನಾಯಕಿಯಾಗಿದ್ದಾಳೆ,ಅದ್ಯಾವುದೋ ಹೊಸ ಶಕ್ತಿ ಪರಕಾಯ ಪ್ರವೇಶ ಮಾಡಿದವಳಂತೆ ತನ್ನ ಮಾನ ಕಾಪಾಡಿಕೊಳ್ಳಲು ಸಂಚಿನ ಹೊಂಚು ಹಾಕಲು ಡೈನಿಂಗ್ ಡೇಬಲಿನ ಮೇಲೆ ಡ್ರಾಯಿಂಗ್ ಸೀಟ್ ನಲ್ಲಿ ಅದೇನೋ ಬಿಡಿಸುತ್ತಿದ್ದಾಳೆ…!!

“ನೋಡಿ,ಮೊದಲು ನಾವು ಸಿಸಿ ಕ್ಯಾಮೆರವನ್ನು ನಿಲ್ಲಿಸಬೇಕು..!

ನಂತರ ಪಪ್ಪನಿಗೆ ನನ್ನಲ್ಲಿರುವ ಕ್ಲೋರೋಪಾರ್ಮ್’ನ್ನು ಕೊಡ್ತೀನಿ ಅದನ್ನು ಇಡ್ಕೊಂಡು ಏರ್ ಕಂಡಿಷನರ್ ಔಟ್ ಡೋರ್ ಬಳಿ ಹೋಗ್ಬೇಕು,ನನ್ನ ಪರ್ಮಿಶನ್ ಸಿಕ್ಕಿದರೆ ಔಟ್ ಡೋರಿಗೆ ಅದನ್ನ ಸುರೀಬೇಕು. ಒಂದು ಸಿಸಿ ಕ್ಯಾಮೆರ ನಮ್ಮ ಮನೆ ಹೊರಗಡೆ ಇಟ್ಟು ಹೊರಗಿನ ಚಟುವಟಿಕೆ ನನಗೆ ಕಣ್ಗಾವಲಿಡಬೇಕು, ನಾನು ಕೊಡೋ ಇನ್’ಸ್ಟ್ರಕ್ಷನ್ ಫಾಲೋ ಮಾಡಿ ರಾಕೇಶ್ ನೇರ ಅವರ ರೂಮ್ ಹೋಗ್ತಾನೆ, ಅವರು ರೂಮ್ ಡೋರ್ ಓಪನ್ ಮಾಡಿ ಅವನ ನೋಡಿ ಹೇಗಾದರೂ ಕೊಲ್ತಾರೆ ಒಂದು ವೇಳೆ ಕೊಂದಿಲ್ಲ ಅಂದ್ರೆ,ಅವನು ರೂಮಿನ ಒಳಗೆ ಹೋಗ್ತಾನೆ ಅಥವಾ ರೂಮ್ ಮಿಸ್ ಆಗಿದೆಯಂತ ಹಿಂದೆ ಬರ್ತಾನೆ,ಆವಾಗ ಅಲ್ಲೇ ಬಚ್ಚಿಟ್ಟು ಕೊಂಡ ನಜೀಬ್ ಕಾಣದಂತೆ ಒದ್ದು ಆ ರೂಮಿನ ಒಳಗೆ ಹಾಕಿ ರೂಮ್ ಲಾಕ್ ಮಾಡ್ತಾನೆ ಆವಾಗಲೇ ಇದು ಜರುಗುವ ಸಮಯದಲ್ಲಿ ಪಪ್ಪಗೆ ನನ್ನ ಮೆಸೇಜ್ ಹೋಗಿರುತ್ತೆ ಅಲ್ಲಿ ಕ್ಲೋರೋಫಾಮ್ ಸುರಿದು ಆಗುತ್ತೆ,ಮುಂದಿನ ಎರಡೇ ನಿಮಿಷದಲ್ಲಿ ಅವರೆಲ್ಲಾ ಮೂರ್ಛೆ ತಪ್ಪಿ ಬಿದ್ದಿರ್ತಾರೆ, ಒಳಗೆ ಹೋಗೋ ನಾನು ಡೋರ್ ಎಲ್ಲಾ ಕ್ಲೋಸ್ ಮಾಡಿ ಗ್ಯಾಸ್ ಲೀಕ್ ಮಾಡಿ ಬರ್ತೀನಿ,ಮತ್ತೇ ಉದ್ದದ ಬತ್ತಿ ಇಟ್ಟು ಹೊಡೆದುರಿಳಿಸುತ್ತೇನೆ,ನಮ್ಮ ಮನೆ ಖಾಲಿ ಇರುತ್ತೆ ಇನ್ನು ಈ ಪ್ಲಾಟಿನ ಎರಡು ಮನೆ ಅದರಲ್ಲಿ ಯಾರೂ ಇಲ್ಲ ಇನ್ನೊಂದರಲ್ಲಿರೋದು ಮೋಹಿನಿ ಅವಳನ್ನು ಕೆಳಗಡೆ ಕರ್ಕೊಂಡು ಹೋದರಾಯಿತು,,ಎಲ್ಲಾ ಸುಟ್ಟು ಕರಕಲಾಗಿ ಹೋಗ್ತಾರೆ!!..ಮತ್ತೆ ಪೋಲೀಸ್ ಕೇಸ್ ಎಲ್ಲಾ ಆಗುತ್ತೆ ಅವರು ಯಾರೂಂತಾನು ಗೋತ್ತಾಗುತ್ತೆ, ಏನೋ ಬಾಂಬ್ ಸೆಟ್ ಮಾಡೋವಾಗ ಅನಾಹುತ ಸಂಭವಿಸಿದ್ದು ಅಂದರಾಯಿತು..!!

“ಅಬ್ಬಾ..!!ಏನ್ ಪ್ಲಾನ್ ಮೇಡಂ,ಒಂದ್ಚೂರು ಡೌಟ್ ಇರಲ್ಲ,ಆದರೆ ಆ ಟೈಮಲ್ಲಿ ನೀವು ಮನೇಲಿ ಇದ್ದಿಲ್ವಾಂತ ಕೇಳ್ತಾರೆ ಪೋಲಿಸ್ ಏನ್ಮಾಡ್ತೀರ!?

ಆ ಸಮಯದ ಸಿಸಿ ಪೋಟೇಜ್ ಎಲ್ಲೀಂತ ನನ್ನಲ್ಲಿ ಕೇಳ್ತಾರೆ,ಅವರು ಭಯೋತ್ಪಾದಕರೆಂದು ನಿಮಗ್ಯಾಕೆ ಡೌಟ್ ಬಂದಿಲ್ಲಾಂತಾನು ಕೇಳ್ತಾರೆ ಆವಾಗ…!!! ಸಮಯೋಚಿತ ಮತ್ತು ಮುಂದಿನ ನಡೆಯನ್ನು ಕೂಲಂಕುಶವಾಗಿ ಸಂಶಯಿಸಿದ ನಜೀಬ್

“ಡೋಂಟ್ ವರಿ,ನಾನಿವತ್ತು ನನ್ ಹೆಂಡ್ತಿ ಊರಿಗೆ ಹೋಗೋಕೆ ಇದೆಯಂತ ಬ್ಯಾಂಕಲ್ಲಿ ಲೀವ್ ಹಾಕಿದ್ದು, ಸೋ ನಾವಿಲ್ಲಿ ಇರ್ಲಿಲ್ಲ ಅನ್ನೋದಕ್ಕೆ ಅದು ಆಧಾರವಾಗುತ್ತೆ,”ನಟರಾಜ್ ಪ್ಲಾನಿನ ಒಳಗೆ ಒಬ್ಬನಾಗಿದ್ದ..!

“ಸರಿ,ಆದರೆ ಇವರಿಬ್ಬರು ಬಂದಿದ್ದು ನಡೆದದ್ದು ಎಲ್ಲಾ ಸಿಸಿ ಕ್ಯಾಮೆರಾದಲ್ಲಿ ಸ್ಟೋರ್ ಆಗಿದೆ ಅಲ್ವ!!?

ಆವಾಗ ನೀವು ನಾನು ಮಾತಾಡಿದ್ದು ರೆಕಾರ್ಡ್ ಆಗಿದೆ.!!

“ನೋ ಟೆನ್ಷನ್,ಅದೆಲ್ಲಾ ದೊಡ್ಡ ವಿಷಯನಾ!?ಇವತ್ತು ಬೆಳಿಗ್ಗೇನೇ ಸಿಸ್ಟಮ್’ನಲ್ಲಿ ಏನೋ ಪ್ರಾಬ್ಲಮ್ ಆಗಿತ್ತು ಇಡಿ ದಿನಾ ರೆಕಾರ್ಡ್ ಆಗಿಲ್ಲ ಅಂದ್ರಾಯಿತು!,ನೀ ಅದನ್ನೆಲ್ಲಾ ಡಿಲೀಟ್ ಮಾಡಿ ಸಿಸ್ಟಮ್ ಏನಾದರೂ ರಿಪೇರಿ ಮಾಡಿ ಇಡು..!

“ನಿಮ್ ತಲೆ ಸೂಪರ್ ಬಿಡಿ. .!!ಹುಬ್ಬೇರಿಸುತ್ತಾ ನುಡಿದ ನಜೀಬ್

“ಈಗ ನನ್ನ ಪ್ರಶ್ನೆ,ಒಳಗಿರುವವರು ಇನ್ನೂ ಒಂದುವರೆ ಗಂಟೆ ಅಲ್ಲೇ ಇರ್ತಾರ ಅಲ್ಲಾ ಅದಕ್ಕೂ ಮುಂಚೆ ಹೋಗ್ ಬಿಡ್ತಾರ ಅಂತ.!ಅವರು ಅಲ್ಲೇ ಇರೋತರ ಮಾಡ್ಬೇಕು ಏನ್ ಮಾಡೋದು..!!.ಬೆರಳು ಸುತ್ತಿಸುತ್ತಾ ಅತ್ತಿತ್ತ ಅಡ್ಡಾಡಿದಳು ಶ್ಯಾಮಲೆ..!

“ಇದೆ ಮೇಡಂ..!ಕೆಳಗಿನ ಪ್ಲಾಟ್ ಮಕ್ಕಳನ್ನು ಮೇಲೆ ಕರ್ಕೊಂಡು ಬಂತು ಇಲ್ಲಿ ಆಟ ಆಡಿಸುವ ನೀವು ಸೇರಿ ಹೊರಗಡೆ ಶಬ್ಧವಾದ್ರೆ ಖಂಡಿತಾ ಅವ್ರು ಹೊರಗೆ ಬರಲ್ಲ..!!!

ಹೇಗೂ ಮ್ಯಾನೇಜ್ ಮಾಡ್ಬಹುದು..!

ಉತ್ತಮ ಸಲಹೆ ಕೊಟ್ಟ ನಜೀಬ್..

ಎಲ್ಲಾ ಸೆಟ್..!! ಎಲ್ಲರ ಪೋನ್ ಚಾರ್ಜಿಂಗ್ ಇಟ್ಟಿದ್ದಾರೆ, ನಜೀಬ್ ಸೆಕ್ಯೂರಿಟಿ ರೂಮಿನ ಒಂದು ಸಿಸಿ ಕ್ಯಾಮೆರವನ್ನು ಶ್ಯಾಮಲೆಯ ಮನೆ ಹೊರಗಡೆ ಯಾರಿಗೂ ಕಾಣದಂತೆ ಫಿಟ್ ಮಾಡುತ್ತಿದ್ದಾನೆ,ಪ್ರಮೀಳ ಶ್ಯಾಮಲೆ ಪಾರ್ಕ್’ನಲ್ಲಿ ಆಡುತ್ತಿದ್ದ ಮಕ್ಕಳನ್ನು ಸೇರಿಸಿ ಮೇಲೆ ಕಣ್ಣಾಮುಚ್ಚಾಲೆ ಆಟ ಶುರುಮಾಡ್ತಿದಾರೆ,ಅದರ ಎಡೆಯಲ್ಲಿ ಶ್ಯಾಮಲೆ ತನ್ನ ಸ್ಟಡಿ ರೂಮಿಗೆ ಹೋಗಿ, ಕ್ಲೋರೋಫಾಮ್ ಬಾಟಲಿ ತಂದು ನಟರಾಜ ಕಿಸಿಗೆ ತುರುವಿದ್ದಾಳೆ,ಗಂಟೆ ಏಳು ಕಾಲು ಆಯ್ತು,,ಇನ್ನು ಮುಕ್ಕಾಲು ಗಂಟೆಯ ಸಮಯವಿರೋದು ನಜೀಬ್ ಸಿಸಿಯನ್ನು ಲ್ಯಾಪ್’ಟಾಪ್’ಗೆ ಕನೆಕ್ಷನ್ ಮಾಡಿಟ್ಟು,ಅವನ ರೂಮ್’ಗೆ ಹೋಗಿ ಅವತ್ತಿನ ಎಲ್ಲಾ ರೆಕಾರ್ಡ್ ಅಳಿಸಿ, ಸಿಪಿಯು ನ ಅದೇನೋ ವಯರ್ ಎಳೆದು ಅದನ್ನೂ ಹಾಳು ಮಾಡಿ,ಪಟಾಕಿ ಬತ್ತಿ ಕೂಡ ಕೈಯ್ಯಲಿಡಿದು ಮೇಲೆ ಬಂದು ಶ್ಯಾಮಲೆಗೆ ಎಲ್ಲಾ ಸೆಟ್ ಎಂಬ ಸಂದೇಶ ರವಾನಿಸುತ್ತಾನೆ….

ಏಳೂವರೆ ರಾಕೇಶ್ ಹೇಳಿದಂತೆ ಶ್ಯಾಮಲೆಯ ನಂಬರ್’ಗೆ ಕರೆ ಮಾಡಿ  ನಾ ಬರ್ತಾ ಇದೀನಿ ಅಂದ ಸ್ವಲ್ಪ ಹೆದರಿದಂತೆ ತೊದಲಿ ಮಾತಾಡಿ ಆಯ್ತು ಬಾ ಮನೆಯವರನ್ನೆಲ್ಲ ಹೊರಗೆ ಕಳ್ಸಿದೀನಿ ಅಪಾರ್ಟ್ಮೆಂಟ್ ಬಂದು ಕಾಲ್ ಮಾಡು ಎಂದು ಕಟ್ ಮಾಡಿದಳು..

“ಪ್ರಮೀಳ ಬೇಗ ಹೋಗಿ ನಿನ್ನ ಸ್ಕೂಟಿಯನ್ನು ಕಾಣದಂತೆ ಬಚ್ಚಿಡು,ಅವನಿಗೆ ಎಳ್ಳಷ್ಟು ಸಂಶಯ ಬರಕೂಡದು”..ಶ್ಯಾಮಲೆ ಖತರ್ನಾಕ್ ಆಗಿ ಹೋಗುತ್ತಿದ್ದಾಳೆ..ಅದರಂತೆ ನಜೀಬ್ ಪ್ರಮೀಳ ಸ್ಕೂಟಿಯನ್ನು ಮರೆಮಾಡಿ ಬರುವಾಗ ಆ ರೂಮಿನಿಂದ ದೊಡ್ಡ ಸ್ವರದ ಹಿಂದಿ ಸಂಭಾಷಣೆ ಕೇಳಿ ಬರುತ್ತಿದೆ “ಬಹುಶಃ ಅದೇ ಏಸಿ ಹತ್ರ ಮಾತಾಡ್ತಿರ್ಬೇಕು”ನಜೀಬ್ ಸಂಶಯಿಸಿದ,,ಹೇಳಿದ ಕೆಲಸದಂತೆ ನಟರಾಜ್ ಔಟ್’ಡೋರ್ ಇರೋ ಕಡೆ ನಿಲ್ಲುವಾಗ ಪ್ರಮೀಳ,ನಜೀಬ್ ಅದೇ ರೂಮಿನ ಒಂದು ಸೈಡ್ ಅಡಗಿ ಕಾಯ್ತಾ ಇದಾರೆ, ತನ್ನ ಎರಡನೇ ಪೋನಿಂದ ಪ್ರಮೀಳ,ನಜೀಬ್,ನಟರಾಜ್’ರಿಗೆ ಕಾನ್ಫರೆನ್ಸ್ ಕರೆ ಇಟ್ಟಿದ್ದಾಳೆ ಶ್ಯಾಮಲೆ,,!

ಸರಿಯಾಗಿ ಏಳು ಐವತ್ತಕ್ಕೆ ರಾಕೇಶ್’ನ ಪೋನ್.”ಅಪಾರ್ಟ್ಮೆಂಟ್ ಪಾರ್ಕಿಂಗ್’ನಲ್ಲಿದೀನಿ.”.

“ಸೀದ ಮೂರನೇ ಮಹಡಿಗೆ ಬಂದು ಕಾಲ್ ಮಾಡು”

“ಸರಿ”ಎಂದ

“ರಾಕೇಶ್ ಹಾಸ್ ಕಮ್”ಶ್ಯಾಮಲೆ ಎಲ್ಲರನ್ನೂ ಎಚ್ಚರಿಸಿದಳು ತನ್ನ ಪ್ಲಾನ್ ಸಕ್ಸಸ್ ಆಗುವವರೆಗೂ ಅವರು ಹೊರಗೆ ಬರದಂತೆ ನೋಡಿಕೋ ಎಂದೇ ದೇವರಲ್ಲಿ ಮೊರೆ ಇಡುತ್ತಿದ್ದಾಳೆ ಶ್ಯಾಮಲೆ..

“ಐ ಆಮ್ ಇನ್ ಥರ್ಡ್ ಪ್ಲೋರ್”.

ರಾಕೇಶ್’ನ ಮರಣ ಸಮೀಪಿಸಿದೆಂತು ಕರೆ ಮಾಡಿ ಅವನೇ ತಿಳಿಸಿದ..ಕೊನೆಯ ಮೆಟ್ಟಿಲೇರುವಾಗಲೇ ಶ್ಯಾಮಲೆಗೆ ಲ್ಯಾಪ್’ಟಾಪ್’ನಲ್ಲಿ ಕಾಣ್ತ ಇದೆ ಅದೇ ಮಾಹಿತಿ ಅವರಿಗೂ ಕೊಡುತ್ತಿದ್ದಾಳೆ ಶ್ಯಾಮಲೆ ಹತ್ತಿರ ರೇಣುಕಾದೇವಿ ಗರ ಬಡಿದವರಂತೆ ಮಗಳ ಸಾಹಸ ನೋಡಿ ಬೆರಗಾಗಿದ್ದಾಳೆ..

“ಎಸ್ ನಾ ಹೇಳ್ತಿನಿ ಹಾಗೆಯೇ ಬಾ ನಿಂತಿರುವ ಲೆಪ್ಟ್’ನಲ್ಲಿ ಮೂರನೇ ರೂಮ್ ಬಾಗಿಲು ತಟ್ಟು,ನಾ ಒಳಗೆ ಇದೀನಿ ಹೊರಗೆ ಬರೋಕೆ ಆಗಲ್ಲ, ಅಕ್ಕ ಪಕ್ಕದವರು ನೋಡಿದ್ರೆ ಕಷ್ಟ ನಾನೂ ಹೋಗಿದಿನಿ ಅಂತ ತಿಳ್ಕೊಂಡಿದ್ದಾರೆ…!”

“ಸರಿ, ಐ ವಿಲ್ ಕಮ್”ಅಂತ ಮೀಸೆ ತಿರುಗಿಸಿ ಆ ರೂಮಿನ ನೇರಕ್ಕೆ ಹೋಗ್ತಾ ಇದಾನೆ ರಾಕೇಶ್..

“ಬಿ ಅಲರ್ಟ್, ಡ್ಯಾಡಿ,ನಜೀಬ್, ಹಿ ಈಸ್ ಕ್ಲೋಸ್ ಟು ದಿ ರೂಮ್”..

ಒಕ್ಕೊರಲಿನಿಂದ “ಒಕೆ” ಉತ್ತರ

ಶ್ಯಾಮಲೆಯ ನ್ಯಾವಿಗೇಟ್ ಪ್ರಕಾರ ತಾನು ಬಂದ ರೂಮ್’ನ ಬಾಗಿಲು ಬಡಿಯಲು ಆಚೆ ಈಚೆ ನೋಡ್ತಾ ಇದಾನೆ ಯಾರೂ ಇಲ್ಲಾಂತ ಗೊತ್ತಾದ ಮೇಲೆ ಟಕ್ ಟಕ್ ಎಂದು ಬಡಿದ”ಶ್ಯಾಮ್,ರಾಕೇಶ್ ಇಯರ್.”

ಒಳಗಿನಿಂದ ಸುದ್ಧಿ ಇಲ್ಲ

“ಶ್ಯಾಮ್,ನಾ ಹೊರಗಿದೀನಿ ಬಾಗಿಲು ತೆಗೀ!”..ಹಲ್ಲು ಕಡಿಯುತ್ತಾ ಶಬ್ಧ ಏರಿಸಿದ ರಾಕೇಶ್..

ಬಾಗಿಲು ತೆರೆಯದಿದ್ದನ್ನು ಲ್ಯಾಫ್’ನಲ್ಲಿ ನೋಡ್ತಾ ಇದಾಳೆ ಶ್ಯಾಮಲೆ ಮತ್ತು ಬೇಡಿಕೊಳ್ತಾ ಇದಾಳೆ ಬಾಗಿಲು ತೆಗಿಯಲು..

ಇನ್ನೇನು ಮೂರನೇ ಬಾರಿ ಬಡಿಬೇಕು ಅಷ್ಟರಲ್ಲಿ ಬಾಗಿಲು ತೆರೆದು “ಕೋನ್ ರೇ!!” ರಾಕೇಶ್ ನೆಲದ ದೃಷ್ಟಿ ಮೇಲೆ ಮಾಡುವಾಗ ಶಾಕ್ “ಅಟ್ಯಾಕ್”ಶ್ಯಾಮಲೆ

ಎದ್ದು ನಿಂತು ಕಿರಿಚಿದ್ದೇ ಅಲ್ಲೇ ತಡ ಅವಿತಿದ್ದ ಪ್ರಮೀಳ,ನಜೀಬ್ ಕೋರಸ್’ನಲ್ಲಿ ಒಂದೇ ತುಳಿತ ದಾಡಿವಾಲ ಮತ್ತು ರಾಕೇಶ್ ಇಬ್ಬರಿಗೂ ಸಿಡಿಲು ಬಡಿದಂತೆ ಇಬ್ಬರೂ ರೂಮಿನ ಒಳಗೆ “ಡ್ಯಾಡಿ ಪೋರ್ ಇಟ್(Pour it)” ” ಒಕೆ ಮಾ” ಎನ್ನುತ್ತಲೇ

ಕ್ಲೋರೋಫಾಮ್ ಸುರಿದ ನಟರಾಜ್ ಚಲ್ಲಾಪಿಲ್ಲಿ ಆದವರಿಗೆ ಏನು ನಡೀತಿದೆ ಅನ್ನೋದು ಗೊತ್ತಾಗುವ ಮುಂಚೆಯೇ ಏಸಿಯ ಗಾಳಿಯಲ್ಲಿ ಲೀನವಾದ ಕ್ರೋರೋಫಾಮ್ ಎರಡೇ ನಿಮಿಷಕ್ಕೆ ಎಲ್ಲರನ್ನೂ ಪ್ರಜ್ಞಾಹೀನ ಸ್ಥಿತಿಗೆ ಕೊಂಡೊಯ್ತು.

ರೂಮಿನ ಹೊರಗೆ ಬಂದ ಶ್ಯಾಮಲೆ ಐದು ನಿಮಿಷ ಕಾದು ಮುಖ ಪೂರ್ತಿ ಮುಚ್ಚಿ ಬಾಗಿಲು ತೆರೆದಳು,,ಎಲ್ಲಾ ಬಿದ್ದಿದ್ದಾರೆ ಒಳಗಡೆ ಸಾಕಷ್ಟು ಆಯುಧ, ಪೇಪರ್ ರಾಶಿಗಳು,ಮಾರ್ಡನ್ ಬಂದೂಕು,ಸ್ಯಾಟ್ ಲೈಟ್ ಪೋನ್,ಲ್ಯಾಪ್’ಟಾಪ್ ಎಲ್ಲಾ ಅನಾಥವಾಗಿ ಬಿದ್ದಿದೆ,,ಏನೂ ಆಲೋಚಿಸದೇ ಅಡುಗೆ ಮನೆಗೆ ಹೋದ ಶ್ಯಾಮಲೆ ತನ್ನ ಪ್ರತಿಕಾರದ ಜ್ವಾಲೆಯಂತೆ ಉರಿಯಲು ಗ್ಯಾಸ್ ತಂತಿಯನ್ನು ಕಡಿದು ಎಲ್ಲಾ ಕಿಟಕಿಗಳನ್ನು ಮುಚ್ಚಿ ನಜೀಬ್ ತಂದಿದ್ದ ಬತ್ತಿಯನ್ನು ರಾಕೇಶನ ಮೇಲೆ ಇಟ್ಟು ಹೊರಗೆ ಬಂದಳು..

“ಲೆಟ್ ಸ್ಟಾರ್ಟ್ ದ ಎಂಡ್!” ನಗುತ್ತಲೇ ಅಲ್ಲೇ ದೂರ ಇರುವ ಮೋಹಿನಿಯನ್ನು ರೂಮಿನ ಹೊರಗೆ ಕರೆದಳು ಆ ರೂಮಿನಿಂದ ಅದೇನೋ ಸ್ಮೆಲ್ ಬರ್ತಿದೆ ಎನುತಾ ಎಲ್ಲರನ್ನು ಕೆಳಗೆ ಕಳುಹಿಸಿ ರೂಮಿನ ಹೊರಗಿರುವ ಬತ್ತಿಗೆ ಬೆಂಕಿ ಇಟ್ಟು ತಾನೂ ಓಡಿ ಹೋದಳು ,ಸರಿಯಾಗಿ ಹತ್ತು ಹೆಜ್ಜೆ ಇಡುವಾಗ “ಢಂ”…ಅಷ್ಟೇ ಒಂದೇ ಕಲ್ಲಿಗೆ ಎರಡು ಉತ್ತಮ ಕೆಲಸ ಮಾಡಿದ ಆತ್ಮ ತೃಪ್ತಿಯಿಂದ ಮೆಟ್ಟಿಲು ಇಳಿಯುತ್ತಿದ್ದಾಳೆ ಸಾಕ್ಷಾತ್ ಭಾರತೀಯ ನಾರಿಯಾಗಿ ತನ್ನ ಶೀಲಕ್ಕೆ ಕುಂದು ಬರುವಾಗ ಅದನ್ನು ತಡೆಯಲು ಗರಿಷ್ಟ ಮಟ್ಟದ ಪ್ರಯತ್ನವಾದ ಕೊಲೆಯನ್ನು ಕೂಡ ಮಾಡಬಲ್ಲ ಅಪ್ಪಟ ಶೀಲವಂತಳಾಗಿ,ಹೆಣ್ಣನ್ನು ಕಾಮದ ದೃಷ್ಟಿಯಿಂದ ಮಾತ್ರ ನೋಡುವ ಎಲ್ಲಾ ಕಲ್ಮಶ ಮನಸ್ಸುಗಳಿಗೆ ಕಾಳಿಯಾಗಿ, ತನ್ನ ಮೇಲಿಟ್ಟಿರುವ ಭರವಸೆಯನ್ನು ಈಡೇರಿಸಲು ಶತಾಯಗತಾಯ ಪ್ರಯತ್ನ ಮಾಡುವ ಎಲ್ಲಾ ಹೆತ್ತವರ ಮಗಳಾಗಿ..ರಾಕೇಶನ ಡೀಲ್’ನ್ನು ಅಚ್ಚುಕಟ್ಟಾಗಿ ಮುಗಿಸಿದ ಡೀಲರ್ ಆಗಿ….

ಡೀಲ್ ಎಂಡೆಡ್…

ಅವಿಜ್ಞಾನಿ

ನಿಝಾಮ್ ಗೋಳಿಪಡ್ಪು

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post