X

ಸ್ಪೇಸ್ ಜನರೇಟರ್, ಇದು ನಾಳೆಗಳ ವಿದ್ಯುತ್ ಸಮಸ್ಯೆಗಳಿಗೆ ಸೂಕ್ತ ಪರಿಹಾರವಾಗಬಲ್ಲದೇ?

ಆಧುನಿಕ ಜಗತ್ತೆಂದು ಕರೆಯಲ್ಪಡುವ ಪ್ರಸ್ತುತ ಕಾಲವನ್ನು ನಾವು ಒಮ್ಮೆ ಕಣ್ಣುಮುಚ್ಚಿ ಕಲ್ಪಿಸಿಕೊಂಡರೆ ಹೆಚ್ಚಾಗಿ ಕಾಣಸಿಗುವುದು ಝಗಝಗಿಸುವ ರಂಗುರಂಗಿನ ಬೆಳಕು ಅಥವ ಅದರ ಮೂಲವಾದ ವಿದ್ಯುತ್ತು ಎನ್ನಬಹುದು. ಆಧುನಿಕ ಜಗತ್ತು ನಿಂತಿರುವ ಅತ್ಯವಶ್ಯಕ ಆಧಾರಸ್ತಂಭಗಳಲ್ಲಿ ಈ ವಿದ್ಯುತ್ ಕೂಡ ಒಂದು. ಇಂದು ಆಹಾರವನ್ನು ಬೇಯಿಸುವುದರಿಂದ ಹಿಡಿದು ಹಾಯಾಗಿ ಮಲಗುವವರೆಗೂ ಇದರ ಅವಶ್ಯಕತೆ ಇರುವುದು ಎಲ್ಲರಿಗೂ ತಿಳಿದಿರುವ ವಿಚಾರವೆ. ನವೀಕರಿಸಲಾಗದ ಶಕ್ತಿಯ ರೂಪಗಳಲ್ಲಿ ಒಂದಾಗಿರುವ ವಿದ್ಯುತ್ತಿನ ಕೊರತೆ ದಿನಕಳೆದಂತೆ ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ. ಇದರ ಮಿತ ಬಳಕೆಗೆ ಏನೆಲ್ಲಾ ಸಂಶೋಧನಾ ಸರ್ಕಸ್’ಗಳನ್ನೂ ಮಾಡಿದರೂ ರಕ್ಕಸ ಬಾಯಿಯ ಮಾನವನನ್ನು ತೃಪ್ತಿಪಡಿಸಲಾಗುತ್ತಿಲ್ಲ ಎನ್ನುವುದು ಸುಪರಿಚಿತವಾಗಿರುವ ವಿಷಯ. ಕಲ್ಲಿದ್ದಲು, ಜಲ, ಪವನ ಶಕ್ತಿ ಹಾಗು ಪರಮಾಣುಮೂಲಗಳು ಮುಂದೊಂದು ದಿನ ಬರಿದಾದ ಮೇಲೆ ಏನೆಂಬ ಪ್ರಶ್ನೆ ದಶಕಗಳಿಂದ ನಮ್ಮೆಲ್ಲರ ಮುಂದಿದ್ದರೂ, ಇನ್ನೂ ಸಹ ಇದಕ್ಕೊಂದು ಸಮರ್ಪಕ ಉತ್ತರವನ್ನು ನಮಗೆ ಹುಡುಕಿಕೊಳ್ಳಲಾಗಿಲ್ಲ.

ಹೀಗೆಯೇ ಈ ವಿಷಯದ ಬಗ್ಗೆ ಅಂತರ್ಜಾಲದಲ್ಲಿ ತಡಕಾಡುವಾಗ ಪರಮಹಂಸ ತಿವಾರಿ ಎಂಬ NPCIಯ (ನ್ಯಾಷನಲ್ ಪವರ್ ಕಾರ್ಪೋರೇಶನ್ ಆಫ್ ಇಂಡಿಯಾ )ನಿವೃತ್ತ ಡೈರೆಕ್ಟರ್ ಅವರ ಸಂಶೋಧನೆಯ ಬಗ್ಗೆ ತಿಳಿಯಲ್ಪಟ್ಟಿತ್ತು. ಮೂಲತಃ ಎಲೆಕ್ಟ್ರಿಕಲ್ ಇಂಜಿನಿಯರ್ ಆಗಿರುವ ತಿವಾರಿಯವರು ದೇಶದ ಅಣುವಿಜ್ಞಾನದ ಕ್ಷೇತ್ರದಲ್ಲಿ ಬಹಳಷ್ಟು ಉನ್ನತ ಹುದ್ದೆಗಳನ್ನು ಅಲಂಕರಿಸಿರುತ್ತಾರೆ. ತಮ್ಮ ವೃತ್ತಿಯ ಉದ್ದಕ್ಕೂ ದೇಶದ ಮಹತ್ವದ ಪ್ರಾಜೆಕ್ಟ್’ಗಳನ್ನು ಸಾಕಾರಗೊಳಿಸುವಲ್ಲಿ ಯಶಸ್ವಿಯಾದ ಇವರು ನಿವೃತ್ತಿಯ ನಂತರ ‘ಬ್ಯಾಕ್ ಟು ಬೇಸಿಕ್ಸ್’ ಎಂಬುವಂತೆ ತಮ್ಮ ಜೀವನದುದ್ದಕ್ಕೂ ಕಾಡುತ್ತಿದ್ದ ವೈಜ್ಞಾನಿಕ ಹಾಗು ತಾಂತ್ರಿಕ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕಹೊರಟರು. ಹೀಗೆ ಸಂಶೋಧನೆಯನ್ನು ನಡೆಸುತ್ತಾ ಹೊರಟವರಿಗೆ ಹೊಳೆದದ್ದೇ ನಾಳಿನ ವಿದ್ಯುತ್ ಸಮಸ್ಯೆಗಳಿಗೆ ಸೂಕ್ತ ಪರಿಹಾರವನ್ನು ಕೊಡಬಲ್ಲ ‘ರಿಯಾಕ್ಷನ್ ಲೆಸ್ AC  ಸಿನ್ಕ್ರೋನಸ್ ಜನರೇಟರ್’ (RLG) ಅಥವಾ ಸರಳವಾಗಿ ಹೇಳುವುದಾದರೆ ನಿರ್ವಾತ(Vaccum)ದಿಂದ ಶಕ್ತಿಯನ್ನು ಪಡೆದು ಚಲಿಸುವ ಜನರೇಟರ್! ಅಂದರೆ ಇದರ ಚಲನೆಗೆ ಯಾವುದೇ ಬಗೆಯ ಇಂಧನ ಮೂಲಗಳಾಗಲಿ (ಡೀಸೆಲ್, ಪೆಟ್ರೋಲ್ಇತ್ಯಾದಿ )ಬೇಡ. ಯಸ್, ನಂಬಲಸಾದ್ಯವಾದರೂ ಒಮ್ಮೆ ತಿಳಿಯಲೇಬೇಕಾದ ವಿಷಯವಿದು.

1831ರಲ್ಲಿ ಮೈಕಲ್ ಫ್ಯಾರಡೆ ಎಲೆಕ್ಟ್ರಿಕ್ ಜನರೇಟರನ್ನು ರೂಪಿಸಿದ ಮಾದರಿ/ನಿಯಮ ಶತಕಗಳ ನಂತರವೂ ಹಾಗೆಯೇ ಇದೆ. ಈ ವಿಷಯದಲ್ಲಿ ಇನ್ನೂ ಹೆಚ್ಚಿನ ಸಂಶೋಧನೆ ಮಾಡಲಾಗುವುದಿಲ್ಲ ಎಂದೇನಲ್ಲ, ಆದರೆ ವಿದ್ಯುತ್ತನ್ನು ಉತ್ಪಾದಿಸುವ ಈ ಮಾದರಿ/ನಿಯಮ ಒಂಥರಾ ಜಗತ್ತನೇ ಅಳೆಯುವ ನ್ಯೂಟನ್ನಿನ ಸೂತ್ರಗಳಂತೆ. ಅವುಗಳನ್ನು ಬದಲಾಯಿಸುವುದು ಅಥವಾ ಮಾರ್ಪಾಡು ಮಾಡಲು ಹೋಗುವುದು ಒಂದು ಬಗೆಯ ಮೂರ್ಖತನದ ಕೆಲಸ. ಪರಿಣಾಮ ಜನರೇಟರ್ ಎಂದರೆ ಎರಡು ಅಯಸ್ಕಾಂತ ಹಾಗು ಒಂದು ವಾಹಕದ(Conductor) ಸುರಳಿ, ವಾಹಕದ ಸುರಳಿ ಅಯಸ್ಕಾಂತದ ನಡುವೆ ಸುತ್ತಿದ್ದಷ್ಟೂ ಅದಕ್ಕೆ ಪೂರಕವಾಗಿ ವಿದ್ಯುತ್ತ್ ಉತ್ಪತಿಯಾಗುತ್ತದೆಯೆಂದು ನಾವು ತಿಳಿದು ಬೆಳೆದಿರುವವರು. ಹೀಗೆ ವಿದ್ಯುತ್ತನ್ನು ಉತ್ಪಾದಿಸುವ ಹಿಂದಿರುವ ಅತಿ ದೊಡ್ಡ ಸವಾಲು ವಾಹಕದ ಸುರಳಿಯನ್ನು ಯಾವ ವಿಧದಲ್ಲಿ, ಎಷ್ಟು ವೇಗವಾಗಿ ಸುತ್ತಿಸಬಹುದು ಎಂಬುವುದರಲ್ಲಿರುತ್ತದೆ. ಇದಕ್ಕಾಗಿಯೇ ಕಲ್ಲಿದ್ದಲು, ಜಲ, ಪವನಶಕ್ತಿ, ಪರಮಾಣು ಹಾಗು ಇನ್ನಿತರೆ ಶಕ್ತಿಯ ಮೂಲಗಳು ಬಳಕೆಯಾಗುವುದು. ಆದರೆ ಪರಮಹಂಸ ತಿವಾರಿಯವರು ಈ ಮೂಲ ವಿಧಾನವನ್ನೇ ಪ್ರಶ್ನಿಸತೊಡಗುತ್ತಾರೆ! ವಿದ್ಯುತ್ತ್ ಉತ್ಪತಿಯಾಗಲು ವಾಹಕದ ಸುರಳಿಸುತ್ತಲೇಬೇಕೆ? ಎಂಬ ಸವಾಲನ್ನು ಕೇಳಿಕೊಳ್ಳುತ್ತಾರೆ. ಹೀಗೆ ಯೋಚಿಸುತ್ತಿರುವಾಗಲೇ ನಮ್ಮ ಉಪನಿಷತ್ತಿನ ಕೆಲವು ಬರಹಗಳು ಅವರಕಲ್ಪನೆಗೆ ತಕ್ಕ ಪುಷ್ಟಿಯನ್ನು ಕೊಡುತ್ತವೆ. ಅವುಗಳ ಪ್ರಕಾರ ಆಕಾಶ/ನಿರ್ವಾತವೇ ಸರ್ವ ವಿಶ್ವದ ಉಗಮಕ್ಕೆ ಕಾರಣವೆಂದೂ ಆಕಾಶ/ನಿರ್ವಾತ ಎಂದಾಗ ಅದು ಕೇವಲ ಖಾಲಿಯಿರುವ ಜಾಗವೆನ್ನುವುದಂತೂ ನೂರಕ್ಕೆ ನೂರರಷ್ಟು ಸುಳ್ಳು ಎಂಬುದನ್ನು ಅವಲಂಬಿಸಿ, ಜಗತ್ತನೇ ಸೃಷ್ಟಿಸಿರುವ ಆಕಾಶವನ್ನು ಈ ಜನರೇಟರ್ನ ಶಕ್ತಿಯ ಮೂಲವಾಗಿ ಪರಿಗಣಿಸುತ್ತಾರೆ. ಈ ಸೂತ್ರವನ್ನು ವಸ್ತುಗಳ ಅಣು ಹಾಗು ಪರಮಾಣುಗಳಿಗೂ ಅನ್ವಹಿಸುತ್ತಾರೆ. ಮಹಾವಿಜ್ಞಾನಿ ಐನ್’ಸ್ಟೈನ್’ನ ‘ಥಿಯರಿ ಆಫ್ ರಿಲೇಟಿವಿಟಿ’ಯೂ ಸಹ ಇದಕ್ಕೆ ಪೂರಕವಾಗಿರುತ್ತದೆ. ವಾಹಕ, ಅಯಸ್ಕಾಂತಗಳ ಸ್ಥಾನಪಲ್ಲಟ ಹಾಗು ಅವುಗಳ ಅಣು ಹಾಗು ಪರಮಾಣುಗಳ ನಡುವಿನ ವಿಶಿಷ್ಟ ಅಧ್ಯಯನದಿಂದ ತಿವಾರಿಯವರು ಈ ಪಾತ್ ಬ್ರೇಕಿಂಗ್ ಸಂಶೋಧನೆಯಲ್ಲಿ ಯಶಸ್ವಿಯಾದರು. ಪರಿಣಾಮ,ಸಹಜವಾಗಿ ಬಳಸುವ ಇಂಧನದ ಮೂಲಗಳ (ಪೆಟ್ರೋಲ್, ಡೀಸೆಲ್, ಕಲ್ಲಿದ್ದಲು ಇತ್ಯಾದಿ) ಬಳಕೆಯಿಲ್ಲದೆಯೇ ಈ ಜನರೇಟರ್ ಕಾರ್ಯನಿರ್ವಹಿಸತೊಡಗಿತು! ‘ಶಕ್ತಿಯನ್ನು ಸೃಷ್ಟಿಸಲು ಹಾಗು ನಾಶಪಡಿಸಲು ಸಾಧ್ಯವಿಲ್ಲ, ಅದನ್ನು ಒಂದು ರೂಪದಿಂದ ಮತ್ತೊಂದು ರೂಪಕ್ಕೆ ಮಾತ್ರ ಬದಲಾಯಿಸಬಹುದು’ ಎಂಬ ನಮ್ಮ ಬಾಲ್ಯದ ವಿಜ್ಞಾನದ ಪಾಠದ ‘ಶಕ್ತಿ ನಿತ್ಯತೆಯ ನಿಯಮ’ವನ್ನು ಅಲುಗಾಡಿಸಿತು. ಏಕೆಂದರೆ ಈ ಸಂಶೋಧನೆಯಲ್ಲಿ ವಿದ್ಯುತ್ತ್ಶಕ್ತಿಯನ್ನು ಯಾವುದೇ ಇತರ ಶಕ್ತಿಯ ಮೂಲಗಳಿಲ್ಲದೆ ಉತ್ಪದಿಸಬಹುದಾಗಿದೆ! ಅರ್ಥಾತ್ ಶಕ್ತಿಯ ಒಂದು ರೂಪವನ್ನು ಸೃಷ್ಟಿಸಬಹುದಾಗಿದೆ!!

‘ಸ್ಪೇಸ್’ ಜನರೇಟರ್ ಎಂದೇ ಪ್ರಸಿದ್ದಿ ಪಡೆಯುತ್ತಿರುವ ಇದರ ಕಾರ್ಯಪ್ರವೃತ್ತಿಗೆ ಹಾಗು ದಕ್ಷತೆಯ(Efficiency) ವಿಷಯಕ್ಕೆ ಬಂದರೆ ಇದು ಒಮ್ಮೆ ಶುರುವಾಗಲು ಅತ್ಯಲ್ಪ ಪ್ರಮಾಣದ ಶಕ್ತಿಯ ಅವಶ್ಯಕತೆ (Initial  Power) ಬೇಕಾಗುತ್ತದೆ. ಅಂದರೆ ಒಮ್ಮೆ ವಾಹಕವನ್ನು ಕೆಲವು ಸುತ್ತುಗಳನ್ನು ಸುತ್ತಲು ಬೇಕಾಗುವ ಶಕ್ತಿ ಮಾತ್ರ. ನಂತರ ಇದರ ಓಟದ ಹಾದಿ ತೀರಾ ಸುಲಭ. ಈ ಜನರೇಟರ್’ನ ಇಂಟರಸ್ಟಿಂಗ್ ವಿಚಾರವಿರುವುದು ಇಲ್ಲೆಯೇ. ಭೌತಶಾಸ್ತ್ರದ ‘ಲೆನ್ಸ್’ನ ನಿಯಮದ (Lens Law)ಪ್ರಕಾರ ಯಾವುದೇ ಒಂದು ಯಂತ್ರ ಹೆಚ್ಚೆಂದರೆ ಪ್ರತಿಶತ 90-95% ರಷ್ಟು ದಕ್ಷತೆಯನ್ನು ಗಳಿಸಬಹುದು. ಅಥವಾ ಯಾವುದೇ ಯಂತ್ರಕ್ಕೆ100% ಗಿಂತ ಹೆಚ್ಚಿನ ದಕ್ಷತೆ ಗಳಿಸಲು ಸಾಧ್ಯವಿಲ್ಲ ಎನ್ನುವುದಾಗಿದೆ. ಸರಳವಾಗಿ ಹೇಳುವುದಾದರೆ ಒಬ್ಬ ವ್ಯಕ್ತಿಗೆ ನಾವು ಹತ್ತು ಗುದ್ದನ್ನು ಕೊಟ್ಟರೆ ಆತ ತನ್ನ ನಂತರದವನಿಗೆ ಒಂಬತ್ತೇ ಅಥವಾ ಹೆಚ್ಚೆಂದರೆ ಹತ್ತು ಗುದ್ದನ್ನು ಕೊಡಬಲ್ಲ ಸಾಮರ್ಥ್ಯ ಮಾತ್ರ ಗಳಿಸಬಹುದು. ಆದರೆ ತಿವಾರಿಯವರ ಸಂಶೋಧನೆ ಈ ನಿಯಮವನ್ನೇ ತಲೆಗೆಳಗಾಗಿ ಮಾಡುತ್ತದೆ. ಜನರೇಟರ್  ಶುರುವಾಗಲು ಕೊಡುವ Initial  Powerನ 2.38ರಷ್ಟು ಅಂದರೆ, 238% ರಷ್ಟು ದಕ್ಷತೆಯನ್ನು ಈ ಜನರೇಟರ್ ಗಳಿಸುತ್ತದೆ! ಲೆನ್ಸ್’ನ ನಿಯಮಕ್ಕೆ ವಿರುದ್ಧವಾದ ಕಾರಣ ಇಲ್ಲಿ ನಮಗೆ ಕೊಂಚ ಅನುಮಾನ ಮೂಡಿದರೂ, ಸಾಲು ಸಾಲು ನಿಖರ ಫಲಿತಾಂಶಗಳು ಆ ಎಲ್ಲ ಅನುಮಾನಗಳಿಗೆ ತಣ್ಣೀರನ್ನು ಎರಚುತ್ತಿವೆ. ಅಲ್ಲದೆ ಈ ಅಂಕಿಅಂಶಗಳನ್ನು ದೇಶ ವಿದೇಶದ ಹಲವಾರು ಖ್ಯಾತ ವಿಜ್ಞಾನಿಗಳೇ ಪರೀಕ್ಷಿಸಿ ಒಪ್ಪಿಕೊಂಡಿದ್ದಾರೆ.

ನಾವು ನಿತ್ಯ ಮನೆಯಲ್ಲಿ ಬಳಸುವ 40 ವ್ಯಾಟ್ ಬಲ್ಬ್ ಅನ್ನು ಒಂದೇ ಸಮನೆ 25ಘಂಟೆಗಳ ಕಾಲ ಉರಿಸಲು ಬೇಕಾಗುವ ಶಕ್ತಿಯ ಪ್ರಮಾಣ 1ಕಿಲೋವ್ಯಾಟ್ ಅವರ್(40Watt x 25 Hour). ಸಮೀಕ್ಷೆಗಳ ಪ್ರಕಾರ ನಮ್ಮ ದೇಶದ ಪ್ರತಿ ಮನೆಯ ವರ್ಷದ ವಿದ್ಯುತ್ ಬೇಡಿಕೆಯ ಸರಾಸರಿ ಪ್ರಮಾಣ ಸುಮಾರು 900ರಿಂದ1000 kWH. ಇಷ್ಟೊಂದು ವಿದ್ಯುತ್ ಬೇಡಿಕೆಯಿರುವ ದೇಶಕ್ಕೆ ಪೂರ್ಣಪ್ರಮಾಣದ ಪರಿಹಾರವನ್ನು ಒದಗಿಸಲಾಗದಿದ್ದರೂ ಬಹುಮಟ್ಟಿನ ಯಶಸ್ಸನ್ನು ತಿವಾರಿಯವರ ಸಂಶೋಧನೆಯಿಂದ ನಿರೀಕ್ಷಿಲಾಗಿದೆ. ಅದಾಗಲೇ 10kWH ಹಾಗು25kWH ಸಾಮರ್ಥ್ಯದ ಜನರೇಟರ್’ಗಳನ್ನು ರೂಪಿಸುವಲ್ಲಿ ತಂಡ ಸಫಲವಾಗಿದೆ. ಅಲ್ಲದೆ ನಮ್ಮ ‘ಕರ್ನಾಟಕ ಪವರ್ ಕಾರ್ಪೋರೇಶನ್ ಲಿಮಿಟೆಡ್’ (KPCL) ಒಂದೆರೆಡು ಪ್ರದೇಶಗಳಲ್ಲಿ ಇವುಗಳನ್ನು ಅಳವಡಿಸಿ ಯಶಸ್ವಿಯಾಗಿರುವುದೂ ಉಂಟು. ಮುಂದೆ ಈ ಅಭೂತಪೂರ್ವ ಸ್ಪೇಸ್ ಜನರೇಟರ್’ನ ಪೇಟೆಂಟ್’ನ್ನು ತಿವಾರಿಯವರು ಯಾವಾಗ ಪಡೆದುಕೊಂಡರೋ ಆಗಲೇ ನೋಡಿ ಜಗತ್ತಿಗೆ ಇಂಧನವಿಲ್ಲದೆ ಚಲಿಸಬಲ್ಲ ಜನರೇಟರ್’ನ ಬಗ್ಗೆ ಹಂತಹಂತವಾಗಿ ತಿಳಿಯಲ್ಪಟ್ಟಿದ್ದು. ನಿರೀಕ್ಷೆಯಂತೆ ಸೌದಿಅರೇಬಿಯಾ, ಬ್ರಿಟನ್, ಅಮೇರಿಕದಂತಹ ಹಲವಾರು ತೈಲಭರಿತ ದೈತ್ಯರಾಷ್ಟ್ರಗಳು ಈ ಸಂಶೋಧನೆಯ ವಿರುದ್ಧ ಚಕಾರವೆತ್ತಿವೆ. ಪೆಟ್ರೋಲ್ ಡೀಸೇಲ್’ಗಳೆಂಬ ಪಲ್ಯ ಉಪ್ಪಿನಕಾಯಿಗಳಿಲ್ಲದೆ ಊಟವನ್ನು ಹೇಗೆ ಮಾಡಿಯಾರು ಎಂಬ ಭ್ರಮಲೋಕದ ನಾಯಕರುಗಳು! ಅದೇನೇಇರಲಿ, ತಿವಾರಿಯವರ ಈ ಯಂತ್ರದ ಬಗ್ಗೆ ಸರ್ಕಾರದ ವಿಶ್ವಾಸಭರಿತ ಪ್ರೋತ್ಸಾಹ ಹಾಗು ಭದ್ರತೆ ಮುಂದೊಂದು ದಿನ ಜಗತ್ತೆ ಭಾರತವನ್ನು ಬೆರಗು ಕಣ್ಣಿನಿಂದ ನೋಡುವಂತೆ ಮಾಡಬಹುದು ಅಲ್ಲದೆ ನಶಿಸಿ ಹೋಗುತ್ತಿರುವ ಇಂಧನಗಳು ನಾಳೆ ನಮ್ಮ ಕಣ್ಣಮುಂದೆಯೇ ಬರಿದಾದಾಗ ಏನೆಂಬ ಪ್ರಶ್ನೆಗೆ ಈ ಸಂಶೋಧನೆ ಸೂಕ್ತಪರಿಹಾರವನ್ನು ನೀಡಬಲ್ಲದು. ಸದ್ಯಕ್ಕೆ ಹೆಚ್ಚಿನ ಸಾಮರ್ಥ್ಯದ ಜನರೇಟರ್’ಗಳನ್ನು ರೂಪಿಸುವತ್ತ ಈ ತಂಡದ ಗಮನ ಕೇಂದ್ರೀಕೃತವಾಗಿದೆ.ಈಗ ಏನಿದ್ದರೂ ತಿವಾರಿಯವರ ಹಾಗು ಸರ್ಕಾರದ ಮುಂದಿನ ನಡೆಯ ಮೇಲೆಯೇ ಎಲ್ಲರ ಗಮನ. ಅಲ್ಲಿಯವರೆಗೂ Just Wait & Watch!

ಹೆಚ್ಚಿನಮಾಹಿತಿಗೆ :

http://www.tewari.org/

http://www.rexresearch.com/tewari/tewari.htm

http://economictimes.indiatimes.com/news/science/bengaluru-innovator-creates-super-high-efficiency-machine-that-produces-power-from-vacuum/articleshow/46832793.cms

ಚಿತ್ರ ಕೃಪೆ: thrivemovement.com

Facebook ಕಾಮೆಂಟ್ಸ್

Sujith Kumar: ಹವ್ಯಾಸಿ ಬರಹಗಾರ.
Related Post