ಆಧ್ಯ್ಮಾತ್ಮ ರಾಮಾಯಣ-3
ಹಿಂದಿನ ಭಾಗ:
ಕೈಲಾಸದಲ್ಲಿ ಶಿವ ಪಾರ್ವತಿಯರ ನಡುವೆ ಚರ್ಚೆ ನಡೆಯುತ್ತಿತ್ತು. ಶಿವನಿಗೆ ಪಾರ್ವತಿಯ ಪ್ರಶ್ನೆ ಹೀಗಿತ್ತು.
ರಾಮನೆಡೆಗಿನ ಭಕ್ತಿ ತರ್ಕಬದ್ಧವೆ?( ಭವ ಸಾಗರವನ್ನು ದಾಟಿಸಲು ಸಹಕಾರಿಯೇ?) ರಾಮ ಗುಣಗಳನ್ನು ಮೀರಿದ ನಿರ್ಗುಣ, ಪ್ರಕೃತಿಯನ್ನು ಮೀರಿದ ಅಭಿವ್ಯಕ್ತಿಯಾಗಿದ್ದ ಪರಬ್ರಹ್ಮ ಸ್ವರೂಪವೇ ಆದರೂ ಬ್ರಹ್ಮ ಆತನಿಗೆ ತನ್ನ ನಿಜವಾದ ಅಸ್ತಿತ್ವ ತಿಳಿಸುವವರೆಗೆ ರಾಮನಿಗೇಕೆ ತನ್ನ ಸ್ವರೂಪ ತಿಳಿಯಲಿಲ್ಲ?
ರಾಮನಿಗೆ ತನ್ನ ನಿಜ ಸ್ವರೂಪ ತಿಳಿದಿದ್ದರೂ ಸೀತೆಯನ್ನು ಕಳೆದುಕೊಂಡಿದ್ದಕ್ಕೇಕೆ ವ್ಯಥೆ ಪಟ್ಟ? ತನ್ನ ಅದೃಷ್ಟಕ್ಕೇಕೆ ಶೋಕಿಸಿದ? ಒಂದು ವೇಳೆ ರಾಮನಿಗೆ ತನ್ನ ಸ್ವರೂಪ ಏನೆಂಬುದೇ ತಿಳಿಯದೇ ಇದ್ದರೆ ಆತ ಪೂಜೆಗೆ ಹೇಗೆ ಅರ್ಹನಾಗುತ್ತಾನೆ? ನನ್ನ ಸಂದೇಹಗಳನ್ನು ಹಾಗೂ ರಾಮನನ್ನು ಹೇಗೆ ಪೂಜಿಸಬೇಕು ಎಂಬ ಜಿಜ್ಞಾಸೆಯನ್ನು ಪರಿಹರಿಸಿ
ಪಾರ್ವತಿಯ ಪ್ರಶ್ನೆಗೆ ಮಹಾದೇವನ ಉತ್ತರ:
ರಾಮನ ಕುರಿತಾದ ಸತ್ಯ ರಹಸ್ಯ, ಅತ್ಯಂತ ಆಳವಾದ ಮತ್ತು ಅತ್ಯಂತ ಸೂಕ್ಷ್ಮವಾದದ್ದು. ರಘುವಂಶದಲ್ಲಿಯೇ ರಾಮನ ಅತ್ಯಂತ ಶ್ರೇಷ್ಠನಾದ ರಾಜ. ಎಲ್ಲಾ ಜೀವಿಗಳಲ್ಲಿಯೂ ರಾಮ ಇರುತ್ತಾನೆ, ರಾಮನ ಶಕ್ತಿ ಇರುತ್ತದೆ. ಆದರೆ ಅದು ಕೇವಲ ಕಣ್ಣುಗಳಿಗೆ ಕಾಣುವುದಿಲ್ಲ. ಎಲ್ಲಾ ಭಾವನೆಗಳ ಅಂತರಾಳವೂ ರಾಮನೇ ಆಗಿದ್ದಾನೆ. ರಾಮ ಸರ್ವೋಚ್ಛ ಸಂತ. ಆತನ ಮಾಯೆಗೆ ಆತನೇ ಸಾಕ್ಷಿ. ಆದರೆ ಕಲ್ಮಶ ಮನಸ್ಸುಗಳಿಗೆ ಇದು ಅರ್ಥವಾಗುವುದಿಲ್ಲ.
ಜ್ಞಾನೋದಯವಾಗದ ಜನರು ತಮ್ಮ ಅಜ್ಞಾನವನ್ನು ವೈಭವೀಕರಿಸಿ, ರಾಮನೂ ತನ್ನಂತೆಯೇ ಪ್ರಾಪಂಚಿಕ ವ್ಯವಹಾರಗಳಲ್ಲಿ ತೊಡಗಿದ್ದವ ಎಂದು ಭಾವಿಸುತ್ತಾರೆ. ತಮ್ಮಂತೆಯೇ ರಾಮನೂ ಸಂಬಂಧಗಳಿಗೆ, ಪ್ರಾಪಂಚಿಕ ಚಟುವಟಿಕೆಗಳ ಪರಿಸರಕ್ಕೆ ಅಂಟಿಕೊಂಡಿರುವವನು ಎಂದುಕೊಂಡಿದ್ದಾರೆ. ರಾಮ ತಮ್ಮ ಅಂತರಂಗದಲ್ಲಿಯೇ ಇದ್ದಾನೆ ಎಂಬುದನ್ನು ಅರಿಯಲು ವಿಫಲರಾಗುತ್ತಾರೆ.
ಅಹಂಕಾರದಿಂದ, ಪ್ರತಿದಿನದ ಜಂಜಡಗಳಿಂದ ರಾಮ ತಾರಕ ಮಂತ್ರವೂ ಕೇಳಿಸದಂತಾಗಿದೆ. ರಾಮರದ್ದು ಶುದ್ಧ ಪ್ರಕೃತಿ. ಹಿಗ್ಗುವುದೂ ಇಲ್ಲ ಕುಗ್ಗುವುದೂ ಇಲ್ಲ. ಅಜ್ಞಾನಕ್ಕೆ ಅವರು ಸಾಕ್ಷಿಯಾಗಬಹುದು ಆದರೆ ಎಂದಿಗೂ ಅಜ್ಞಾನದ ಬಲಿಪಶುಯಾಗುವುದಿಲ್ಲ. ದೇವಿ ಮಾಯೆ ಎಂಬುದು ರಾಮನ ಮೇಲೆಯೇ ಅವಲಂಬನೆಯಾಗಿದೆ. ಅದು ವ್ಯಾಮೋಹವನ್ನು ಅಥವಾ ಅಜ್ಞಾನವನ್ನು ಉಂಟುಮಾಡಲಾರದು.