X

ಆಧ್ಯಾತ್ಮ ರಾಮಾಯಣ-4

ಹಿಂದಿನ ಭಾಗ:

ಆಧ್ಯಾತ್ಮ ರಾಮಾಯಣ-3

ಹನುಮಂತನಿಗೆ ಶ್ರೀರಾಮರ ಶ್ರೇಷ್ಠ ಕೊಡುಗೆ:
ಶ್ರೀರಾಮರ ಕುರಿತು ಶಿವ ಪಾರ್ವತಿಯರ ಸಂವಾದ ಮುಂದುವರೆದಿದ್ದು, ಮಹಾದೇವ ದೇವಿಗೆ ಶ್ರೀರಾಮ, ಸೀತೆ-ಹನುಮಂತರ ನಡುವೆ ನಡೆದ ಸಂಭಾಷಣೆಯನ್ನು ವಿವರಿಸುತ್ತಿದ್ದಾನೆ. ಶ್ರೀರಾಮ, ಸೀತೆ, ಹನುಮಂತರ ನಡುವಿನ ಸಂಭಾಷಣೆ ಅತ್ಯಂತ ಗೌಪ್ಯವಾಗಿ ನಡೆಯುತ್ತಿದ್ದು, ಮೋಕ್ಷ ಸಾಧನೆಯ ಕುರಿತದ್ದಾಗಿದೆ.

ರಕ್ಕಸ ರಾವಣನ ವಧೆ ಮಾಡುವ ಮೂಲಕ ಶ್ರೀರಾಮ ತಾನು ಅಪ್ರತಿಮ ಪರಾಕ್ರಮಿ ಎಂಬುದನ್ನು ಜಗತ್ತಿಗೆ ನಿರೂಪಿಸಿದ್ದಾನೆ. ರಾವಣನ ಸಂಪೂರ್ಣ ಸೇನೆಯನ್ನು, ಆತನ ಪುತ್ರರನ್ನು ವಧಿಸಿದ್ದ ರಾಮ ತನ್ನ ಸೇನೆಯಲ್ಲಿದ್ದು ಯುದ್ಧದ ವೇಳೆ ಮೃತರಾಗಿದ್ದ ವಾನರರನ್ನು ಸಂಜೀವಿನಿ ಮೂಲಿಕೆಯ ಮೂಲಕ ಬದುಕಿಸಿದ. ವಿಭೀಷಣನಿಗೆ ಲಂಕೆಯ ರಾಜನ ಪಟ್ಟಾಭಿಷೇಕ ಮಾಡಿ ಧರ್ಮದಿಂದ ಆಡಳಿತ ನಡೆಸುವಂತೆ ಸಲಹೆ ನೀಡಿದ.

ಯುದ್ಧದ ನಂತರ ಇತ್ತ ಕೋಸಲದಲ್ಲೂ ರಾಮ-ಸೀತೆಯರಿಗೆ ಪಟ್ಟಾಭಿಷೇಕ ಮಾಡಲಾಯಿತು. ಅಯೋಧ್ಯೆಯಲ್ಲಿ ನಡೆದ ವೈಭವಯುತ ಪಟ್ಟಾಭಿಷೇಕ ಕಾರ್ಯಕ್ರಮಕ್ಕೆ ವಾನರರ ರಾಜ ಸುಗ್ರೀವ, ಸುಗ್ರೀವನ ಸಚಿವ ಹನುಮಂತ ಸಾಕ್ಷಿಯಾದರು. ಯುದ್ಧದ ನಂತರ ಶಾಂತಿ ನೆಲೆಸಿತ್ತು. ಪಟ್ಟಾಭಿಕ್ಷೇಕದಂತಹ ಪ್ರಮುಖ ಕಾರ್ಯಕ್ರಮದಲ್ಲಿ ಅಂದಿನ ಕಾಲದಲ್ಲಿ ಜೀವಿಸಿದ್ದ ಅತ್ಯಂತ ಶ್ರೇಷ್ಠ ಪುರುಷರು ಭಾಗವಹಿಸಿದ್ದರು. ಅದರಲ್ಲಿ ಹನುಮಂತ ಅತ್ಯಂತ ತೃಪ್ತ ಹಾಗೂ ಏನನ್ನೂ ಬಯಸದ ಶ್ರೇಷ್ಠ ಪುರುಷ. ರಾಮ, ಸೀತಾ ಲಕ್ಷ್ಮಣರು ಕೇಳಿದ್ದನ್ನೆಲ್ಲಾ ಹನುಮಂತ ಪೂರೈಸಿದ್ದ ಅರ್ಥಾತ್ ರಾಮ, ಸೀತೆ, ಲಕ್ಷ್ಮಣರ ಇಚ್ಛೆ, ಆದೇಶಗಳನ್ನೆಲ್ಲಾ ಹನುಮಂತ ಪೂರೈಸಿದ್ದ. ಕೆಲವೊಮ್ಮೆ ರಾಮರ ಅಂತರ್ಗತವನ್ನು ಅರ್ಥ ಮಾಡಿಕೊಂಡು ರಾಮರು ಹೇಳುವ ಮುನ್ನವೇ ಅದನ್ನು ಪೂರೈಸಿರುತ್ತಿದ್ದ. ಹನುಮಂತ ತನ್ನಲ್ಲಿ ಏನನ್ನೂ ಕೇಳುವುದಿಲ್ಲ ಎಂದು ರಾಮರಿಗೂ ತಿಳಿದಿತ್ತು. ದೈವಕ್ಕೆ ಸಹಾಯ ಮಾಡುವುದೇ ದೊಡ್ಡ ಬಹುಮಾನ. ಆದರೆ ಹನುಮಂತ ಜಿಜ್ಞಾಸು, ಜ್ಞಾನ ದಾಹಿ, ಪರಮ ಸತ್ಯವನ್ನು ತಿಳಿಯಲು ಬಯಸುತ್ತಿದ್ದಾನೆ ಎಂಬುದು ರಾಮರಿಗೂ ತಿಳಿದಿತ್ತು. ಪಟ್ಟಾಭಿಷೇಕ ಕಾರ್ಯಕ್ರಮದ ನಂತರ ರಾಮರು ತಮಗೆ ನೆರವಾದವರಿಗೆ ಉಡುಗೊರೆಗಳನ್ನು ಕೊಟ್ಟು ಕಳಿಸುತ್ತಿದ್ದಾರೆ. ಆದರೆ ಹನುಮಂತ ಮಾತ್ರ ರಾಮರ ಮುಂದಿನ ಆದೇಶಕ್ಕಾಗಿ ಹನುಮಂತ ಕಾಯುತ್ತಿದ್ದಾನೆ. ಹನುಮಂತನಿಗೆ ಅತ್ಯಂತ ಶ್ರೇಷ್ಠ ಉಡುಗೊರೆ ನೀಡಬೇಕಿದೆ. ಬ್ರಹ್ಮಜ್ಞಾನದ ಉಡುಗೊರೆ, ಜನ್ಮ-ಪುನರ್ಜನ್ಮಗಳ ಬಂಧನದಿಂದ ಮುಕ್ತವಾಗುವ ಉಡುಗೊರೆ. ಭವ ಬಂಧನಗಳನ್ನು ಕಳಚುವ ಉಡುಗೊರೆ. ಇದನ್ನೇ ಹನುಮಂತನೂ ಬೇಡುತ್ತಿದ್ದದ್ದು.

ರಾಮರು ಸೀತೆಯ ಕಡೆಗೆ ತಿರುಗಿ ಹೇಳಿದರು: ಸೀತಾ, ನೀನು ಹನುಮಂತನಿಗೆ ಪರಮ ಸತ್ಯದ ಉಪದೇಶ ಮಾಡಬೆಕೇದೆ. ಆತ ಕಲ್ಮಶವೇ ಇಲ್ಲದ ವ್ಯಕ್ತಿ, ಆತ ಎಲ್ಲಾ ರೀತಿಗಳಿಂದಲೂ ಎಂದಿಗೂ ನಮಗಾಗಿಯೇ ತನ್ನನ್ನು ಮೀಸಲಿರಿಸಿದ್ದಾನೆ. ಬ್ರಹ್ಮಜ್ಞಾನ ಪಡೆಯಲು ಯೋಗ್ಯನಾದ ವ್ಯಕ್ತಿಯಾಗಿದ್ದಾನೆ. ಸೀತೆ ಮಹಾಮಾಯೆ- ಶಕ್ತಿ ಸ್ವರೂಪಿಣಿ ದೇವಿ. ಮಹಾಮಾಯೆ ಪರಮ ಸತ್ಯವನ್ನು ತಿಳಿಯುವ ಮಾರ್ಗಕ್ಕೆ ಯೋಗಿಗಳಿಗೆ ಅಡ್ಡಿಪಡಿಸುವವಳೂ ಆಗಿದ್ದಾಳೆ, ವಿಶ್ವವ್ಯಾಪಿ ಅರಿವಿನ ಬಗ್ಗೆ ಗೊಂದಲ ಮೂಡಿಸುವವಳೂ ಆಗಿದ್ದಾಳೆ. ಆದರೆ ಈಗ ರಾಮರ ಪದತಲದಲ್ಲಿ ಕುಳಿತಿದ್ದ ಹನುಮಂತ ಆಧ್ಯಾತ್ಮಿಕ ಜಿಜ್ಞಾಸು, ಶರಣಾಗತನಾಗಿ ಬಂದಿದ್ದಾನೆ, ಶುದ್ಧ ಬ್ರಹ್ಮ ಪರಾತ್ಪರ ರಾಮರಿಗೆ ಅರ್ಪಿಸಿಕೊಂಡು ಶರಣಾಗಿದ್ದಾನೆ. ಹನುಮಂತನ ಶರಣಾಗತಿಯಿಂದ ಸಂತುಷ್ಟಳಾದ ಮಹಾಮಾಯೆ ಸೀತೆ ಪರಮ ಸತ್ಯವನ್ನು ತಿಳಿಸಲು ರಾಮರು ಹನುಮಂತನನ್ನು ಆರಿಸಿಕೊಂಡಿವುದಕ್ಕೆ ಸಂತೋಷಪಟ್ಟಳು. ಮುಂದಿನ ಲೇಖನಗಳಲ್ಲಿ ರಾಮರು ದೇವರ ನಡುವೆ ವ್ಯತ್ಯಾಸವಿಲ್ಲ ಎಂಬುದನ್ನು ತಿಳಿಯಲಿದ್ದೇವೆ.

Facebook ಕಾಮೆಂಟ್ಸ್

ಶ್ರೀರಾಮದಾಸ ಮನೀಶ್: ಶ್ರೀರಾಮದಾಸರೆಂದೇ ಪ್ರಸಿದ್ಧರಾಗಿರುವ ಡಾ.ಮನೀಷ್ ಮೋಕ್ಷಗುಂಡಂ, ಪಿಹೆಚ್ ಡಿ, ಶ್ರೀರಾಮನ ದಾಸತ್ವವೇ ತಮ್ಮ ಗುರುತು ಎಂದು ಸಾರಿದ್ದು, ಧ್ಯಾನ ಗುರು, ಆಧ್ಯಾತ್ಮಿಕ ಬೋಧಕ, ಪತ್ರಕರ್ತ, ವಿಶ್ಲೇಷಕ, ಜೀವನ ಮತ್ತು ನಾಯಕತ್ವದ ಕೋಚ್ , ಚಿತ್ರ ನಿರ್ಮಾಪಕ, ನಿರ್ದೇಶಕ, ಮಾಧ್ಯಮ ಲಹೆಗಾರ, ತಂದೆ,ಪತಿ, ಶಿಕ್ಷಕ ಮುಂತಾದವು ತಾವು ನಿರ್ವಹಿಸುವ ಪಾತ್ರಗಳಷ್ಟೇ ಎಂದು ನಂಬಿದ್ದಾರೆ.