ಕಳೆದ ವಾರದ ಸುದ್ದಿ ಚಾವಡಿಯಲ್ಲಿ ಉತ್ತರ ಪ್ರದೇಶದ ಚುನಾವಣೆಯ ಭರಾಟೆ, ತಮಿಳ್ನಾಡಿನ ರಾಜಕೀಯದ ಹೈಡ್ರಾಮಾ ಮತ್ತು ಜಗತ್ತನ್ನೇ ನಿಬ್ಬೆರಗಾಗಿಸಿದ ನಮ್ಮ ಹೆಮ್ಮೆಯ ಇಸ್ರೋದ ಸಾಧನೆಯ ಜೊತೆಜೊತೆಗೆ ಕಾಶ್ಮೀರ ಕಣಿವೆಯಲ್ಲಿ ನಮ್ಮ ಸೈನಿಕರ ವಿರುದ್ಧ ಸದಾ ಕಲ್ಲು ತೂರಾಟ ನಡೆಸಿ ಭಯೋತ್ಪಾದಕರಿಗೆ ಸಹಾಯ ಮಾಡುವ ದೇಶದ್ರೋಹಿ ಕುನ್ನಿಗಳಿಗೆ ಸೇನಾ ಮುಖ್ಯಸ್ಥ ಮೇಜರ್ ಜನರಲ್ ಬಿಪಿನ್ ರಾವತ್ ಕೊಟ್ಟಿರುವ ಜಬರ್ದಸ್ತ್ ಎಚ್ಚರಿಕೆಯ ಸುದ್ದಿಯೂ ಗಿರಕಿ ಹೊಡೆದಿತ್ತು. ಆದರೆ ಮೊದಲ ಎರಡು ಸುದ್ದಿಗೆ ಸಿಕ್ಕ ಪ್ರಾಧಾನ್ಯತೆ ಮೂರನೇ ಮತ್ತು ನಾಲ್ಕನೇ ಸುದ್ದಿಗೆ ಸಿಗಲಿಲ್ಲ ಅನ್ನುವುದು ನನ್ನ ಅನಿಸಿಕೆ. ಒಬ್ಬ ಮೇಜರ್ ಸೇರಿದಂತೆ ನಾಲ್ವರು ಜವಾನರು ಹುತಾತ್ಮರಾದ ಬಳಿಕ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಕಾಶ್ಮೀರದ ಸ್ಥಳೀಯ ಜನರಲ್ಲಿ ಯಾರ್ಯಾರು ಸೈನ್ಯದ ಮೇಲೆ ಆಕ್ರಮಣ ಮಾಡುತ್ತಿದ್ದರೋ, ಅವರು ಇನ್ನೂ ಇದೇ ತರ ನಮ್ಮ ಸೈನಿಕರ ಮೇಲೆ ಕಲ್ಲೆಸೆಯುತ್ತಾ ಪಾಕಿಸ್ತಾನ ಮತ್ತು ಐಸಿಸ್ ಧ್ವಜಗಳನ್ನು ಪ್ರದರ್ಶಿಸುತ್ತಾ ದೇಶವಿರೋಧಿ ಚಟುವಟಿಕೆಗಳನ್ನು ಮುಂದುವರೆಸಿದರೆ ಅವರನ್ನು ಭಯೋತ್ಪಾದಕರು ಮತ್ತು ದೇಶದ್ರೋಹಿಗಳೆಂದು ಪರಿಗಣಿಸಲಾಗುವುದು ಮತ್ತು ನಿರ್ದಾಕ್ಷಿಣ್ಯವಾಗಿ ಹೊಡೆದುರುಳಿಸಲಾಗುವುದೆಂದು ಖಡಕ್ ಎಚ್ಚರಿಕೆ ಕೊಟ್ಟಿದ್ದರು.
ಜನರಲ್ ರಾವತ್ ಈ ಹೇಳಿಕೆಗೆ ವಿರೋಧ ಪಕ್ಷಗಳಾದ ಕಾಂಗ್ರೆಸ್, ನಾಶನಲ್ ಕಾನ್ಫರೆನ್ಸ್ ಮತ್ತು ಪ್ರತ್ಯೇಕತಾವಾದಿ ನಾಯಕರುಗಳು ಭಾರೀ ವಿರೋಧ ಸೂಚಿಸುತ್ತಾರೆ! ಸೇನಾ ಮುಖ್ಯಸ್ಥರು ಇಡೀ ಕಾಶ್ಮೀರದ ವಿರುದ್ಧ ಯುದ್ದವನ್ನೇ ಹೇರಿ ಬಿಟ್ಟರು ಅನ್ನುವ ಮಟ್ಟಿಗೆ ಪ್ರಕರಣವನ್ನು ಬಿಂಬಿಸಲಾರಂಭಿಸಿದರು. ಅಸಲಿಗೆ ಈ ಕಲ್ಲು ತೂರಾಟ ಮತ್ತು ಸೈನ್ಯದ ಮೇಲಿನ ಹಗೆತನ ಇಂದು ನಿನ್ನೆಯದಲ್ಲ. ಭಯೋತ್ಪಾದಕ ಬುರ್ಹಾನ್ ವಾನಿ ಎನ್ಕೌಂಟರ್ನಲ್ಲಿ ಹತ್ಯೆಯಾದ ಬಳಿಕ ಸೇನೆಯ ಜೊತೆ ಸ್ಥಳೀಯ ದೇಶದ್ರೋಹಿಗಳ ಸಂಘರ್ಷ ತೀವ್ರ ಸ್ವರೂಪ ಪಡೆದಿತ್ತಾದರೂ ನೋಟು ನಿಷೇಧದ ಬಳಿಕ ಒಂದು ಹಂತಕ್ಕೆ ನಿಂತಿತ್ತು. ಆದರೀಗ ಒಮ್ಮಿಂದೊಮ್ಮೆಲೆ ಪುನಾರಂಭವಾಗಿದೆ! ಮೊದಮೊದಲು ಕಾಡಿನಲ್ಲಿ ಅವಿತುಕೊಂಡು ನಮ್ಮ ಸೈನಿಕರ ಮೇಲೆ ಕುಯ್ಂಗುಡುವ ನಾಯಿಗಳ ರೀತಿ ದಾಳಿ ಮಾಡಿ ನಮ್ಮ ಸೈನಿಕರ ಒಂದು ಕೂದಲು ಕೊಂಕಿಸಲೂ ಬಹಳ ಕಷ್ಟ ಪಡುತ್ತಿದ್ದ ಭಯೋತ್ಪಾದಕರು ಇತ್ತೀಚಿಗೆ ರಾಜಾರೋಷವಾಗಿ ಕಾಶ್ಮೀರ ಕಣಿವೆಯ ಹಳ್ಳಿಗಳಿಗೆ ನುಗ್ಗಿ ನಮ್ಮ ಭದ್ರತಾ ಪಡೆಗಳ ಮೇಲೆ ಎರಗುತ್ತಿದ್ದಾರೆ. ಹಳ್ಳಿಯ ದೇಶದ್ರೋಹಿ ಯುವಕರ ಬೆಂಬಲದಿಂದ ನಮ್ಮ ಸೈನಿಕರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾದ ಘಟನೆಗಳೂ ವರದಿಯಾಗುತ್ತಿವೆ. ಇತ್ತೀಚಿಗೆ ಬಾಂದೀಪುರ ಮತ್ತು ಹಂದವಾಡಾ, ಕುಲಗಾಮ್ ಪ್ರದೇಶದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ದೇಶದ್ರೋಹಿ ಯುವಕರು ಸೈನಿಕರ ಮೇಲೆ ಕಲ್ಲು ತೂರಾಟ ನಡೆಸಿ ಸೈನಿಕರು ವೀರ ಮರಣ ಹೊಂದುವಂತೆ ಮಾಡಿದರಲ್ಲದೇ ಭಯೋತ್ಪಾದಕರು ಪರಾರಿಯಾಗಲು ಕಾರಣರಾಗುತ್ತಾರೆ.
ಸೇನಾ ಮುಖ್ಯಸ್ಥರ ಹೇಳಿಕೆ ಕುರಿತಂತೆ ನಾಶನಲ್ ಕಾನ್ಫರೆನ್ಸ್ ಪಕ್ಷದ ಜುನೈದ್ ಮಟ್ಟು ಸೇನಾ ಮುಖ್ಯಸ್ಥರಿಗೆ ಕಾಶ್ಮೀರದ ಯುವಕರ ಮೇಲೆ ಕರುಣೆ ಮತ್ತು ಹೃದಯ ವೈಶಾಲ್ಯತೆಯಿರಬೇಕು ಅನ್ನುವ ಅರ್ಥ ಬರುವ ಹೇಳಿಕೆ ನೀಡುತ್ತಾರೆ. ಸಾಲದೆಂಬಂತೆ ಸೇನಾ ಮುಖ್ಯಸ್ಥರು ಈ ರೀತಿ ಹೆದರಿಸಿದರೆ ಕೇಳುವವರಲ್ಲ ಕಾಶ್ಮೀರದ ದೇಶದ್ರೋಹಿ ಯುವಕರು ಎಂದೂ ಹೇಳಿಕೆ ನೀಡುತ್ತಾರೆ! ಸೈನ್ಯದ ಮುಖ್ಯಸ್ಥರಿಗೆ ಕರುಣೆಯಿರಬೇಕು ಅನ್ನುವ ಜುನೈದ್ ಮಟ್ಟು ಪ್ರತ್ಯೇಕತಾವಾದಿಗಳಿಗೆ ಮತ್ತು ಭಯೋತ್ಪಾದಕರಿಗೆ ಯಾವುದೇ ಸಲಹೆ ನೀಡುವುದಿಲ್ಲ. ಸಾವಿರಾರು ಅಮಾಯಕ ಜನರ ಪ್ರಾಣಹಾನಿಗೆ ಕಾರಣರಾಗದೇ ಕರುಣೆ ತೋರಿಸಬೇಕು ಅನ್ನೋ ಸಲಹೆಯನ್ನೂ ಕೊಡುವುದಿಲ್ಲ. ಹಾಗೆಂದು ವೇಳೆ ಸಲಹೆ ನೀಡಿದ್ದೇ ಆದರೆ ನಾಳೆ ಜುನೈದ್ ಮಟ್ಟು ಅಂಡಿಗೂ ಬಾಂಬಿಡಲು ಹೇಸಲ್ಲ ಪ್ರತ್ಯೇಕತಾವಾದಿಗಳು! ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಜುನೈದ್ ಮಟ್ಟು ಪಾಕಿಸ್ತಾನದ ಏಜೆಂಟ್ ಎಂದೇ ಕರೆಯಲ್ಪಡುತ್ತಾರೆ! ನ್ಯಾಶನಲ್ ಕಾನ್ಫರೆನ್ಸ್ ಪಕ್ಷದ ಇನ್ನೊಬ್ಬ ಮುಖಂಡ ತನ್ವೀರ್ ಸಾಧಿಕ್ ಸೇನಾಧಿಕಾರಿಯವರ ಈ ಹೇಳಿಕೆಯಿಂದ ಕಾಶ್ಮೀರದಲ್ಲಿ ರಕ್ತಪಾತವಾಗಬಹುದು ಅನ್ನುವ ಹೇಳಿಕೆ ನೀಡುತ್ತಾರೆ. ಈ ಇಬ್ಬರೂ ನಾಯಕರು ಭಾರತದಲ್ಲಿದ್ದರೂ ಜಪ ಮಾಡಿತ್ತಿರುವುದು ಮಾತ್ರ ಪಾಕಿಸ್ತಾನದ್ದು.
ಕಾಶ್ಮೀರದವರೇ ಆದ ಕಾಂಗ್ರೆಸ್ ನಾಯಕ ಗುಲಾಂ ನಬೀ ಆಜಾದ್ ಪಾಕಿಸ್ತಾನದಿಂದ ಬರೋ ಆತಂಕವಾದಿಗಳನ್ನು ಹಿಡಿಯರಿ, ಕಾಶ್ಮೀರದ ಯುವಕರನ್ನಲ್ಲ ಅನ್ನುವ ಹೇಳಿಕೆ ನೀಡುತ್ತಾರೆ. ಆದರೆ ಪ್ರತೀ ಸಲವೂ ಪಾಕಿಸ್ತಾನದ ಆತಂಕವಾದಿಗಳಿಗೆ ಬೆನ್ನೆಲುಬಾಗಿ ನಿಲ್ಲುವವರು ಕಾಶ್ಮೀರದ ದೇಶದ್ರೋಹಿ ಯುವಕರು ಅನ್ನೋ ಸತ್ಯ ಗೊತ್ತಿಲ್ಲದವರೇನಲ್ಲ ಗುಲಾಂ ನಬಿ. ರಾವತ್ ಅವರ ಹೇಳಿಕೆಯನ್ನೇ ತೆಗೆದುಕೊಳ್ಳುವುದಾದರೆ ಅವರು ಎಚ್ಚರಿಸಿದ್ದು ಕಾಶ್ಮೀರದ ದೇಶದ್ರೋಹಿ ಯುವಕರನ್ನು. ಯಾರು ಸೈನ್ಯದ ಕಾರ್ಯಕ್ಕೆ ಅಡ್ಡಿ ಪಡಿಸುತ್ತಾರೋ ಅವರನ್ನು ಅಟ್ಟಾಸಿಡಿಕೊಂಡು ಹೊಡೆದು ಹಾಲಿ ಬಿಡುತ್ತೇವೆಂದು. ಹುರಿಯತ್ ಮುಖಂಡ ಸಯ್ಯದ್ ಆಲಿ ಗಿಲಾನಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸೇನಾ ಮುಖ್ಯಸ್ಥ ಸರ್ವಾಧಿಕಾರಯ ತರ ವರ್ತಿಸುತ್ತಿದ್ದಾರೆ ಮತ್ತು ಪ್ರಜೆಗಳ ಮಾರಣಹೋಮ ಮಾಡಲು ಸೇನಾ ಮುಖ್ಯಸ್ಥರ ಎಚ್ಚರಿಕೆ ಇದು ಅನ್ನೋ ಆಪಾದನೆ ಮಾಡುತ್ತಾರೆ. ಕಾಶ್ಮೀರದ ಕಿಡಿಗೇಡಿ ದೇಶದ್ರೋಹಿ ಯುವಕರನ್ನು ಸಮಾಜದ ಮುಖ್ಯಪರದೆಗೆ ತರುವ ಇರಾದೆ ಬಿಪಿನ್ ರಾವತ್ ಅವರದ್ದಾದರೂ ನಮ್ಮ ವಿರೋಧ ಪಕ್ಷಗಳು ಅದಕ್ಕೆ ರಾಜಕೀಯ ಲೇಪವನ್ನು ಹಚ್ಚಿ ಎಲ್ಲಿ ತಮ್ಮ ವೋಟ್ ಬ್ಯಾಂಕ್ ಕುಸಿದು ಬಿಡುವುದೋ ಅನ್ನೋ ಹತಾಶೆಯಲ್ಲಿ ದೇಶದ ಸೇನಾ ಮುಖ್ಯಸ್ಥನ ವಿರುದ್ಧವೇ ಮಾತಾಡುತ್ತಾರೆ ಅಂದರೆ ಯೋಚಿಸಿ ನಮ್ಮ ದೇಶದ ವಿರೋಧ ಪಕ್ಷಗಳ ಮನಸ್ಥಿತಿಯ ಬಗ್ಗೆ! ಸೇನಾ ಮುಖ್ಯಸ್ಥರ ಈ ಹೇಳಿಕೆಗೆ ಸಹಜವಾಗಿಯೇ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಧ್ವನಿಗೂಡಿಸಿದ್ದಾರೆ. ಭಯೋತ್ಪಾದನೆ ವಿರುದ್ಧ ಯಾವುದೇ ನಿರ್ಧಾರ ಕೈಗೊಳ್ಳಲು ಸೇನೆ ಸ್ವತಂತ್ರವಾಗಿದೆ ಎಂದು ಒಂದೇ ಮಾತಿನಲ್ಲಿ ವಿರೋಧಿಗಳ ಬಾಯಿ ಮುಚ್ಚಿಸಿದ್ದಾರೆ. ಇನ್ನೊಬ್ಬ ಕೇಂದ್ರ ಸಚಿವ ಕಿರಣ್ ರಿಜಿಜ್ ಕೂಡಾ ಬೆಂಬಲ ಸೂಚಿಸಿದ್ದಾರೆ.
ಜಮ್ಮು ಕಾಶ್ಮೀರದ ಯಾವುದೇ ರಾಜಕೀಯ ಪಕ್ಷಗಳಿಗೆ ಕಾಶ್ಮೀರ ಕಣಿವೆಯ ಸಮಸ್ಯೆಯನ್ನು ಪರಿಹರಿಸಲು ಮನಸ್ಸಿಲ್ಲದಂತೆ ಕಾಣುತ್ತದೆ. ಯಾಸೀನ್ ಮಲಿಕ್ ಮತ್ತು ಗಿಲಾನಿಯಂತಹ ದೇಶದ್ರೋಹಿಗಳ ಬೆಂಬಲ ಈ ಪ್ರತ್ಯೇಕತಾವಾದಿಗಳಿದೆ ಅಂದರೂ ಅವರನ್ನು ಹೊಡೆದುರುಳಿಸಲು ಮೀನಾಮೇಷ ಎಣಿಸುತ್ತಿರುವುದು ಸೋಜಿಗವೇ ಸರಿ. ಈ ಇಬ್ಬರೂ ಕ್ರಿಮಿಗಳು ನಾವು ನೀವು ಕಟ್ಟಿರೋ ಟ್ಯಾಕ್ಸ್ ಹಣದಿಂದ ಸರ್ಕಾರದ ಅನೇಕ ಸವಲತ್ತುಗಳನ್ನು ಅನುಭವಿಸುತ್ತಾ ತಾಯ್ನಾಡಿನ ವಿರುದ್ಧವೇ ಸಂಚು ಹೂಡುತ್ತಾರೆ! ಪೋಲೀಸರಿಗೇ ಇಲ್ಲದ ಬುಲೆಟ್ ಪ್ರೂಫ್ ವಾಹನ ಈ ದುರುಳರಿಗಿದೆ! ಕಾಶ್ಮೀರಿ ಯುವಕರ ಬ್ರೈನ್ ವಾಶ್ ಮಾಡಿ ತಮ್ಮ ದಾಳವನ್ನಾಗಿ ಉಪಯೋಗಿಸುತ್ತಿದ್ದಾರೆ. ಇತ್ತೀಚಿನ ದಾಳಿಯಲ್ಲಿ ಮೇಜರ್ ಸತೀಶ್ ದಹಿಯಾ ಗಾಯಗೊಂಡು ಬಿದ್ದಾಗ ಅವರನ್ನು ತೆಗೆದುಕೊಂಡು ಹೋಗುತ್ತಿದ್ದ ವಾಹನಕ್ಕೆ ಕಲ್ಲೆಸೆಲಾಯಿತು. ಇವತ್ತು ಕಲ್ಲು ಎಸೆಯುವವರು ನಾಳೆ ಪೆಟ್ರೋಲ್ ಬಾಂಬ್ ಎಸೆದರೂ ಆಶ್ಚರ್ಯವಿಲ್ಲ.
ಜಮ್ಮು ಕಾಶ್ಮೀರದಲ್ಲಿ ಭೀಕರ ಪ್ರವಾಹ ಬಂದಾಗ ಅವರ ರಕ್ಷಣೆಗೆ ತಮ್ಮ ಪ್ರಾಣದ ಹಂಗು ತೊರೆದು ಧಾವಿಸಿದ್ದು ಇದೇ ಸೈನ್ಯದ ಮಂದಿಯಲ್ಲವೇ? ಆದರೆ ಈಗ ಅದೇ ಜನ ಸೈನ್ಯದ ವಿರುದ್ಧವೇ ಘೋಷಣೆ ಕೂಗುತ್ತಿದ್ದಾರೆ! ಘೋಷಣೆಯೊಂದೇ ಆಗಿದ್ದರೆ ವಿಷಯ ಇಷ್ಟು ದೊಡ್ಡದಾಗುತ್ತಿರಲಿಲ್ಲ ಬಿಡಿ. ಸೈನಿಕರೆಂದರೆ ದ್ವೇಷದ ಭಾವನೆಯಿಂದ ನೋಡುತ್ತಿದ್ದಾರೆ ಜಮ್ಮುವಿನ ಕಿಡಿಗೇಡಿ ದೇಶದ್ರೋಹಿಗಳು. ಅವರ ಮೇಲೆ ಕಲ್ಲು ಕೂಡಾ ಎಸೆಯುತ್ತಿದ್ದಾರೆ ಮತ್ತು ಪರೋಕ್ಷವಾಗಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದಾರೆ. ಬುರ್ಹಾನ್ ವಾನಿ, ಅಫ್ಜಲ್ ಗುರು ಮುಂತಾದವರನ್ನು ಐಕಾನ್ ಲೀಡರ್ಸಗಳು ಅನ್ನೋ ಜನಕ್ಕೆಲ್ಲಿ ನಮ್ಮ ಸೈನ್ಯದ ಬಗ್ಗೆ ಹೆಮ್ಮೆ ಇರುತ್ತೆ? ನಮ್ಮ ಸೈನಿಕರು ವೀರಮರಣ ಹೊಂದಿದರು ಅನ್ನೋ ಸುದ್ದಿ ನಮಗೆ ಗೊತ್ತಾದಾಗ ನಮ್ಮ ರಕ್ತವೇ ಕೊತ ಕೊತನೆ ಕುದಿಯುತ್ತೆ. ಸ್ಥಳೀಯರ ಈ ದುಂಡಾವರ್ತನೆಯಿಂದ ನಾಲ್ಕು ಜನ ಸೈನಿಕರು ಹುತಾತ್ಮರಾದಾಗ ಸೈನ್ಯದ ಮುಖ್ಯಸ್ಥನಾಗಿ ಮೇಜರ್ ಜನರಲ್ ರಾವತ್ ರಕ್ತ ಕುದಿಯದೇ ಇರುತ್ತಾ?? ಸ್ಥಳೀಯರೇ ಈ ಘಟನೆಯಲ್ಲಿ ಭಾಗಿಗಳು ಅಂತ ಗೊತ್ತಿದ್ದರೂ ಕೇವಲ ಖಡಕ್ ಎಚ್ಚರಿಕೆ ಮಾತ್ರ ಕೊಟ್ಟಿದ್ದಾರೆ. ಅವರು ಮನಸ್ಸು ಮಾಡಿದ್ದರೆ ಸ್ಥಳೀಯ ದೇಶದ್ರೋಹಿಗಳನ್ನು ಹೊಡೆದು ಹಾಕಬಹುದಿತ್ತಲ್ಲವೇ? ಆದರೆ ಆ ರೀತಿ ಮಾಡದೇ ಪರಿವರ್ತನೆ ಆಗುವುದಿದ್ದರೆ ಆಗಲಿ ಅಂತ ಎಚ್ಚರಿಕೆ ಕೊಟ್ಟಿದ್ದನ್ನೂ ನಮ್ಮ ವಿರೋಧ ಪಕ್ಷಗಳು ವಿರೋಧಿಸುತ್ತವೆ ಅಂದರೆ ಇವರಿಗಿನ್ನೇನು ಹೇಳಬೇಕು? ಯಾರೇನೇ ವಿರೋಧಿಸಲಿ ಮೊದಲು ಭಯೋತ್ಪಾದಕರಿಗೆ ಬೆಂಬಲ ಸೂಚಿಸುವವರ ಹುಟ್ಟಡಗಿಸಬೇಕು. ಮಾತೃಭೂಮಿಗೆ ವಂಚಿಸುವವರು ಯಾರಾದರೇನು ಅವರು ದೇಶದ್ರೋಹಿಗಳೇ. ಅವರಿಗೆ ತಕ್ಕ ಶಾಸ್ತಿಯಾಗಬೇಕು. ಹಾಗಾದಲ್ಲಿ ಮಾತ್ರ ಕಾಶ್ಮೀರ ಮತ್ತು ದೇಶದ ಸಾಮಾನ್ಯ ನೆಮ್ಮದಿಯಿಂದ ಇರಬಲ್ಲ!
Facebook ಕಾಮೆಂಟ್ಸ್