X

ದೃಢ ನಿರ್ಧಾರಕ್ಕೆ ಜನರ ಸಹಕಾರವು ಅತ್ಯಗತ್ಯ

ಕಾಲ ಬದಲಾದ ಹಾಗೆ ಜನರು ಬದಲಾಗುತ್ತಾರೆ ಎಂದು ಎಲ್ಲರಿಗೂ ತಿಳಿದಿರುವಂತಹ ಸತ್ಯ. ಇದು ವಾಸ್ತವವೂ ಹೌದು. ನಮ್ಮ ಹಿಂದಿನ ದಿನಗಳನ್ನು ಯಾರಿಗೂ ಹೇಳಬೇಕಿಲ್ಲ ಅಂತ ಅನಿಸುತ್ತಿದೆ, ಯುದ್ಧ ಘೋಷಣೆಯಾಗಿದೆ, ರಣಕಹಳೆ ಮೊಳಗಿಯಾಗಿದೆ. ಒಂದು ದೊಡ್ಡ ಬದಲಾವಣೆ ಭಾರತ ಸಜ್ಜಾಗಿದೆ, 125 ಕೋಟಿ ಜನರ ದೇಶದಲ್ಲಿ ಮಹತ್ತರವಾದ ಬದಲಾವಣೆ ಬರಬೇಕಾದರೆ ಒಂದಿಷ್ಟು ತ್ಯಾಗ ಅನಿವಾರ್ಯವಿದೆ. ಸ್ವಾತಂತ್ರ್ಯ ಬಂದಾಗಿನಿಂದಲು ಭಾರತ ಹಲವಾರು ಶಾಶ್ವತ ಸಮಸ್ಯೆಗಳನ್ನು ಎದುರಿಸುತ್ತ ಬರುತ್ತಿದೆ. ಇಂತಹ ಸಮಸ್ಯೆಗಳನ್ನು ಹೊಗಲಾಡಿಸಲು ಕೆಲವೇ ಕೇಲವು ನಾಯಕರನ್ನು ಬಿಟ್ಟರೆ ಉಳಿದವರು ದೇಶದ ಒಳಿತಿಗಾಗಲಿ, ಜನರ ಕಷ್ಟಗಳಿಗಾಗಲಿ ಶ್ರಮಿಸಿದ್ದು ಅತ್ಯಲ್ಪ. ಇದು ನಮ್ಮ ದೇಶದ ಪರಿಸ್ಥತಿ. ಇವರೆಲ್ಲ ಏನು ಮಾಡಿದರು ಎಂದು ನಮಗೂ ತಿಳಿದಿಲ್ಲ! ದೇಶಕ್ಕೂ ತಿಳಿದಿಲ್ಲ!. ಆದರೆ ಸರ್ಕಾರದ ಎಲ್ಲಾ ಸವಲತ್ತುಗಳನ್ನು ಬಳಸಿಕೊಂಡು ನೀರು ಕುಡಿದು, ತಮ್ಮ ಬೊಕ್ಕಸವನ್ನು ತುಂಬಿಸಿಕೊಂಡರೆ ವಿನಃ ದೇಶಕ್ಕಾಗಿ ಕಿಂಚಿತ್ತು ಚಿಂತಿಸಲೇ ಇಲ್ಲಾ. ಯಾಕೆ ಸ್ವಾಮಿ ಯೋಚಿಸಬೇಕು ಹೇಳಿ, ದುಡ್ಡಿಗೆ ಮರುಳಾಗುವ ಜನರಿದ್ದಾರೆ. ಯಾರೂ ಏನು ಮಾಡಿದರೂ ನಮ್ಮನ್ನು ಅಧಿಕಾರದಿಂದ ಇಳಿಸಲು ಸಾಧ್ಯವಿಲ್ಲವೆಂದು ಆಡಳಿತ ನಡೆಸಿದರೆ ದೇಶ ಅಭಿವೃದ್ಧಿ ಹೊಂದಲು ಹೇಗೆ ತಾನೆ ಸಾಧ್ಯ?.

2014 ಚುನಾವಣೆಯಲ್ಲಿ ಹಲವಾರು ಭರವಸೆಗಳನ್ನು ನೀಡಿ ‘ಅಚ್ಚೆ ದಿನ್ ಅನೆವಾಲೇ ಹೈ’ ಎಂಬ ಘೋಷಣೆಯೊಂದಿಗೆ ಅಧಿಕಾರಕ್ಕೆ ಬಂದ ಮೋದಿ ಏನು ಮಾಡಿಯಾನು ಎಂದು ಅಂದುಕೊಂಡವರು ಹಲವಾರು ಮಂದಿ. ಅದರೆ ಯಾವುದಕ್ಕೂ ತಲೆ ಕಡೆಸಿಕೊಳ್ಳದ ಮೋದಿ ಮಾತ್ರ ತಮ್ಮ ಕೆಲಸವನ್ನು ಮಾಡಿ ಮುಗಿಸುತ್ತಿದ್ದಾರೆ, ಮುಂದೆಯು ಮಾಡುತ್ತಾರೆ ಎಂದು ನನಗನಿಸುತ್ತದೆ, ಹಾಗಾಗಿ ಇಂದು ಭಾರತ ದೇಶವನ್ನು ಎಲ್ಲರೂ ಗುರುತಿಸುವಂತಾಗಿದೆ, ಹಿಂದಿನವರು  ಸಾಲು ಸಾಲು ಹಗರಣಗಳ ಮೂಲಕ ದೇಶದ ಮಾನ ಮಾರ್ಯದೆಯನ್ನು ಹರಾಜು ಮಾಡಿದರು ಬಿಟ್ಟರೆ, ಅಭಿವೃದ್ದಿ ಮಾಡಲಿಲ್ಲ್ಲ. ಕೆಲವು ವರ್ಷಗಳ ಬಳಿಕ ಭಾರತ ಬದಲಾಗುತ್ತಿದೆ ಎನ್ನುವುದು ಒಂದು ಹೆಮ್ಮೆಯ ಸಂಗತಿ. ಒಳ್ಳೆಯ ಕಾರ್ಯವನ್ನು ಯಾರು ಮಾಡುತ್ತಾರೋ ಅವರನ್ನು ನಾವು ಗೌರವಿಸಬೇಕು. ಆ ಪಕ್ಷ ಈ ಪಕ್ಷವೆಂದು ಯಾಕೆ ಯೋಚನೆ ಮಾಡಬೇಕು? ನಮಗೆ ಬೇಕಿರುವುದು ಅಭಿವೃದ್ಧಿ. ಸ್ವಚ್ಚ  ಭಾರತ ಮಾಡುವ ಉದ್ದೇಶದಿಂದ ಯಾರು ಪೊರಕೆ ಹಿಡಿದರೋ ಅವರೆ ಇಂದು ಭ್ರಷ್ಟಾಚಾರ ಎನ್ನುವದನ್ನು ಹೊಗಲಾಡಿಸಲು ಮತ್ತೊಂದು ಸ್ವಚ್ಚತೆಯ ಕೆಲಸಕ್ಕೆ ಕೈ ಹಾಕಿರುವುದು ನಿಜಕ್ಕೂ ಖುಷಿಯ ವಿಷಯವೆ. ದೇಶದ ಹಣವನ್ನು ಕೊಳ್ಳೆ ಹೊಡೆದು ಯಾವುದೇ ತೆರಿಗೆಯನ್ನು ಕಟ್ಟದೆ ಸಾವಿರಾರು ಕೋಟಿ ಸಂಗ್ರಹಿಕೊಂಡು ಹೆಗ್ಗಣಗಳ ಹಾಗೆ ತಮ್ಮದೇ ಸಾಮ್ರಾಜ್ಯವೆಂದು ಭಾವಿಸಿದ್ದ ದೊಡ್ಡ ದೊಡ್ಡ ಜನರು ಇಕ್ಕಟಿನ ಸ್ಥಿತಿಗೆ ಬಂದಿದ್ದಾರೆ.

ಇಂತಹ ಒಂದು ಸ್ಥಿತಿಗೆ ಕಾರಣವಾಗಿರುವುದು ಮೋದಿಯ ಮತ್ತೊಂದು ಸರ್ಜಿಕಲ್ ಸ್ಟ್ರೈಕ್. ಬಹುಷಃ ಮೋದಿ ಇನ್ನೊಂದು ಸರ್ಜಿಕಲ್ ದಾಳಿ ನಡೆಯಲಿದೆ ಎಂದಾಗ ಎಲ್ಲರೂ ಪಾಕಿಸ್ಥಾನದ ಮೇಲೆ ಅಥವಾ ಚೀನಾ ವಿರುದ್ದ ಅಂತ ನಿಶ್ಚಿಂತೆಯಿಂದ ಖುಷಿ ಪಟ್ಟವರು ಹಲವಾರು ಮಂದಿ. ಆದರೆ ನಡೆದ ಕಥೆಯೇ ಬೇರೆ. ಯಾರು ಶತ್ರು ರಾಷ್ಟ್ರದ ಮೇಲೆ ದಾಳಿಯಾಗುತ್ತದೆ ಎಂದು ಕಾದು ಕುಳಿತ ಜನರಾಗಿರಬಹುದು ಮಾದ್ಯಮಗಳಿರಬಹುದು ಕಂಡು ಕೇಳರಿಯದ ಶಾಕಿಂಗ್ ನ್ಯೂಸ್. ನಮ್ಮ ದೇಶದ ಒಳಗೆ ಒಂದು ಸರ್ಜಿಕಲ್ ದಾಳಿ ನಡೆಯುತ್ತದೆಂದು ಯಾರು ಉಹಿಸಿರಲಿಲ್ಲ. ದೇಶ ಸ್ವಾತಂತ್ರ್ಯವಾದ ಮೇಲೆ ಇಂತಹ ಒಂದು ಮಹತ್ವದ ನಿರ್ಧಾರವನ್ನು ಯಾವ ಪ್ರಧಾನಿಯೂ ತೆಗೆದುಕೊಂಡಿರಲು ಸಾಧ್ಯವಿಲ್ಲ. ಇಂದಿರಾ ಗಾಂಧಿ ಇಂತಹ ಪ್ರಯತ್ನವನ್ನು ಮಾಡಿದರೂ ಕಾರ್ಯರೂಪಕ್ಕೆ ತರುವಲ್ಲಿ ಎಡವಿದ್ದರು. ಒಂದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದು ನಿರ್ಧಾರವನ್ನು ಯಾವುದೋ ಒಂದು ಪಕ್ಷ ನಿರ್ಧಾರ ಮಾಡಲು ಸಾಧ್ಯವಿಲ್ಲ. ಇಂತಹ ಸಮಯದಲ್ಲಿಯೂ, ತಮ್ಮ ಪಕ್ಷದವರಿಗೂ ತಿಳಿಯದ ಹಾಗೆ ಒಂದು ದೃಢ ನಿರ್ಧಾರವನ್ನು ತೆಗೆದುಕೊಳ್ಳಲು ಒಂದು ವ್ಯಕ್ತಿಗೆ ಸಾಧ್ಯವಾಗುತ್ತದೆ ಎಂದರೆ, ಈ ಹಿಂದೆ ಆಳ್ವಿಕೆ ನಡೆಸಿದವರಿಗೆ ಯಾಕೆ ಸಾಧ್ಯವಾಗಿಲಿಲ್ಲ ಎಂಬುದು ನಮ್ಮಲ್ಲಿ ಉಳಿದಿರುವ ಪ್ರಶ್ನೆ.

ಇಂದು ಏನೇ ಯೋಜನೆ, ನಿರ್ಧಾರವನ್ನು ತೆಗೆದುಕೊಳ್ಳಬೇಕಾದರೆ ಎಲ್ಲರ ಅನುಮತಿ ಪಡೆಯಬೇಕು, ಯಾಕೆಂದರೆ ಮೇಲೆ ಹೇಳಿರುವಂತೆ ನಮ್ಮದೂ ಪ್ರಜಾಪ್ರಭುತ್ವ ರಾಷ್ಟ್ರ, ಆದರೆ ಮೋದಿ ತೆಗೆದುಕೊಂಡಂತಹ ನಿರ್ಧಾರ ಒಂದು ದೇಶದ ಒಳಿತಿಗೆ ಪೂರಕವಾಗುವಂತಹ, ಅರ್ಥವ್ಯವಸ್ಥೆಗೆ ಹತ್ತಿರವಾದಂತಹ ದೃಢ ನಿರ್ಧಾರ. ಅಂದು ಸಮಯ ಸುಮಾರು 7.45 ದೇಶವನ್ನು ಉದ್ದೇಶಿಸಿ ಪ್ರಧಾನಿ ಮಾತನಾಡುತ್ತಾರೆ ಎಂದಾಗ ಯುದ್ಧ ಘೋಷಣೆಯಾಗುತ್ತದೆ ಎಂದು ಮಾದ್ಯಮದವರು, ಜನರು ಭಾವಿಸಿದ್ದರು. ಹೀಗೆ ಅಂದುಕೊಳ್ಳಲು ಹಲವಾರು ಕಾರಣಗಳು ಇದ್ದವು, ಮೋದಿ ರಕ್ಷಣಾ ಮುಖ್ಯಸ್ಥರೋಂದಿಗಿನ ಚರ್ಚೆ, ರಾಷ್ಟ್ರಪತಿಗಳ ಭೇಟಿಯ ಬಳಿಕ, ಮಾಧ್ಯಮದ ಎದುರು ಬಂದಾಗ ಎಂತವರಿಗೂ ಹಾಗೆ ಅನಿಸದೇ ಇರಲು ಸಾಧ್ಯವಿಲ್ಲ. ನಡೆದಿದ್ದೆ ಬೇರೆ, ಮಾತನಾಡುತ್ತ ಮಾತನಾಡುತ್ತ ಇವತ್ತು 12 ಗಂಟೆಯ ಬಳಿಕ 500 ಹಾಗೂ 1000 ಬೆಲೆಯ ನೋಟು ತನ್ನ ಅಸ್ತಿತ್ವವನ್ನು ಕಳೆದು ಕೊಳ್ಳಲಿದೆ. ಇನ್ನು ಮುಂದೆ ಚಲಾವಣೆಯಲ್ಲಿ ಇರುವುದಿಲ್ಲ ಎಂದಾಗ ದೇಶವೇ ಬೇರಗಾಗಿ ನೋಡಿತು. ಅದಾಗಲೇ ಗಂಟೆ 8 ಅಗಿತ್ತು, ಬ್ಯಾಂಕ್ ಬಂದಾಗಿದ್ದವು, ಸರ್ಕಾರಕ್ಕೆ ಮೋಸ ಮಾಡಿ ತೆರಿಗೆ ಕಟ್ಟದೆ ವಂಚಿಸಿದ್ದ ಅದೆಷ್ಟೋ ಹೆಗ್ಗಣಗಳು ತಲೆ ಮೇಲೆ ಕೈ ಇಟ್ಟು ಕುಳಿತರು. ಇಂತಹ ಒಂದು ಅಘಾತಕಾರಿ ಸುದ್ದಿಯನ್ನು ಎಂದೂ ಕೇಳಿರಲಿಲ್ಲವೆಂದು ಅನಿಸುತ್ತದೆ.

ಸೆಪ್ಟೆಂಬರ್ 30ರೊಳಗೆ ತಮ್ಮ ಆದಾಯವನ್ನು ಎಲ್ಲರೂ ಘೋಸಿಸಿಕೊಳ್ಳಿ ಎಂಬುದಾಗಿ ಪ್ರಧಾನಿ ಹೇಳಿದಾಗ ಏನು ಮಾಡಲು ಸಾಧ್ಯವಿಲ್ಲ ಎಂದು ಕುಳಿತವರು ಇಂದು ಒದ್ದಾಡುತ್ತಿದ್ದಾರೆ. ತಮ್ಮ ಹಣವನ್ನು ಘೋಷಣೆ ಮಾಡಲಾಗದೆ, ಇತ್ತ ತೆರಿಗೆಯನ್ನು ಕಟ್ಟಲಾಗದೆ ದಿಕ್ಕು ತಪ್ಪಿದಂತಾಗಿದೆ. ಕೆಲವರಂತು ರಗಳೆಯೇ ಬೇಡವೆಂದು ಸುಟ್ಟು ಹಾಕುತ್ತಿದ್ದಾರೆ, ನದಿಯಲ್ಲಿ ಬಿಡುತ್ತಿದ್ದಾರೆ, ದಾನ, ಹರಕೆ ಹೀಗೆ ಇಲ್ಲದ ಸಾಹಸವನ್ನು ಮಾಡುತ್ತಿದ್ದಾರೆ. ಪ್ರತಿಪಕ್ಷದವರಿಗಂತು ವಿರೋಧಿಸಲೂ ಆಗದೆ, ಸ್ವಾಗತಿಸಲೂ ಅಗುತ್ತಿಲ್ಲ, ಬದಲಾಗಿ ಸಮಯವನ್ನು ನೀಡಬೇಕಿತ್ತು ಎನ್ನುವಂತಹ ಬೇಜವಬ್ದಾರಿಯ ಹೇಳಿಕೆಗಳನ್ನು ನೀಡುತ್ತಿರುವುದು ನಿಮಗೆಲ್ಲ ಗೊತ್ತಿದೆ. ಕಪ್ಪು ಬಣ್ಣದಿಂದ ಬಿಳಿ ಮಾಡಿಕೊಳ್ಳುವುದು ಹೇಗೆ ಅಂತ ಚಿಂತೆ. ಇಲ್ಲಿಯವರೆಗೆ ರಾಜಕಾರಣಿಗಳು ಜನರ ಮೇಲೆ ಸವಾರಿ ಮಾಡುತ್ತಿದ್ದರು. ಆದರೆ ಒಬ್ಬ ರಾಜಕಾರಣಿ ರಾಜಕಾರಣಿಗಳ ಮೇಲೆ’ ಉದ್ಯಮಿಗಳ ಮೇಲೆ’ ಭ್ರಷ್ಟಾಚಾರಿಗಳ ಮೇಲೆ ಸವಾರಿ ಮಾಡುತ್ತಿರುವುದು ಇದೇ ಮೊದಲು.

ದೇಶದ ಅಭಿವೃದ್ದಿಗೆ ಹಾಗೂ ಆರ್ಥಿಕವಾಗಿ ಮಹಾಕ್ರಾಂತಿಗಾಗಿ ಇಂತಹ ನಿರ್ಧಾರದ ಅವಶ್ಯಕತೆ ಇತ್ತು. ಹಾಗಾಗಿ ನಮ್ಮ ಪ್ರಧಾನಿಗೆ ಧನ್ಯವಾದಗಳನ್ನು ಹೇಳಲೇ ಬೇಕು. ದೇಶ ಸಂಕಷ್ಟದಲ್ಲಿದ್ದಾಗ ಅಂದು ಶಾಸ್ತ್ರೀಜಿ ಕೊಟ್ಟ ಕರೆಯನ್ನು ಜನರು ಪಾಲಿಸಿದರು’ ದೇಶದ ನೆರವಿಗೆ ಧಾವಿಸಿದರು, ಅದೇ ರೀತಿ ಇಂದು ದೇಶಕ್ಕೆ ಒಳಿತಾಗುವಂತಹ ಒಂದು ನಿರ್ಧಾರವನ್ನು ಎಲ್ಲಾ ಪಕ್ಷಗಳೂ, ಜನರು ಸ್ವಾಗತಿಸುತ್ತಿದ್ದಾರೆ. ಹಾಗಾಗಿ ಬಾಯಿಗೆ ಬಂದ ಹಾಗೆ ಮಾತನಾಡುವುದನ್ನು ಬಿಟ್ಟು ದೇಶದ ಒಳಿತಿಗಾಗಿ ಕೆಲವು ದಿನಗಳಾದರು ಕಷ್ಟ ಪಟ್ಟರೆ ಭ್ರಷ್ಟಾಚಾರ ಮುಕ್ತ ದೇಶವಾಗಲೂ, ಆರ್ಥಿಕವಾಗಿ ಪ್ರಬಲರಾಗಲೂ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ನಾವು ಯೋಚಿಸಿದಾಗ ಮೋದಿಯ ಈ ನಿರ್ಧಾರ ನೂರಕ್ಕೆ ನೂರರಷ್ಟು ಸರಿಯಾಗಿದೆ. ಮುಂದಿನ ದಿನಗಳಲ್ಲಿ ಪರಿಶುದ್ದ ಹಾಗೂ ಬಲಿಷ್ಟವಾದ ಒಂದು ದೇಶವನ್ನು ಕಟ್ಟಲು ಸಾಧ್ಯವಾಗುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಪವನ್.ಎಂ.ಸಿ

ದ್ವಿತೀಯ ಎಂ.ಸಿ.ಜೆ

ಎಸ್.ಡಿ.ಎಮ್ ಕಾಲೇಜು ಉಜಿರೆ.

pavanmc603@gmail.com

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post