X

‘ಪ್ರಕಾಶ’ಮಾನವಾಗುವುದೂ ಕಷ್ಟವೇ !

ಒಬ್ಬ ಅಭೂತಪೂರ್ವ ನಟ ! ಕಷ್ಟ ಪಟ್ಟು ಮೇಲೆ ಬಂದವರು ಎಲ್ಲಾ ಸರಿ. ಆದರೆ , ಒಂದು ಹೇಳಿಕೆ ! ಎಷ್ಟೋ ಜನರ ಅಭಿನಯ,ಅಹೋರಾತ್ರಿಯ ಕೆಲಸವನ್ನ ಸಿನಿಮಾಪ್ರಿಯರು ಓರೆಗಣ್ಣಿಂದಲೂ ನೋಡ್ತಿಲ್ಲ. ಕ್ಯಾರೇ ಅನ್ನಂಗಿಲ್ಲ ಜನ ಅನ್ನೋ ಪರಿಸ್ಥಿತಿ ಇದೊಳ್ಳೆ ರಾಮಾಯಣಕ್ಕೆ ಒದಗಿ ಬಂತಲ್ವೇ?

ಇನ್ನೇನು ಚಿತ್ರಕ್ಕೆ ಒಂದೆರಡು ದಿನಗಳಲ್ಲೇ ಭಾರೀ ಪ್ರಶಂಸೆ ವ್ಯಕ್ತವಾಗತ್ತೆ , ಇರೋ ಪರೀಕ್ಷೆಗಳು ಜೀವ ತಿನ್ನುತ್ತಿವೆಯಲ್ಲಾ ,ನಾನೇ ಕೊನೆಯವನಾಗೋದೆ ರಾಮಾಯಣ ನೋಡೋದ್ರಲ್ಲಿ   ಅಂತ ಬೇಜಾರಲ್ಲಿದ್ದೆ. ಆಗ ಒಮ್ಮೆಲೇ ಅದೇಷ್ಟೋ ಪೋಸ್ಟ್’ಗಳ ಸುರಿಮಳೆ, ಕಾರಣ-  ಒಂದೇ ಒಂದು ಹೇಳಿಕೆ. ಅದರ  ಏಟು ಎಷ್ಟರ ಮಟ್ಟಿಗೆ  ಬಿತ್ತು ಎಂದರೆ ಸ್ವತಃ ಪ್ರಕಾಶ್ ರೈ ಅವರೇ ದೃಶ್ಯ ಸುರುಳಿಯೊಂದನ್ನ ಮಾಡಿ ಚಲನಚಿತ್ರ ಉತ್ತಮ ರೀತಿಯಲ್ಲಿ ಸಾಗುತ್ತಿಲ್ಲ ,ಚಿತ್ರಮಂದಿರಕ್ಕೆ ತೆರಳಿ ರಾಮಾಯಣವನ್ನ ನೋಡಿ ದಯವಿಟ್ಟು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮೊದಲಿಂದ ಪ್ರಸಿದ್ಧಿಯನ್ನು ಪಡೆದ ಕೆಲವು ಪುಟಗಳು,ಸಿನಿಮಾ ಪ್ರಿಯರ ಗುಂಪುಗಳ ಮೊರೆ ಹೋಗುವಂತಾಯಿತು ಅಥವಾ ಅವರ ಮೇಲೆ ಮೊದಲಿದ್ದ ಗೌರವವೋ, ಪ್ರಬುದ್ಧ ನಟನೆಯನ್ನ ಅರಿತ ಉತ್ಸಾಹಿ ಯುವಕರೇ,ಹೇಳಿಕೆಯ ಅರಿವಿಲ್ಲದೇ/ಅರಿವಿದ್ದೂ  ಅವರ ಫ್ರೀಡಮ್ ಆಫ್ ಸ್ಪೀಚ್ ಅವರಿಗೆ ಎಂದು ತಲೆಕೆಡಿಸಿಕೊಳ್ಳದೇ  ತಾವೇ ಮುಂದಾಗಿ ಹರಿ ಬಿಟ್ಟಿರಬಹುದು ಬಿಡಿ. ನನಗರಿಯದ ವಿಷಯ.

ಚೆನ್ನಾಗಿ ಅಭಿನಯಿಸಿಲ್ವೇ ? ಅಭಿನಯಿಸಿದ್ದಾರೆ ಮೊದಲಿನಂತೆಯೇ ! ಅದಕ್ಕೂ ಮೀರಿಯೇ.  ಸಂಭಾಷಣೆ ಬರೆದ ಜೋಗಿ ಸರ್,ಅದರಲ್ಲಿ ಅಭಿನಯಿಸಿದ ಉಳಿದವರು ಏನು ಕಡಿಮೇನಾ ; ಮೊದಲಿನಿಂದ ಬರವಣಿಗೆ ಮತ್ತು ಬಣ್ಣದ ಲೋಕದೊಡನೆ ಬೆರೆತವರು ; ಬೆಂದವರು. ಅವರಿದ್ದಾರೆ ಚಿತ್ರದ ಭಾಗವಾಗಿ ಎಂಬ  ಒಂದೇ ಒಂದು ಕಾರಣಕ್ಕೆ ಎಷ್ಟೋ ಜನ ಸಿನಿಮಾ ನೋಡ್ತಿದ್ದರಲ್ವೇ?

ಪ್ರಕಾಶ್ ರೈ, ಜೋಗಿ ಜುಗಲ್ಬಂದಿ ಅಂತ ಖುಷಿಪಟ್ಟ ಅದೆಷ್ಟೋ ಮಂದಿ ಇವತ್ತು ಥಿಯೇಟರ್ ಕಡೆ ಮಗ್ಗಲು ಹಾಕಿಯೂ ಮಲಗಿಲ್ಲ.  ಜನಶ್ರೀ ನ್ಯೂಸ್’ನಲ್ಲಿ  ಗಲಾಟೆಯಾಯ್ತು. ಅದೆಷ್ಟೋ ಜನ ಪ್ರಕಾಶ್ ರೈ #Respect ಅಂತ ಸ್ಪ್ಯಾಮ್ ಮಾಡಿದರು. ನಾನೂ.

ಒಂದೋ ಎರಡು ದಿನ ಪೂರ್ತಿ ಸುದ್ದಿಯಾಯ್ತು. ಏನ್ ಮಾತಾಡ್ದ ಗುರು ಅಂತ ಒಬ್ಬರು , ಆಗ್ಬೇಕು ಈ ತರ ಟಿ ಆರ್ ಪಿ ಅಂತ ಸಾಯೋ ದೃಶ್ಯ ಮಾಧ್ಯಮದವರಿಗೆ ,ಚಾನಲ್ಲಿನ  ಅಧಿಕ ಪ್ರಸಂಗಕ್ಕೆ ಸರಿಯಾದ ಶಾಸ್ತಿ ಮಾಡಿದ್ದಾರೆ  ಶಭಾಶ್ ಅಂತ ಅಟ್ಟಕ್ಕೇರಿಸಿದರು. ಎಲ್ಲಾ ಸರಿಯಾಗೇ ಇತ್ತು. ಎಲ್ಲಿಯ ತನಕ ? ಪ್ರಕಾಶ್ ರೈ ಕನ್ನಯ್ಯನ ವಿಷಯವನ್ನೆತ್ತುವ ತನಕವೂ.

ಅದಾದ ನಂತರ ದೇಶಪ್ರೇಮಿಗಳು ರೊಚ್ಚಿಗೆದ್ದರು. ಸಡನ್ ಆಗಿ ಹಲವರು ಕೋಪಗೊಂಡರು, ಹಲವರು ಇದೆಲ್ಲಾ ಬೇಕಿತ್ತಾ ಅವರಿಗೆ ಅಂತ ಬೇಸರಪಟ್ಟರು. ನಾನು ಪ್ರಕಾಶ್ ರೈ ಅವರ ಅಕೌಂಟ್ ಹ್ಯಾಕ್ ಆಗಿ ಈ ರೀತಿ ಆಗಿರ್ಲಪ್ಪಾ ಅಂತ ಬೇಡಿಕೊಂಡಿದ್ದೂ ಇದೆ. ಬೇಜಾರಾಯ್ತು. ಘಟನೆಯ ಅರಿವಿಲ್ಲದೇ ಸಿನಿಮಾ ನೋಡಿದವರು ; ಅರಿವಿದ್ದೂ ಏನಾದರೇನೂ ಸಿನಿಮಾ ನೋಡಲೇಬೇಕು ಅಂತ ಹೋದವರು,ಸಿನಿಮಾವನ್ನೇ  ಬಹಿಷ್ಕರಿಸಿದವರು ,ಖಡಾಖಂಡಿತವಾಗಿ ತಾನು ಸಿನಿಮಾ ನೋಡಲ್ಲ ಅಂದವರು ಎಲ್ಲರೂ ಇದ್ದಾರೆ. ಒಂದೇ ಒಂದು ಹೇಳಿಕೆ ಇವತ್ತು ಸಿನಿಮಾ ಅಂದುಕೊಂಡ ಮಟ್ಟದಿಂದ ತುಂಬಾ ಕೆಳಗೆ ಓಡುತ್ತಿದೆ. ಕೀಲು ಕುದುರೆಗೆ ಕೀಲಿ ಕೊಟ್ಟದ್ದು ; ಆ ಕುದುರೆ ಓಡಿ ಪಂದ್ಯ ಗೆದ್ದರೆ ಬರೋ ಲಾಭ ಜೂಜು ಕಟ್ಟಿದ ರೈ ಅವರಿಗೇ ಅಂತ ತಿಳಿದವರು ಸುಮ್ಮನಾದರು. ಎಷ್ಟೋ ಜನ ಧರ್ಮ ಸಂಕಟಕ್ಕೆ ಒಳಪಟ್ಟು ನೊಂದಿರಬಹುದು. ನೀರಿನ ವಿಷಯಕ್ಕೆ ಸುಮ್ಮನಾದವರು ಊರಿನ ಉಸಾಬರಿಗೆ ಹೋಗದೇ ಇದ್ದರೆ ಎಲ್ಲಾ ಸುರುಳಿತವಾಗಿ ಸಾಗುತ್ತಿತ್ತೇನೋ. ಹಾಗಂತ ಸಿನಿಮಾ ಚೆನ್ನಾಗಿಲ್ವೇ ? ಇದ್ದೇ ಇದೆ . ಸಿನಿಮಾ ಮತ್ತು  ಸಿದ್ಧಾಂತಗಳ ತೂಗುಯ್ಯಾಲೆಯನ್ನ ಜೀಕಾಡುವಲ್ಲಿ ರೈ ಅವರು ಮೊದಲ ಬಾರಿಗೆ ಎಡವಟ್ಟು ಮಾಡಿಕೊಂಡಿರುವುದಂತೂ ನಿಜ.  ಇದರ ಬಗ್ಗೆ ಯಾರೂ ಜಾಸ್ತಿ ಮಾತನಾಡಿಲ್ಲ.ಸಿನಿಮಾ ನೋಡಲೇ ಬೇಕು ಎಂದು ದೃಢ ಸಂಕಲ್ಪ ಮಾಡಿದವರು ಸುಮ್ಮನೆ ಹೋಗಿ ನೋಡಿಕೊಂಡು ಬಂದರು. ನೋಡಲೇ ಬೇಕು ಅಂತ ಯಾರನ್ನೂ ಒತ್ತಾಯಿಸಲಿಲ್ಲ. ನಿಮ್ಮಿಷ್ಟ ಅಂತ ಬಿಟ್ಟರು. ದೊಡ್ಡವರು ಸೂಕ್ಷ್ಮ ವಿಷಯಗಳ ಗೋಜಿಗೆ ಹೋಗುವಾಗ ಅದೆಷ್ಟೇ ಜಾಗರೂಕರಾದರೂ ಕಡಿಮೆಯೇ.ಕಡಿಮೆಯೇ . ಕಡಿಮೆಯೇ.  ಅಷ್ಟೇ !

-ಗಣೇಶ್ ವಸಿಷ್ಠ

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post