X

Jio ಜೀ ಭರ್ ಕೆ…

ಮುಖೇಶ್ ಅಂಬಾನಿ ಇಂದು ವಾರ್ಷಿಕ ಷೇರುದಾರರ ಸಭೆಯಲ್ಲಿ ಜಿಯೊದ ಉದ್ದೇಶಗಳನ್ನು ಮತ್ತು ವಿಶೇಷತೆಗಳನ್ನು ಹೇಳುತ್ತಾ ಅದನ್ನು ಅನಾವರಣಗೊಳಿಸಿದ್ದಾರೆ. ಇಂದು ಅವರು ನೀಡಿದ ಕೊಡುಗೆಗಳು ಮತ್ತು ಅದರ ವಿಶೇಷತೆಗಳು ನಮ್ಮಲ್ಲಿ ಹೊಸ ಕುತೂಹಲವನ್ನು ಮೂಡಿಸಿರುವುದಂತೂ ಸತ್ಯ…

  • ಡಿ.31ರ ತನಕ ಡಾಟಾ ಮತ್ತು ಧ್ವನಿ ಕರೆಗಳು ಪೂರ್ತಿ ಉಚಿತ. ಆ ಬಳಿಕವೂ ಭಾರತದೆಲ್ಲೆಡೆ ಜಿಯೋ ನೆಟ್‌‍ವರ್ಕ್‌ನಲ್ಲಿ  ಇತರ ಯಾವುದೇ ನೆಟ್‌ವರ್ಕ್‌ಗೆ ಮಾಡಲಾಗುವ ಎಲ್ಲ ಧ್ವನಿ ಕರೆಗಳು ಉಚಿತ.

  • ಅತ್ಯಂತ ಕಡಿಮೆ ಬೆಲೆ ಅಂದರೆ 50 ರೂಪಾಯಿಗೆ 1 ಜಿಬಿ ಡೇಟಾ ನೀಡುವ ಘೋಷಣೆ..

  • Jio ಈಗಾಗಲೇ 18000 ಸಾವಿರ ನಗರಗಳು ಮತ್ತು 2 ಲಕ್ಷ ಹಳ್ಳಿಗಳಲ್ಲಿ ತನ್ನ ನೆಟ್ವರ್ಕ್ ಹೊಂದಿದ್ದು ಮಾರ್ಚ್ 2017ರ ಹೊತ್ತಿಗೆ 90 ಪ್ರತಿಶತ ಭಾರತೀಯ ಜನಸಂಖ್ಯೆಯನ್ನು ಕವರ್ ಮಾಡ್ತೇವೆ ಅಂತ ಇಂದು ಅಂಬಾನಿ ಹೇಳಿದ್ದಾರೆ..

  • ಜಗತ್ತಿನ ಅತಿ ದೊಡ್ಡ 4G LTE ನೆಟ್ವರ್ಕ್ ಹೊಂದಿದ್ದು Jio

  • ಇದನ್ನು ಅವರು ಅರ್ಪಿಸಿದ್ದು ಮೋದಿಯ ಡಿಜಿಟಲ್ ಇಂಡಿಯಾ ಯೋಜನೆಗೆ..

  • LYF ಸ್ಮಾರ್ಟ್ ಫೋನ್ 2999 ರೂಪಾಯಿಗೆ, ಇಂದು ಲೋಕಾರ್ಪಣೆ…

ಜಿಯೊ… ಫ್ರೀ ಇಂಟರ್ನೆಟ್, ಫ್ರೀ ಕಾಲ್ ಎಲ್ಲಾ ಇದೆ.. ಪುಗ್ಸಟ್ಟೆ ಸಿಗತ್ತೆ ಅಂತ ನಮಗೆ ಖುಷಿ.. ಉಳಿದ ಟೆಲಿಕಾಂ ಕಂಪೆನಿಗಳಿಗೆ ದೊಡ್ಡ ಪೆಟ್ಟು ಅನ್ನೋದೂ ನಿಜ.. ಆದ್ರೆ ಅಂಬಾನಿಗೆ ಲಾಭ ಇಲ್ಲ ಅನ್ನೋದಂತೂ ಸುಳ್ಳು… ಲಾಭ ಎಲ್ಲಿಂದ ಬರುತ್ತೆ..? ಜನರಿಂದ ಲಾಭ ಕಡಿಮೆ.. ಆದರೆ ಮುಂದಿನ ಹತ್ತರಿಂದ ಹದಿನೈದು ವರುಷ ಟೆಲಿಕಾಂ ನಲ್ಲಿ ಕಿಂಗ್ ಪಿನ್ ಆಗಿ ಇರುವ ಎಲ್ಲಾ ತಯರಿಯನ್ನೇ ಮಾಡ್ಕೊಂಡು ಹೆಜ್ಜೆ ಇಟ್ಟಿದ್ದಾರೆ ಅಂಬಾನಿ… ದೇಶದ ಸುಮಾರು 90 ಪ್ರತಿಶತ ಪ್ರದೇಶವನ್ನು ಮಾರ್ಚ್ 2017ರ ಹೊತ್ತಿಗೆ ಜಿಯೊ ಕವರ್ ಮಾಡುತ್ತೆ ಹೇಳಿ ಹೇಳಿದ್ದಾರೆ ಅಲ್ಲವೇ. ಇದು ಬಿ.ಎಸ್.ಎನ್.ಎಲ್ ಗಿಂತ ದೊಡ್ಡ ನೆಟ್ವರ್ಕ್ ಆಗಿಬಿಡುತ್ತೆ… ಹಳ್ಳಿ ಹಳ್ಳಿಗೂ ಜಿಯೊ ತನ್ನ ಹೆಜ್ಜೆ ಇಟ್ಟಿರುತ್ತೆ… ಜೊತೆಗೆ ಜಿಯೊ ಕೇವಲ ಮೊಬೈಲ್ ಟವರ್’ಗಳನ್ನ ಮಾಡಿಲ್ಲ.. ಆಪ್ಟಿಕಲ್ ಫೈಬರ್ ಕೇಬಲ್ ಮೂಲಕ ನೆಟ್ವರ್ಕ್ ಸ್ಥಾಪಿಸಿದೆ.. ಹಾಗಾಗಿ ಅದು ಬ್ಯುಸಿನೆಸ್ ಮಾಡ ಹೊರಟಿರುವುದು ತನ್ನ ನೆಟ್ವರ್ಕ್ ಸಹಾಯದಿಂದಲೇ ಹೊರತು ಗ್ರಾಹಕರ ಕಾಲ್ ಮತ್ತು ಡೇಟಾದಿಂದ ಅಲ್ಲ…

ದೊಡ್ಡ ನೆಟ್ವರ್ಕ್ ಇದೆ ಅಂತಾದಲ್ಲಿ, ಹಳ್ಳಿಯ ಮೂಲೆಗೂ ಅದು ತಲುಪುತ್ತೆ ಅಂದರೆ ಯಾವುದಾದರೂ ಮಾಹಿತಿ ತಲುಪಿಸಲು ಅಂದರೆ ಮೆಸೇಜ್ ಬ್ರಾಡ್ಕಾಸ್ಟಿಂಗ್’ನಂತಹ ಕೆಲಸಗಳಿಗೆ ಮೊದಲು ಸಂಪರ್ಕಿಸುವುದು ಅದನ್ನೇ.. ಜೊತೆಗೆ ಉಳಿದ ಟೆಲಿಕಾಂ ಕಂಪೆನಿಗಳು ತಮ್ಮ ನೆಟ್ವರ್ಕ್ ಸ್ಥಾಪಿಸಲು ಇದರ ಸಹಾಯವನ್ನು ಪಡೆದುಕೊಳ್ಳಬಹುದು.. ಉದಾಹರಣೆಗೆ ಏರ್ ಟೆಲ್ ತನ್ನ 4G ನೆಟ್ವರ್ಕ್ ಸ್ಥಾಪಿಸಲು ರಿಲೈಯನ್ಸ್ ಟೆಲಿಕಾಂ ಸಹಾಯ ಪಡೆದಿತ್ತು.. ಅದೆಷ್ಟೋ ಹಳ್ಳಿಗಳಲ್ಲಿ ಮತ್ತು ನಗರಗಳಲ್ಲಿ ಒಂದೇ ಮೊಬೈಲ್ ಟವರ್ ಮೂಲಕ ಎರಡು ಮೂರು ಕಂಪೆನಿಗಳ ಸಿಗ್ನಲ್ ನೀಡುವುದನ್ನು ಇಲ್ಲಿ ನೆನೆಪಿಸಿಕೊಳ್ಳಬಹುದು.. ಇದು ಗ್ರಾಹರಿಂದ ಪಡೆಯುವ ಲಾಭವಲ್ಲ, ಬದಲಾಗಿ ಗ್ರಾಹಕರಿಗೆ ನೀಡುವ ಸೇವೆಯ ಜೊತೆ ಉಳಿದ ಕಂಪೆನಿಗಳಿಂದ ಮಾಡಿಕೊಳ್ಳುವ ಲಾಭ…

ಇನ್ನೊಂದು ಮಾಹಿತಿಗಳು… ಇದು ಕೂಡ ಅತ್ಯಂತ ಅಮೂಲ್ಯವಾದುದು ಮತ್ತು ಲಾಭದಾಯಕವಾದುದು… ಜಿಯೊ ನೀಡುವ ಕಡಿಮೆ ಬೆಲೆಯ ಇಂಟರ್ನೆಟ್ ಕಾರಣದಿಂದ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತೆ.. ಆದರಿಂದಾಗಿ ಅತಿ ಹೆಚ್ಚಿನ ಮಾಹಿತಿಗಳು ಸಿಗೋದು ರಿಲಾಯನ್ಸ್’ಗೆ.. ಇತ್ತೀಚಿನ ದಿನಗಳಲ್ಲಿ ಮತ್ತು ಮುಂದಿನ ದಿನಗಳಲ್ಲಿ ಮಾಹಿತಿಯ ಕ್ಷೇತ್ರದಲ್ಲಿ ಮುಖ್ಯ ಪಾತ್ರ ವಹಿಸೋ ಟೆಕ್ಸ್ಟ್ ಮೈನಿಂಗ್, ಅಂದರೆ ಅಕ್ಷರಗಳ, ಶಬ್ದಗಳ ವಿಶ್ಲೇಷಣೆ ಮಾಡಲು ಸಂಪರ್ಕಿಸಬೇಕಾಗುವುದು ಟೆಲಿಕಾಂ ಸಂಸ್ಥೆಗಳನ್ನೇ.. ಉದಾಹರಣೆಗೆ ಇತ್ತೀಚಿಗೆ ವಾಟ್ಸಾಪ್’ನ ಪ್ರೈವಸಿ ಪಾಲಿಸಿಯಲ್ಲಿ ಒಂದು ಬದಲಾವಣೆ ಆಯ್ತು.. ಅದೇನೆಂದರೆ ವಾಟ್ಸಾಪ್’ನ ಮಾಹಿತಿಗಳನ್ನು ಫೇಸ್ ಬುಕ್ ಜೊತೆ ಸೇರಿಸುವುದು.. ಅದನ್ನು ಜಾಹಿರಾತುಗಳಿಗಾಗಿ ಬಳಸಿಕೊಳ್ಳುತ್ತ ಇರುವುದು ಎಂಬುದನ್ನೂ ಹೇಳಿದ್ದರು.. ಅದರ ಅರ್ಥ ನಮ್ಮ ನಂಬರ್, ಲೊಕೇಶನ್ ಮತ್ತು ನಮ್ಮ ಇಂಟರೆಸ್ಟ್ ಗಳನ್ನೂ ತೆಗೆದುಕೊಂಡು ಅದಕ್ಕನುಗುಣವಾಗಿ ಜಾಹಿರಾತನ್ನು ಕೊಡುವದು. ಇದು ಗ್ರಾಹಕರಿಂದ ಮಾಡಿಕೊಳ್ಳುವ ಲಾಭವಲ್ಲ, ಬದಲಾಗಿ ಕಂಪೆನಿಗಳಿಂದ ಆಗುವ ಲಾಭ..

ಇದನ್ನು ಮೊದಲು ಆರಂಭಿಸಿದ್ದು ಗೂಗಲ್ ಎಂದು ಹೇಳಬಹುದು.. ಮಾಹಿತಿಗಳು ಶೇರ್ ಆಗಲಾರದು ಎಂಬ ಪ್ರೈವಸಿ ಪಾಲಿಸಿ ಇಟ್ಟುಕೊಂಡಿದ್ದರೂ ಸಹ ಆ ಮಾಹಿತಿಗಳನ್ನು ಬಳಸಿಕೊಂಡರೆ ಮಾತ್ರ ಲಾಭ ಜಾಸ್ತಿ ಎಂಬುದು ಸತ್ಯವಾದ ಮಾತು.. ಇದನ್ನು ಮೊದಲು ಅರಿತದ್ದು ಗೂಗಲ್, ಇದು ಗೂಗಲ್ ಅನಲಿಟಿಕ್ಸ್ ಅನ್ನೋ ಸರ್ವಿಸ್’ನ ಹುಟ್ಟಿಗೆ ಕಾರಣವಾಯಿತು.. ಮೊದಲು ತನ್ನದೇ ಬೆಳವಣಿಗೆಗೆ ಬಳಸಿಕೊಂಡ ಗೂಗಲ್ ಕ್ರಮೇಣ ವಿಸ್ತರಿಸಿ ಈಗ ಎಲ್ಲರೂ ಅದನ್ನು ಅನುಸರಿಸುವಂತೆ ಮಾಡಿದೆ.. ಉದಾಹರಣೆಗೆ ಗೂಗಲ್’ನಲ್ಲಿ ಫ್ಲಿಪ್ ಕಾರ್ಟ್ ವೆಬ್ ಸೈಟ್’ಅನ್ನು  ನೀವು ಅತಿ ಹೆಚ್ಚು ಸರ್ಚ್ ಮಾಡಿದ್ದರೆ, ನಂತರ ನೀವು ನೋಡುವ ಮತ್ತು ಗೂಗಲ್ ಆಡ್ ಸೆನ್ಸ್ ಬಳಸುವ ಬೇರೆ ಬೇರೆ ವೆಬ್ ಸೈಟ್’ಗಳಲ್ಲಿ  ಫ್ಲಿಪ್ ಕಾರ್ಟ್’ನ ಜಾಹಿರಾತುಗಳು ಕಾಣಿಸುತ್ತವೆ.. ಇದು ನಿಮಗೂ ಅನುಕೂಲ ಮತ್ತು ಫ್ಲಿಪ್ ಕಾರ್ಟ್’ಗೂ ಅನುಕೂಲ ಜೊತೆ ಜೊತೆಗೆ ಈ ಮಾಹಿತಿ ನೀಡುತ್ತಿರುವ ಗೂಗಲ್ ಸಹ ಲಾಭ ಮಾಡಿಕೊಳ್ಳುತ್ತೆ… ಇದು ಬಳಸುವ ಗ್ರಾಹಕರಿಂದ ಲಾಭ ಮಾಡಿಕೊಳ್ಳದೆ, ಕಂಪೆನಿಗಳಿಂದ ಲಾಭ ಮಾಡಿಕೊಳ್ಳುವ ವಿಧಾನ.. ಈಗ ಇದೆ ದಾರಿಯನ್ನು ಫೇಸ್ ಬುಕ್ ಸಹ ವಾಟ್ಸಾಪ್ ಮಾಹಿತಿಯನ್ನು ಬಳಸಿಕೊಂಡು ತುಳಿಯಲು ಹೊರಟಿದೆ…

ಗೂಗಲ್ ಕೇವಲ ಸರ್ಚ್ ಎಂಜಿನ್ ಮತ್ತು ಜಿಮೈಲ್ ಮಾಹಿತಿಯ ಮೂಲಕ ಮಾಡುತ್ತಿದೆ ಅಂತಾದರೆ ಸಿಮ್ ಕಾರ್ಡ್ ನೀಡುವುದರಿಂದ ಮಾಹಿತಿ ಸಂಗ್ರಹಣೆ ಪ್ರಾರಂಭಿಸುವ ಜಿಯೋ, ಅತಿ ಹೆಚ್ಚು ಗ್ರಾಹಕರನ್ನು ಪಡೆದುಕೊಂಡು, ದೇಶದ 90% ನೆಟ್ವರ್ಕ್ ನಲ್ಲಿ  ಇನ್ನೆಷ್ಟು ಮಾಹಿತಿಗಳನ್ನು ಕಲೆ ಹಾಕಬಹುದು ವಿಚಾರ ಮಾಡಿ.. ಇದು ತಪ್ಪು ಎಂದಲ್ಲ.. ಒಂದು ಪ್ರದೇಶದಲ್ಲಿ ಯಾವುದೇ ಬ್ಯುಸಿನೆಸ್ ಪ್ರಾರಂಭ ಮಾಡಬೇಕು ಅಂತಾದರೆ ಇದು ಬಹಳ ಮುಖ್ಯ.. ಒಂದು ಪ್ರದೇಶವನ್ನು ಭೇಟಿ ಕೊಡದೆ ಆ ಪ್ರದೇಶದ ಬಗ್ಗೆ ಸುಮಾರು 60% ಮಾಹಿತಿಗಳನ್ನು ಇದರ ಮೂಲಕವೇ ಪಡೆದು ವಿಶ್ಲೇಷಿಸಬಹುದು.. ಪ್ರಾಕೃತಿಕ ಗುಣಗಳು, ಜೀವನ ಹೀಗೆ ಕೆಲವು ಮಾಹಿತಿಗಳಿಗೆ ಆ ಪ್ರದೇಶದ ಭೇಟಿ  ಆವಶ್ಯಕವೇ ಹೊರತು ಉಳಿದ ಮಾಹಿತಿಗಳಿಗೆ ಬೇಕಾಗಲಾರದು…

ಅದೇನೇ ಇರಲಿ.. ಇದರಿಂದ ಗ್ರಾಹಕನಿಗೆ ತೊಂದರೆಗಳು ಇಲ್ಲ ಎಂದೇ ಹೇಳಬಹುದು… ಗ್ರಾಹಕನಿಗೆ ಕಡಿಮೆ ಬೆಳೆಗೆ ಇಂಟರ್ನೆಟ್ ಸಿಗುತ್ತೆ, ಉಚಿತ ಕರೆಗಳು ಮತ್ತು ಮೆಸ್ಸೇಜುಗಳ ಭರವಸೆಯನ್ನು ಅಂಬಾನಿ ನೀಡಿದ್ದಾರೆ.. ದೇಶದ ಅದೆಷ್ಟೋ ಹಳ್ಳಿಗಳಿಗೆ ಮೊಬೈಲ್ ಸಂಪರ್ಕವೇ ಇಲ್ಲ, ಲ್ಯಾಂಡ್ ಲೈನ್’ಗಳೂ ಸಹ ಕೆಲಸ ಮಾಡಲಾರದು.. ಮತ್ತೆ ಅದೆಷ್ಟೋ ಹಳ್ಳಿಗಳಿಗೆ ಮೊಬೈಲ್ ಸಂಪರ್ಕವಿದ್ದರೂ ಅವು ಸರಿಯಾದ ಸೇವೆ ಒದಗಿಸುತ್ತಿಲ್ಲ.. ಅಂತಹ ಹಳ್ಳಿಗಳಿಗೆ ಸೇವೆ ಒದಗಿತ್ತೇವೆ, ಡಿಜಿಟಲ್ ಇಂಡಿಯಾ ಮತ್ತು ಭಾರತದ ಜನರಿಗಾಗಿ ಜಿಯೋ’ಅನ್ನು ಅರ್ಪಿಸುತ್ತೇನೆ ಎಂಬ ಅಂಬಾನಿಯ ಹೊಸ ಹೆಜ್ಜೆಯನ್ನು ಸ್ವಾಗತಿಸಲೇಬೇಕು ಮತ್ತು ಪ್ರೋತ್ಸಾಹಹಿಸಬೇಕು.. ಭಾರತೀಯರ ಈ ನಂಬಿಕೆಯನ್ನು ಅಂಬಾನಿ ಉಳಿಸಿಕೊಳ್ಳುತ್ತಾರಾ..?? ಜಿಯೋ ಆರಂಭದಲ್ಲಿ ಹುಟ್ಟು ಹಾಕಿದ ಆಶಾದಾಯಕ ಹೆಜ್ಜೆಯನ್ನು ಎತ್ತಿ ಪಕ್ಕಕ್ಕೆ ಇಡುತ್ತಾ..?? ಇದು ನಮ್ಮ ಮುಂದಿರುವ ಪ್ರಶ್ನೆ.. ಜಿಯೋ ಹೊಸ ಹೆಜ್ಜೆಯನ್ನು ಸ್ವಾಗತಿಸುತ್ತಾ ಆಲ್ ದಿ ಬೆಸ್ಟ್ ಹೇಳೋಣ…

Facebook ಕಾಮೆಂಟ್ಸ್

Manjunath Hegde: ಉತ್ತರ ಕನ್ನಡ ಜಿಲ್ಲೆಯ ಶಿರಸಿ ಸಮೀಪದ ಹಳ್ಳಿ ಇವರ ಮೂಲ.. ಉಡುಪಿಯಲ್ಲಿ MSc ಮಾಡಿ ಒಂದು ವರ್ಷ ಲೆಕ್ಚರರ್ ಆಗಿ ಕೆಲಸ ಮಾಡಿ ಈಗ NITK ಸುರತ್ಕಲ್’ನಲ್ಲಿ PhD ಮಾಡುತ್ತಿದ್ದಾರೆ... ಓದಿದ್ದು ಕಂಪ್ಯೂಟರ್ ಆದರೂ ಸಾಹಿತ್ಯದಲ್ಲಿ ಆಸಕ್ತಿ.. ಬರೆಯುವುದು ಹವ್ಯಾಸ.. ವಿಜ್ಞಾನದ ಬರಹಗಳು, ಕಥೆ ಮತ್ತು ಪ್ರಚಲಿತ ವಿದ್ಯಮಾನಗಳ ಬಗ್ಗೆ ಬರೆಯುವ ಆಸಕ್ತಿ ಹೆಚ್ಚು..
Related Post