X

ಪ್ರಾದೇಶಿಕ ಭಾಷೆಗಳ ಬಿಕ್ಕಟ್ಟು

ಮೆಕಾಲೆ ಶಿಕ್ಷಣ ನೀತಿಯಿಂದ ಹಿಡಿದು ಪ್ರಸ್ತುತ ಬುಗಿಲೆದ್ದ ಮಾಧ್ಯಮ ಶಿಕ್ಷಣ ನೀತಿಯವರೆಗೂ ಶಿಕ್ಷಣ ಮಾಧ್ಯಮದ ಕುರಿತು ಸಮಗ್ರ ಮೆಲುಕು ಹಾಕುತ್ತಾ ಹೋದರೆ ಸಮಯ ವ್ಯರ್ಥ ಹಾಗೂ ಅಪ್ರಸ್ತುತ ಎನಿಸುತ್ತದೆ.ಆಂಗ್ಲ ಮಾಧ್ಯಮದಿಂದ ಪ್ರಾದೇಶಿಕ ಭಾಷೆಗಳು ಅಸ್ತಿತ್ವ ಕಳೆದುಕೊಳ್ಳುತ್ತಿವೆ. ವಿದೇಶಿಗರ ದಾಳಿಯಿಂದ ಬಳುವಳಿಯಾಗಿ ದೊರೆತ ಈ ಭಾಷೆ ಶಿಕ್ಷಣ ಮಾಧ್ಯಮವಾಗಿ ಭಾರತದ ಸಮಸ್ಯೆಯಾಗ ಹೊರಟಿದೆ. ಇದು ಸಮಸ್ಯೆಯಾಗಲು ಕಾರಣ ಪ್ರಭುತ್ವದ ಬೇಜಬ್ದಾರಿತನ ಎಂದೇ ಹೇಳಬಹುದು.

1994ರಲ್ಲಿ ಸುಪ್ರೀಂಕೋರ್ಟ ನೀಡಿದ ತೀರ್ಪಿನಲ್ಲಿ ಆಯಾ ರಾಜ್ಯದ ಪ್ರಾಥಮಿಕ ಶಿಕ್ಷಣ ಮಾತೃ ಭಾಷೆಯಲ್ಲಿಯೇ ಆಗಬೇಕೆಂದು, ಆದರೆ ಸುಪ್ರೀಂ ಕೋರ್ಟ ಬದಲಾವಣೆಯೊಂದಿಗೆ ನೀಡಿದ ಹೊಸ ತೀರ್ಪು ಹಲವು ಚರ್ಚೆಗೆ ಗ್ರಾಸವಾಗಿದೆ.

ಏನಿದು ತೀರ್ಪು?

1994ರಲ್ಲಿ ಮಾಡಿಕೊಂಡಿರುವ ಕಾನೂನು ಮಾತೃ ಭಾಷೆಯ ಶಿಕ್ಷಣಕ್ಕೆ ಒತ್ತು ನೀಡಿತ್ತು. ಆದರೆ ಕಳೆದ 2014ರಲ್ಲಿ ನ್ಯಾಯಾಧೀಶ ಆರ್.ಎಮ್ ಲೋಧಾ ನೇತೃತ್ವದಲ್ಲಿ ತನ್ನ ನಿಯಮ ಬದಲಾಯಿಸಿ ಪ್ರಾದೇಶಿಕ ಭಾಷೆಗಳ ನಿಲುವಿಗೆ ವಿರುದ್ಧವಾಗಿ ನಿಂತಿದೆ, ಪ್ರಾಥಮಿಕ ಶಿಕ್ಷಣವನ್ನು ಮಾತೃ ಭಾಷೆಯಲ್ಲಿಯೇ ನೀಡಬೇಕು ಎಂಬ ವಿಚಾರವಾಗಿ ನೀಡಿದ ಚರ್ಚೆಯಲ್ಲಿ, ಶಿಕ್ಷಣ ಮಾಧ್ಯಮವನ್ನು ಆಯ್ಕೆ ಮಾಡಿಕೊಳ್ಳುವುದು ಆಯಾ ಸರ್ಕಾರಕ್ಕೆ ಸಂಬಂಧಿಸಿದಲ್ಲ ವಿಷಯವಲ್ಲ, ಅದು ಪೋಷಕರಿಗೆ ಬಿಟ್ಟ ವಿಷಯ ಎಂದು ತೀರ್ಪನ್ನಿತ್ತಿದೆ.

ಭಾಷಾ ನೀತಿ ಹೇಗಿರಬೇಕು?

ಭಾರತ ಹಲವು ಭಾಷೆಗಳಿಂದ ಕೂಡಿದೆ. ಹಾಗಾಗಿ ಆಯಾ ರಾಜ್ಯದ ಅಂಗೀಕೃತ ಭಾಷೆಯು ನಾಡಭಾಷೆಯಾಗಿಯೂ ಶಿಕ್ಷಣ ಮಾಧ್ಯಮದ ಭಾಷೆಯಾಗಿಯೂ ಕೂಡಾ ಕಡ್ಡಾಯಗೊಳಿಸಬೇಕು. ಕಾರಣ ಪ್ರತಿಯೊಂದು ರಾಜ್ಯದ ಜನರ ಸತ್ವ, ಸಂಸ್ಕøತಿಯ ಮೂಲಕ ಪ್ರಾದೇಶಿಕ ಭಾಷೆಯಲ್ಲಿ ಅಡಗಿದೆ. ಇದರಿಂದ ಅನ್ಯದೇಶಿಯ ಆಂಗ್ಲ ಭಾಷೆಯ ಅಸ್ತಿತ್ವ ತಳವೂರುತ್ತಿರುವುದನ್ನು ಕಿತ್ತೆಸೆಯಬಹುದು ಎಂಬುದು ಭಾಷಾ ತಜ್ಞರ ವಾದ.

ಅಂತರಾಷ್ಟ್ರೀಯ ರಾಜಕಾರಣದ ತಂತ್ರ

ಸ್ಪರ್ಧಾತ್ಮಕ ಭಾಷೆ ಎಂಬ ಹೊರ ದೇಶಗಳ ನೀತಿ ಪೋಷಕರ ತಲೆ ಹಾಳುಗೆಡಿಸಿವೆ.ರಾಜ್ಯ ಅಥವಾ ಆಯಾ ರಾಷ್ಟ್ರಗಳಲ್ಲಿ ಪೋಷಕರ ಏಕಮುಖ ನಿರ್ಧಾರ ಮಕ್ಕಳನ್ನು ಆಂಗ್ಲ ಮಾಧ್ಯಮದಲ್ಲಿಯೇ ಕಲಿಯಬೇಕು ಎಂದು ಆದರೆ ಭಾರತದಲ್ಲಿ ಯಾವ ಪ್ರಜೆಯ ಮಾತೃಭಾಷೆ ಇಂಗ್ಲಿಷ್ ಆಗಿತ್ತೇ? ಪೋಷಕರ ವಾದ ಏಕೆ ಇಂಗ್ಲೀಷ್ ಮಾತೃಭಾಷೆಯಾಗಿರದೇ ಭಾರತೀಯರಿಗೆ ದೇಶಿ ಭಾಷೆಗಳ ಮೇಲೆ ಏಕೆ ಒಲವಿಲ್ಲ ಎಂಬುದು ಅಸಮಾಧಾನ ತರುತ್ತಿರುವ ವಿಷಯ.

ಸಾವಿರಾರು ಸಕಾರಿ ಕನ್ನಡ ಶಾಲೆಗಳು ಮುಚ್ಚುವ ಭೀತಿ ದೂರವಾಗಲೂ ಕಡ್ಡಾಯ ಶಿಕ್ಷಣ ಒಂದು ದಾರಿಯಾದರೆ ಜೊತೆಗೆ ಸೌಲಭ್ಯದ ವಿಷಯಗಳಲ್ಲಿ ಸರ್ಕಾರ ನಿಷ್ಟೆಯಿಂದಿರಲು ಕಾರಣ ಹುಡುಕಿ ಎಚ್ಚೆತ್ತುಕೊಂಡರೆ ಪರಿಹಾರ ಕಂಡುಕೊಳ್ಳಬಹುದೇನೋ?

1956ರ ಭಾಷಾವಾರು ಪ್ರಾಂತ್ಯ ವಿಂಗಡನೆ

ಭಾಷಾವಾರು ಪ್ರಾಂತ್ಯ ವಿಂಗಡಣೆಯ ಮೂಲ ಉದ್ದೇಶ ಈ ಶಿಕ್ಷಣ ಮಾಧ್ಯಮ ನೀತಿಯಿಂದ ಸಾಕಾರಗೊಳ್ಳಲೇ ಇಲ್ಲ. ಆಯಾ  ಭಾಷಾವಾರು ವಿಂಗಡಣೆಯಾಗಿ ಪ್ರಾದೇಶಿಕ ಭಾಷಾ ಮಹತ್ವ, ಸತ್ವವನ್ನು ಗಟ್ಟಿಗೊಳಿಸುವುದಾಗಿತ್ತೇ ಹೊರತು ಒಳ ಜಗಳಗಳಿಗೆ ಪುಷ್ಠಿ ನೀಡುವಂತಹ ನಡೆಗಳಲ್ಲ. ಪ್ರಾಂತ್ಯ ವಿಂಗಡಣೆ, ಎನೋ ಆಯಿತು, ಅದರ ಧ್ಯೇಯ ಬಲವಾಗುವಲ್ಲಿ ಜನನಾಯಕರುಗಳ ಬೆಂಬಲವಾಗಲಿ, ನೀತಿಗಳಾಗಲಿ ಬರಲೇ ಇಲ್ಲ,ಇಂತಹ  ಪ್ರತಿನಿಧಿಗಳ ನಿಲುವು ರಾಜ್ಯದ ಭಾಧಕಗಳನ್ನು ಎತ್ತಿ ತೋರುಸುತ್ತಲೇ ಇವೆ. ಜೊತೆಗೆ ರಾಜ್ಯದ ಮಠಗಳ, ಖಾಸಗೀಕರಣದ ದಂಧೆಗಳಿಂದ ದೇಶಿ ಭಾಷೆಯ ನಿಲುವು ಮಣಿಸಲು ಪರೋಕ್ಷವಾಗಿ ಸಾಧ್ಯವಿಲ್ಲ, ಆದರೆ ಹಿನ್ನಡೆಗೆ ಕಾರಣವಾಗುತ್ತಲೇ ಇವೆ. ಇಚ್ಚಾಶಕ್ತಿ ಇದ್ದಲ್ಲಿ ಕನ್ನಡ ಸಾರ್ವಭೌಮ ಅಧೀಕೃತ ಭಾಷೆಯಾಗುತ್ತದೆ. ಇಲ್ಲವಾದರೆ ಮುಂಬರುವ ವರುಷಗಳಲ್ಲಿ ಸಂಸ್ಕøತ ಭಾಷೆಯಂತೆ ಪುಸ್ತಕದ ಪುಟಗಳಲ್ಲಿ ಹುದುಗಿ ಹೋದರೆ ಅತಿಶಯೋಕ್ತಿಯೇನಲ್ಲ ಎನ್ನಬಹುದು.

ಮಾತೃಭಾಷೆಯ ಮರುವ್ಯಾಖ್ಯಾನದ ಅಗತ್ಯತೆ

ಕನ್ನಡ ಕರ್ನಾಟಕದ ಮಾತೃಭಾಷೆ ಎಂದು ಕರೀಯಬೇಕೇ? ಅಥವಾ ನಾಡಭಾಷೆ, ರಾಜ್ಯಭಾಷೆ ಎಂದು ಕರೀಯಬೇಕೇ?ದಕ್ಷಿಣ ಕನ್ನಡ ತುಳುನಾಡಿನವರು ತುಳು ಭಾಷೆಯನ್ನು ಏನೆಂದು ಕರಿಯಬೇಕು? ಕೊಡವರು ಕೊಡವ ಭಾಷೆಯನ್ನು ಏನೆಂದು ಕರಿಯಬೇಕು? ಈ ತರಹದ ಭಾಷೆಗಳನ್ನು ಅಪ್ಪಿಕೊಂಡು ಒಪ್ಪಿಕೊಂಡು ಬದುಕುತ್ತಿರುವ ಆಯಾ ಪ್ರಾದೇಶಿಕ ಜನರು ಇದ್ದೇ ಇದ್ದಾರೆ. ಇವರುಗಳು ಕನ್ನಡವನ್ನು ಮಾತೃಭಾಷೆ ಎಂದು ಒಪ್ಪಿಕೊಳ್ಳುತ್ತಾರೆಯೇ? ಎಂಬುದು ಗಂಭೀರ ಪ್ರಶ್ನೆ. ಹಾಗಿರುವಾಗ ಕನ್ನಡವನ್ನು ನಾಡಭಾಷೆಯೆಂದೋ, ರಾಜ್ಯಭಾಷೆಯೆಂದೋ ಅಥವಾ ಮಾತೃಭಾಷೆಯೆಂದೊ ಸಂಭೋದಿಸಬೇಕು ಎಂಬ ಗೊಂದಲವನ್ನು ಪರಿಹರಿಸಬೇಕಾಗಿದೆ. ಈ ಕಾರಣವಾಗಿ ಮಾತೃಭಾಷೆಯ ಮರು ವ್ಯಾಖ್ಯಾನ ಅಗತ್ಯವಾದದ್ದು ಹಾಗೂ ಕನ್ನಡ ಭಾಷೆಗೆ ಈ ಮೂರರಲ್ಲಿ ಯಾವ ಸ್ಥಾನ ಅಲಂಕರಿಸಬೇಕು ಎಂಬುದನ್ನು ಸ್ಪಷ್ಟಪಡಿಸಬೇಕು.

ಭಾಷಾ ಬುದ್ಧೀಜೀವಿಗಳಿಗೆ ಹೊಸ ಅಲೆಯ ಭೀತಿ

ಕನ್ನಡಕ್ಕೆ ಹೊಸ ಸಮಸ್ಯೆಯ ಹೆದರಿಕೆ ಆರಂಭವಾಗಿದೆ. ರಾಷ್ಟ್ರೀಯ ಭಾಷೆಯಾಗಿ ಹಿಂದಿಯನ್ನು ಒಪ್ಪಿಕೊಂಡ ಮೇಲೆ ಪ್ರಾದೇಶಿಕ ಭಾಷೆಗೆ ಹಿಂದಿ ಭಾಷೆಯಿಂದ ಹೊಡೆತ ಬೀಳುತ್ತಿದೆ ಎಂಬ ಹೊಸ ಕೂಗು ಕೇಳುತ್ತಿದೆ. ನಮ್ಮ ಸಮಸ್ಯೆ ಆಂಗ್ಲ ಭಾಷೆಯದ್ದೋ, ರಾಷ್ಟ್ರೀಯ ಭಾಷೆ ಹಿಂದಿಯದ್ದೋ ಎಂಬ ಹೊಸ ಕ್ಯಾತೆ ಬುದ್ದೀಜೀವಿಗಳ ಬಾಯಲ್ಲಿ ಬರುತ್ತಿದೆ. ಇದನ್ನು ಹಿರಿತಲೆಗಳ ಬುದ್ಧಿವಂತಿಕೆಯ ಪರಮಾವಧಿ ಎನ್ನಬಹುದೇ? ಒಳಜಗಳಗಳು ಪರಮಾವಧಿಯ ಹಂತ ತಲುಪಿದ್ದು ಪ್ರಾದೇಶಿಕ ಭಾಷೆಗಳು ತಮ್ಮ ಧ್ಯೇಯವನ್ನು ಮರೆಯುತ್ತಿದ್ದಾರೆಯೇ ಎಂಬ ವಿಶಾದ ಭಾವ ವ್ಯಕ್ತವಾಗಿದೆ.

ಕೊನೆಯಲ್ಲಿ ಹೇಳುವುದಾದರೆ ಮರೆಮಾಚಿದ ಸಂಸ್ಕøತ ಭಾಷೆಯನ್ನು ಮುಂದಿಟ್ಟುಕೊಂಡು ಪ್ರಾದೇಶಿಕ ಭಾಷೆಗಳ ಬಿಕ್ಕಟ್ಟನ್ನು, ಆಂಗ್ಲಭಾಷೆಯ ಏಕಾಧಿಪತ್ಯದಿಂದ ಹೊಡೆದೊಡಿಸಲು ಹೇಗೆ ಉಪಯೋಗಿಸಿಕೊಳ್ಳಬೇಕು ಹಾಗೂ ಹೊಸ ಸರ್ವಸಮ್ಮತ ನೀತಿ, ಇಲ್ಲವೇ ಹಳೆಯ ನೀತಿಗಳ ಪುನರುಜ್ಜೀವನಗೊಳಿಸುವುದು ಹೇಗೆ ಎಂಬುದು ನಮ್ಮ ಚಿಂತನೆಯಾಗಬೇಕು.

ಪ್ರಾಂತ್ಯ ಪ್ರದೇಶವನ್ನು ಆಳಿ, ಅಳೆದು ಹೋದ ದೈವ ಭಾಷೆ ಸಂಸ್ಕøತದ ಸಹಾಯದೊಂದಿಗೆ ಪ್ರಾದೇಶಿಕ ಸೀಮಿತತೆಯನ್ನು ಹೊಂದಿದ ಕನ್ನಡವನ್ನು ಬಲವಾಗಿ ನಿಲ್ಲಿಸುವಲ್ಲಿ ಅಥವಾ ನೆಲೆಗೊಳಿಸುವಲ್ಲಿ ಏಕೆ ಬಳಸಿಕೊಳ್ಳಬಾರದು ಎಂಬ ಹೊಸ ಹೊಳಹುಗಳನ್ನು ನಾವು ಹೊರಡಿಸಿಕೊಳ್ಳಬೇಕು. ಸಂಸ್ಕøತದ ಭಾಷಾ ವ್ಯಾಪ್ತಿ ಆಳವನ್ನು ಗಮನಿಸಿದರೆ ನಮ್ಮ ಕನ್ನಡದ ಸ್ಥಿತಿಯನ್ನು ಗಟ್ಟಿಗೊಳಿಸುವಲ್ಲಿ ಸಹಾಯವಾದೀತು ಎಂದೆನಿಸುತ್ತದೆ.

ಸುಷ್ಮಾ ಉಪ್ಪಿನ್, ಇಸಳೂರ

 ದ್ವೀತಿಯ ಎಂ.ಸಿ.ಜೆ

 ಪತ್ರಿಕೋದ್ಯಮ ವಿಭಾಗ

 ಎಸ್.ಡಿ.ಎಂ ಕಾಲೇಜು, ಉಜಿರೆ

 

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post