X

ಒಂದು ಬೈಕಿನ ಕಥೆ:ಐಡಿಯಲ್ ಜಾವಾ

ಹಳೆಯ ಅಂದರೆ ೧೯೬೦-೮೦ರ ದಶಕದ ಕನ್ನಡ ಹಿಂದಿಚಲನಚಿತ್ರಗಳನ್ನು ಒಮ್ಮೆ ನೆನಪಿಸಿಕೊಳ್ಳಿ.ಸಿನೆಮಾ ಕ್ಲೈಮಾಕ್ಸ್ಅಂದರೆ ಅಂತಿಮ ಹಂತಕ್ಕೆ ಬಂದಿರುತ್ತದೆ.ಖಳನಾಯಕಹೀರೋನ ನಾಯಕಿಯನ್ನೋ ಅಥವಾ ತಂದೆ ತಾಯಿಯನ್ನೋಅಪಹರಿಸಿ ಎಲ್ಲೊ ಕೂಡಿ ಹಾಕಿರುತ್ತಾನೆ.ದುರುಳರಿಂದತನ್ನವರನ್ನು ರಕ್ಷಣೆ ಮಾಡುವುದಕ್ಕಾಗಿ ತನ್ನ ಮೋಟಾರುಸೈಕಲನ್ನು ಹಿಡಿದು ದುರ್ಗಮವಾದ ಕಾಡು ಅಥವಾ ಗುಡ್ಡದಹಾದಿಯನ್ನು ಹಿಡಿದು ಅತಿವೇಗವಾಗಿ ತೆರಳುತ್ತಾನೆ.ಆ ಬೈಕ್ ನಶಬ್ದವೇ ಯಾವ ರೀತಿಯಲ್ಲಿ ಇತ್ತೆಂದರೆ ಬೇರೆ ಯಾವುದೇಪ್ರತ್ಯೇಕ ಹಿನ್ನೆಲೆ ಸಂಗೀತದ ಅಗತ್ಯತೆ ಆ ಸನ್ನಿವೇಶಕ್ಕೆಇರಲಿಲ್ಲ.ಸುಮಾರು ಒಂದು ಕಿಲೊಮೀಟರ್ ದೂರದಲ್ಲೇಕೇಳುತ್ತಿತ್ತಂತೆ ಆ ಮೋಟಾರ್ ಸೈಕಲ್ ನ ಅಬ್ಬರ. ಊಟಿಯತಿರುವುಗಳಲ್ಲಿ,ಕಾಶ್ಮೀರದ ಕಣಿವೆಗಳಲ್ಲಿ,ರಾಜಸ್ಥಾನದಮರುಭೂಮಿಯಲ್ಲಿ,ಪ್ರಮುಖ ಪೇಟೆ ಪಟ್ಟಣಗಳಲ್ಲಿ ಹೀಗೆಸುಮಾರು ೩೦ ವರ್ಷಗಳವರೆಗೆ ಭಾರತದ ಉದ್ದಗಲಗಳಲ್ಲಿಘರ್ಜಿಸಿ ಅನಭಿಷಿಕ್ತ ರಾಜನಾಗಿ  ROAD KING ಎಂದೇಕರೆಸಿಕೊಂಡು ಮೆರೆದ ಅದು ಇಂದು ಬಹುತೇಕ ಮೌನವಾಗಿಮೂಲೆಗೆ ಸರಿದಿದೆ.ಗೊತ್ತಾಯ್ತಲ್ವಾ…ಹೌದು ನಾನಿಲ್ಲಿ ಹೇಳ ಹೊರಟಿರುವುದು ಆ ಕಾಲದ ಅತ್ಯುತ್ತಮ ಬೈಕ್ ಎಂದೇಹೆಸರಾಗಿ ಜನಮನ ಸೂರೆಗೊಂಡ IDEAL JAWA ದ ಬಗ್ಗೆ.

ಇಂದಿನ Milage Friendly ಮತ್ತು ಅತೀವೇಗವಾಗಿಹೋಗ ಬಲ್ಲ ಬೈಕುಗಳ ಅಬ್ಬರದಲ್ಲಿ ಮರೆಯಾದ ಈ ಬೈಕ್ ನತಯಾರಿಕಾ ಕಾರ್ಖನೆ ಇದ್ದದ್ದು ನಮ್ಮದೇ ಕರ್ನಾಟಕದಸಾಂಸ್ಕೃತಿಕ ರಾಜಧಾನಿಯಾದ ಮೈಸೂರಿನಲ್ಲಿ.

JAWA ಇದು IDEAL ನ ಮಾತೃ ಸಂಸ್ಥೆ.ಸುಮಾರು ೧೯೨೯ ರಲ್ಲಿಫ್ರಾಂಟಿಸೆಕ್ ಜಾನೆಕ್ ಅವರಿಂದ ಝೆಕೊಸ್ಲೋವಾಕಿಯದಲ್ಲಿಸ್ಥಾಪಿಸಲ್ಪಟ್ಟಿತು.೧೯೨೦ರ ಸಮಯದಲ್ಲಿ ಮೋಟಾರುವಾಹನಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿದ್ದWanderer ಸಂಸ್ಥೆ ಮೊದಲನೇ ವಿಶ್ವಯುದ್ಧದಪರಿಣಾಮದಿಂದಾಗಿ ನಷ್ಟದಿಂದ ಇದ್ದ  ಕಾರಣ ಅದರ ಬೈಕ್ಮಾಡುವ ಹಕ್ಕನ್ನು ಕೊಂಡುಕೊಂಢ ಫ್ರಾಂಟಿಸೆಕ್ ಜಾನೆಕ್ ತಮ್ಮಹೆಸರಿನ JA ಮತ್ತು ಇಂಜಿನ್ ನ ಹೆಸರಿನ WA ಇವೆರಡನ್ನೂಸೇರಿಸಿ ೧೯೨೯ ರಲ್ಲಿ JAWA ಕಂಪೆನಿಯನ್ನುಸ್ಥಾಪಿಸಿದರು.ಮೊದಲ ಬೈಕ್ ಮಾರುಕಟ್ಟೆಗೆ ಬಿಡುಗಡೆಯಾದದ್ದುಅದೇ ವರ್ಷ ಒಕ್ಟೊಬರ್ ೨೩ ರಂದು.೧೦೦ ಕಿಲೋಮೀಟರ್ಸಂಚಾರಕ್ಕೆ ೬ ಲೀಟರ್ ಇಂಧನವನ್ನು ಭಕ್ಷಿಸುತ್ತಿದ್ದ ಇದರಎಂಜಿನ್ ೫೦೦ cc ಮತ್ತು ೧೮ hp ಪವರ್ಉಳ್ಳದ್ದಾಗಿತ್ತು,ಮುಂದೆ ವಿವಿಧ ಶ್ರೇಣಿಯ ಬೈಕ್ ಗಳನ್ನುಬಿಡುಗಡೆ ಮಾಡಿದ ಸಂಸ್ಥೆ ಮೋಟಾರು ಉದ್ಯಮದಲ್ಲಿ ಒಂದುಬ್ರ್ಯಾಂಡ್ ಆಗಿ ಬೆಳೆದು ಆ ಕ್ಷೇತ್ರದಲ್ಲಿ ಮುಂಚೂಣಿಗೆ ಬಂದುನಿಂತು ಹೆಚ್ಚುಕಡಿಮೆ ೧೨೦ ದೇಶಗಳಿಗೆ ತನ್ನ ವ್ಯಾಪ್ತಿಯನ್ನುವಿಸ್ತರಿಸಿತು.

ಭಾರತದಲ್ಲೂ ತನ್ನ ಹೆಜ್ಜೆಗಳನ್ನಿಡಬೇಕೆಂಬ ಸಂಸ್ಥೆಯ ಆಸೆಗೆಬೆನ್ನೆಲುಬಾಗಿ ನಿಂತು IDEAL JAVA INDIA LTD ನ್ನು೧೯೬೦ರಲ್ಲಿ ಮೈಸೂರಿನಲ್ಲಿ ಸ್ಥಾಪಿಸಿದವರು ಫಾರೂಕ್ ಇರಾನಿಎಂಬವರು.Forever Bike Forever Value ಎಂಬ ಬ್ರಾಂಡ್ಲೋಗೊದೊಂದಿಗೆ ಭಾರತದ ರಸ್ತೆಗೆ ಕಾಲಿಟ್ಟ JAWAಬಹುಬೇಗನೆ ತನ್ನ ಛಾಪನ್ನು ಮೂಡಿಸಿತು. ಎರಡೆರಡುಸೈಲೆನ್ಸರ್ಗಳು ,ಕಿಕ್ಕರ್ ನಲ್ಲಿಯೇ ಗೇರ್ ಚೇಂಜ್ ಮಾಡಬೇಕಾದಕುತೂಹಲಕಾರಿ ಸಂಗತಿ ಈ ಬೈಕ್ ನ ವಿಶೇಷತೆಗಳು.

ಈ ಬೈಕ್ ಚಲಾಯಿಸಿದವರೇ ಹೇಳುವಂತೆ  ಹೊಂಡ ಗುಂಡಿಗಳೇತುಂಬಿರುವ ನಮ್ಮ ರಸ್ತೆಗಳಿಗೆ ಹೇಳಿ ಮಾಡಿಸಿದ ಬೈಕ್ ಎಂದರೆJAWA ಎನ್ನುವುದು ಅತಿಶಯೋಕ್ತಿ ಅಲ್ಲ ಬಿಡಿ. ಗ್ರಾಮೀಣರಸ್ತೆಯೇ ಇರಲಿ ಗುಡ್ಡಗಾಡಿನ ದುರ್ಗಮ ರಸ್ತೆಯೇ ಇರಲಿ ಎಲ್ಲಾಕಡೆ ಸುಲಭವಾಗಿ ರೈಡ್ ಮಾಡಬಹುದಾಗಿದ್ದ ಕಾರಣ ಭಾರತದಉದ್ದಗಲಕ್ಕೆ ಈ ಬೈಕ್ ನ ಜನಪ್ರಿಯತೆ ಬೆಳೆದು ನಿಂತಿತು.೧೯೭೦ರ ಸಮಯದಲ್ಲೇ ಸಮಾರು ೩೬೦೦೦ IDEAL JAWAಬೈಕ್ ಗಳು ಕರ್ನಾಟಕದಲ್ಲಿ ಓಡಾಡುತ್ತಿದ್ದವಂತೆ.ಬೈಕ್ ನಉತ್ತಮ ವಿನ್ಯಾಸ ಅಂದರೆ ಒಂದು royal look ಹಾಗೂ ಕಡಿಮೆನಿರ್ವಹಣಾ ವೆಚ್ಚವೂ ಕೂಡ ಬೈಕ್ ನ ಜನಪ್ರಿಯತೆಉತ್ತುಂಗಕ್ಕೇರಲು ಕಾರಣವಾಯಿತು.

ಹೀಗೆ ಖ್ಯಾತವಾಗಿದ್ದ ಬೈಕ್ ಜನರಿಂದ ದೂರಾಗಲು ಪ್ರಮುಖಕಾರಣ ಅದರ ವಿನ್ಯಾಸವೇ ಆದದ್ದು ವಿಪರ್ಯಾಸದ ವಿಷಯ.೧೯೮೦ ರ ಸುಮಾರಿಗೆ ನಡೆದ ಗಲ್ಫ್ ಯುದ್ಧದ ಪರಿಣಾಮವಾಗಿಏರಲಾರಂಭಿಸಿದ ತೈಲ ಬೆಲೆಯು JAWA ದಂತಹ ಹೆವಿ ವೈಟ್ಬೈಕ್ ಗಳಿಗೆ ಪೆಟ್ಟು ಕೊಟ್ಟಿತು.ಅದೇ ಸಮಯದಲ್ಲಿ ಭಾರತೀಯಮಾರುಕಟ್ಟೆಯನ್ನು ಪ್ರವೇಶಿಸಿದ ಜಪಾನಿ ತಯಾರಿಕೆಯಮೈಲೇಜ್ ಫ್ರೆಂಡ್ಲೀ ೧೦೦ cc ಬೈಕುಗಳತ್ತ ಜನರುವಾಲಲಾರಂಭಿಸಿದರು.ಇದಷ್ಟೇ ಅಲ್ಲದೇ ಪೊಲ್ಯೂಷನ್ಸ್ಟಾಂಡರ್ಡ್’ಗಳಿಗೆ ಸರಿಯಾಗಿ ಹೊಂದಿಕೊಳ್ಳದೆ ಇದ್ದದ್ದು  ಕೂಡಬೈಕ್ ನ ಮಾರುಕಟ್ಟೆ ಕುಸಿಯಲುಆರಂಭವಾಯಿತು.ಕಾರ್ಮಿಕರ ಕೊರತೆಯ ಸಂಕಷ್ಟವನ್ನೂಅನುಭವಿಸಿದ ಸಂಸ್ಥೆ ೨೦೦೫ರಲ್ಲಿ ಸಂಪೂರ್ಣ ಮುಚ್ಚಲ್ಪಟ್ಟಿತು.

ಹೀಗೆ ರಸ್ತೆಗಳ ರಾಜನಾಗಿದ್ದದ್ದು ತನ್ನ ಘರ್ಜನೆಯನ್ನು ನಿಲ್ಲಿಸಿಮೂಲೆಗೆ ಸರಿದಿದ್ದರೂ ಇಂದಿಗೂ ಅಲ್ಲಲ್ಲಿ ಹಲವಾರು ಕಡೆ ಈಬೈಕ್ ಗಳ ಅಬ್ಬರವನ್ನು ನಾವುಕಾಣಬಹುದು.ಮೈಸೂರು,ಮಡಿಕೇರಿ ಮತ್ತು ಊಟಿಗಳಲ್ಲಿಹಲವಾರು ಬೈಕ್ ಕ್ಲಬ್ ಗಳು ಯುವಜನತೆಗೆ ಈ  ಬೈಕನ್ನುಪರಿಚಯಿಸಲು ಬೈಕ್ ರಾಲಿ ಬೈಕ್ ರೇಸ್ ಗಳನ್ನು ವರ್ಷಪೂರ್ತಿಹಮ್ಮಿಕೊಳ್ಳುತ್ತಿವೆ ಮತ್ತು ಆ ಮೂಲಕ JAWA ವನ್ನು ಪುನಃಮುನ್ನೆಲೆಗೆ ತರುವಲ್ಲಿ ನಿರತವಾಗಿವೆ.

                                                                                        -ಅಜಯ್ ಶಾಸ್ತ್ರಿ ಸಿ ಜಿ

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post