X

ಸ್ವಚ್ಚ ಕ್ರಾಂತಿ ಎಟ್ ಅಂಡಮಾನ್

ಮೊಟ್ಟ ಮೊದಲೆಯ ಸಾರಿ ಭಾರತ ನಕ್ಷೆಯನ್ನು ನೋಡಿದಾಗಿಂದ ಇವತ್ತಿನವರೆಗೂ ತಲೆಯಂತಿರುವ ಕಾಶ್ಮೀರದಿಂದ ಪಾದದ ಕನ್ಯಾಕುಮಾರಿವರೆಗೂ ಎಲ್ಲವನ್ನೂ ನೆನೆಪಿಟ್ಟುಕೊಂಡು ನಕಾಶೆ ಬಿಡಿಸುವ ನಾವು ಶಾಲೆಯಿಂದಲೇ ರೂಡಿ ಮಾಡಿಕೊಂಡಿದ್ದೇವೆ .ಕೆಳಗೆ ದಕ್ಷಿಣಕ್ಕೆ ಇರುವ ಮಾವಿನ ಕಾಯಿ ಗಾತ್ರದ ದೇಶವಾದ ಶ್ರೀಲಂಕಾವನ್ನು ನಾವು ಗುರುತಿಸುತ್ತೇವೆ,ಆದರೆ ನಮ್ಮದೇ ಆದ ಅಂಡಮಾನ್ ಮತ್ತು ನಿಕೋಬಾರ್’ನ ಮರೆಯುವುದು ಸಹಜವಾಗಿತ್ತು.ಗೆಳೆಯ ಸಂಜೀವ್ ಹೇಳುವಂತೆ ನಾವು ಅಂಡಮಾನ್ ಮತ್ತು ನಿಕೋಬಾರ್’ನ್ನು ಕಡೆಗಣಿಸಿರಬಹುದು ಆದರೆ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹಲವಾರು ವೀರರ ಕಥೆ ಹೇಳುವ ಜೀವಂತ ಪವಿತ್ರ ಸ್ಥಳ ಅಂಡಮಾನ್ ಮಾತ್ರ.

ದೇಶ,ರಾಜ್ಯ,ಜಿಲ್ಲೆಗಳನ್ನು ಕಲಿಸುವ ನಮ್ಮ ಶಾಲೆಯಲ್ಲಿ,ದೂರದ ಅಂಡಮಾನ್ ಬಗ್ಗೆ ಹೇಳಿದ್ದು ಒಂದೋ ಎರಡು ಸಾರಿ ಮಾತ್ರ,ಅದು ಕೇಂದ್ರಾಡಳಿತ ಪ್ರದೇಶದ ವಿವರಣೆಗೆ.ಚಂದ್ರಶೇಖರ ಅಣ್ಣ ಸಾಯಂಕಾಲದ ಸಮಯದಲ್ಲಿ ಆಟ ಆಡಿಸಿ ವೀರ ಸಾವರ್ಕರ ಅವರ ಕಥೆ ಹೇಳುವಾಗ ಅಂಡಮಾನ್ ಮತ್ತು ಕಾಲಾಪಾನಿ ಬಗ್ಗೆ ವಿವರಿಸಿದ ರೀತಿ ಇನ್ನು ಕಣ್ಣು ಮುಂದೆ ಕಟ್ಟಿದಂತೆ ಇದೆ.ಕೆಲವು ಭಾರಿ ಚಕ್ರವರ್ತಿ ಅಣ್ಣ ಅವರ ಮಾತಿನಲ್ಲೂ ಅಂಡಮಾನ್ ಬಗ್ಗೆ ಕೇಳಿದ್ದೆ.

ಕೆಲವು ದಿನಗಳ ಹಿಂದೆ ಗೆಳೆಯ ಪ್ರವೀಣ್ ಮತ್ತು ಸಂಜೀವ್,ಅಂಡಮಾನ್’ಗೆ ಹೋಗುವದಾಗಿ ಹೇಳಿದಾಗ ಅಲ್ಲಿ ಹೋಗಿ ಏನು ಮಾಡುತ್ತೀರಿ ಅಂಥ ಕೇಳಿದ್ದ ನನಗೆ ಉತ್ತರ ಸಿಕ್ಕಿದ್ದು ವಿಕ್ರಮ್ ನಾಯಕ ಅವರ ಫೇಸ್ಬುಕ್ ಸ್ಟೇಟಸ್ನಲ್ಲಿ. ಅಂಡಮಾನ್’ಗೆ ಹೋಗುವವರು ಏನು ಮಾಡುತ್ತಾರೆ,ಸಮುದ್ರ ತೀರ,ಒಳ್ಳೆಯ ಹೋಟೆಲ್ ವಾಸ್ತವ್ಯ, ಎಫ್.ಭಿ’ಗೆ ಒಂದೆರಡು ಸ್ವಂತಿ.ಆದರೆ ಚಕ್ರವರ್ತಿ ಸೂಲಿಬೆಲೆ ಅವರ ಯುವ ಬ್ರಿಗೇಡ್ ಮಾಡಿದ್ದೇನೆ ಗೊತ್ತಾ ?

ಬೆಂಗಳೂರನಿಂದ ಚೆನ್ನೈ ಮಾರ್ಗವಾಗಿ ಅಂಡಮಾನ್ ತಲುಪಿದ ಯುವ ಬ್ರಿಗೇಡ್ ತಂಡ,ಅಂಡಮಾನಿನ ಸೆಲ್ಲುಲಾರ್ ಜೈಲ್’ಗೆ ಬೇಟಿ ಕೊಡುತ್ತಾರೆ. ಅಲ್ಲಿಯ, ವೀರ ಸಾವರ್ಕರ್ ಅವರು ಶಿಕ್ಷೆ ಅನುಭವಿಸಿದ ಸೆಲ್ ದರ್ಶನ ಮಾಡುತ್ತಾರೆ.ಸ್ವಚ್ಛ ಭಾರತದ ಭವ್ಯ ಕಲ್ಪನೆಯನ್ನು ಕರ್ನಾಟಕದಾದ್ಯಂತ ಕಾರ್ಯಗತಗೊಳಿಸಿದ ಯುವಕರ ತಂಡ ಇದು, ಅಂಡಮಾನ್’ಗೆ ಪ್ರವಾಸಕ್ಕೆ ಹೋದವರು ಅಲ್ಲಿಯ ಕನ್ನಡ ಸಂಘದ ಸಹಕಾರದೊಂದಿಗೆ,ಸೆಲ್ಲುಲಾರ್ ಜೈಲ್ ಮುಂದೆ ಇರುವ ವೀರ ಸಾವರ್ಕರ್ ಉದ್ಯಾನದಲ್ಲಿ ತಮ್ಮ “ಸ್ವಚ್ಚ ಕ್ರಾಂತಿ” ಕೆಲಸವನ್ನು ಶುರುಮಾಡುತ್ತಾರೆ.ಸ್ವಾತಂತ್ರ್ಯ ಯೋಧರ ಪ್ರತಿಮೆಗಳು,ನೀರನ್ನು ಚಿಮ್ಮಿ ಮನ ತಣಿಸುವ ಕಾರಂಜಿಯನ್ನು ಶುಚಿ ಗೊಳಿಸುತ್ತಾರೆ. ಜಿಡ್ಡು ಗಟ್ಟಿದ್ದ ನೀರಿನ ಪೈಪ್,ಗಿಡಗಳಿಂದ ಉದುರಿದ ಎಲೆಗಳು,ಬಿಸಿಲಿಗೆ ಮಂಕಾಗಿದ್ದ ವೀರರ ಸ್ಮಾರಕಗಳಿಗೊಸ್ಕರ ಇವರ ಪ್ರವಾಸ ನಿಗಧಿಕೊಂಡಂತೆ ಕಾಣುತ್ತಿತ್ತು.

ಬಕೆಟ್,ಮಗ್ಗ,ನೀರು,ಪೊರಕೆ ಹಿಡಿದ ಯುವ ಬ್ರಿಗೇಡ್ ತಂಡ ಸ್ವಚ್ಚ ಕ್ರಾಂತಿಯಿಂದ ಅಂಡಮಾನ್ನಲ್ಲೂ ಪ್ರವಾಸಿಗರು ಎಂಬುದನ್ನೇ ಮರೆತು ತಮ್ಮ ಕೆಲಸ ಮಾಡಿ ಮುಗಿಸಿದ್ದರು.ಕೈಗೆ ಸಿಗುವ ಯಾವುದೇ ಅವಕಾಶವನ್ನು ಬಿಡದೆ,ತಮ್ಮ ಕಾರ್ಯವನ್ನು ಮಾಡುತ್ತ ಬರುತ್ತಿರುವ ಯುವ ಬ್ರಿಗೇಡ್ ತಂಡಕ್ಕೆ ಏನು ಹೇಳಬೇಕು,ಆ ತಂಡವನ್ನು ಈ ಮಾದರಿಯಲ್ಲಿ ಬೆಳೆಸಿದ ಆ ವ್ಯಕ್ತಿತ್ವಕ್ಕೆ ಏನನ್ನು ಅರ್ಪಿಸಿದರೂ ಅದು ಕಡಿಮೆ ಅನಿಸುವುದು ಸಹಜ.ಇವರ ಕಾರ್ಯ ಹೀಗೆ ಮುಂದುವರೆಯಲಿ,ಕ್ರಾಂತಿ ಯಾವುದೇ ಇರಲಿ ಸ್ವಚ್ಛ ಮನಸಿನಿಂದ ನಿಭಾಯಿಸುವ ಅಣ್ಣನಿಗೆ ಒಂದು ನಮನ.

Facebook ಕಾಮೆಂಟ್ಸ್

Anand Rc: ಹವ್ಯಾಸಿ ಬರಹಗಾರ,ಎಂ,ಸಿ,ಎ ಓದಿ,ಪ್ರಸ್ತುತ ಗದಗ ಜಿಲ್ಲೆಯಲ್ಲಿ ಸರಕಾರಿ ಯೋಜನೆಗಳಿಗೆ ಸಲಹೆಗಾರರ ವೃತ್ತಿ.ಕಂಪ್ಯೂಟರ್,ಮಾಹಿತಿ ತಂತ್ರಜ್ಞಾನ ಮತ್ತು ಪುಸ್ತಕಗಳ ಆಸಕ್ತಿ ಬರೆಯುವದನ್ನು ಕಲಿಸಿದ್ದು,Aarsi.org ಎಂಬ ಸ್ವಂತ ವೆಬ್ಸೈಟ್ ಹೊಂದಿದ್ದಾರೆ.
Related Post