ಹೊತ್ತಲ್ಲದ ಹೊತ್ತಿನಲ್ಲಿ ಮನೆಬಾಗಿಲಿಗೆ ಬಂದ ಮಗಳನ್ನು ನೋಡಿ ಯಶೋಧಮ್ಮನಿಗೆ ಒಳಗೊಳಗೇ ಸಣ್ಣದಾಗಿ ಸಂತಸ ಆದರೆ ಹೊತ್ತಲ್ಲದ ಹೊತ್ತಿನಲ್ಲಿ…ಅದು ಒಬ್ಬಳೇ ಬ್ಯಾಗ್ ಸಮೇತ.. ಅರ್ಥ ಆಗಲಿಲ್ಲ ಒಂದೆಡೆ ಬೇಸರ ದುಗುಡ ಏನೋ ಅಗಬಾರದ್ದು ಆಗಿದೆ. ಮನದೊಳಗೆ ಸಂಶಯ ಆದರೂ ಮಗಳನ್ನು ಕೇಳಲಿಲ್ಲ. ಮಗಳ ಮುಖದಲ್ಲಿ ಎಂದಿನ ನಗು ಇರಲಿಲ್ಲ. ಬೆಳಗಿನ ಫಲಾಹಾರ ಮುಗಿಸಿದ ಬಳಿಕ ನೋಡುವ ಅನ್ನುತಿತ್ತು ಯಶೋಧಮ್ಮನ ಮನಸು. ಸ್ವಲ್ಪ ಹೊತ್ತಿನಲ್ಲೇ ಮಗಳು ಪ್ರಿಯ ತನ್ನ ನೋವಿನ ಕತೆ ಶುರುಮಾಡಿದಳು. “ಏನು ಅಂತ ತಿಳಿದು ಕೊಂಡಿದ್ದಾರೆ, ನಾನೇನು ಅನ್ನಕ್ಕೆ ಗತಿ ಇಲ್ಲದೆ ಅಲ್ಲಿಗೆ ಹೋಗಲಿಲ್ಲ, ಮನೆ ಕೆಲಸದವಳಾ ನಾನು….ಎಲ್ಲದಕ್ಕೂ ಆ ಮುದುಕಿಯನ್ನು ಕೇಳಬೇಕು..ಮುದುಕ ತಾನಾಯಿತು ತನ್ನ ಪೇಪರ್ ಆಯಿತು ತನಗೂ ಈ ಮನೆಗೂ ಸಂಬಂಧ ಇಲ್ಲವೆನ್ನುವಂತೆ ಇರುತ್ತಾರೆ. ಏನು ಮಾಡಿದರು ಸರಿ ಆಗುವುದಿಲ್ಲ. ಇವರಾದರೋ ಸಣ್ಣ ಮಗುವಿನಂತೆ ಅಮ್ಮನ ತಾಳಕ್ಕೆ ತಕ್ಕಂತೆ ಕುಣಿಯುತ್ತಾರೆ. ಎಲ್ಲದಕ್ಕೂ ಅಮ್ಮಬೇಕು.. ಹಾಗಿದ್ದವರು ಮದುವೆ ಯಾಕೆ ಮಾಡಿಕೊಂಡದ್ದು .ಅಮ್ಮನ ಮಗನಾಗಿಯೇ ಇರಬಹುದಿತ್ತಲ್ಲ.” ಮಗಳ ಕಣ್ಣೀರನ್ನು ಕಂಡ ಯಶೋಧಮ್ಮ ಆಹಾ ಇದು ಹಳೆಯ ಕತೆ ಮತ್ತೆ ಶುರು ಆಯಿತು ಎಂದು ಬೆಂಕಿಗೆ ತುಪ್ಪ ಹಾಕುವ ಇಷ್ಟ ಇಲ್ಲದೆ …
“ಏನು ಮಾಡುವುದು ಸಹಿಸಬೇಕು ಎಲ್ಲ ನಮಗೆ ಬೇಕಾದಂತೆ ಆಗುವುದಿಲ್ಲ. ಮತ್ತೆ ಆ ಮುದುಕಿ ಇನ್ನು ಎಷ್ಟು ದಿನ ಇರಬಹುದು…” ಎಂದಾಗ ಪ್ರಿಯಳ ಸಹನೆ ಒಡೆದು ಆ ಮುದುಕಿ ಗಟ್ಟಿಯಾಗಿದೆ, ನಾನು ಸತ್ತ ನಂತರ ಅಷ್ಟೆ ಅದು ಸಾಯುವುದು…ಇವರಿಗೆ ಎಲ್ಲಿಹೋಯಿತು ಬುದ್ದಿ…” ಟಿವಿ ಸೀರಿಯಲ್’ಗಳಲ್ಲಿ ಕೇಳಿದ ಮಾತಿನ ಮಳೆಯನ್ನೇ ಹರಿಸಿದಳು…ಬೆಳಗಿನ ಪೂಜೆ ಜಪ ತರ್ಪಣ ಮುಗಿಸಿದ ಅಪ್ಪ ರಾಮಾಚಾರ್ “ಏನಮ್ಮ ನಿನ್ನ ಸಮಾಚಾರ ….ನೀ ಹೇಳಿದ್ದೆಲ್ಲ ಕೇಳಿಸಿಕೊಂಡೆ …ತಾಳಿದವ ಬಾಳಿಯಾನು…ಎಲ್ಲದಕ್ಕೂ ಸಹನೆಬೇಕು…ಯಾವುದೂ ಶಾಶ್ವತವಲ್ಲ….ನೀನು ಓದಿದವಳು ತಿಳಿದವಳು ಅನುಸರಿಸಿ ಹೋಗಬೇಕು….” ಎಂದೆಲ್ಲ ವಚನ ಮಾಲೆ ಬಿಟ್ಟರು..
ಹೊರಗೆ ಏನೋ ಶಬ್ದವಾದಾಗ ನೋಡಿದರೆ ಅಳಿಯ ಮಹಾಶಯ ಕಿರಣ್ ನಿಂತಿದ್ದಾನೆ. ಅತ್ತೆ ಮಾವನ ಕರೆಗೆ ಒಳಬಂದ ಕಿರಣ್ …
“ನೀವೇ ಹೇಳಿ ಮಾವ ನಮ್ಮ ಅಮ್ಮ ಹೇಳಿದ್ದರಲ್ಲಿ .. ಮಾಡಿದ್ದರಲ್ಲಿ ಏನು ತಪ್ಪಿದೆ. ಏನೋ ಅವರಿಗೆ ನಮ್ಮೊಡನೆ ಬಾಹುಬಲಿ ಸಿನಿಮಾ ನೋಡಬೇಕೆಂದು ಆಸೆ. ಅಪ್ಪ ಸಿನೆಮಾಗೆ ಹೋಗುವುದಿಲ್ಲ. ನಾವು ಹೊರಟಾಗ ಅವರು ಬರುತ್ತೇನೆ ಅಂದರು. ಅದು ತಪ್ಪ ಮಾವ.? ರಾಮಾಚಾರರಿಗೂ ಯಶೋಧಮ್ಮನಿಗೂ ಏನನ್ನಬೇಕೆಂದೇ ತಿಳಿಯಲಿಲ್ಲ.
“ಇಲ್ಲ ಅಳಿಯಂದಿರೆ ಅವಳಿನ್ನು ಮಗು ಏನೋ ಅಮ್ಮ ಅಪ್ಪನ ನೆನಪಾಯಿತು ಅಷ್ಟೆ, ಪಾಪ ಬಂದು ಬಿಟ್ಟಳು. ನೀವು ಒಂದೆರಡು ದಿನ ಇದ್ದು ಒಟ್ಟಿಗೆ ಹೋಗಿ ….ಯಶೋಧಮ್ಮ ಮಗಳನ್ನು ಒಳಕರೆದು ಕೋಪ ಬಂದಾಗೆಲ್ಲ ಬಾವಿಗೆ ಹಾರಿದರೆ ಎಷ್ಟು ಸಲ ಹಾರಬಹುದು. ಕೋಪ ಬಂದಾಗೆಲ್ಲ ರಾಮ ನಾಮ ಮಾಡು, ಸೀತೆಯ ಕಷ್ಟ ನೆನಪುಮಾಡು” ಎಂದು ತನಗೆ ಅವರಮ್ಮ ಅಂದ ಅದೇ ಹಳೆಯ ಪುರಾಣವನ್ನು ಬಿಚ್ಚಿಟ್ಟರು. ಪ್ರಿಯಳಿಗೂ ಎಲ್ಲೋ ಓದಿದ ನೆನಪು ಸಂಸಾರ ಒಂದು ಸುಂದರ ಹೂದೋಟ ಅದರಲ್ಲಿ ಹೂವಿನ ಜೊತೆ ಮುಳ್ಳು ಇರುತ್ತದೆ. ಹೂ ಬೇಕೆಂದರೆ ಮುಳ್ಳನ್ನು ಸಹಿಸಬೇಕು, ಇಲ್ಲ ನಾಜೂಕಾಗಿ ಮುಳ್ಳಿನಿಂದ ದೂರ ಇದ್ದು ಕಂಪ ಸವಿಯಬೇಕು. ಮನೆಹೊರಗಿದ್ದ ಯಶೋಧಮ್ಮ ದಂಪತಿಗಳಿಗೆ ಮನೆಯೊಳಗಿನ ನಗುವಿನ ಶಬ್ದ ಕೇಳಿ ಮನ ಹಗುರವಾಯಿತು.
ಸಂಸಾರ….

ಕಮಲಾತನಯ
laxmikantha@gmail.com

Facebook ಕಾಮೆಂಟ್ಸ್