X

ಎರಡು ಮಾತು,ನಾಲ್ಕು ಸಾಲು 

ನೀವು ಮಾಡಿದ್ದು ನೋಡಿ ನೋಡಿ ಸಾಕಾಗಿಯೇ,ಬೇರೆ ಏನಾದರು ಮಾಡಬೇಕು ಅನ್ನುವ ದೃಡ ನಿರ್ಧಾರದ ಪ್ರತಿಫಲವೇ  ಈ ಬಲಿಷ್ಠ ಸರಕಾರ.ಎರಡು ವರ್ಷಕ್ಕೆ ನಿಮ್ಮ ಎಲ್ಲಾ ಅಸ್ತ್ರಗಳನ್ನು ಹೊರಗೆ ತಂದು ಇಟ್ಟಿದ್ದಿರಿ.ಮುಂದೆ ಏನು ಮಾಡುತ್ತಿರಿ?ಜಾತಿ,ಧರ್ಮವೇ ನಿಮ್ಮ ಅಸ್ತ್ರ.ನಿರುಧ್ಯೋಗ,ಬಡತನದ ಬಗ್ಗೆ ಮಾತನಾಡುತ್ತಿದ್ದ ನಿಮಗೆ ಅವುಗಳು ಕಾಣೆಯಾದ ಸತ್ಯವನ್ನು ಸಹಿಸಲು ಆಗುತ್ತಿಲ್ಲ.ನೀವು ಮಾಡುತ್ತಿರುವ ಡೊಂಬರಾಟಕ್ಕೆ ನೀವೇ ಪಾತ್ರದಾರಿಗಳು,ನೀವೇ ಪ್ರೇಕ್ಷಕರು.

ಹಿಂದಿನವರಂತೆ ನಾವಲ್ಲ ಮೂಕಿ

ಶುಭ್ರವಾಗಿದೆ ಈಗ ತುಕ್ಕು ಹಿಡಿದ ತುಪಾಕಿ. 

ಆ ಕಡೆಯಿಂದ  ಚೀನಾ,ಈ ಕಡೆಯಿಂದ  ಪಾಕಿ

ಉತ್ತರ ಕೊಡುತ್ತೇವೆ ಇಲ್ಲದಂತೆ  ಯಾವುದೇ ಭಾಕಿ

ಯಾವುದನ್ನೂ ಒಡೆಯಲು ಹೊರಟಿದ್ದೀರಿ?ಯಾವ ಕಾರಣಕ್ಕೆ ಒಡೆಯುವ ಕಾರ್ಯ ? ನೀವು ಮಾಡದ ಕೆಲಸವನ್ನು ಅವರು ಮಾಡುತ್ತಿದ್ದಾರೆ ಅನ್ನುವ ಕಿಳರಿಮೆಯೇ? ಅಥವಾ ನಿಮ್ಮ ಬಣ್ಣದ ಬದುಕಿನ ಹಿಂದಿನ ಕೊಳೆ ಹೊರಗೆ ಹಾಕಲು ಅಡ್ಡಿಯಾಗುತ್ತಿರುವ ಹಿರಿಮೆಯೇ? ನಿಮ್ಮ ಬಣ್ಣಗಳು ಕಳುಚುತ್ತಿದ್ದಂತೆ ದೇಶಕ್ಕೆ ಬಣ್ಣ ಹಚ್ಚುವ ನಿಮ್ಮ ಕಾರ್ಯಕ್ಕೆ ಅಪ್ಪ ಹಾಕಿದ ಆಲದ ಮರ ಉರುಳಿತು ಜೋಕೆ.ದೇಶಭಕ್ತಿಯಿಂದ ಹಿಡಿದು ಬಣ್ಣಗಳವರೆಗೂ ಮರು ವ್ಯಾಖ್ಯಾನ ಮಾಡುವ ಕಾರ್ಯ ಬುದ್ಧಿಜೀವಿಗಳನ್ನು ತೊಡಗಿಸಿ,ದೇಶದ ತುಂಬೆಲ್ಲ ವಿರೋಧಿ ಅಲೆಯನ್ನು ಹಬ್ಬಿಸಿತ್ತಿರುವ ನಿಮ್ಮ ಕಾರ್ಯ ನಿಮ್ಮ ಸಣ್ಣತನವನ್ನು ತೋರುತ್ತಿದೆ.

ನಿಮ್ಮ ಹೊಲಸು ಮನಕ್ಕೆ  ಬಣ್ಣದ ಹೆಸರು 

ತಿದ್ದಿ ತಿಡಿ ತಯಾರಿಸಿದ  ಕೆಂಪು,ಕೇಸರಿ,ಹಸಿರು

ಮಣ್ಣಾಗಬೇಕು ನಿಮ್ಮ ಈ ದೇಶ ವಿರೋಧಿ ಕೆಸರು 

ಅವಾಗಲೇ ಹುಟ್ಟುವುದು ಪ್ರಾಣವಾಯುನಲ್ಲಿ ಉಸಿರು.

ತಲೆಯಲ್ಲಿ ತುಂಬಿರುವ ಸಗಣಿಯಿಂದ ಹೊಸ ಹುಳುಗಳನ್ನು ಸೃಷ್ಟಿ ಮಾಡುತ್ತಿದ್ದಿರಿ,ಆ ಹುಳಗಳಿಗೆ ನಿಮ್ಮ ತಲೆಯನ್ನೇ ಬಲಿ ಕೊಟ್ಟಿದ್ದಿರಿ,ಸದ್ಯಕ್ಕೆ ಆ ಹುಳಗಳ ಗಬ್ಬುನಾತದಿಂದ ನಿಮ್ಮ ಹಳೆಯ ಕೆಲಸಗಳ ವಾಸನೆ ದೂರ ಸರಿದಂತಿದೆ ಆದರೆ ಮರೆಯಾಗಿಲ್ಲ.ಮರೆಯಾಗಲು ಬಿಡುವದಿಲ್ಲ.ತಲೆಯಲ್ಲಿ ಇರುವ ಎಲ್ಲಾ ಹುಳಗಳು ಹೊರ ಬಂದ ನಂತರ ಪ್ರಥಮ ಚಿಕಿತ್ಸೆ ಮಾತ್ರ ನಿಮಗೆ ಉಚಿತವಾಗಿ ಸಿಗುವುದು ಪಕ್ಕಾ.

 ಹೊಟ್ಟೆ ಶುಚಿಯಾಗಲು ಆಗಲೇಬೇಕು ವಾಂತಿ ಬೇಧಿ.

ಬಂದಂತಿದೆ ನಿಮಗೆ ಉರುಳಿ ಹೋಗುವ ವ್ಯಾಧಿ.

ಮೀರುವ ಮುಂಚೆ ನಮ್ಮ ಸಹಿಷ್ಣುತೆಯ  ಅವಧಿ

ಬೇಗ ಗುಣಮುಖರಾಗಿರಿ ಎಂಬ ಕೊನೆಯ ಪ್ರಾರ್ಥನೆ ನಮ್ಮ ಮನದಿ.

ನೀವು ಯಾರನ್ನ ಹೀರೋ ಅಂಥ ಸಂಬೋಧನೆ ಮಾಡಿದ್ದು,ಲಾನ್ಸ್ ನೈಕ್ ಹನುಮಂತಪ್ಪನಾ? ಸಂದೀಪ್ ಉನ್ನಿ ಕೃಷ್ಣನ್ ಅವರನ್ನಾ? ಅಲ್ಲಾ,ನಿಮಗೆ ಬೇಕಾಗಿರುವುದು ನಿಮ್ಮ ಫ್ಲೆಕ್ಸ್ ಪ್ರಿಂಟ್ಗೆ ಒಂದು ಫೋಟೋ,ಒಂಥರಾ ಪೋಸ್ಟರ್ ಬಾಯ್.ನಿಮ್ಮ ಬಾಯ್ಗೆ ವಯಸ್ಸು ಆಯಿತಲ್ಲಾ.ನೀವು ಯಾರನ್ನಾದರೂ ಹೀರೋ ಮಾಡ್ಕೊಳ್ಳಿ,ಸ್ವಘೋಷಿತರು,ಸ್ವಪೋಷಿತರು.ದೇಶಕ್ಕೆ ಗೊತ್ತು ನಮ್ಮ ಹೀರೋಗಳು ಮಾತಾಡಲ್ಲ,ಮಾಡಿ ತೋರಿಸಲು ಗಡಿ ಆಚೆ ನಿರತರಾಗಿದ್ದಾರೆ ಎಂದು.

 ಉಲ್ಲಂಘನೆಯಾದರೆ ದೇಶದ ಗಡಿಯಲ್ಲಿ  ಕದನ ವಿರಾಮ.

ಅವರಿಗೂ ಗೊತ್ತು ಕಟ್ಟಿಟ್ಟ ಅಂತೆ ನಮ್ಮ ಶತ್ರುಗಳ ನಿರ್ನಾಮ

ದೇಶದ ಒಳಗೂ ಹೊರಗೂ ತಯಾರಿದ್ದಾರೆ ನಮ್ಮ ಯೋಧರು

ಆದರೆ ಶತ್ರುಗಳಂತೆ ನಿಂತವರು ನಮ್ಮ ಮಾಜಿ ಸಹೋದರರು.

ದೇಶ ಮತ್ತು ನಿಮ್ಮ ಪ್ರತಿಸ್ಪರ್ಧಿ ಪಕ್ಷಕ್ಕೆ ಯಾವುದೇ ವ್ಯತ್ಯಾಸ ಗೊತ್ತಿಲ್ಲದೇ ನೀವು ಮಾಡುತ್ತಿರುವ ಒಂದೊಂದು ಯೋಜನೆಯು ದೇಶದ ವಿರೋಧಿಯನ್ನು ಹುಟ್ಟು ಹಾಕುತ್ತಿದೆ.ನೇಶನ್ ಫಸ್ಟ್ ಎನ್ನುವ ಅವರು ಫ್ಯಾಮಿಲಿ ಫಸ್ಟ್ ಎನ್ನುವ ನೀವು,ಒಳ್ಳೆಯ ಕೆಲಸಕ್ಕೆ ಕೈ ಜೋಡಿಸಿ ಅವರಿಗೂ ಒಂದು ಅವಕಾಶ ಕೊಡಿ,ತಪ್ಪು ಮಾಡಿದಾಗ ತಿದ್ದಿ,ನೀವು ಅನುಭವಸ್ಥರು,ದೊಡ್ಡವರು. ದಡ್ಡತನ ನಿಮ್ಮ ಮತ್ತು ನಿಮ್ಮ ಪೂರ್ವಜರಿಗೆ ಶೋಭೆ ತರೋದಿಲ್ಲ.

ವಿಶ್ವಕ್ಕೆ ಗುರುವನ್ನು ತೋರಿಸಲು ಹೊರಟವ,

ದೇಶಕ್ಕಾಗಿ ಹೆಂಡತಿ ಸಂಸಾರವನ್ನೇ  ಬಿಟ್ಟವ.

ಮೆತ್ತನೆ ಹಾಸಿಗೆಯ ಸುಖದ ನಿದ್ರೆಯನ್ನು ಮರೆತವ.

ಯಾರವ? ಯಾರವ? ಅವ ನಮ್ಮವ ಅವ ನಮ್ಮವ.

Facebook ಕಾಮೆಂಟ್ಸ್

Anand Rc: ಹವ್ಯಾಸಿ ಬರಹಗಾರ,ಎಂ,ಸಿ,ಎ ಓದಿ,ಪ್ರಸ್ತುತ ಗದಗ ಜಿಲ್ಲೆಯಲ್ಲಿ ಸರಕಾರಿ ಯೋಜನೆಗಳಿಗೆ ಸಲಹೆಗಾರರ ವೃತ್ತಿ.ಕಂಪ್ಯೂಟರ್,ಮಾಹಿತಿ ತಂತ್ರಜ್ಞಾನ ಮತ್ತು ಪುಸ್ತಕಗಳ ಆಸಕ್ತಿ ಬರೆಯುವದನ್ನು ಕಲಿಸಿದ್ದು,Aarsi.org ಎಂಬ ಸ್ವಂತ ವೆಬ್ಸೈಟ್ ಹೊಂದಿದ್ದಾರೆ.
Related Post