ಕಳೆದ ಕೆಲವು ವರುಷದ ಕನ್ನಡ ಸಿನಿಮಾದಲ್ಲಿ ನೋಡಿದ ಒಂದೆರಡು ಪಾತ್ರಗಳು ಸಿಕ್ಕಾಪಟ್ಟೆ ಕಾಡುತ್ತಿವೆ.”ರಂಗಿತರಂಗ”ದ ಅಂಗಾರ,”ಉಳಿದವರು ಕಂಡಂತೆ”ಯ ರಿಚಿ.ಇವೆರಡು ಪಾತ್ರಗಳ ಜೊತೆ ಇನ್ನೇರಡು ಪಾತ್ರಗಳು ಇವೆ.ಪುಸ್ತಕದಲ್ಲಿ ಓದಿದ್ದ ಆ ಪಾತ್ರಗಳು ,ಮುಂದೆ ಕನ್ನಡ ಸಿನಿಮಾದಲ್ಲೋ ಬಂದು ಕಾಡುತ್ತವೆ.ಅಗ್ನಿ ಶ್ರೀಧರ್ ಅವರ ಕಾದಂಬರಿ ಆಧಾರಿತ,ಸುಮನ್ ಕಿತ್ತೂರ ಅವರ ನಿರ್ದೇಶನದ “ಎದೆಗಾರಿಕೆ” ಚಿತ್ರದ ಸೋನಾ ಮತ್ತು ಶ್ರೀಧರ.ಅತುಲ್ ಕುಲಕರ್ಣಿ ಅವರ ಆ ಕ್ಲೈಮ್ಯಾಕ್ಷನಲ್ಲಿನ ನಡೆ ಮತ್ತು ಮಾತು ಇನ್ನು ಕಣ್ಣ ಮುಂದೆ ಹಾಗೆ ಇದೆ.”ಆ ದಿನಗಳಿಂದ” “ಎದೆಗಾರಿಕೆ” ವರೆಗೂ ಅತುಲ್ ಕುಲಕರ್ಣಿ ಅವರೇ ಶ್ರೀಧರ ಎಂದು ನಂಬಿದವರು ಎಸ್ಟೋ ಜನ ಇದ್ದಾರೆ.ಆದಿತ್ಯ ಅವರು “ಸೋಮನ” ಪಾತ್ರಕ್ಕಿಂತ “ಸೋನಾ ” ಪಾತ್ರದಲ್ಲಿ ಮನಸ್ಸು ಗೆದ್ದಿದ್ದರು.ಅವರಿಗೆ ಹೇಳಿ ಮಾಡಿಸಿದ ಪಾತ್ರ “ಸೋನಾ”.
ನಟರನ್ನ ಆಧರಿಸಿ ಕಥೆ ಹೆಣೆಯುವದು ಕಷ್ಟದ ಕೆಲಸ ಅಲ್ಲಾ,ಇದಾಗಲೇ ಹೆಸರು ಮಾಡಿದ ಪುಸ್ತಕದ ಒಂದು ನಟ/ನಟಿಯ ಪಾತ್ರಕ್ಕೆ ಒಬ್ಬ ನಟರನ್ನು ತಂದು ಕೂರಿಸಿ ಸಮರ್ಥಿಸಿಕೊಳ್ಳುವದು ಕಷ್ಟದ ಕೆಲಸವೇ ಸಾದ್ಯ.ಇಂತಹ ಕೆಲಸಕ್ಕೆ ಕೈ ಹಾಕಿ “ಎದೆಗಾರಿಕೆ”ಯಲ್ಲಿಯೇ ಸೈ ಏನಿಸಿಕೊಂಡ ಸುಮನ್ ಕಿತ್ತೂರ ಅವರು ಮಾತ್ತೊಂದು ಪ್ರಯೋಗಕ್ಕೆ ಕೈ ಹಾಕಿದ್ದರೆ.ಈ ಬಾರಿ ಪಾತ್ರಗಳು ಹೆಚ್ಚು,ಎದೆಗಾರಿಕೆನು ಹೆಚ್ಚು ಯಾಕಂದರೆ ಕಿತ್ತೂರ ಅವರು ಕೈಗೆತ್ತಿರುವ ಕಾದಂಬರಿ “ಪೂರ್ಣಚಂದ್ರ ತೇಜಸ್ವಿ” ಅವರ ಕಿರಗೂರಿನ ಗಯ್ಯಾಳಿಗಳು.
ಕಳೆದ ಸಾರಿ ಗಂಡಸರ ಎದೆಯಲ್ಲಿ ಡವ ಡವ ಅನುಭವ ಕೊಟ್ಟ ಕಿತ್ತೂರ ಅವರು ಈ ಸಾರಿ ಬರುತ್ತಾ ಇರುವುದು ರೌಡಿ ಮಹಿಳೆಯರ ಜೊತೆ.ಅಬ್ಬಾ ಮಹಿಳೆಯರು ಅಂದ್ರೆ ನಮ್ಮ ಕಣ್ಣ ಮುಂದೆ ಬರುವ ಕಲ್ಪನೆಯನ್ನ ಇವರು ಕಾಲಿನಿಂದ ಅಳಿಸಿ ತಮ್ಮ ಭಯಂಕರ ಮಾತಿನಿಂದ ಮತ್ತೊಮ್ಮೆ ಬರೆಯೋದು ಮಾತ್ರ ಪಕ್ಕಾ.ತೇಜೆಸ್ವಿ ಅವರ ವರ್ಣನೆಯನ್ನು ಅದೇ ಪ್ರಕಾರ ದೃಶ್ಯದಲ್ಲಿ ಇಳಿಸುವದು ಸಾಮಾನ್ಯದ ಮಾತಲ್ಲ.ಚಿತ್ರದ ಪೋಸ್ಟರ್ ಮೂಲಕ ಇದಾಗಲೇ ಸಾಕಷ್ಟು ಸದ್ದು ಮಾಡುತ್ತಿರುವ ಗಯ್ಯಾಳಿಗಳು ಇದೇ ತಿಂಗಳ ಕೊನೆಯ ವಾರದಲ್ಲಿ ಬರುವ ನಿರೀಕ್ಷೆ ಇದೆ.
ಪೂರ್ಣಚಂದ್ರ ತೇಜಸ್ವಿ ಅವರ ಪ್ರಕಾರ ಕಿರಿಗೂರಿನ ಜನರ ರೂಪ,ಅಕಾರ,ನಡೆನುಡಿಗಳೂ ಇವರನ್ನು ಬೇರೆಯವರಿಗಿಂತ ಪ್ರತ್ಯೇಕವಾಗಿಸುತ್ತವೆ.ಉದ್ದ ಮೂಗು, ಬಿಳಿಯ ಚರ್ಮ,ನೀಳಕಾಯದವರಾದ ಇವರಲ್ಲಿ ಗಂಡಸರು ಹೆಂಡ,ಬಿಡಿಯ ದಾಸ್ಯದಲ್ಲಿ ಸಣಕಾಲಿಗಿದ್ದರೆ, ಹೆಣ್ಣು ಮಕ್ಕಳು ಮಾತ್ರ ಮೈ ಕೈ ತುಂಬಿಕೊಂಡು ಸೌಂದರ್ಯದಿಂದ ಇದ್ದರು.ಮೇಲಿನ ವರ್ಣನೆಗೆ ಸೂಕ್ತವಾದ ನಟರನ್ನು ಸುಮನ್ ಕಿತ್ತೂರ ಅವರು ಆಯ್ಕೆ ಮಾಡುವಲ್ಲಿ ಜಾಣ್ಮೆ ತೋರಿದ್ದಾರೆ,”ದುನಿಯಾ” ಲೂಸ್ ಖ್ಯಾತಿಯ ಯೋಗಿ ಅವರು ಕಿರಿಗೂರಿನ ಗಂಡಸರನ್ನ ಪ್ರತಿನಿಧಿಸಿದರೆ,ಗಯ್ಯಾಳಿಯರ ಪರವಾಗಿ “ಸಿಂಪಲ್ ಆಗಿ ಒಂದು ಲವ್ ಸ್ಟೋರಿ” ಯ ನಾಯಕಿ ಶ್ವೇತ ಶ್ರೀವಾತ್ಸವ ಇದ್ದಾರೆ.ಇವರೊಂದಿಗೆ ಅಚ್ಯುತ ಕುಮಾರ,ಸುಕ್ರಥಾ ವಾಗ್ಲೆ,ಕಿಶೋರ,ಶರತ್ ಲೋಹಿತಾಶ್ವ ,ಎಸ್ ನಾರಾಯಣ ಅವರ ನೈಜ ಅಭಿನಯವನ್ನು ಪೂರ್ಣಚಂದ್ರ ತೇಜಸ್ವಿ ಕಲ್ಪನೆಗೆ ಮೆರಗು ತರಲಿದ್ದಾರೆ ನಿರ್ದೇಶಕಿ ಸುಮನ್ ಕಿತ್ತೂರ.
ಸಾಂದ್ರ ಬೇಸಾಯದ ಶಂಕರಪ್ಪನ ಬೋರ್ಡ್ ಕಥೆ,ಜೈಲಿನಲ್ಲಿ ಬರುವ ಸೊಳ್ಳೆ ಮತ್ತು ಹೆಗ್ಗಣಗಳು,ಮಳೆಗಾಳಿಗೆ ಹಾರುವ ಸೀರೆಯನ್ನು ನೋಡಿ ಜಗಳವಾಡುವ ಗಯ್ಯಾಳಿಗಳು,ಅವರ ಮಾತಿನಲ್ಲಿ ಬರುವ ಮುತ್ತಿನಂಥ ಶಬ್ದಗಳು,ಮರ ಕಡಿಯುವ ಸೋನ್ಸ ನ ತಾವು ಉಹಿಸಿಕೊಂಡ ರೀತಿಯಲ್ಲಿಯೇ ತೆರೆಯ ಮೇಲೆ ಬರುವದನ್ನು ನೋಡಲು ಕಾಯುತ್ತಿರುವ ಓದುಗರು ಮತ್ತು ಚಿತ್ರ ರಸಿಕರಿಗೆ ಪೋಸ್ಟರ್ ಮೂಲಕ ಇದಾಗಲೇ ಉತ್ತರಿಸಿರುವ ನಿರ್ದೇಶಕರು ಬಹು ನಿರೀಕ್ಷೆಯನ್ನು ಹುಟ್ಟುಹಾಕಿದ್ದಾರೆ.ಇದೇ ತಿಂಗಳ ಕೊನೆಯವಾರದಲ್ಲಿ ಬರುವ ಕಿರಗೂರಿನ ಗಯ್ಯಾಳಿಗಳು ತಮ್ಮದೇ ವಿಭಿನ್ನ ರೀತಿಯಲ್ಲಿ ತೆರೆಯ ಮೇಲೆ ಕಾಣಿಸಿಕೊಳ್ಳಲಿ ಎಂದು ಆಶಿಸುತ್ತ ಒಂದು ಆಲ್ ದಿ ಬೆಸ್ಟ್ ಹೇಳೋಣಾ.
ಆನಂದ್ ಆರ್.ಸಿ
aanu.rc@gmail.com
Facebook ಕಾಮೆಂಟ್ಸ್