X

ರೋಹಿತ್ ಚಕ್ರತೀರ್ಥರಿಗೊಂದು ಪತ್ರ

ಶ್ರೀಯುತ ಚಕ್ರತೀರ್ಥರಿಗೆ, ಪ್ರಾಯದಲ್ಲಿ ತೀರ್ಥರೂಪದವನಾದ, ನಿಮ್ಮ ನೆಚ್ಚಿನ ಭಗವಾನ ಮಾಡುವ ನಮಸ್ಕಾರಗಳು. ಅಲ್ಲೊಮ್ಮೆ ಇಲ್ಲೊಮ್ಮೆ ಟಿವಿಯಲ್ಲೋ, ಸಭೆ ಸಮಾರಂಭಗಳಲ್ಲೋ ಬಂದು ತೆವಲು ತೀರಿಸಿಕೊಳ್ಳುತ್ತಿರುವ ನಾನು ಮನೆದೇವರು ಸಿದ್ಧರಾಮೇಶ್ವರನ ಕೃಪಾಕಟಾಕ್ಷದಿಂದ ಕ್ಷೇಮವಾಗಿದ್ದೇನೆ. ನೀವು ನಿತ್ಯವೂ ದಮ್ಮು ಕಟ್ಟಿಕೊಂಡು ಫೇಸ್’ಬುಕ್ಕಿನಲ್ಲಿ ನನ್ನ ವಿರುದ್ಧ ಬಿಡುವಿಲ್ಲದೇ ಬರೆಯುತ್ತಿದ್ದರೂ ಕೂಡಾ ಸುಕ್ಷೇಮದಿಂದಿರುವಿರಿ ಎಂದು ಭಾವಿಸುತ್ತೇನೆ.

ಚಕ್ರತೀರ್ಥರೇ, ಮೊದಲಾಗಿ ನಾನು ನಿಮಗೆ ಆಭಾರಿ. ನಿಮಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು. ಮೊದಲೆಲ್ಲ ನಾನು ಅಪರೂಪಕ್ಕೆ ಒಂದು ಹೇಳಿಕೆ ನೀಡಿ ಅದು ಟಿವಿಯಲ್ಲಿ ಚರ್ಚೆಯಾಗಿ ಪೇಪರಿನಲ್ಲಿ ಸ್ವಲ್ಪ ಅದರ ಬಗ್ಗೆ ಬಂದು ಬಹು ಬೇಗನೆ ತಣ್ಣಗಾಗುತ್ತಿತ್ತು. ಅದರಿಂದಾಗಿ ನನಗೆ ಎಕ್ಸ್’ಪೆಕ್ಟೆಡ್ TRP ಸಿಗುತ್ತಿರಲಿಲ್ಲ. ಟಿವಿ ನೋಡುವವರಿಗೆ ಮಾತ್ರ ಅದೆಲ್ಲಾ ತಿಳಿಯುತ್ತಿತ್ತು. ಈಗ ಕಾಲ ಬದಲಾಗಿದೆ, ಟಿವಿ ನೋಡುವವರಿಗಿಂತ ಎಫ್.ಬಿ ನೋಡುವವರೇ ಜಾಸ್ತಿ, ನನ್ನ ವಿಷಯವನ್ನು ಟಿವಿಯಿಂದಾಚೆಗೆ ತಂದು ಎಫ್.ಬಿಯಲ್ಲಿ ಪ್ರಳಯವನ್ನೇ ಸೃಷ್ಟಿಸಿದ್ದು ನೀವು. ನಿಮ್ಮಂತವರು ಹಲವರಿದ್ದರೂ ಮುಂಚೂಣಿಯಲ್ಲಿ ನಿಂತು ಯುವಕರನ್ನು ಹುರಿದುಂಬಿಸಿದ್ದು ನೀವು, ಆ ಮೂಲಕ ಇನ್ನೊಂದು ತಲೆಮಾರಿನ ಜನಕ್ಕೆ ನಾನು ಯಾರೆಂದು ತಿಳಿಯುವ ಹಾಗೆ ಮಾಡಿದ್ದೀರಾ.. ಥ್ಯಾಂಕ್ಸ್ ಎ ಲಾಟ್!!

ಪ್ರಶಸ್ತಿಯ ವಿಚಾರಕ್ಕೆ ಬರೋಣ, ನೋಡಿ ಓಪನ್ನಾಗ್ ಹೇಳ್ತೀನಿ, ನನ್ನ ಪುಸ್ತಕವನ್ನು ಯಾವ ನಾಯಿಯೂ ಮೂಸಲ್ಲ, ಚಿಕ್ಕಾಸಿಗೂ ಕೇಳುವವರಿಲ್ಲ. ಬಿಟ್ಟಿ ಕೊಟ್ಟರೂ ಬೇಡ ಅನ್ನುತ್ತಾರೆಯೇ ವಿನಃ ಓದುತ್ತೇನೆ ಎನ್ನುವವರು ಭೂತಕನ್ನಡಿ ಹಿಡಿದರೂ ಸಿಗಲಾರರು. ನನ್ನನ್ನು ಬೆಂಬಲಿಸುವಂತೆ ಪೋಸುಕೊಟ್ಟು ಮತ್ಯಾರೋ ಬುದ್ಧಿಜೀವಿಗಳನ್ನು ಮೆಚ್ಚಿಸುವ ಮುಮಾಸ ಕೂಡಾ ನನ್ನ ಪುಸ್ತಕವನ್ನು ಓದಲಾರರು. ಅದು ನನಗೆ ಚೆನ್ನಗಿ ಗೊತ್ತಿದೆ. ಆದರೆ ಟೈಮ್ ವೇಸ್ಟ್ ಮಾಡಿ ಎಲ್ಲೆಲ್ಲಿಂದಲೋ ಕದ್ದು ತೆಗೆದು ಬರೆದ ಪುಸ್ತಕವನ್ನು ಕಸದ ಬುಟ್ಟಿಗೆ ಎಸೆಯಲು ನನ್ನ ಮನ ಒಪ್ಪದು. ಆದ್ದರಿಂದ ಹೇಗಾದರೂ ಲಾಭವೆತ್ತಬೇಕೆಂಬ ಉದ್ದೇಶ ನನ್ನದು. ಆದರೆ ಸಿದ್ಧರಾಮೇಶ್ವರನನ್ನು ಮೆಚ್ಚಿಸಬೇಕಲ್ಲ, ಅದನ್ನೂ ಮಾಡಿದ್ದಾಯ್ತು, ಅದರ ಫಲವಾಗಿ ಅಕಾಡೆಮಿ ಪ್ರಶಸ್ತಿಯನ್ನು ಪಡೆಸಿಕೊಳ್ಳುವವನಿದ್ದೇನೆ. ಈ ವಿಷಯದಲ್ಲಿ ನಾನು ನಿಮಗೆ ಕೃತಜ್ಞನಾಗಿದ್ದೇನೆ. ಭಗವಾನ್’ಗೆ ಅಕಾಡೆಮಿ ಪ್ರಶಸ್ತಿ ಬಂದಿದೆಯಂತೆ ಎಂದು ರಾಜ್ಯದ ಮೂಲೆ ಮೂಲೆಗೂ ಗೊತ್ತಾಗಿದ್ದು ನಿಮ್ಮಿಂದಾಗಿ. ನೀವು ಅವತ್ತು ಆ ತೆರನಾದ ಹೋರಾಟ ಮಾಡದೇ ಇರುತ್ತಿದ್ದರೆ ಒಬ್ಬನಿಗೂ ಈ ವಿಷಯ ಗೊತ್ತಾಗುತ್ತಿರಲಿಲ್ಲ. ಎಷ್ಟೆಂದರೆ ಅಕಾಡೆಮಿಯ ಅಧ್ಯಕ್ಷರಿಗೂ ಈ ವಿಷಯ ತಿಳಿಯುತ್ತಿರಲಿಲ್ಲ. ಆದರೆ ನಿಮ್ಮ ಅಭಿಯಾನ ಎಲ್ಲಿಯವರೆಗಿದೆ ಎಂದರೆ, ಇವತ್ತು ನಮ್ಮ ಮಕ್ಕಳಿಗೆ ಕನ್ನಡದಲ್ಲಿ ಯಾರಿಗೆಲ್ಲ ಜ್ಞಾನಪೀಠ ಪ್ರಶಸ್ತಿ ಸಿಕ್ಕಿದೆ ಅಂತ ಕೇಳಿದ್ರೆ ಗೊತ್ತಿರಲಿಕ್ಕಿಲ್ಲ ಆದರೆ ಸಾಹಿತ್ಯ ಅಕಾಡೆಮೆ ಪ್ರಶಸ್ತಿ ಬಗ್ಗೆ ಕೇಳಿದರೆ ನನ್ನ ಹೆಸರು ಖಂಡಿತವಾಗಿಯೂ ಬಂದೇ ಬರುತ್ತದೆ. ಅದರ ಸಂಪೂರ್ಣ ಕ್ರೆಡಿಟ್ಸ್ ನಿಮಗೆ ಸಲ್ಲಬೇಕು.

ನೋಡಿ ನಮ್ಮ ಸಮಾಜದಲ್ಲಿ ತಾರತಮ್ಯ ಎಷ್ಟಿದೆ ಅಂದರೆ ಅವನ್ಯಾವನೋ ಹುಚ್ಚ ವೆಂಕಟ್ ಮೈಕ್ ಹಿಡ್ಕೊಂಡು ಬೈದ್ರೆ ಪ್ರಚಾರ ಕೊಡ್ತಾರೆ. ನನಗೆ ಅಷ್ಟು ಕೊಡಲಿಲ್ಲ. ಯಾಕೆ? ನಂಗೆ ಅವ್ನ ಜೊತೆ ಕಾಂಪೀಟ್ ಮಾಡೋಕೆ ಕಷ್ಟ ಆಗತ್ತೆ. ಆದ್ರೂ ಅವಾಗಾವಾಗ ಮೈಕ್ ಹಿಡಿದು ಬೈಯುತ್ತೇನೆ, ಅಟ್ಲೀಸ್ಟ್ ನನ್ನ ವಯಸ್ಸಿಗಾದ್ರೂ ಮರ್ಯಾದೆ ಬೇಡ್ವಾ? ಆ ಹುಚ್ಚನ ಹವಾ ಮುಂದೆ ನನ್ನ ಹೆಸ್ರು ಚಾಲ್ತೀಲೀ ಇರಬೇಕಲ್ಲಾ? ಅದ್ಕೆ! ನಂಗೆ ಹುಚ್ಚ ಪಟ್ಟ ಬೇಕು ಅಂತ ನಾನು ಹಗಲು ರಾತ್ರಿ ಕಷ್ಟ ಪಡ್ತಾಯಿದ್ರೆ, ನೀವೆಲ್ಲಾ ಸೇರ್ಕೊಂಡು ಆತನಿಗೆ ಅನಾಯಾಸವಾಗಿ ಹುಚ್ಚ ಪಟ್ಟ ಕಟ್ಟಿಬಿಟ್ರಲ್ಲಾ, ನನ್ನಲ್ಲಿ ಅಸಹಿಷ್ಣುತೆ ಭುಗಿಲೇಳದೇ ಇದ್ದೀತಾ? ನೀವೇ ಹೇಳಿ??

ಚಕ್ರತೀರ್ಥರೇ ನೀವು ಯಾರಲ್ಲೂ ಹೇಳುವುದಿಲ್ಲ ಎಂದರೆ ನಾನೊಂದು ಸೀಕ್ರೆಟ್ ಹೇಳ್ತೇನೆ. ನಾನು ನಿತ್ಯವೂ ರಾಮನನ್ನು ಬೈಯುತ್ತೇನಲ್ಲ, ದೇವರಾಣೆಗೂ ನಾನು ಮನಸ್ಸಿನಿಂದ ಬೈಯುವುದಲ್ಲ ನಂಬಿ, ರಾಮನನ್ನು ಬೈದ ತಪ್ಪಿಗೆ ಮನೆಯವರಿಗೂ ಗೊತ್ತಾಗದ ಹಾಗೆ ಮಧ್ಯರಾತ್ರಿ ನಿದ್ದೆಯಿಂದೆದ್ದು ನೂರಾ ಎಂಟು ರಾಮತಾರಕ ಜಪ ಮಾಡುತ್ತೇನೆ. ಆದರೆ ನನಗೆ ಮೇಲಿಂದ ಆರ್ಡರ್ ಬಂದಿದೆ, ನೀನೂ ಬಹುಸಂಖ್ಯಾತರ ಭಾವನೆಗಳನ್ನು ಕೆರಳಿಸಿ ನಮ್ಮ ವೋಟ್ ಬ್ಯಾಂಕ್ ಭದ್ರ ಮಾಡಿಕೊಟ್ಟರೆ ಮಾಡಿಕೊಟ್ಟರೆ ನಿನಗೆ ಇನಾಮಿನ ರೂಪದಲ್ಲಿ ಪ್ರಶಸ್ತಿಗಳನ್ನು ಕೊಡಿಸುತ್ತೇನೆ ಎಂದು. ನನಗೆ ಬೇಕಾಗಿರುವುದು ಅದೇ ತಾನೇ? ಅದಕ್ಕಾಗಿಯೇ ನಾನು ಅಷ್ಟೆಲ್ಲಾ ಅಸಂಬದ್ಧ ಮಾತನಾಡುತ್ತಿರುವುದು, ಇನ್ನೊಂದೇನು ಗೊತ್ತಾ? ಇನ್ನೂ ಎರಡೂವರೆ ವರ್ಷ ನಾನು ಹೀಗೆ ರಾಮನನ್ನು ಬೈಯುವವನಿದ್ದೇನೆ. ನನ್ನ ಅವಧಿ ಮುಗಿಯುವುದರೊಳಗೆ ಹೇಗಾದರೂ ಮಾಡಿ ನಿನಗೆ ರಾಜ್ಯೋತ್ಸವ ಪ್ರಶಸ್ತಿ ಕೊಡಿಸುವೆನೆಂದು ಸಿದ್ಧರಾಮೇಶ್ವರ ಅಭಯ ನೀಡಿದ್ದಾನೆ. ಆದ್ದರಿಂದ ಅವನ ಮಾತನ್ನು ಶಿರಸಾ ಪಾಲಿಸುವುದು ನನ್ನ ಕರ್ತವ್ಯ ಎಂದು ಭಾವಿಸಿದ್ದೇನೆ. ಹೇಗೂ, ನೀನೇನೇ ಮಾಡಿದರು ಪೋಲೀಸರಿಂದ ನಿನಗೆ ಏನೂ ಮಾಡದಂತೆ ನೋಡಿಕೊಳ್ಳುವುದು ನನ್ನ ಜವಾಬ್ದಾರಿಯೆಂದು ನನಗೆ ಸಿದ್ಧರಾಮೇಶ್ವರನೇ ಅಭಯ ನೀಡಿರುವಾಗ ಇನ್ನೇನು ಭಯ ನನಗೆ?

ಕೊನೆಯದಾಗಿ ಒಂದು ಕಿವಿಮಾತು, ನಿಮ್ಮಲ್ಲಿ ಒಂದು ಗುಣ ನನಗೆ ಬಹಳ ಇಷ್ಟ ಆಗಿದೆ. ನಿಮ್ಮಲ್ಲಿ ಹೋರಾಟದ ಗುಣ ಇದೆ. ನನಗೋ ಪ್ರಚಾರದ ಹಪಹಪಿ. ನೀವು ಮಾತ್ರ ಯಾವ ಫಲಾಪೇಕ್ಷೆ ಇಲ್ಲದೇ ಹಗಲು ರಾತ್ರಿ ಹೋರಾಟ ಮಾಡಿದ್ದೀರಾ. ಮಾಡುತ್ತಿದ್ದೀರ. ಅದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ತಿಳಿದ ಮೇಲೂ!. ನಿಮ್ಮ ಜೊತೆ ಪುಟ್ಗೋಸಿ ಹನ್ನೊಂದು ಸಾವಿರ ಜನ ಇದ್ದಾರೆ. ಆದರೂ ನನ್ನನ್ನು ಮುಟ್ಟಲು ಸಾಧ್ಯವಿಲ್ಲ, ಯಾಕಂದ್ರೆ ನನ್ನ ಸುತ್ತ ಭದ್ರಕೋಟೆಯಾಗಿ ಎಡ್ವಟ್ ಸಿದ್ಧ, ಈಡಿಯಟ್ ಗೌರಿ, ದಿನ ಬೆಳಗಾದ್ರೆ ಆ ಮೀನು, ಈ ಮೀನು ಎನ್ನುತ್ತಾ, ಅವನ ಬುದ್ಧಿ ವಕ್ರ ಇವನ ಬುದ್ಧಿ ವಕ್ರ ಎನ್ನುತಾ ತಾನೊಬ್ಬ ಪೆಕ್ರ ಅಂತ ಸ್ವತಃ ಬೆತ್ತಲಾಗುತ್ತಿರುವ ಮೂಮಾಸ ಎಲ್ಲರೂ ಇದಾರೆ.. ಅವರೆಲ್ಲಾ ಎಷ್ಟು ಪವರ್ಫುಲ್ ಎಂದು ನಿಮಗೆ ಗೊತ್ತೇ ಇದೆಯಲ್ಲಾ? ಇನ್ನು ನಿಮ್ಮ ಬರಹಗಳಿಂದ ನನ್ನ ಮಾನ ಮರ್ಯಾದೆಗೆ ಧಕ್ಕೆ ಬರುತ್ತದೆ ಎಂದು ಕನಸಿನಲ್ಲಿಯೂ ಯೋಚಿಸಬೇಡಿ, ಯಾಕಂದ್ರೆ ನನಗೆ ಅದ್ಯಾವುದೂ ಇಲ್ಲ. . ಇದ್ದಿದ್ದರೆ ಹನ್ನೊಂದು ಸಾವಿರ ಜನ ಮುಖ ವರಸಿಕೊಳ್ಳಲೂ ಪುರುಸೊತ್ತಿಲ್ಲದಂತೆ ಉಗಿದಾಗ ಸಾಬೀತಿನಿಂದ ಪ್ರಶಸ್ತಿಯನ್ನು ತಿರಸ್ಕರಿಸುತ್ತಿರಲಿಲ್ಲವಾ?

ಏನೇ ಇರ್ಲಿ, ಪ್ರಶಸ್ತಿ ಸ್ವೀಕರಿಸುತ್ತಿದ್ದೇನೆ. ಇದಕ್ಕೆ ಕಾರಣವಾಗಿರುವ ನನ್ನ ಮನೆ ದೇವರು ಸಿದ್ಧರಾಮೇಶ್ವರ , ಅಕಾಡೆಮಿಯವರಿಗೆ, ಬೆಂಬಲಿಸಿದ ಈಡಿಯಟ್ಟುಗಳಿಗೆ, ಮೂರ್ಖರಿಗೆ ಮತ್ತು ವಿಶೇಷವಾಗಿ ರಾಜ್ಯದ ಮೂಲೆಮೂಲೆಗೆ ಡಂಗುರ ಸಾರಿರುವ ನಿಮಗೆ ಅನಂತಾನಂತ ಧನ್ಯವಾದಗಳು.

ಇಂತೀ ನಿಮ್ಮ
ಭಗವಾನ

Facebook ಕಾಮೆಂಟ್ಸ್

Shivaprasad Bhat: Engineer by profession writer by passion, Shivaprasad Bhat finds interest in Politics, Cricket, Acting etc. He tries to express his views on various issues through his writings.
Related Post