ಮಾನ್ಯ ಮುಖ್ಯಮಂತ್ರಿಗಳೇ,
ತಾವು ಇತ್ತೀಚಿನ ವಿದ್ಯಮಾನಗಳ ಬಗ್ಗೆ ಪರಿಚಿತರಾಗಿದ್ದೀರಿ ಎಂದು ಭಾವಿಸಿದ್ದೇನೆ. ದುರದೃಷ್ಟವಶಾತ್ ಸಾಮಾನ್ಯ ಜನರಿಗೆ ಅನುಕೂಲವಾಗುವಂತಹ ಬೆಳವಣಿಗೆಗಳಾವೂದು ಆಗಿಲ್ಲ. ಇಂತಹ ಸಮಯದಲ್ಲಿ ಗಾಯದ ಮೇಲೆ ಬರೆ ಎಳೆಯುವಂತೆ ಕರ್ನಾಟಕ ಸರಕಾರದ ಮಾಧ್ಯಮದ ಸಲಹೆಗಾರರು ತಮ್ಮ ಹುದ್ದೆಯನ್ನು ಬಳಸಿಕೊಂಡು ಯುವಜನರ ದಿಕ್ಕನ್ನು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎನ್ನಲು ತುಂಬಾ ವಿಷಾದವಾಗುತ್ತದೆ.
ಅವರು ತಮ್ಮ ಪೇಸಬುಕ್ ಖಾತೆಯಿಂದ ದಿನಾಂಕ 27-ಡಿಸೆಂಬರ್ -2015 ರಂದು ಹಾಕಿದ ಪೊಸ್ಟ ಇದಕ್ಕೆ ಸಾಕ್ಷಿಯಾಗಿದೆ. ಇಲ್ಲಿ ನನಗೆ ಯಾರ ಮೇಲೂ ವೈಯಕ್ತಿಕ ದ್ವೇಷವಿಲ್ಲವೆಂಬುದನ್ನು ಸ್ಪಷ್ಟಪಡಿಸುತ್ತೇನೆ. ನಾನೊಬ್ಬ ಸಾಮಾನ್ಯ ನಾಗರೀಕ. ನಿಮ್ಮ ಸಲಹೆಗಾರರು ರಾಜ್ಯದ ಉನ್ನತ ಹುದ್ದೆಯನ್ನು ಬಳಸಿಕೊಂಡು ಯುವಜನರನ್ನು ತಪ್ಪುದಾರಿಗೆಳೆಯುವುದು ಸಂವಿಧಾನದಕ್ಕೆ ವಿರುದ್ಧವಾದದು! ಒಂದು ರಾಜ್ಯದ ಅಥವಾ ದೇಶದ ಸಂಪತ್ತು ಎಂದರೆ ಯುವಜನತೆ …ಅವರನ್ನು ರಾಜಕೀಯ ದುರುದ್ದೇಶಕ್ಕೆ ಬಳಸುವುದು ಖಂಡನೀಯ ಅಪರಾಧ! ನಾಡಿನ ಅಭಿವೃದ್ಧಿ ಸಂಶೋಧನೆಯ ಕೇಂದ್ರವನ್ನು ಮುಚ್ಚಿಸುವುದರಿಂದಾಗಲಿ, ಅರ್ಥವಿಲ್ಲದ ವಿಷಯಗಳ ಬಗ್ಗೆ ಜಾತಾ ನಡೆಸುವುದಾಗಲೀ ಅಥವಾ ವಿವಾದಿತ ಹೇಳಿಕೆಗಳನ್ನು ನೀಡಿ ಸಾಮಾಜದಲ್ಲಿ ಅಸ್ಥಿರತೆಯನ್ನು ಹುಟ್ಟುಹಾಕುವಲ್ಲಿ ಇಲ್ಲ. ಅವರು ತಮ್ಮ ಪೋಸ್ಟಿನಲ್ಲಿ ನಿಮ್ಮ ವಿವಾದಿತ ಹೇಳಿಕೆಗಳನ್ನು ಮಾದರಿಯಾಗಿ ತಗೆದುಕೊಂಡು ಜನರನ್ನು ಕೋಮುಗಲಬೆಗೆ ಪ್ರಚೋದಿಸಿದ್ದಾರೆ. ಕೇವಲ ಮತದ ಬ್ಯಾಂಕುಗಳು ಉದ್ಧಾರಕ್ಕಾಗಿ ಅಥವಾ ಕೋಮುಗಲಭೆಗೆ ಪ್ರೇರೇಪಿಸುವ ಸಮಾರಂಭಗಳೇ ಸರಕಾರದ ಆಡಳಿತದ ಉದ್ದೇಶವೇ?
ಜನನುಡಿ ಎಂಬ ಸಮಾರಂಭವು ಸರಕಾರದ ಅನುದಾನದಡಿಯಲ್ಲಿ ನಡೆದಂತೆ ನಡೆಯಿತು, ಅಲ್ಲಿ ನಡೆದುದ್ದೇನು? ಚರ್ಚಿಸಿದ್ದೇನು? ಇಲ್ಲಿಯವರೆಗೆ ಸಾವಿರಕ್ಕಿಂತಲೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಅವರ ಬಗ್ಗೆ …ಅವರ ಮಕ್ಕಳ ಭವಿಷ್ಯದ ಬಗ್ಗೆ ಚರ್ಚೆ ನಡೆಸಿದ್ದೀರಾ? ಮಾಧ್ಯಮದ ತುಂಬಾ ಅಸಹಿಷ್ಣುತೆಯ ವಿಷದ ಬೀಜವನ್ನು ಬಿತ್ತಿದಿರಿ…ಅದು ನಿಮ್ಮ ರಾಜಕೀಯ ಸ್ವಾರ್ಥ ಇರಬಹುದು. ಒಮ್ಮೆಯಾದರೂ ರಾಜ್ಯದಲ್ಲಿ ಹೆಚ್ಚಾಗುತ್ತಿರುವ ನಿರುದ್ಯೋಗ ಸಮಸ್ಯೆ ಕುರಿತಾಗಲಿ, ದರೋಡೆ, ಕೋಲೆ ಒಮ್ಮೆಯಾದರೂ ಜನನುಡಿಯಲ್ಲಿ ಹೇಳಿದ್ದಾರೆಯೇ? ಸರಕಾರದ ಹುದ್ದೆ, ಹಣ, ಸವಲತ್ತು ಹಾಗೂ ‘ಪವರ್’ನ್ನು ಬಳಸಿಕೊಂಡು ತಮ್ಮ ಕೆಳಗಿನವರು ಉತ್ತರನ ಪೌರುಷ ತೋರಿಸುವುದರ ಬಗ್ಗೆ ಈ ಮೂಲಕ ಗಮನಕ್ಕೆ ತರುತ್ತಿದ್ದೇನೆ.
ಸಾಮಾನ್ಯ ಜನರಿಗೆ ಸರಕಾರಿ ಉನ್ನತವಾದ ಹುದ್ದೆಯಲ್ಲಿರುವವರಿಂದ ಬೇಕಾಗಿರುವುದು ಸಕಾರಾತ್ಮಕ ಮಾರ್ಗದರ್ಶನ. ಅವರು ಯುವಕರನ್ನು ಕುರಿತು ಬರೆಯುವ ಪೊಸ್ಟಗಳನ್ನೊಮ್ಮೆ ನೋಡಿ…ಸಂಪೂರ್ಣ ನಕಾರಾತ್ಮಕ ವಿಚಾರಗಳು. ಯಾರೋ ಇವರ ಅನುಯಾಯಿಗಳು ಸ್ವಾಮಿಗಳ ವಿರುದ್ಧ ಪೋಲಿಸರಿಗೆ ದೂರು ಕೊಟ್ಟದ್ದು ಸರ್ಕಾರದ ಸಾಧನೆಯೇ? ಟೌನ ಹಾಲ್ ಮುಂದೆ ದಿಕ್ಕಾರ ಹಾಕುತ್ತಾ ಜನಜೀವನ ಅಸ್ತವ್ಯಸ್ಥ ಮಾಡುವುದು ನಿಮ್ಮ ಸಾಧನೇಯೇ? ಹಾಗಿದ್ದರೆ ಕಬ್ಬನಪಾರ್ಕನಲ್ಲಾದ ಬಲತ್ಕಾರಕ್ಕೆ ಯಾರು ಹೊಣೆಗಾರರು? ಬೆಂಗಳೂರಿನಲ್ಲಿ ಸಾಯಂಕಾಲ ಹೆಣ್ಣು ಮಕ್ಕಳು ಹೊರಗೆ ಹೋಗುವ ಹಾಗಿಲ್ಲ. ಕಾನೂನು ವ್ಯವಸ್ಥೆ ಕಾಂಗ್ರೇಸ್ ಮುಖಂಡರು ಬರುವಾಗ ಮಾತ್ರ ಕಂಡು ಬರುತ್ತದೆ. ಇದರ ಬಗ್ಗೆ ಏನಾಗುತ್ತಿದೇ ಎಂದು ಹೇಳುವಿರಾ? After Delhi, Bangalore now has become most unsafe capital in India. ಇದನ್ನು ಕೇಳುವಾಗ, ಓದುವಾಗ ನಿಮ್ಮ ಸ್ವಾಭಿಮಾನಕ್ಕೆ ಸ್ವಲ್ಪವೂ ದಕ್ಕೆ ಬರುವುದಿಲ್ಲವೆ? ಇದನ್ನ ನಿಮ್ಮ ಬುದ್ಧಿ ಜೀವಿ ಸಲಹೆಗಾರರು ಹೇಳಲಿಲ್ಲವೇ? ‘ದಿಲ್ ವಾಲೆ’ ಸಿನೇಮಾದ ಹಂಚಿಕೆದಾರರು ನಿಮ್ಮ ಸಲಹೆಗಾರರಿಗೆ ಎಷ್ಟು ಹಣ ಕೊಟ್ಟಿದ್ದಾರೆ? ಅದೇತಕೆ ಅವರಿಗೆ ಅಷ್ಟು ಒಲವು? ಟಿಪ್ಪು ಸುಲ್ತಾನ ಜಯಂತಿ ಬರೀ ಅಲ್ಪಸಂಖ್ಯಾತರ ಹೆಸರಿನಲ್ಲಿ ಮಾಡಬೇಡಿ ಮಾಡಬೇಡಿ ಎಂದರೂ ಕೇಳಲಿಲ್ಲ …ಸಲಹೆಗಾರರು ಅವರ ಸಲಹೆಗಳನ್ನು ಕೇಳಿದಿರಿ…ಆಗಿದ್ದೇನು? ರಾಜ್ಯದಲ್ಲೆಲ್ಲ ದಂಗೆ! ಇಂತಹ ದುಂದುವೆಚ್ಚ ಮಾಡುವುದಕ್ಕಾಗಿಯೇ ಸಾಮಾನ್ಯರಾದ ನಾವುಗಳು ನಿಯತ್ತಿನಿಂದ ಕಂದಾಯ ತುಂಬುವುದು? ಇಡೀ ರಾಜ್ಯದಲ್ಲಿ ಎಲ್ಲೂ ರಸ್ತೆ ನಿರ್ಮಾಣವಾಗುತ್ತಿಲ್ಲ, ಪ್ಲೈಓವರ್ ಕನಸಾಗಿದೆ, ಮೆಟ್ರೋ ಮುಂದಿನ ಶತಮಾನದಲ್ಲೂ ಆಗೊತ್ತೋ ಇಲ್ಲವೋ? ಇದು ನಿಮ್ಮ ವೈಫಲ್ಯವೇ? ಒಮ್ಮೆ ಆತ್ಮಸಾಕ್ಷಿಗೆ ಕೇಳಿನೋಡಿ! Flipkart ದೇಶದಲ್ಲೇ ಅತೀ ದೊಡ್ಡ ವೇರ್ ಹೌಸ್ ತಗೆಯಲು ರಾಜ್ಯ ಸರ್ಕಾರಕ್ಕೆ ಜಾಗ ಕೇಳಿತ್ತು…ಕೊಡಲಿಲ್ಲ. ಇಂದು ನಮ್ಮ ರಾಜ್ಯದ ಹದಿನೈದು ಸಾವಿರ ಯುವಕರಿಗೆ ಕೆಲಸ ಸಿಗುತ್ತಿತ್ತು. ಅದಕ್ಕೆ ಯಾರು ಹೊಣೆ? ತಾವೊಬ್ಬರೇ ಕುಳಿತು ಮೀನು ತಿಂದರಾಗಲಿಲ್ಲ…ಇನ್ನೊಬ್ಬರಿಗೆ ಮೀನು ಹಿಡಿಯುವ ಅವಕಾಶವನ್ನೂ ಕಲ್ಪಿಸಬೇಕು!
ಕಳೆದ ಆರು ತಿಂಗಳಿಂದ ಸಿಲ್ಕಬೋರ್ಡ, ಇಕೋಸ್ಪೆಸ್, ವೈಟ್ ಫೀಲ್ಡ, ಕೃಷ್ಣರಾಜಪುರಂ, ಹೆಬ್ಬಾಳ, ಇತ್ಯಾದಿ ಜನಜಂಗುಳಿ ಪ್ರದೇಶದಲ್ಲಿ 200 ಮೀ ದಾಟಲು ಒಂದು ತಾಸು ತಗೆದುಕೊಳ್ಳುತ್ತಿದೆ. ಮನೆಗೆ ಬರಲು ಎರಡು ಮೂರು ತಾಸು! ಇದನ್ನು ಹೇಗೆ ಬಗೆಹರಿಸಬೇಕು ಎಂಬುದು ಸರ್ಕಾರದ ಹಾಗೂ ಉನ್ನತ ಹುದ್ದೆಯಲ್ಲಿರುವವರ ಕರ್ತವ್ಯವಲ್ಲವೇ? ಅದನ್ನು ಬಿಟ್ಟು ಜನರ ಮನಸ್ಥಿತಿಯನ್ನು ಹದಗೆಡಿಸುವುದು ಯಾವ ಪುರುಷಾರ್ಥಕ್ಕೆ? ಮುಖ್ಯಮಂತ್ರಿಗಳೇ ಕುಡಿಯಲು ನೀರಿಲ್ಲ, ಆರು ತಿಂಗಳಿನಿಂದ ಕತ್ತಲೆ ಕತ್ತಲೆ, ರಸ್ತೆಯಲ್ಲಿ ಬರೀ ಗುಂಡಿಗಳು, ಟ್ರಾಫಿಕ್ ಜಾಮ್, ಮುಗಿಲೆತ್ತರಕ್ಕೆ ಹೋಗಿದೆ ಬಲಾತ್ಕಾರದ ಕೇಸುಗಳ ಸಂಖ್ಯೆ…ಇದನ್ನೆಲ್ಲ ಸುಧಾರಿಸುವ ಅವಕಾಶವಿರುವಾಗ ಮತ್ಯಾಕೆ ನಿಮ್ಮ ಸಲಹೆಗಾರರು ಕೆಲಸವಿಲ್ಲದೆ ಕೋಮುಗಲಬೆಯನ್ನು ಹುಟ್ಟು ಹಾಕುವುದರಲ್ಲಿ ತೊಡಗಿದ್ದಾರೆ? ನಿಮ್ಮ ಸಹಕಾರವಿಲ್ಲದೆ ಇದು ನಡೆಯಲು ಅಸಾಧ್ಯ. ನಿಮ್ಮನ್ನು ಗೆಲ್ಲಿಸಿ ಮುಖ್ಯಮಂತ್ರಿಗಳಾಗಿ ಮಾಡಿದ್ದಕ್ಕೆ ದಂಗೆ, ವಿವಾದ, ಗುಂಡಿಗಳು, ಕತ್ತಲೆ ಇವು ರಾಜ್ಯದ ಜನತೆಗೆ ಕೊಡುತ್ತಿರುವ ಉಡುಗೊರೆಯೇ?
ರಾಜ್ಯದಲ್ಲಿ ಖಂಡನೆಯಾಯಿತು, ದಂಗೆಯಾಯಿತು ಎಂದು ಯಾವುದೋ ದೊಡ್ಡ ಸಾಧನೆಮಾಡಿದವರಂತೆ ಹೆಮ್ಮೆಯಿಂದ ಹೇಳುವವರಿಗೆ ನೆನಪಿರಲಿ…ಯುವಕರಿಗೆ ಬೇಕಾಗಿರುವುದು ಕೈ ತುಂಬ ಕೆಲಸ, ವ್ಯಾಪಾರ ಮಾಡಲು ರಸ್ತೆ, ವಿದ್ಯುತ್ ಹಾಗೂ ನೀರೇ ವಿನಃ ದಂಗೆ,ಕೋಮುವಾದಗಳು, ಭೀಪು-ಟಿಪ್ಪು, ಸಭೆ, ವಿವಾದಗಳು ಅಲ್ಲ! ನಿಮ್ಮ ರಾಜಕೀಯನ್ನು ಚುನಾವಣೆಯಲ್ಲಿ ಬಳಸಿ, 24X7 ಬರೀ ಹೊಲಸು ರಾಜಕೀಯ ಮಾಡುವುದನ್ನು ನಿಲ್ಲಿಸಿ. ರಾಜಕೀಯ ಸ್ವಾರ್ಥಕ್ಕೆ ಯುವಜನತೆಯ ಮನಸ್ಸನ್ನು ಕೆಡಿಸಿ, ಅವರ ಬದುಕನ್ನು ಹಾಳುಮಾಡುವುದನ್ನು ಕಡಿಮೆಮಾಡಿ ಎಂಬ ಸಲಹೆಯನ್ನು ನಿಮ್ಮ ಸಲಹೆಗಾರರಿಗೆ ಕೊಡಿ. ನೀವು ಮಾಡುವ ಒಂದಾದರೂ ಒಳ್ಳೆಯ ಕೆಲಸ ನಿಮ್ಮ ಹಾಗೂ ನಿಮ್ಮ ಸಲಹೆಗಾರರ ವೃದ್ಧಾಪ್ಯದ ದಿನಗಳ ನೆನಪಿಗೆ ಇರಲಿ!
ಕರ್ನಾಟಕದ ಸಾಮಾನ್ಯ ನಾಗರಿಕ ,
ವಿಕ್ರಮ್ ಜೋಷಿ
vikrammr@gmail.com
Facebook ಕಾಮೆಂಟ್ಸ್