X
    Categories: ಕಥೆ

ಅನಾವರಣ

ಅಂಗಳದಲ್ಲಿ ನಿಶ್ಶಬ್ದ ಆವರಿಸಿತ್ತು. ಮಲಗಿದ ವ್ಯಕ್ತಿಯ ತಲೆಯ ಪಕ್ಕದಲ್ಲೇ ಕುಡಿಬಾಳೆಯಲ್ಲಿ ಕೂಡಿಟ್ಟಿದ್ದ ಅಕ್ಕಿ ಕಾಯಿಗಳು ಆ ವ್ಯಕ್ತಿಯ ಮರಣವನ್ನು ತೋರಿಸುತ್ತಿತ್ತು. ಪಕ್ಕದಲ್ಲಿ ಹಚ್ಚಿಟ್ಟಿದ್ದ ದೀಪ ತಾನೂಆಗಲೋ ಈಗಲೋ ಆರುವೆನೆಂಬಂತೆ ಗಾಳಿಯೊಂದಿಗೆ ಗುದ್ದಾಟ ನಡೆಸಿತ್ತು. ಆ ವ್ಯಕ್ತಿಯ ಬಗ್ಗೆ ಅಲ್ಲಿ ಕುಳಿತಿದ್ದವರ ಬಾಯಲ್ಲಿ ಯಾವ ಮಾತುಗಳೂ ಬಾಕಿ ಉಳಿದಂತೆ ಕಂಡುಬರಲಿಲ್ಲ. ಉಚ್ಛ ಜಾತಿಯಕುಟುಂಬದ ಮನೆಯೆದುರು ಆ ಮನೆಯ ಒಡತಿಯೋ ಎಂಬಂತಿದ್ದ ಮನೆಗೆಲಸದಾಕೆ ಜೀವವನ್ನು ತೊರೆದಿದ್ದಳು. ಗಂಡ-ಮಕ್ಕಳು-ಸಂಸಾರವಿಲ್ಲದ ಆಕೆ ಜೀವನವಿಡೀ ದುಡಿದದ್ದೂ ಅಲ್ಲೆಯೇ. ಮಣ್ಣುಮಾಡುವ ಜವಾಬ್ದಾರಿಯೂ ಆ ಮನೆಯವರದೇ. ಅದೇ ಅವರಿಗೆ ಹೊರೆಯಾದಂತಿತ್ತು ಆ ಮನೆಯವರ ಮುಖಭಾವ. ಅಷ್ಟರಲ್ಲಿ ಅಲ್ಲಿಗೆ ಬಂದ ಆ ಮನೆಯ ಕಿರಿಮಗ ಬಂದವನೇ ಸೀದಾ ಆ ತಾಯಿಯಪಾದಕ್ಕೆರಗಿ ನಮಸ್ಕರಿಸಿ ಹೇಳಿದ, “ಈಕೆಯನ್ನು ನಾವೇ ಮಣ್ಣು ಮಾಡಬೇಕೆಂದು ತಂದೆಯವರು ನನ್ನಲ್ಲಿ ಮಾತು ತೆಗೆದುಕೊಂಡಿದ್ದರು…” ಮತ್ತದೇ ನಿಶ್ಶಬ್ದ ಆವರಿಸಿತು ಉರಿಯುತ್ತಿರುವ ದೀಪದಸದ್ದನ್ನೂ ಅಡಗಿಸುವಂತೆ. ಆಕೆ ಗೊತ್ತುಗುರಿಯಿಲ್ಲದ ಹೆಂಗಸು. ಬಾಲ್ಯದಲ್ಲೇ ಯಾವಾಗಲೋ ಆಕೆಯ ಮದುವೆಯಾಗಿತ್ತಂತೆ, ಅದು ಆಕೆಗೂ ನೆನಪಿಲ್ಲದಿರಬಹುದು. ಏಕೆಂದರೆ ಆಕೆಯ ಗಂಡ ಆಕೆಗೆಬಾಲ್ಯದಲ್ಲೇ ವೈಧವ್ಯ ಕರುಣಿಸಿದ್ದನಂತೆ. ಊರೂರು ತಿರುಗುತ್ತಾ ತಂದೆಯೊಂದೆಗೆ ದುಡಿಮೆಗೆ ನಿಂತಿದ್ದಳವಳು. ತಿರುಗೀ ತಿರುಗೀ ಈ ಊರಿಗೆ ಬಂದಾಗ ಆಕೆಯ ತಂದೆಯೂ ಮರಣಿಸಿದ.ಜೊತೆಯಿಲ್ಲದ ಹಕ್ಕಿಗೆ ಬೇರೆ ಗೂಡೊಂದನ್ನು ಅದಾಗಲೇ ದೇವರು ಕರುಣಿಸಿದ್ದ. ಅದು ಆ ಊರಿನ ಮರ್ಯಾದಸ್ಥ ಉಚ್ಛ ಜಾತಿಯವರ ಕುಟುಂಬ. ಆ ಪುಟ್ಟ ಊರಿಗೆ ಆ ಮನೆಯೇ ದೊಡ್ಡ ಒಡೆಯರಮನೆ. ಕಷ್ಟ ಸುಖಕ್ಕೆಲ್ಲ ಊರಿನ ಬಡಜನರಿಗೆ ಆ ಮನೆಯೇ ದಿಕ್ಕು. ಆ ಮನೆಯೊಡೆಯನಿಗೆ ಮದುವೆಯಾಗಿ ನಾಲ್ಕೈದು ಜನ ಮಕ್ಕಳು. ಹಾಲುಂಡು ಆಡಿ ಬೆಳೆಯುವ ಚಿಕ್ಕ ಮಗನಿರುವಾಗಲೇ ಆಮನೆಯ ತಾಯಿ ತೀರಿಕೊಂಡಳು. ಬೆಳೆವ ಮಕ್ಕಳಿಗೆ ಒಂಟಿ ತಂದೆಯಿಂದ ತಾಯಿಯ ಸ್ಥಾನ ಪೂರೈಸಲಾಗಲಿಲ್ಲ. ಅಷ್ಟೊತ್ತಿಗೆ ಸರಿಯಾಗಿ ಗೊತ್ತು ಗುರಿಯಿಲ್ಲದೇ ತಿರುಗುತ್ತಿದ್ದ ಕುಟುಂಬದ ತಂದೆಮರಣಿಸಿ ಈಕೆ ಒಂಟಿಯಾಗಿದ್ದಳು. ಈ ಬಡ ಮಕ್ಕಳಿಗೆ ತಾಯಿಯ ಆರೈಕೆ ದೊರೆಯಲಿ ಎಂಬ ಉದ್ದೇಶದಿಂದ ಆ ತಂದೆ ಅವಳನ್ನು ತನ್ನ ಮನೆಯಲ್ಲೇ ತಂದಿಟ್ಟುಕೊಂಡ; ತಾಯಿಯಾಗಿರುವಂತೆ.ನಿಧಾನವಾಗಿ ಕಾಲ ಸರಿಯುತ್ತಿತ್ತು. ಆ ತಂದೆಯ ಮಕ್ಕಳೆಲ್ಲ ಈಕೆಯ ಆರೈಕೆಯಲ್ಲಿ ಬೆಳೆಯುತ್ತಿದ್ದವು. ತಂದೆ ತನ್ನದೇ ವ್ಯವಹಾರಗಳಲ್ಲಿ ತೊಡಗಿದ್ದ. ಹಾಗೆ ಒಂದು ದಿನ ತಂದೆಗೆ ತನ್ನ ಒಂಟಿತನದ ಬಗ್ಗೆಏಕೋ ನಿರಾಸಕ್ತಿಯುಂಟಾಗಿತ್ತು. ವಯಸ್ಸಿನ ಬಯಕೆಯೋ, ಮನಸ್ಸಿನ ಚಪಲವೋ; ಆಕೆ ಕೇವಲ ಮಕ್ಕಳಿಗೆ ತಾಯಿಯಷ್ಟೇ ಅಲ್ಲದೇ ತಂದೆಗೆ ಹೆಂಡತಿಯೂ ಆದಳು, ಲೋಕಕ್ಕೆ ತಿಳಿಯದಂತೆ……

ಆಕೆ ಆ ಮಕ್ಕಳನ್ನು ಸಾಕಿ ದೊಡ್ಡ ಮಾಡಿದಳು. ದೊಡ್ಡ ಮಗ ಮನೆ ಬಿಟ್ಟು ಪೇಟೆ ಸೇರಿದ್ದ. ನಂತರದವ ದೊಡ್ಡವನ ಜೊತೆಗೇ ಓದಲು ಹೋದ. ನಂತರದವಳಿನ್ನೂ ಪ್ರೌಢಶಿಕ್ಷಣ ಪಡೆಯುತ್ತಿದ್ದಳಷ್ಟೇ.ಮತ್ತೊಬ್ಬ ಅಂಗನವಾಡಿಯ ಅಂಗಳದಲ್ಲಿದ್ದ. ಆಗಲೇ, ಆ ಮನೆಯ ತಂದೆ ದೇವರ ಪಾದ ಸೇರಿದರು. ಒಂಟಿಯಾಗಿದ್ದ ಮಕ್ಕಳು ಈಗ ಒಬ್ಬಂಟಿಯಾಗಿಬಿಟ್ಟವು. ಆ ಸಂಧರ್ಭದಲ್ಲಿ ಈಕೆಯ ಮಡಿಲೇಅವಕ್ಕೆ ಆಸರೆಯಾಗಿದ್ದವು. ಅತ್ತರೂ ಬಿಟ್ಟರೂ ಕಣ್ಣೀರೊರೆಸುತ್ತಿದ್ದ ಕೈ ಈ ಸಾಕುತಾಯಿಯದೇ. ದುಸ್ತರದ ದಿನಗಳು ಆರಂಭವಾಗಿದ್ದವು. ಆ ಮನೆಗೆ ಮತ್ಯಾರೂ ದಿಕ್ಕೇ ಇರಲಿಲ್ಲ. ಈಕೆಯೇ ಮನೆಯಎಲ್ಲಾ ಜವಾಬ್ದಾರಿಯನ್ನ ಹೊತ್ತಳು. ಆದರೆ ಇವಳ ಜಾತಿ ಕೆಳಮಟ್ಟದಾದ್ದರಿಂದ ಮನೆಯೊಳಗೆ ಹೋಗುವಂತಿಲ್ಲ., ಜವಾಬ್ದಾರಿ ಬಿಡುವಂತೆಯೂ ಇಲ್ಲ. ಹೇಗೋ ಆ ಪುಟ್ಟ ಮಕ್ಕಳನ್ನಿಟ್ಟುಕೊಂಡು ಕಾಲದೂಡುತ್ತಿದ್ದಳಾಕೆ. ಅವಳಿಗೋಸ್ಕರ ಅವಳು ಏನನ್ನೂ ಬಯಸಲಿಲ್ಲ. ತನ್ನದೇ ಸಂಸಾರವೂ ಇಲ್ಲ, ಬಂಧು ಬಳಗವೂ ಇಲ್ಲ. ಹಾಗಿದ್ದ ಮೇಲೆ ಹಣದ ಮೇಲೆಯೂ ಆಸೆಯಿಲ್ಲ. ಅವಳ ಕಣ್ಣಲ್ಲಿದ್ದುದೊಂದೇ ಆಮನೆಯ ಮಕ್ಕಳ ಅಭ್ಯುದಯ, ಅಷ್ಟೇ. ಅದಕ್ಕೋಸ್ಕರ ಆಕೆ ಎಲ್ಲವನ್ನೂ ಅಂದೇ ತ್ಯಾಗ ಮಾಡಿಬಿಟ್ಟಿದ್ದಳು. ಹುಟ್ಟಿದಾಗಿನಿಂದ ಕಷ್ಟಪಡುತ್ತಲೇ ಇದ್ದರೂ ಈ ಮನೆ ಸೇರಿದ ಮೇಲೆ ಸ್ವಲ್ಪ ಕಾಲಸುಖಪಟ್ಟಳು. ಆದರೆ ಮತ್ತೆ ಈಗ ಅದೇ ಕಷ್ಟದ ಅಡಿಪಾಯದ ಮೇಲೆ ಅರಮನೆ ಕಟ್ಟಬೇಕಿತ್ತು. ದುಡಿದಳು ಕತ್ತೆ ದುಡಿದಂತೆ. ಮನೆಯ ಜವಬ್ದಾರಿಯ ನೊಗ ಹೊತ್ತಳು. ಹೆತ್ತ ತಂದೆ ತಾಯಿಯರಂತೆಸಾಕಿದಳು ಆ ಮಕ್ಕಳನ್ನು. ರಾತ್ರಿ ಹಗಲೆನ್ನದೇ ಶ್ರಮಿಸಿದಳು. ಗದ್ದೆ ಉತ್ತಳು, ಗೊಬ್ಬರ ಹೊತ್ತಳು. ನೀರುಣಿಸಿದಳು, ಕಣ್ಣೀರನ್ನ ಕಟ್ಟಿಟ್ಟಳು. ಮನೆಯ ಗೌರವವನ್ನು ಕಣ್ರೆಪ್ಪೆಯಂತೆ ಕಾಪಾಡಿದಳು.ಮಕ್ಕಳನ್ನು ಓದಿಸಿದಳು. ತಮ್ಮ ಕಾಲ ಮೇಲೆ ಎಲ್ಲ ನಿಲ್ಲುವಂತೆ ಮಾಡಿದಳು. ಆದರೆ ಎಂದೂ ಆ ಮನೆಯ ತಂದೆ ಭಾವಚಿತ್ರದೆದುರು ದೀಪ ಆರಲು ಬಿಡಲಿಲ್ಲ. ಹೆಣ್ಣು ಮಗಳ ಮದುವೆಯನ್ನೂಮಾಡಿದಳು. ಗಂಡುಮಕ್ಕಳಿಗೂ ಒಪ್ಪುವಂತಹ ಸೊಸೆಯರನ್ನೂ ತಂದಳು. ಆದರೆಂದೂ ಮನೆಯೊಳಗೆ ಕಾಲಿಡಲಿಲ್ಲ. ಆ ಮನೆಯೇ ಅವಳ ದೊಡ್ಡ ಜಗತ್ತಾಗಿತ್ತು.

ಕಿರಿಯ ಮಗ ಹೊರಗಡೆ ದುಡಿಯಲು ಹೋದ ನಂತರ ದೊಡ್ಡ ಮಗ ಮನೆಗೆ ವಾಪಾಸಾದ. ಆಮೇಲೇನಾಯ್ತೋ ಅವನಿಗೆ, ಈಕೆಯನ್ನ ಕಡೆಗಣಿಸುತ್ತಾ ಬಂದ. ಸಹಿಸಿಕೊಂಡಳಾಕೆ. ಮನೆಯಜವಾಬ್ದಾರಿಯನ್ನು ಅವನಿಗೆ ಕೊಟ್ಟಳು. ಹೇಗೋ ಆತ ಮನೆ ನಡೆಸತೊಡಗಿದ. ನಿಧಾನಕ್ಕೆ ಆ ಸಂಸಾರ ಈಕೆಯನ್ನ ದೂರವಿಡುತ್ತಾ ಬಂತು. ಅವನ ಮೇಲೆ ಏನೇನೋ ಸಂಶಯ ಪಟ್ಚನಾತ. ಆಕೆಗೆಬೇರೆ ಮನೆಯನ್ನೇ ಮಾಡಿದ, ಈ ಮನೆಯಿಂದ ಆಕೆಯನ್ನ ಹೊರದಬ್ಬಿದ. ನೊಂದಳಾಕೆ. ಆದರೂ ಆಗಾಗ ಈ ಮನೆಗೆ ಬಂದು ಹೋಗುತ್ತಿದ್ದಳು. ಈತನಿಗೂ ಮಕ್ಕಳಾದವು., ಮಕ್ಕಳ ನಾಮಕರಣಚೌಲ ಉಪನಯನಗಳಿಗೆ ಈಕೆಗೆ ಕರೆಯೇ ಹೋಗಲಿಲ್ಲ. ಮೊದಲೇ ನೊಂದಿದ್ದಳಾಕೆ. ದೂರದಿಂದ ಸುದ್ದಿ ತಲುಪಿದರೂ ಬರಲಿಲ್ಲ. ಅವಳು ಎತ್ತಿ ಮುದ್ದಾಡಿದ್ದ ಮಕ್ಕಳು ಹೀಗೆ ಮಾಡುತ್ತಾರೆಂದೂಊಹಿಸಿರಲಿಲ್ಲ. ಆ ಮನೆಯ ಕಿರಿಮಗನಿಗೂ ಮದುವೆ ನಿಶ್ಚಯವಾಯ್ತು. ಕಿರಿಮಗನಿಗೆ ಆಕೆ ತಾಯಿಯೇ ಆಗಿದ್ದಳು. ಅವನ ಒತ್ತಾಯದ ಮೇರೆಗೆ ಆಕೆ ಈ ಬಾರಿ ಕರೆಯೋಲೆ ನೀಡಿದ್ದರು. ದೊಡ್ಡದಾಗಿಮದುವೆಯೂ ಜರುಗಿತು. ಶ್ರೀಮಂತಿಕೆ ಕಾಲು ಮುರಿದುಬಿದ್ದಂತಿದ್ದ ಆ ಮದುವೆಯಲ್ಲಿ ಈಕೆಗೆ ಒಂದು ಚಪ್ಪು ಸೀರೆಯನ್ನು ನೀಡಿ ಗೌರವಿಸಲೂ ಇಲ್ಲ, ಆಕೆ ಪೂರ್ತಿ ಇಳಿದೇ ಹೋಗಿದ್ದಳು. ಕಿರಿಮಗಮದುವೆಯಾಗಿ ಮತ್ತೆ ಪೇಟೆ ಸೇರಿದ,,ಇವಳನ್ನ ಮಾತನಾಡಿಸೋರು ಯಾರೂ ಉಳೀಲಿಲ್ಲ. ಅವಳ ಮನಸ್ಸಿನಲ್ಲಿ ಒಂದು ಸಣ್ಣ ಕಲ್ಮಶವೂ ಇರಲಿಲ್ಲ. ತಮಗಿಷ್ಟ ಬಂದಂತೆ ನಡೆದುಕೊಂಡದ್ದರಿಂದ ಆಕೆಮತ್ತಷ್ಟು ಕೃಶಗೊಂಡಳು. ಜೀವವಿದೆಯೆಂದಾದರೆ ಒಂದೊತ್ತಾದರೂ ಉಣ್ಣಬೇಕಲ್ಲ. ಬೇರೆಯವರ ಮನೆಗೆ ದುಡಿಮೆಗೆ ಹೋದಳು, ಬಂದ ಹಣದಿಂದ ಜೀವನ ನೆಡೆಸತೊಡಗಿದಳು. ಹಾಗೋ ಹೀಗೋಗುದ್ದಾಡಿ ಜೀವನ ನೆಡೆಸಿ ಕೊನೆಗೊಂದು ದಿನ ಅವಳಿಗೆ ಆಶ್ರಯ ಕೊಟ್ಟ ಗಂಡನಲ್ಲದ ಗಂಡನ ಮನೆಯೆದುರೇ ಜೀವ ಬಿಟ್ಟಳು. ಜೀವನದ ಹಲವಾರು ಮುಖಗಳನ್ನು ನೋಡಿದ ಆಕೆಯ ಪಾಲಿಗೆ ಕೊನೆಗೆಒಂದೂ ಉಳೀಲಿಲ್ಲ, ನೀರು ಬಿಡಲೂ ಜನರಿಲ್ಲದೇ ಜೀವ ಬಿಟ್ಟಳಾಕೆ. ಕಿರಿಮಗ ಹೇಳಿದ ಮಾತು ಕೇಳಿ ಸೇರಿದ್ದ ಎಲ್ಲರೂ ಸ್ತಬ್ದರಾಗಿದ್ದರು. ಎಲ್ಲರೂ ಸೇರಿ ಅವಳನ್ನು ಮಣ್ಣು ಮಾಡಿದರು ಬೇರೆವಿಧಿಯಿಲ್ಲದೇ. ಮನುಷ್ಯನ ಆಸೆಗೆ ಕೊನೆಯೇ ಇಲ್ಲ, ಮಣ್ಣು ಮಾಡಿ ಕಿರಿಮಗ ಮತ್ತೆ ಪೇಟೆಗೆ ಹೊರಟ ಮರುದಿನವೇ ಅವಳು ವಾಸಿಸುತ್ತಿದ್ದ ಮನೆಗೆ ದಾಳಿ ಮಾಡಿದ ಹಿರಿಮಗ.

ಅವಳಿಲ್ಲದೇ ಬಣದುಡುತ್ತಿತ್ತು ಮನೆಯ ಪ್ರಾಂಗಣ. ಬೀಗವೂ ಇಲ್ಲದ್ದರಿಂದ ಸೀದಾ ಒಳಗೆ ಬಂದ ಹಿರಿಮಗ. ದೇವರ ಫೋಟೋನೂ ಇರಲಿಲ್ಲ, ಆದರೆ ಇವನ ಅಪ್ಪನ ಫೋಟೋ ಮಾತ್ರವಿದ್ಯುದ್ದೀಪದಿಂದ ಹೊಳೆಯುತ್ತಿತ್ತು. ಮನೆಯನ್ನು ಕಿತ್ತು ಕುಡುಗಿದನಾತ. ಏನೇನೋ ಸಿಕ್ಕವು. ಅವ ದಂಗಾಗಿ ಹೋದ. ಇದು ಸಾಧ್ಯಾನ ಅಂತ ಅತ್ತುಬಿಟ್ಟ. ಹಳೇ ಟ್ರಂಕೊಂದರೊಳಗೆ ಒಂದಷ್ಟುಕಾಗದಗಳು, ಬ್ಯಾಂಕಿಗೆ ಸಂಬಂಧಪಟ್ಟ ಹಾಳೆಗಳೂ ಸಿಕ್ಕವು. ಒಂದು ಹಾಳೆಯಲ್ಲಿ ಅವನ ಅಪ್ಪ ಈಕೆಗೆ ಆಸ್ತಿ ಪಾಸ್ತಿಗಳನ್ನ ಬರೆದಿದ್ದ ಕಾಗದವೂ ಸಿಕ್ಕಿತು. ಅದರಲ್ಲಿ ಅವರ ಅಪ್ಪ ಈಕೆಯನ್ನ ತನ್ನಎರಡನೇ ಹೆಂಡತಿಯೆಂದೇ ನಮೂದಿಸಿದ್ದ. ಬ್ಯಾಂಕಿನಲ್ಲಿ ಆಕೆ ಈ ಮಕ್ಕಳೆಲ್ಲರ ಹೆಸರಿನಲ್ಲಿ ನಿರ್ಧಿಷ್ಟಾವಧಿ ಠೇವಣಿಗನ್ನ ಮಾಡಿಟ್ಟಿದ್ದ ಪತ್ತಗಳೂ ಸಿಕ್ಕವು. ಒಂದಷ್ಟು ಹಣವೂ ಸಿಕ್ಕಿತು.ಅರಿತುಕೊಂಡನಾತ. ಅವನಿಗೆ ಎಲಲ್ ಅರ್ಥವಾಗತೊಡಗಿತ್ತು. ಆಸ್ತಿಪಾಸ್ತಿಗಳೆಲ್ಲವೂ ಈಕೆಯ ಹೆಸರಿನಲ್ಲಿದ್ದರೂ ಮನೆಯಿಂದ ಹೊರಹಾಕಿದ ನಂತರ ಒಮ್ಮೆಯೂ ಈಕೆ ಬಂದು ಕೂಗಾಡಲಿಲ್ಲವಲ್ಲ.,ತಾನು ದುಡಿದು ಕೂಡಿದ ಹಣವನ್ನ ನಮ್ಮ ಹೆಸರಿನಲ್ಲಿ ಠೇವಣಿ ಮಾಡಿದ್ದಾಳೆ. ನಮಗೆ ತಾಯಾಗಷ್ಟೇ ಅಲ್ಲದೇ ಅಪ್ಪನಿಗೂ ಹೆಂಡತಿಯಾಗಿದ್ದರೂ ಒಮ್ಮೆಯೂ ಅದರ ಬಗ್ಗೆ ಹೊರಗೆಲ್ಲೂ ಹೇಳಲಿಲ್ಲ.,ತನ್ನೊಳಗಿನ ನೋವನ್ನು ಮರೆತು ನಮ್ಮ ಒಳಿತನ್ನನು ಬಯಸಿದ್ದಳು. ಅವನಿಗೆ ಅನ್ನಿಸತೊಡಗಿತು. ಇಷ್ಟು ಕಾಲ ಒಟ್ಟಿಗಿದ್ದರೂ ಈಕೆಯ ಅಂತರಾಳ ನಮಗೆ ತಿಳಿಯದೇ ಹೋಯಿತಲ್ಲ, ಚಿಕ್ಕಂದಿನಂದಮದುವೆಯಾಗುವವರೆಗೂ ಈಕೆಯೊಂದಿಗೆ ಪಯಣಿಸಿದರೂ ಈಕೆಯ ಮನದಾಳ ನನಗೆ ತಿಳೀಲಿಲ್ಲವಲ್ಲ. ನಮ್ಮ ಮೇಲೆ ಇಷ್ಟೊಂದು ಕಾಳಜಿ ಪ್ರೀತಿಯನ್ನಟ್ಟಿದ್ದರೂ ನಾವು ಒಂದೇ ಒಂದು ಮುತ್ತನ್ನೂಆಕೆಗೆ ನೀಡಲಾಗಲಿಲ್ಲವಲ್ಲ. ಗೋಣು ಕೆಳಗೆ ಹಾಕಿಕೊಂಡು ಮನೆ ಕಡೆ ಹೊರಟನಾತ, ಸಂಜೆಯಾಗತೊಡಗಿತು. ಎಂದಿನಂತೆ ಮತ್ತೆ ಬೆಳಗಾಗಿತ್ತು. ಕೋಳಿ ಕೂಗುತ್ತಿತ್ತು. ಆದರೆ ಅವನಿಗೆ ಆಕೆಯನ್ನಮರೆಯಲಾಗುತ್ತಿಲ್ಲ, ಆದರೆ, ಅವನಪ್ಪನ ಫೋಟೋದ ಪಕ್ಕದಲ್ಲಿ ಆಕೆಯ ಫೋಟೋವೂ ಕೂಡ ಇವನು ದೀಪ ಹಚ್ಚುತ್ತಾನೋ ಎಂದು ಕಾದುಕುಳಿತಿತ್ತು.

  • Girish Bhat B K

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post