X

ಭಾರತದಲ್ಲಿ ಬಾಸ್ – ಭಾರತ್ ಆಪರೇಟಿಂಗ್ ಸಿಸ್ಟಮ್ ಸೊಲ್ಯೂಷನ್ಸ್

ಮೇಕ್ ಇನ್ ಇಂಡಿಯಾದ ಇನ್ನೊಂದು ಪ್ರಮುಖವಾದ ಹೆಜ್ಜೆ ಎನ್ನಬಹುದಾಗಿದೆ. ನಮಗೆ ವಿಂಡೋಸ್ ಆಪರೇಟಿಂಗ್ ಸಿಸ್ಟಮ್ ಬಳಸಿಯೇ ಗೊತ್ತು. ನಮ್ಮದೇ ಸ್ವತಃ ಇದು ಭಾರತದ್ದು ಎನ್ನುವಂತಹ ಆಪರೇಟಿಂಗ್ ಸಿಸ್ಟಮ್ ಇಂದಿನವರೆಗೂ ಬಂದಿರಲಿಲ್ಲ. ಅಂದು ಆ ಕಾಲದಲ್ಲಿ ವಿಶ್ವಕ್ಕೆ ಸೆಡ್ಡು ಹೊಡೆದು ಸೂಪರ್ ಕಂಪ್ಯೂಟರ್ ತಯಾರಿಸಿದ ಭಾರತಕ್ಕೆ ತನ್ನದೇ ಆಪರೇಟಿಂಗ್ ಸಿಸ್ಟಮ್ ಶುರು ಮಾಡುವುದು ದೊಡ್ಡ ವಿಷಯವಾಗಿರಲಿಲ್ಲ ಆದರೆ ಅದನ್ನು ಯಾರೂ ಸಾಧ್ಯ ಮಾಡಿರಲೂ ಇಲ್ಲ. ಆದರೆ ಇಂದು ಭಾರತ ಸರ್ಕಾರ ಹೆಮ್ಮೆಯಿಂದ ಈ ವಿಷಯವನ್ನು ತಿಳಿಸಿದೆ, ಸರ್ಕಾರಿ ಕಚೇರಿಗಳಲ್ಲಿ ಮೈಕ್ರೋಸಾಫ್ಟ್ ವಿಂಡೊಸ್ ಆಪರೇಟಿಂಗ್ ಸಿಸ್ಟಮ್ ಬದಲಿಗೆ ಉಪಯೋಗಿಸಲು ಭಾರತ ಸರ್ಕಾರ ತನ್ನದೇ ಆದ ಆಪರೇಟಿಂಗ್ ಸಿಸ್ಟಮ್ ಅನ್ನು ಮುಂದಿನ ವಾರ ಬಿಡುಗಡೆ ಮಾಡಲಿದೆ.

Bharat Operating System Solutions (BOSS) – ಭಾರತ್ ಆಪರೇಟಿಂಗ್ ಸಿಸ್ಟಮ್ ಸೊಲ್ಯೂಷನ್ಸ್ ಎನ್ನುವುದು ಉಚಿತವಾಗಿ ಸಿಗುವ ಹಾಗೂ ಲೈನೆಕ್ಸ್ ಡಾಟಾಬೇಸ್ ಅನ್ನು ಹೊಂದಿದೆ. ಭಾರತದ ನ್ಯಾಷನಲ್ ರಿಸೋರ್ಸ್ ಸೆಂಟರ್ ಫಾರ ಫ್ರೀ/ಓಪನ್ ಸಾಫ್ಟವೇರ್ ಸಂಸ್ಥೆ ಅಡಿಯಲ್ಲಿ ಅಡ್ವಾನ್ಸ್ಡ್ ಕಂಪ್ಯೂಟಿಂಗ್ ಅಭಿವೃದ್ಧಿ ಕೇಂದ್ರದಿಂದ ಅಭಿವೃದ್ಧಿಪಡಿಸಲಾಗಿದೆ.

ಭಾರತ್ ಆಪರೇಟಿಂಗ್ ಸಿಸ್ಟಂ ಆಧಾರಿತವಾಗಿದ್ದು ಗುಜರಾತ್ ತಾಂತ್ರಿಕ ವಿಶ್ವವಿದ್ಯಾನಿಲಯ, ಡಿಆರ್.ಡಿ.ಒ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿದೆ. 2013 ರಲ್ಲಿ ಬಾಸ್ ನ್ನು ಅಭಿವೃದ್ಧಿಪಡಿಸಲಾಗಿತ್ತು. ಹಲವು ಬದಲಾವಣೆಗಳೊಂದಿಗೆ ಈಗ ಮತ್ತೊಮ್ಮೆ ಸರ್ಕಾರಿ ಕಛೇರಿಗಳಲ್ಲಿ ಬಳಕೆ ಮಾಡುವ ಯೋಜನೆಯೊಂದಿಗೆ ಬಿಡುಗಡೆ ಮಾಡಲಾಗುತ್ತಿದೆ.

ಭಾರತೀಯ ಭಾಷೆಗಳಾದ – ಕನ್ನಡ, ಅಸ್ಸಾಂ, ಬಂಗಾಳಿ, ತೆಲುಗು, ಮರಾಠಿ, ಮಣಿಪುರಿ, ಕಾಶ್ಮೀರಿ, ಉರ್ದು, ಬೋಡೋ, ಒಡಿಸ್ಸಿ ಕೊಂಕಣಿ, ಗುಜರಾತಿ, ಪಂಜಾಬಿ, ಹಿಂದಿ, ಮಲಯಾಳ, ತಮಿಳು, ಸಂಸ್ಕೃತ ಇನ್ನೂ ಹಲವು ಭಾಷೆಗಳಲ್ಲಿ ಲಭ್ಯವಿದೆ.
ಈಗ ಪುನಃ ಲಾಂಚ್ ಮಾಡಲಾಗುತ್ತಿರುವ ಈ ಆಪರೇಟಿಂಗ್ ಸಿಸ್ಟಂನಲ್ಲಿ ಮೊದಲಿದ್ದ ಹ್ಯಾಕಿಂಗ್ ತೊಂದರೆಗಳನ್ನೆಲ್ಲಾ ನಿಭಾಯಿಸುವಂತೆ ಅಭಿವೃದ್ಧಿಪಡಿಸಿದ್ದಾರೆ ಎನ್ನಲಾಗಿದೆ. ಕಳೆದ ೩ ತಿಂಗಳುಗಳಿಂದ ಸತತವಾಗಿ ಬರಬಹುದಾದ ಹಲವು ತೊಂದರೆಗಳನೆಲ್ಲಾ ಪರೀಕ್ಷಿಸಿ, ಭಾರತೀಯ ಸೇನೆಗೂ ಸಮರ್ಥವಾಗುವಂತೆ ನಿರ್ಮಿಸಿದ್ದಾರೆ.

ವಿಂಡೋಸ್ ಗೆ ಪ್ರತಿಸ್ಪರ್ಧಿಯಾಗಿ ಬಾಸ್ ನಿಲ್ಲಲಿದೆ ಎಂಬ ಮಾತು ಕೇಳಿಬರುತ್ತಿದೆ ಅದೇನೆ ಇರಲಿ ನಮ್ಮದೇ ಒಂದು ಆಪರೇಟಿಂಗ್ ಸಿಸ್ಟಮ್ ಗೆದ್ದರೆ ಅದು ನಿಜವಾಗಿಯೂ ಭಾರತದ ಗೆಲುವು. ಜೊತೆಗೆ ಇದರೊಂದಿಗೆ ಭಾರತದಲ್ಲಿ ಇನ್ನೊಂದಿಷ್ಟು ಉದ್ಯೋಗ ಸೃಷ್ಟಿಯಾದರೆ ಇನ್ನಷ್ಟು ಸಂತೋಷ.

ಇದರ ಹಿಂದಿರುವ ಎಲ್ಲಾ ವಿಜ್ಞಾನಿಗಳು – ಇಂಜಿನಿಯರುಗಳಿಗೆ “ಇಂಜಿನಿಯರ್’ಸ್ ದಿನ”ದ ಶುಭಾಶಯ ಕೋರುತ್ತಾ ಆಲ್ ದಿ ಬೆಸ್ಟ್ ಹೇಳೋಣ….

Facebook ಕಾಮೆಂಟ್ಸ್

Readoo Staff: Tailored news content, just for you.
Related Post