ಸಣ್ಣದಿರುವಾಗ ನಾವೇನಾದರೂ ನಮ್ಮ ಅರ್ಹತೆಗೆ ಮಿರಿದ ಮಾತುಗಳನ್ನಾಡಿದರೆ, ವಿತಂಡವಾದ ಮಾಡಿದರೆ ‘ನೀನು ಕಲಿತಿದ್ದು ಜಾಸ್ತಿಯಾಯಿತು’ ಎಂದು ನಮ್ಮ ಹಿರಿಯರು ಜರೆಯುತ್ತಿದ್ದರು. ಈ ಬಾಯಿ ಚಪಲಕ್ಕಾಗಿ ‘ಭಗವದ್ಗೀತೆಯಲ್ಲಿ ಸಮಾನತೆಯಿಲ್ಲ, ಅದನ್ನು ಸುಟ್ಟುಬಿಡಬೇಕೆಂದು ಅನಿಸುತ್ತಿದೆ’ ಎಂದು ಬೊಗಳುವ ಭಗವಾನನಂತವರೂ ಅಷ್ಟೇ. ಕಲಿತಿದ್ದು ತೀರಾ ಜಾಸ್ತಿಯಾಯಿತು.
ಭಗವಾನುವಾಚನ್ನೊಮ್ಮೆ ಕೇಳೋಣ. ಆಸ್ತಿ ಉಳ್ಳವನು ಆಸ್ತಿಕ, ನಾಸ್ತಿ ಉಳ್ಳವನು ನಾಸ್ತಿಕ ಅಂತೆ. ಹಾಗಾದರೆ ಮಾರ್ಮಿಕ ಅಂದರೇನು ಮರ್ಮ ಉಳ್ಳವನು ಎಂದರ್ಥವೇ? ಧರ್ಮ ಉಳ್ಳವನು ಧಾರ್ಮಿಕ ಎಂದೇ? ಕಾರ್ಮಿಕ ಎಂದರೆ ಕರ್ಮ ಉಳ್ಳವನೇ? ಕರ್ಮ ಕರ್ಮ! ಯಾರ್ರೀ ಈತನಿಗೆ ಪಾಠ ಮಾಡಿದ್ದು? ಅಲ್ಲಾ ಸಂಸ್ಕೃತ ಗೊತ್ತಿರದಿದ್ದರೆ ಸುಮ್ಮನೆ ಕೂರಬೇಕು ತಾನೆ? ಅದು ಬಿಟ್ಟು ಎಲ್ಲಾ ತಿಳಿದ ಸರ್ವಜ್ಞನಂತೆ ‘ಗೀತೆಯನ್ನು ಸುಟ್ಟುಬಿಡಬೇಕು’ ಎಂದು ಹೇಳುತ್ತಾ ಚಪಲ ತಿರಿಸಿಕೊಳ್ಳುವುದೇಕೆ? ನಿಮ್ಮಂತಹ ಧರ್ಮ ವಿರೋಧಿ ಲದ್ದಿ ಜೀವಿಗಳನ್ನು ಸುಟ್ಟುಬಿಡಬೇಕೆಂದು ನಮಗೆ ಅನಿಸಿದರೆ ಏನು ಮಾಡುತ್ತೀರಿ?
ಹೇಳಿ ಭಗವಾನ್.. ಸುಟ್ಟುಬಿಡುತ್ತೇನೆ ಎಂದಿರಲ್ಲವೇ? ಯಾವ ಕಾರಣಕ್ಕೆ? ಭಗವದ್ಗೀತೆಯಲ್ಲಿ ಸಮಾನತೆ ಇಲ್ಲವೆಂದೇ? ನಿಮ್ಮಂತಹ ಅರ್ಥ ಮಾಡಿಕೊಳ್ಳಲಾಗದಂತಹ ಅಸಮಧಾನಿಗಳಿಗೆ ಅದರಲ್ಲಿ ಸಮಾನತೆ ಇಲ್ಲದಿರಬಹುದು. ಹೋಗಲಿ ನಿಮ್ಮ ದೇಹದಲ್ಲಿ ಸಮಾನತೆಯಿದೆಯೇ? ನಿಮ್ಮ ಐದೂ ಬೆರಳುಗಳೂ ಒಂದೆ ಥರ ಇದೆಯಾ? ತಲೆಕೂದಲುಗಳ ಉದ್ದ ಒಂದೇ ಆಗಿದೆಯಾ ಸಾರ್? ನಿಮ್ಮಂತೆಯೇ ಜಗತ್ತಿನಲ್ಲಿ ಮತ್ತೊಬ್ಬರಿದ್ದಾರಾ? ನಿಮಗಿದ್ದಂತೆ ಬಾಯಿ ಚಪಲ, ಮನೋವೈಕಲ್ಯ ಎಲ್ಲರಿಗೂ ಇದೆಯಾ ಭಗವಾನರೇ? ಮತ್ತೆಲ್ಲಿಯ ಸಮಾನತೆ? ಹೋಗಲಿ. ನೀವು ಸಂವಿಧಾನವೇ ಪವಿತ್ರ ಗ್ರಂಥ ಎಂದು ಬಡಬಡಾಯಿಸಿಕೊಳ್ಳುತ್ತೀರಲ್ಲವೇ? ಒಪ್ಪಿಕೊಳ್ಳುತ್ತೇನೆ. ನನಗೂ ಅದು ಎರಡನೇ ಪವಿತ್ರ ಗ್ರಂಥ. ಆದರೆ ಮೇಲ್ನೋಟಕ್ಕೆ ಸಂವಿಧಾನದಲ್ಲಿ ಸಮಾನತೆಯಿದ್ದರೂ ಅದು ಎಲ್ಲರಿಗೂ ಒಂದೇ ಆಗಿದೆಯಾ? ಕಾನೂನು?? ಮತ್ತೆ ಅದು ಪವಿತ್ರ ಗ್ರಂಥ ಹೇಗಾಗುತ್ತೆ ನಿಮ್ಮ ಪ್ರಕಾರ?
ಇಷ್ಟೆಲ್ಲಾ ಬಡಬಡಾಯಿಸುವ ಭಗವಾನರು ಬಹಿರಂಗ ಚರ್ಚೆಗೆ ಏಕೆ ಬರುತ್ತಿಲ್ಲಾ? ಅದೇಕೆ ಹಲವು ಭಾರಿ ನೀವು ಪ್ಯಾನಲ್ ಚರ್ಚೆಗೆ ಒಪ್ಪಿಕೊಳ್ಳಲೇ ಇಲ್ಲ? ಮೊನ್ನೆಯ ಬಹಿರಂಗ ಚರ್ಚೆಗೆ ಒಪ್ಪಿಯೂ ಏಕೆ ಬರಲಿಲ್ಲಾ? ಫೋನಿನಲ್ಲಿ ಅರ್ಧಂಬರ್ದ ಮಾತನಾಡಿ ಹೇಡಿ ಥರ ಕರೆ ಕಡಿತಗೊಳಿಸಿದ್ದೇಕೆ? ನಿಮ್ಮದು ಆರಂಭ ಶೂರತ್ವ ಮಾತ್ರವಾ? ಏಕೆ ವಿಷ್ಣುದಾಸ ನಾಗೇಂದ್ರಾಚಾರ್ಯರನ್ನು ಎದುರಿಸುವ ಯೋಗ್ಯತೆ ಇಲ್ಲವೆ ನಿಮಗೆ? ಅಥವಾ ನಿಮ್ಮ ಲೆವೆಲ್ ಗೆ ಶತಾವಧಾನಿ ಗಣೇಶರೇ ಬರಬೇಕಾ? ವಿಷ್ಣುದಾಸರನ್ನೇ ಎದುರಿಸಲಾಗದೆ ಕೌರವ ವೈಶಂಪಾಯನ ಸರೋವರದಲ್ಲಿ ಅಡಗಿ ಕುಳಿತ ಹಾಗೆ ಮನೆಯಲ್ಲಿ ಬಚ್ಚಿಟ್ಟುಕೊಂಡ ನಿಮಗೆ ಕನಸಿನಲ್ಲಿಯೂ ಗಣೇಶರಂತವರನ್ನು ಎದುರಿಸಲು ಸಾಧ್ಯವೇ?ಆಸ್ತಿಯುಳ್ಳವನು ಆಸ್ತಿಕ, ನಾಸ್ತಿಯುಳ್ಳವನು ನಾಸ್ತಿಕ ಎನ್ನುವ ನಿಮ್ಮ ಬೌಧ್ಧಿಕ ಸಾಮರ್ಥ್ಯವನ್ನು ನೋಡುವಾಗ ನನಗೆ ಅನಿಸುತ್ತದೆ. ನಿಮ್ಮನ್ನು ಎದುರಿಸಲು ನಾಗಾಂದ್ರಾಚಾರ್ಯರಂತಹ ಪಾಂಡಿತ್ಯರತ್ನರೇ ಬೇಕೆಂದಿಲ್ಲ. ನಾಲ್ಕಾರು ಶ್ಲೋಕ, ಒಂದೆರಡು ವೇದ ಮಂತ್ರಗಳನ್ನು ಕಲಿತಿರುವ ನಾನೇ ಸಾಕು!
ಮತ್ತಿನ್ನೇನು ಪ್ರೊಫೆಸರ್ ಸಾಹೆಬ್ರೇ? ನಮ್ಮ ಸಮಾಜದಲ್ಲಿ ಮೂಢನಂಬಿಕೆಗಳಿವೆ, ಅನಾಚರಗಳಿವೆ. ಅದನ್ನೇ ಬಂಡವಾಳವನ್ನಾಗಿಸಿ ವ್ಯವಹಾರ ಕುದುರಿಸುವವರೂ ಇದ್ದಾರೆ. ನಾವು ವಿದ್ಯಾವಂತರು. ಹಂತ ಹಂತವಾಗಿ ಜನರಿಗೆ ತಿಳಿಹೇಳಿ ಅದನ್ನೆಲ್ಲಾ ಸರಿಪಡಿಸಿಕೊಂಡು ಹೋಗಬೇಕು. ಜನರ ಮನವೊಲಿಸಿ ಶಿಕ್ಷಣ ನೀಡುವ ಮೂಲಕ ಅದೆಲ್ಲಾ ಸಾಧ್ಯವೇ ಹೊರತು ಭಗವದ್ಗೀತೆಯನ್ನು ಸುಟ್ಟುಬಿಡುವುದರಿಂದ ಆಗುವುದಿಲ್ಲ. ಮೈಕ್ ಹಿಡಿದು ಬೊಗಳುವುದರಿಂದ ಆಗುವುದಿಲ್ಲ. ಮೂಢನಂಬಿಕೆಯ ನೆಪವಾಗಿಟ್ಟುಕೊಂಡು ಜನರ ಮೂಲನಂಬಿಕೆಗೆ ಕೊಡಲಿ ಪೆಟ್ಟು ನೀಡ ಹೊರಟರೆ ಯಾರೂ ಕೂಡಾ ಕೈಕಟ್ಟಿ ಕೂರುವುದಿಲ್ಲ.
ಇದೆಲ್ಲಾ ಬರೀ ತೀಟೆ ಕಣ್ರಿ. ಸದಾ ಸುದ್ದಿಯಲ್ಲಿರಬೇಕು. ಪೇಪರಿನಲ್ಲಿ ದೊಡ್ಡ ಸಮಾಜ ಸುಧಾರಕನಂತೆ ಫೋಟೋ ಬಂದು ಬಿಟ್ಟಿ ಪ್ರಚಾರ ಸಿಗಬೇಕು ಎಂಬ ತೆವಲು ಅಷ್ಟೇ. ಚಟ ಬಿಡಬೇಕು ಎಂದು ಎಷ್ಟು ಹಲುಬಿದರೂ ಅದು ನಮ್ಮನ್ನು ಬಿಡುವುದೇ ಇಲ್ಲ. ಆದ್ದರಿಂದ ನಮ್ಮ ಧರ್ಮವನ್ನು, ಸಂಸ್ಕೃತಿಯನ್ನು ಉಪಯೋಗಿಸಿಕೊಳ್ಳುವುದು. ಅಲ್ಲಾ ಭಗವಾನ್ ನಿಮಗೆ ಬಿಟ್ಟಿ ಪ್ರಚಾರ ಬೇಕೆಂದರೆ ಪೂನಂ ಪಾಂಡೆಯಂತೆ ಬೆತ್ತಲೆ ಓಡುತ್ತೇನೆ ಎಂದು ಹೇಳಿಕೆ ಕೊಡಿ ಇಲ್ಲವೇ ರಾಖಿ ಸಾವಂತ್, ಮಲ್ಲಿಕಾ ಶೆರಾವತ್ ಥರಾ ನಂಗಾನಾಚ್ ಮಾಡಿ. ನಿಮಗೆ ಎಲ್ಲಿಲ್ಲದ ಪ್ರಚಾರ ಸಿಗುತ್ತೆ. ರಾತ್ರಿ ಬೆಳಗಾಗುವುದರೊಳಗೆ ನೀವು ಸೆಲೆಬ್ರಿಟಿಯಾಗುತ್ತೀರಿ. ನಿಮ್ಮ ಅಭಿಮಾನಿಗಳ ಪೇಜೇ ಸಿಧ್ಧವಾಗುತ್ತೆ. ಅದು ಬಿಟ್ಟು ನಂಬಿಕೆಯನ್ನೇ ಸೌಧವನ್ನಾಗಿಸಿ ಜೀವಿಸುತ್ತಿರುವ ಬಹುಸಂಖ್ಯಾತರ ಭಾವನೆಗಳಿಗೇಕೆ ಘಾಸಿ ಮಾಡುತ್ತೀರಿ?
ಭಗವಾನ್..! ಎಂಥಹಾ ಹೆಸರು ನೋಡಿ..ಇದು ಕಾಕತಾಳೀಯವೋ ವಿಪರ್ಯಾಸವೋ ಗೊತ್ತಿಲ್ಲ. ಈ ಭಗವಾನನಿಗೆ ಆ ಭಗವಾನನ ಮೇಲೆ ದ್ವೇಷವೋ ದ್ವೇಷ. ಯಾಕೆ? ಯಾಕೆ ಅಂದರೆ, ಕೆಲವರೆಲ್ಲಾ ಹಾಗೆ ಇರುತ್ತಾರೆ. ಹಿಂದಿನ ಜನ್ಮದಲ್ಲಿ ಪಾಪ ಕೃತ್ಯಗಳನ್ನು ಮಾಡಿ ಈ ಕಡೆ ಸ್ವರ್ಗಕ್ಕೂ ಹೋಗದೆ, ಆ ಕಡೆ ನರಕಕ್ಕೂ ಹೋಗದೆ ಇಲ್ಲಿ ಬಂದು ಕಾಡುತ್ತಾರೆ. ಭಗವಾನರೂ ಅಂತವರೇ. ಭಗವಾನನೆಂಬ ನಾಮವನ್ನಿಟ್ಟುಕೊಂಡು ಭಗವಾನನನ್ನೇ ದ್ವೇಷಿಸುತ್ತಾರೆ.
ಮೊದಲೇ ಹೇಳಿದೆನಲ್ಲಾ.. ಭಗವಾನರದ್ದು ಬರೀ ತೀಟೆಯಷ್ಟೇ. ತೀಟೆ ತೀರಿಸಿಕೊಳ್ಳುವುದಕ್ಕಾಗಿ ಧರ್ಮವನ್ನು ಉಪಯೊಗಿಸಿಕೊಳ್ಳುತ್ತಿದ್ದಾರೆ. ಇಲ್ಲದಿದ್ದರೆ ತನ್ನ ಮಾತಿಗೆ ಸಮರ್ಥನೆ ಕೊಡುವುದಕ್ಕಾದರೂ ಚರ್ಚೆಗೆ ಬರುತ್ತಿದ್ದರು. ವಿಷ್ಣುದಾಸರು ಕೇಳಿದ ಪ್ರಶ್ನೆಗಳಿಗೆ ತಾಳ್ಮೆಯಿಂದ ಉತ್ತರಿಸುತ್ತಿದ್ದರು. ಇದಕ್ಕೆಲ್ಲ ಅವರ ತಿಕ್ಕಲು ಹಿಡಿದ ಮನಸ್ಥಿತಿಯೇ ಕಾರಣ. ದನದ ಮಾಂಸ ತಿನ್ನಿ, ವಿವೇಕಾನಂದರೂ ದನದ ಮಾಂಸ ತಿನ್ನುತ್ತಿದ್ದರು ಎಂದು ಹೇಳುತ್ತಾ ಸಮಾಜ ಸುಧಾರಣೆಯ ನೆಪದಲ್ಲಿ ಸಮಾಜದ ಹಾದಿ ತಪ್ಪಿಸುತ್ತಿರುವ ಕೆಲವರ ಕಥೆಯೂ ಅಷ್ಟೇ. ಸುಮ್ಮನೆ ತೀಟೆ ತೀರಿಸಿಕೊಳ್ಳುತ್ತಿರುವುದು. ಆದರೆ ಯಾರೂ ಕೂಡಾ ಸಾತ್ವಿಕ ಚರ್ಚೆಗೆ ಸಿಧ್ಧರಿಲ್ಲದೆ ಬರೀ ವಿವಾದ ಸೃಷ್ಟಿಸಿ ರಣರಂಗದಿಂದ ಓಡಿ ಹೊಗುತ್ತಿದ್ದಾರೆ. ತಕ್ಕ ಸಮರ್ಥನೆಯೂ ಇಲ್ಲ, ತಲೆಬುಡವೂ ಇಲ್ಲ.
ಇಂಗ್ಲೀಷ್ ಪ್ರೊಫೆಸರ್ ಆಗಿರುವ ಭಗವಾನರು ತಮ್ಮ ಎಡಬಿಡಂಗಿತನದಿಂದಾಗಿ ಎಷ್ಟೊಂದು ಅಪಹಾಸ್ಯಕ್ಕೀಡಾಗಿದ್ದಾರೆಂದರೆ ಚರ್ಚೆಯಿಂದ ಎಸ್ಕೇಪ್ ಆಗಿದ್ದನ್ನು ನೋಡಿ ಗಾಂಧೀನಗರದ ನಿರ್ಮಾಪಕರು ‘ಭಾಗ್ ವಾನರ ಭಾಗ್’ ಹೆಸರಿನಲ್ಲಿ ಚಿತ್ರ ನಿರ್ಮಿಸಲು ಹೊರಟಿದ್ದಾರೆ ಎಂಬ ಸುಳ್ಳುಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿದೆ. ಆ ಮಟ್ಟಿಗೆ ಭಗವಾನರು ತಮ್ಮ ತಿಕ್ಕಲುತನವನ್ನು ಒರೆಗೆ ಹಚ್ಚಲು ಹೋಗಿ ಪುಕ್ಕಲುತನವನ್ನು ತೋರಿಸಿಕೊಟ್ಟಿದ್ದಾರೆ.
ಭಗವಾನರೇ, ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ. ನಿಮ್ಮ ಅಭಿಪ್ರಾಯ ಹೇಳಲು ನೀವು ಸ್ವಾತಂತ್ರರು. ನಿಮ್ಮ ಮೇಲೆ ನಮಗೆ ಕೆಂಡದಂತಹ ಕೋಪವಿದ್ದರೂ ನಾವ್ಯಾರೂ ನಿಮ್ಮನ್ನು ಅಟ್ಟಾಡಿಸಿ ಹೊಡೆಯುವುದಿಲ್ಲ. ಅಷ್ಟಕ್ಕೂ ನಿಮ್ಮ ವಾಚಾಮಗೋಚರ ಹೇಳಿಕೆಗಳಿಂದ ಸ್ವಲ್ಪ ಒಳ್ಳೆಯದೇ ಆಗಿದೆ. ಇದುವರೆಗಗೆ ಗೀತೆಯನ್ನೇ ಮುಟ್ಟದ ಕೆಲವರು ಗೀತೆಯನ್ನು ಓದಿದ್ದಾರೆ. ಮೊದಲೇ ಓದಿದ್ದ ಕೆಲವರು ಇನ್ನೂ ಆಳಕ್ಕಿಳಿದು ಓದಿದ್ದಾರೆ. ಯುವಬ್ರಿಗೇಡಿನಂತಹ ಸಂಘಟನೆಗಳು ಸಾಧ್ಯವಾದಷ್ಟೂ ಗೀತೆಯ ಪುಸ್ತಕವನ್ನು ವಿತರಿಸಿ ಗೀತೆಯ ಪ್ರಸಾರಕ್ಕೆ ಮತ್ತು ಹಿಂದೂ ಧರ್ಮದ ಪ್ರಚಾರಕ್ಕೆ ಕಾರಣರಾಗಿದ್ದಾರೆ. ನೀವು ನೀಡಿದ ಹೇಳಿಕೆಗಳಿಂದ, ಭಾರತೀಯ ಸಂಸ್ಕೃತಿಯ ಬಗ್ಗೆ ಗಮನ ಹರಿಸುತ್ತಿಲ್ಲಾ ಎಂಬ ಆರೋಪ ಎದುರಿಸುತ್ತಿರುವ ಯುವ ಜನತೆ ಇನ್ನೂ ಜಾಗೃತರಾಗಿದ್ದಾರೆ. ನೀವು ಗೀತೆಯ ಮೇಲೆ ದ್ವೇಷ ಕಕ್ಕಿದಷ್ಟೂ ನಮದೆ ಪ್ರೀತಿ ಜಾಸ್ತಿಯಾಗಿದೆ. ನಿಮ್ಮ ಮೇಲಲ್ಲ. ಗೀತೆಯ ಮೇಲೆ, ನಮ್ಮ ಧರ್ಮದ ಮೇಲೆ!!
Facebook ಕಾಮೆಂಟ್ಸ್