ಹೊಸತನದ ಹೊಸ್ತಿಲಲ್ಲಿ ಎಡರು ತೊಡರುಗಳು
ಕಬ್ಬಿನಾ ಜಲ್ಲೆಯಿಂ, ಶರ್ಕರವನರೆದಂತೆ.
ಗಾಣವದು ತಿರುಗಿ, ರಸವು ಚಿಮ್ಮಿದೊಡೆ
ಮೃದುವಾದ ಹೋಳಿಗೆ-ಕಾಯಿಹಾಲಿನ ರುಚಿಯಂತೆ.
ಸಾಧಿಸುವ ಛಲವೊಂದು, ಸೇರಿಸಿತೆಲ್ಲರನು
ಗುರಿಯೆಡೆಗೆ ಬಾಣವದು ಸಾಗುವಾ ತೆರದಿ.
“ಬೇಕು”ಗಳ ಸಾಲು-ಸಾಲು ಅಂಕಣ ವೈವಿಧ್ಯಗಳು
ಜ್ಞಾನದ ಹಸಿವಿಗೂ, ಮನಕು ಮುದದಿ.
ಮನುಕುಲದ ಮಡಿಲಿಗೆ ಅರ್ಪಿಸಿಹೆವು ನಾವಿಂದು
ಎಮ್ಮೊಡಲ ಕೂಸು, ನಿಮ್ಮ ರೀಡೂ…..
ನಿಮ್ಮ ಹಾರೈಕೆಯಲಿ ಜಯವು ಎಂದೆಂದೂ
ಶುಭವ ಕೋರುತ ಎಮಗೆ ಪ್ರೀತಿಯನು ನೀಡು…
Facebook ಕಾಮೆಂಟ್ಸ್