X
    Categories: ಕಥೆ

ಡೀಲ್ ಭಾಗ ೪

 ದಂಪತಿಗಳಿಬ್ಬರ ಮುಖ ಬಾಡಿ ಹೋದ ಹೂವಿನ ಎಸಳಿನಂತಿತ್ತು!..

ನಟರಾಜ್ ಇನ್ನೂ ತನ್ನ ಕೆಲವು ಪ್ರಶ್ನೆಗಳಿಗೆ ಸರಿಯಾದ ಆಕಾರ ಕೊಡಲು ಸಾಧ್ಯವಾಗುತ್ತಿರಲಿಲ್ಲ,,ಮಗಳೋ ಏನೇನೋ ಹೇಳ್ತಿದಾಳೆ,ರಾಜ್ಯಕ್ಕೆ ರಾಂಕ್ ಪಡೆಯೋದು ಅಂದ್ರೆ ಸುಮ್ನೇನಾ!?..ಅಂತಹ ಸಾಧನೆ ಮಾಡಿರುವ ಮಗಳಿಗೆ ತಂದೆಯ ಸ್ಥಾನ ಕೊಟ್ಟಿರುವೆಯೆಂಬ ಮೊಳಕೆ ಜಂಭಕ್ಕೆ ಸಂಪೂರ್ಣ ತೆರೆ ಎಳೆದ ರಂಗಮಂಟಪವಾಗಿತ್ತು ಇನ್ನೇನಿದ್ದರೂ ಇವಳ ದಿಗಿಲಿಗೆ ಸರಿಯಾದ ಕಾರಣಗಳನ್ನು ತಿಳಿದು ಮಗಳನ್ನು ಮಾನಸಿಕವಾಗಿ ಸ್ವಸ್ಥವಾಗಿಡಬೇಕೆಂಬುವುದು ಮಾತ್ರ ನೀರು ಕಾಣದ ತುಂಬೆಗಿಡದಂತಿರುವ ತನ್ನ ಕರುಳಬಳ್ಳಿಯ ಚೆಹರೆ ನೋಡಿ ಅಸಹಾಯಕ ನೋಟ ಬೀರುತ್ತಿದ್ದ.

 

“ಮುಂದೇನಾಯ್ತು!?ಆ ಕಳ್ಳನ ಮನೆ ಹಾಳು *ಡೀಲ್* ಏನದು!??ಹೇಳಮ್ಮಾ” ನಟರಾಜ್ ವಿಜ್ಞಾಪಿಸಿಕೊಂಡ!!…

 

“ಅವತ್ತು ಬೆಳಿಗ್ಗೆ ಬೇಗನೆ ಹೋಗಿದ್ದೆ,ಮಮ್ಮೀ ಸ್ಫೆಷಲ್ ಕ್ಲಾಸ್ ಅಂತ ಆವತ್ತು ಬೇಗನೆ ಹೊರಡುವಾಗ ಯಾಕೇಂತ ನೀನೂ ಕೇಳಿದ್ದೆ..!..

 

“ನನಗಿಂತ ಮೊದಲೇ ಪ್ರಮೀಳ ಕಾಲೇಜ್ ಗೇಟ್ ಹತ್ರ ಕಾಯುತ್ತಿದ್ದಳು,ಸಾಮಾನ್ಯ ದಿನಗಳಿಗಿಂತ ಸ್ಪಲ್ಪ ಬದಲಾವಣೆ ಸ್ಷಷ್ಟವಾಗಿ ಕಾಣುತ್ತಿತ್ತು,ನನ್ನ ಆತಂಕಗಳನ್ನು ಅರಿತು ಗೊಂದಲದಲ್ಲಿದ್ದಾಳೆ ಅಂದುಕೊಂಡೆ!!”

 

“ಹೋಗೋಣ ಪ್ರಮೀ!,ಅವನೆಲ್ಲಿ ಇರ್ತಾನೆ,!”..

“ಲೈಬ್ರರೀ,,”

“ಸರಿ ನಡಿ,ಎಲ್ಲರೂ ಬರುವ ವೇಳೆಗೆ ಕೆಲಸ ಮುಗಿದಿರಬೇಕು!”..

“ಹೂಂ”…ಈ ಸಾರಿ ನನ್ನ ಹೆಜ್ಜೆಗಳ ಅನುಕರಣೆ ಮಾಡುತ್ತಿದ್ದಳು ನನ್ನ ಯೋಚನೇನೇ ಲಂಗುಲಗಾಮಿಲ್ಲದಾಗ ಅವಳ ಬದಲಾವಣೆ ಗಮನಿಸುವ ಪ್ರಯತ್ನ ಮಾಡಲಿಲ್ಲ!!..

 

ಮೊದಲೆರಡು ಬಾರಿ ಏನೋ ನೋಡಿರಬಹುದು ಆ ಮುಖವನ್ನು ಯಾವುದೋ ಸಿನಿಮಾ ಹೀರೋನ ಸ್ಟೈಲನ್ನು ಸಂಪೂರ್ಣ ಎರವಲು ಪಡಕೊಂಡವ ಕಪ್ಪು ದಟ್ಟ ದಾಡಿಗೆ ಅದೇ ಬಣ್ಣದ ಕನ್ನಡಕಾನು ಹಾಕಿದ್ದ,,,

 

“ಹಾಯ್, ಐ ಆಮ್ ರಾಕೇಶ್, ಗ್ಲಾಡ್ ಟು ಮೀಟು ಯು,ಯು ನೋ ಐ ಆಮ್  ಸೀಯಿಂಗ್ ಯು ಎವ್ರೀ ಡೇ ವೈಲ್ ಪಾಸಿಂಗ್ ದಿ ಕಾರಿಡಾರ್,” ಎನ್ನುತಲೇ ಅಸಭ್ಯವಾಗಿ ನಕ್ಕ… “ಹಾಯ್ ಮೈ ಸೆಲ್ಫ್ ಶ್ಯಾಮಲೆ” ಕಾಟಾಚಾರಕ್ಕಾಗಿ ಪ್ರತಿ ಉತ್ತರಿಸಿದೆ..!!

 

“ವೆಲ್, ಇಟ್ಸ್ ಟೈಮ್ ಟು ಮೇಕ್ ಅವರ್ ಡೀಲ್ ..ಅಲ್ವಾ!?ಪ್ರಮೀಳ.!? ಅಸಹ್ಯ ನಗುವಿನ ಮುಂದಿನ ಭಾಗ ಪ್ರಮೀಳಳ ಕಡೆಗೆ ಎಸೆದು ಕೇಳಿದ..”ಯೆಸ್,ಯೆಸ್,” ನನಗೊಂದು ಸಂದೇಹ ಅನ್ನಲಾಗದ ತಾಕಲಾಟವಿತ್ತು ಆ ದಿನದ ಪ್ರಮೀಳಳ ನಡವಳಿಕೆಯಲ್ಲಿ, ಸದಾ ಚಟುವಟಿಕೆ ಬ್ರಾಡ್ ಮೈಂಡೆಡ್ ಹುಡ್ಗೀ ಏನೋ ಆಗಿರುವವಳಂತೆ ವಟವಟಿಸುತ್ತಿದ್ದಳು,,

 

ಅಷ್ಟರಲ್ಲಿ ಅವನ ಐಪೋನು ರಿಂಗಣಿಸಿತು “ಯೆಪ್,,ಜಾನ್, ಯಾ, ಹೆಡ್ ಆನ್ ಟು ಅವರ್ ಸೇಮ್ ಪ್ಲೇಸ್ ದೇ ಆರೆ ವೇಟಿಂಗ್” ಅನ್ನುತ್ತಲೇ ಜಾನ್ ಪತ್ರಿಕೆ ತರುತ್ತಿದ್ದಾನೆ ಅಂದ…

“ಡೀಲ್ ಏನು ಅಂತ ತಿಳಿಸಿ ಮೊದಲು”

 

ನನ್ನ ಸಂಶಯ ಭರಿತ ಕಂಠವನ್ನು ಸರಿಯಾಗಿ ಗ್ರಹಿಸಿರುವವನಂತೆ..

“ಖಂಡಿತ, ಡೀಲ್ ಇಸ್ ವೇರಿ ಸಿಂಪಲ್ ಯು ಬ್ಯೂಟೀ, ಜಾನ್ ಬಂದಮೇಲೆ ತಿಳಿಸುತ್ತೇನೆ” ತಾನು ಗುಂಪಿನ ನಾಯಕನೆಂಬುದನ್ನು ತೋರಿಸಿ ಕೊಡುವವನಂತೆ ಕಂಡ..ನನ್ನ ಕಣ್ಣುಗಳೆರಡೂ ಜಾನ್’ನ ದಾರಿ ನೋಡುತ್ತಿದ್ದವು…!!!

 

 

ಅದ್ಯಾವುದೋ ಫಾರಿನ್ ಆಯಿಲ್ ಮೆತ್ತಿ ಬರಿಸಿದ ವಿಕೃತ ದಾಡಿ,NeYo ಕ್ಯಾಪ್ ಹಾಕಿದ ಒಂದು ವಿಚಿತ್ರ ಪ್ರಾಣಿ ತರ ಬರುತ್ತಿದ್ದವನೇ ಜಾನ್ ಎಂದು ಅಂದುಕೊಂಡೆ,ಹ್ಮ್ ಅವನೇ ಆಗಿದ್ದ..ಕೈಯಲ್ಲಿದ್ದ ಪೇಪರ್ ಕಟ್ಟು ಬಂದವನೇ ರಾಕೇಶ್ ಕೈಗಿತ್ತು

“ಹೇಯ್, ಬ್ರೋ ಸ್ಸಾರಿ ಟು ಸೇ ಮಾ ಗರ್ಲ್ ವೈಟಿಂಗ್ ದೇರ್ ನಿಂಗೇನು ತೊಂದರೆ ಇಲ್ಲ ಅಂದರೆ ನಾನು ಹೋಗಲಾ “..ಎಂದು ಸರ್ಕಾರಿ ಅಧಿಕಾರಿಯೊಂದಿಗೆ ರಜೆ ಕೇಳುವವರಂತೆ ಕೇಳುತ್ತಿದ್ದ.. “ಗೋ ಟು ಹೆಲ್ಲ್” ರಾಕೇಶ್ ನಾಯಕನ ದರ್ಪದ ನೋಟಕ್ಕೆ ಸಣ್ಣಗೆ ಹೆದರಿದವನಂತೆ “ಎಲ್ಲಾ ಆ ಕವರ್’ನಲ್ಲಿದೆ” ಎಂದು  ಕ್ಯಾಪ್ ತೆಗೆದು ದುಗ್ಗು ಸಲಾಂ ಹಾಕಿ ಹೋದ..ರಾಕೇಶ್ ಅವನ ಮೇಲೆ ಕೋಪವಾಗಿರುವವನಂತೆ ಕಂಡ..

 

“ಅದು,ಏನು ಡೀಲ್ ಹೇಳಿ ಬೇಗ ಕ್ಲಾಸ್ ಹೋಗ್ಬೇಕು”..ಸಣ್ಣ ಕಂಠದಲ್ಲಿ ವಿನಂತಿಸಿದೆ…ನನ್ನ ಸ್ವರ ಕೇಳಿ ಹಾವಭಾವ ಬದಲಾದವರಂತೆ ರಾಕೇಶ್ “ಆ ,ಆ,ಅ,,ಹಾ..ಅದು ಡೀಲ್ ಕೇಳಿಲ್ಲಿ”…

“ನಂಗೆ ಏನೂ ಬೇಡ ಐ ಡೋಂಟ್ ನೀಡ್ ಎನಿಥಿಂಗ್”..ಎನ್ನುತ್ತಾ ಅಸಹ್ಯವಾದ ವಾರೆ ನೋಟದಲ್ಲಿ ಪ್ರಮೀಳಾಳ ನೋಡಿ “ಹೇಳು

ನಿನ್ನ ಫ್ರೆಂಡ್’ಗೆ ನಾನೇದ್ರೂ ಕೇಳ್ತಿನಾ!?ಹ್ಹಹ್ಹ”..ರಾಕ್ಷಸ ವಂಶದವರಂತೆ ಕಂಡ ನನಗೆ ರಾಕೇಶ್..

“ಸೀ..ಡೀಲ್ ವೆರೀ ಸಿಂಪಲ್,ನಾನೊಂದು ಕೊಟ್ರೆ,ನೀನೊಂದು ಕೊಡ್ಬೇಕು ಅಷ್ಟೇ..!!!…

 

ನನಗೇಕೋ ಈ ಮಾತು ಸಹ್ಯವಾಗಿಲ್ಲ.ಅರ್ಥವಾಗದಂತೆ ಪ್ರಮೀಳಾಳ ಕಡೆ ತಿರುಗಿದೆ ಅವಳೇಕೋ ಮುಖ ಬಾಡಿಸಿಕೊಂಡಿದ್ದಳು,ನನಗಂತೂ ಅರ್ಥಾನೇ ಆಗಿಲ್ಲ,ಕೈಯಲ್ಲಿ ಪೇಪರ್ ಕಟ್ಟು ಕೈಯಲ್ಲಿಡಿದ ರಾಕೇಶನ ಕಾಲುಗಳು ನೃತ್ಯ ಅಭ್ಯಾಸ ಮಾಡುವವರಂತಿತ್ತು,ಯಾರಲ್ಲೂ ಮಾತಿಲ್ಲ,ಅಲ್ಪ ಕಾಲದ ವಿಶ್ರಾಂತಿ ಬಳಿಕ  ಮುಂದುವರಿದ ಅವನೇ “ನೋಡು,ಇಟ್ಸ್ ಗಿವ್ ಆಂಡ್ ಟೇಕ್ ಪಾಲಿಸೀ,ಏನೂ ಕಷ್ಟವೇನಿಲ್ಲ,ಅಲ್ಲದೇ ಈಗಲೇ ಅಂತಾನೂ ಕೇಳಲ್ಲ,ಎಗ್ಸಾಮ್ ಮುಗಿದು,ರಿಸಲ್ಟ್ ಬಂದ ಮೇಲೆ ನೋಡಿದರಾಯಿತು..” ಇನ್ನೂ ಅರ್ಥವಾಗಿಲ್ಲ ಏನಿದು ಕೊಡು ಕೊಳ್ಳುವಿಕೆ.!?

 

ಸರಿಯಾಗಿ ಹೇಳಿ “ಐ ಡೋಂಟ್ ಗೆಟ್ ಯು”…ತೊದಲಿದೆ..

“ಯೂ ನಾಟಿ, ಐ ಓನ್ಲೀ ನೀಡ್ ಯೂ ಪೋರ್ ಅ ನೈಟ್”…!!!ರಸಿಕನ ಭಾಷೆಯಲ್ಲಿ ಆಜ್ಞೆ ನೀಡುತ್ತಿದ್ದ,ಭೀಕರ ಪ್ರಳಯ ಘಟಿಸಿದಂತಹಾ ಭಾವ ನನ್ನದಾಗಿತ್ತು ,ಕೋಪ ಮತ್ತು ಹತಾಶೆಯಲ್ಲೇ ಚೀರಿದ್ದೇ.”””ವ್ಹಾಟ್!!!!”””” ಕೂಗಾಟಕ್ಕೆ ಕಂಪನ ಏರ್ಪಟ್ಟಿರಬೇಕು ಪ್ರಮೀಳ ವಾಸ್ತವ ಜಗತ್ತಿಗೆ ಮರಳಿದಂತಾಗಿದ್ದಳು..

“ಕೂಲ್,ಕೂಲ್, ಯಾಕೇ ಈ ಶಬ್ಧ ಮಾಲಿನ್ಯ,!?.ನಾನೇನೋ ಕೇಳ್ಬಾರ್ದು ಕೇಳಿದ್ನಾ,ನಿಮ್ಮಂತವರು ಬಿಟ್ಟಿಯಾಗಿ ಯಾರ್ಯಾರ್ಗೋ ಕೊಡುವುದಾ ನಾ ಕಷ್ಟಪಟ್ಟು ಉಪಕಾರ ಮಾಡಿ ಕೇಳ್ತಿದೀನಿ,ದಾಟ್ಸ್ ಇಟ್,” ಇವನ ಈ ಪೋಕರಿತನಕ್ಕೆ ನನ್ನ ಸಹನೆಯ ಕಟ್ಟೆ ಒಡೆದೇ ಹೋಗಿತ್ತು,ಕಲಿತ ಸಂಸ್ಕಾರದ ನೆನಪೂ ಇಲ್ಲದೇ ನಾಲಿಗೆಯನ್ನು ಅದೆಷ್ಟು ತೀವ್ರವಾಗಿ ಬಳಸಿದ್ದೆ ಅಂದರೆ ಪ್ರಮೀಳಾಳ ಮುಖ ಮಾತನಾಡೋದು ನಾನೇನ!? ಅನ್ನೋ ತರ ನೋಡುತ್ತಿದ್ದಳು,ನನ್ನ ಪರಿಜ್ಞಾನವಿಲ್ಲದೇ ಎಡಗೈ ಅವನ ಮುಖದಲ್ಲಿ ಅಚ್ಚಿ ಒತ್ತಿ ಬಂದಿತ್ತು..”ಯೂ ಬಾಸ್ಟರ್ಡ್,ಮೈಂಡ್ ಯುವರ್ ಟಂಗ್,ಐ ಆಮ್ ನಾಟ್ ದಟ್ ಟೈಪ್ ಗರ್ಲ್,ಬೇರೆ ಯಾರಿಗಾದರೂ ಕೊಡು,ಬಾರೇ ಪ್ರಮೀ”!!..ರೋಷದಿಂದಾನೇ ಹೆಜ್ಜೆ ಮುಂದುವರಿಸಿದೆ….

 

 

ರಾಕೇಶ್ ಆಗ್ಲೀ,ಪ್ರಮೀಳ ಆಗ್ಲೀ ನಿಂತಲ್ಲಿಂದ ಕದಲಿರಲಿಲ್ಲ..

“ಹೇಯ್,ಬ್ಯೂಟಿ,ನಿನ್ನ ಅಂದದಷ್ಟೇ ನೀ ಮಾರ್ಡನ್ ಸೀತಾ ಮಾತಾ ಅಂತ ಗೊತ್ತಾಯಿತು,ಹೋಗೋದು ಎಲ್ಲಿಗೆ ಒಂದ್ಸಲ ನನ್ನಲ್ಲಿ ಕಮಿಟ್ ಆದ್ರೆ ಹೋಗೋದು ಅಷ್ಟು ಸುಲಭ ಅನ್ಕೊಂಡ್ಯಾ..!!” ರಕ್ಕಸ ನಗು ಮುಂದುವರಿಸುತ್ತಾ ನನ್ನ ಬೆನ್ನ ಹಿಂದೆ ನಿಂತಿದ್ದ,ಇವನ ಮಾತಿನ ಮರ್ಮ ಅರಿಯದೇ ನಾನೂ ಮೂಕಿಯಾಗಿದ್ದೇ…

“ನೋಡು,ನೀ ಮಾತಿಗೆಲ್ಲಾ ಬಗ್ಗೋಳು ಅಲ್ಲಾ ಅಂತ ನಂಗೆ ಗೊತ್ತು ಕಣೇ,ಕೇಳಿಲ್ಲಿ ನಾ ಹೇಳಿದ ಕೆಲ್ಸ ನೀ ಮಾಡ್ಲೇ ಬೇಕು,ಇದು ನನ್ನ ಆರ್ಡರ್ ಇಲ್ಲಾಂದ್ರೆ ನಿನ್ನ ಫ್ಯೂಚರ್ ಜೊತೆಗೆ ಲೈಫ್ ಸ್ಪಾಯಿಲ್ ಆಗುತ್ತೆ ಹ್ಹ ಹ್ಹ ಹ್ಹ!””…….

“ಏನದರರ್ಥ” ನನಗರಿವಿಲ್ಲದೇ ನನ್ನ ಧ್ವನಿ ಕ್ಷೀಣಿಸಿತ್ತು ಅದರ ಭರಪೂರ ಲಾಭ ಅವನ ನಗುವಿನಲ್ಲಿ ಕಾಣುತ್ತಿತ್ತು..

“ನೀನೀಗ ನನ್ನ ಹಳ್ಳದಲ್ಲಿ ಇದೀಯಾ ಅನ್ನೋದಾದ್ರು ಗೊತ್ತಾ..!?…

….

 

“ಹ್ಹಹ್ಹಹ್ಹ, ಪ್ರಮೀಳ,,”

ಗಹಗಹಿಸಿ ನಕ್ಕು ತನ್ನ ಕಿಸೆಯಿಂದ ಪೋನ್ ತೆಗೆದು ಕೊಳ್ಳುತ್ತಲೇ “ಬ್ಯೂಟಿ,ನೋಡು ಆವತ್ತು ರಾತ್ರಿ ಪಾರ್ಟಿಯಲ್ಲಾದ ಮನಮೋಹಕ ದೃಶ್ಯಾವಳಿಗಳು..ಹ್ಹಹ್ಹಹ್ಹ”…

ನನಗಂತೂ ಪೋನ್ ನೋಡುತ್ತಿದ್ದಂತೆಯೇ ಉಸಿರು  ನಿಂತಗಾಯ್ತು,..ಆ ಬೆಡ್ ರೂಮ್ ನೋಡಿದ ನೆನಪು ನನಗೇ ಬರಲೇ ಇಲ್ಲ,ನಾನಂತೂ ವಿವಸ್ತ್ರಳಾಗಿ ಬೆಡ್ ಮೇಲೆ ಹೊರಳಾಡುತ್ತಿದ್ದೆ”…ಎನ್ನುತಾ ನಾಗರಾಜನ್ನು ತಬ್ಬಿ ಅಳು ಹಚ್ಚಿಕೊಂಡಳು…”ಏನಮ್ಮಾ!?ಏನ್ ಹೇಳ್ತಿದಿಯಾ ಆಗಿದ್ದಾದರೂ ಏನು!?

ನಾಗರಾಜ್’ನ ಜಂಗಭಲವೇ ಕುಸಿದು ಹೋಗಿ ನಿಶ್ಯಕ್ತಿಯಿಂದ ಪ್ರಶ್ನಿಸುತ್ತಿದ್ದ…

“ಅದು,ಅದು…ಆವತ್ತು ಪಾರ್ಟಿ ಹೋದಾಗ,ಕುಡಿಯೋದರಲ್ಲಿ ಅದೇನೋ ಬೆರೆಸಿ ನನ್ನನ್ನು ಸಿಸಿ ಕ್ಯಾಮೆರಾ ಇರುವ ಬೆಡ್ ರೂಮಿನಲ್ಲಿ ಬಿಟ್ಟಿದ್ದಾರೆ, ಕ್ಯಾಮೆರಾ ಕಣ್ಣು ಸೆರೆ ಹಿಡಿದಿದೆ…!!!” ತೊದಲು ಮಾತು ಮತ್ತು ಭರಪೂರ ನೀರು ತುಂಬಿದ ಅಳು,ಭಾರವಾದ ಮನಸ್ಸಿನಿಂದ ಅವನು ತೋರಿಸಿದ ವೀಡೀಯೋದ ನೈಜತೆಯನ್ನು ಹೇಳಿದಳು

 

ಕೆಲ ಸಮಯದ ವರೆಗೆ ಆ ಮಹಡಿ ಮನೆಯಲ್ಲಿ ಎಲ್ಲವೂ ನಿಶ್ಯಬ್ಧವಾಗಿತ್ತು,,,ಶ್ಯಾಮಲೆ ಬಿಕ್ಕಿ ಏದುಸಿರು ಬಿಡುವ ಸದ್ಧಲ್ಲದೇ ವಟವಟಿಸುವ ಪೋನ್ ಕೂಡ ನಿಶ್ಯಬ್ಧವಾಗಿತ್ತು..ತಾಯಿ ಬಂದು ಸಮಾಧಾನಿಸಿ “ಹೌದಮ್ಮ,ನೀನು ಮತ್ತೆ ನಿನ್ನ ಗೆಳತಿ ಪಾರ್ಟಿಗೆ ಹೋಗಿದ್ದಲ್ವ,ಅವಳಿಗೆ ಗೊತ್ತಿರಲಿಲ್ವ!??..

ಅಳುವಿನ ಆರ್ಭಟ ತುಸು ಹೆಚ್ಚಾಯಿತೆ ಹೊರತು ಶ್ಯಾಮಲೆ ಮಾತಾಡಲಿಲ್ಲ,ನಾಗರಾಜ್ ಕೂಡ ಅದೇ ಪ್ರಶ್ನೆಯನ್ನು ಇಟ್ಟಾಗ ತನ್ನ ಅಳುವನ್ನು ತಡೆದು ಕೊಳ್ಳುತ್ತಾ ವೃತ್ತಾಂತ ಮುಂದುವರಿಸಿದಳು.”ಆ ಪಾರ್ಟಿಗೆ ಹೋಗಿ ಬಂದ ಮೇಲೆ ಪ್ರಮೀಳಾಳಲ್ಲಿ ತುಂಬಾ ನಿರಾಸಕ್ತಿ,ದುಗುಡ ಕಂಡಿದ್ದೆ,ಅದಕ್ಕೆ ಅವಳ ವೈಯಕ್ತಿಕ ಕಾರಣಗಳಿರಬಹುದೆಂದು ಶಂಕಿಸಿದೆ,,ಆವತ್ತೇ ಅದಕ್ಕೂ ತೆರೆ ಬಿತ್ತು..

 

“ಇದೀಗಾ ನಾನು ಮತ್ತು ಪ್ರಮೀಳ ಮಾತ್ರ ನೋಡಿದ್ದು,ಓಹ್,!ಪ್ರಮೀಳಾಗೆ ಹೇಗೆ ಗೊತ್ತೂಂತ ಯೋಚ್ನೆ ಮಾಡ್ತಿದ್ಯಾ!?ಐ ಆಮ್ ಸಾರಿ,ನಿನಗೆ ಕುಡಿಯೋಕೆ ಕಲಸಿ ಕೊಟ್ಟು,ಅಚ್ಚು ಕಟ್ಟಾಗಿ ನಿನ್ನ ಅನ್’ಡ್ರೆಸ್ ಮಾಡಿ ಹೂವಿನಂತೆ ಬೆಡ್ ಮೇಲೆ ಮಲಗಿಸಿದ ಕೀರ್ತಿ ಮಿಸ್!ಪ್ರಮೀಳಾಗೆ ಸೇರ್ಬೇಕು..!!ಓಹ್,ಪಾಪ ಅವಳ ತಪ್ಪೇನು ಇಲ್ಲ ಹಾಗೊಂದು ವೇಳೆ ಅವಳು ಮಾಡದೇ ಇದ್ದಿದ್ರೆ,ನೀನು ಮತ್ತು ಅವಳು ಅದೇ ಬೆಡ್ ರೂಮ್’ನಲ್ಲಿ ಹುಡುಗರ ಜೊತೆ ಇರುವ ಚಿತ್ರ ಈಗ ನೋಡಬೇಕಾಗಿರುತ್ತಿತ್ತು,ಪ್ರಮೀಳ ಅದನ್ನು ತಪ್ಪಿಸಿದ್ಲು!!..” ರಾಕೇಶ್ ಪ್ರಮೀಳಾಳ ಮೌನಕ್ಕೆ ಕಾರಣವನ್ನು ಹೇಳಿದ್ದ, ನನ್ನ ಮಾನ ಹರಾಜು ಹಾಕಿದ್ದರ ಕೋಪ ಒಂದುಕಡೆ ಇದ್ರೆ ಶೀಲ ಉಳಿಸಿದ ಕೃತಜ್ಞತೆ ಇನ್ನೊಂದು ಕಡೆ ಅವಳಿಗೆ ಧನ್ಯತೆಯನ್ನು ನೀಡುತ್ತಿತ್ತು…

 

“ಯಪ್,ಕಮ್ ಟು ದ *ಡೀಲ್* ಸರಿಯಾಗಿ ಕಿವಿ ಕೊಟ್ಟು ಕೇಳು ಬ್ಯೂಟಿ, ನಿನ್ನ ಎಗ್ಸಾಮ್,ರಿಸಲ್ಟ್ ಬರುವ ದಿನ,ರಾತ್ರಿ 8 ಗಂಟೆಗೆ ನಿನ್ನ ಮನೆಗೆ ನಾ ಬರ್ತೀನಿ,ನಾ ಹೇಳಿದ್ದಕ್ಕೆ ನೀ ತಯಾರಾಗಿದ್ರೆ ಸಾಕು ಅಷ್ಟೇ.!!ಮತ್ತೆ ಡ್ಯಾಡಿ,ಮಮ್ಮೀ,ಟಾಮಿ,ಜಿಮ್ಮಿ,ಇನ್ನೇನು ನಿನ್ನ ಕಮ್ಮಿಗಳಿವೆಯೋ ಅದನ್ನೆಲ್ಲಾ ನೀನೆ ಸಾಗ ಹಾಕಬೇಕು, “

ಅಲ್ಲಿಗೆ ಅವನ ಡೀಲ್’ನ ಪರಿಪೂರ್ಣ ಮಾಹಿತಿ ಸಿಕ್ತು,ಅಲ್ಲೋಲ ಕಲ್ಲೋಲ ಮನಸ್ಸು ಒಂದೇ ಒಂದು ನಿರ್ಧಾರಕ್ಕೆ ಬರುತ್ತಿಲ್ಲ,ನನ್ನೊಳಗೆ ಮೌನಕ್ಕೂ ಮಾತಿಗೂ ಯುದ್ಧ ನಡೆಯುತ್ತಿತ್ತು..

*”ಮಾತು ಗೆದ್ದರೆ ನಾ ಸೋತಂತೆ ಮೌನ ಗೆದ್ದರೆ ನಾ ಸತ್ತಂತೆ..”*…..

 

ಪೇಪರ್ ಕೈಯಲ್ಲಿಟ್ಟು ರಾಕೇಶ್ ಕ್ಯಾಟ್ ವಾಕ್ ಮಾಡುತ್ತಾ ಲೈಬ್ರರಿಯಿಂದ ಹೊರನಡೆದ ಅಷ್ಟರಲ್ಲಿ ಪ್ರಮೀಳ ನನ್ನ ತಬ್ಬಿ ಅಳೋಕೆ ಶುರುಮಾಡಿದಳು ಅವಳ ಕಾರಣದಲ್ಲೂ ಸಂದಿಗ್ಧತೆಯಲ್ಲೂ ಅರ್ಥವಿತ್ತು ಶಾರ್ಟ್’ಕಟ್ಟಿನಲ್ಲಿ ಹೋಗಬೇಕಾದರೆ ಮುಳ್ಳುಗಳಿರುತ್ತವೆ ಅಂದುಕೊಂಡಿದ್ದೇ ಎಲೆಗಳಾಸಿದ ಪ್ರಪಾತಗಳೂ ಇರುತ್ತವೆ ಅನ್ನೋದು ಈವಾಗ ತಿಳಿದುಕೊಂಡಿದ್ದೆ…..

*****

ಗಂಟೆ ಐದು ಮೂವತ್ತು ತೋರಿಸುತ್ತಿತ್ತು,ನಾಗರಾಜ್,ರೇಣುಕಾದೇವಿ ಜೀವಂತ ಶವದಂತೆ ಹತ್ತಿರವಿರುವ ಸೋಫಾಗೆ ಬಿದ್ದು ಬಿಟ್ಟಿದ್ದರು,ಶ್ಯಾಮಲೆ ಇಂದು ರಾತ್ರಿ ಎಂಟು ಗಂಟೆಗೆ ಬರುವ ಪ್ರಳಯವನ್ನು ಎದುರಿಸಲು ಮಾಡೋದೇನು ಅನ್ನೋದು ತಿಳಿಯದೇ ಬಾಲ್ಕನಿಯಿಂದ ಸಾಯಂಕಾಲದ ಸೂರ್ಯನನ್ನು ದಿಟ್ಟಿಸುತ್ತಿದ್ದಳು….

 

(ಮುಂದುವರೆಯುವುದು….)

 

ಅವಿಜ್ಞಾನಿ

 

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post