X
    Categories: ಕಥೆ

ಶುದ್ಧಿ ಭಾಗ -೨

ಶುದ್ಧಿ ಭಾಗ -೧

ಕೆಲಸದ ಸಲುವಾಗಿ ಸುಮಾರು ವರ್ಷಗಳ ಕಾಲ ಹುಟ್ಟೇಶಬೆಂಗಳೂರಿನ ಗಲ್ಲಿ ಗಲ್ಲಿಗಳಲ್ಲಿ ಅಲೆದಿದ್ದ. ಹಲವಾರು ಕಡೆಗೆಕೆಲಸ ಲಭಿಸಿರಲಿಲ್ಲ. ಇನ್ನು ಕೆಲವು ಕಡೆಗೆ ಕಛೇರಿಯಪೇದೆಯಾಗಿ ಕೆಲಸ ಮಾಡಲು ಅವಕಾಶವಿತ್ತಾದರು ಅದನ್ನುಹುಟ್ಟೇಶನೆ ನಿರಾಕರಿಸಿದ್ದ. ಅವನ ಜಾತಿ ಮತ್ತು ಸಾಮಾಜಿಕಸ್ಥಾನಮಾನಗಳು ಪೇದೆಯಾಗಿ ಅಥವಾ ಗುಮಾಸ್ತನಾಗಿಕೆಲಸ ಮಾಡಲು ಅಡ್ಡಿ ಬರುತ್ತಿದ್ದವು. ಅಪ್ಪನ ಒತ್ತಾಯಕ್ಕೆಮದುವೆಯ ಯೋಚನೆಯು ಇವನ ತಲೆಯಲ್ಲಿ ಹೊಕ್ಕಿಅದರ ಆಗು ಹೋಗುಗಳನ್ನು ಚಿಂತಿಸುತ್ತಿತ್ತು. ಸುಮಾರುಕಾಲ ಕೆಲಸವಿಲ್ಲದೆ ಕಳೆದ. ಒಂದು ದಿನ ಅವನ ತಂದೆಯಸ್ನೇಹಿತರಾದ ರಾಜರಾಯರು ಶಿವಮೊಗ್ಗದಿಂದ ಮನೆಗೆಬಂದಿದ್ದರು.’ಏನ್ ಮಾಡ್ಕೊಂಡಿದಾನ್ರಿ ಮಗ? ಒಳ್ಳೇ ಆಳುಅನ್ನಿಸತ್ತೆ.’ ಎಂದು ಹುಟ್ಟೇಶನ ಕಡೆಗೆ ನೋಡಿ ತಂದೆಯನ್ನುಕೇಳಿದ್ದರು.

’ಕೆಲಸ ಹುಡುಕೋದೆ ಕೆಲಸ ಮಾಡ್ಕೊಂಡಿದಾನೆ ರಾಯ್ರೆ.ನಿಮ್ ಪೈಕಿ ಎಲ್ಲಾದ್ರು ಕೆಲಸ ಇದ್ರೆ ಹೇಳಿ. ನಿಯತ್ತಿಂದಮಾಡ್ತಾನೆ. ಮದ್ವೆ ಬೇರೆ ಮಾಡಬೇಕು ಅಂತ ಇದ್ದೀವಿ.ಅಷ್ಟ್ರಲ್ಲಿ ತನ್ ಹೊಟ್ಟೇಗ್ ತಾನೆ ಹಿಟ್ ಹುಯ್ಕೊಳ್ಳೋಹಾಗಾಗಿದ್ರೆ ಸಾಕು’ ಎಂದು ಅಪ್ಪ ಅಳಲುತೋಡಿಕೊಂಡಿದ್ದರು.

ಕೈಲಿದ್ದ ಚಹಾದ ಗ್ಲಾಸ್ ಹಿಡಿದು ರಾಯರು ಏನೋಯೋಚಿಸತೊಡಗಿದರು.’ಕಾರ್ ಓಡಿಸೋಕೆ ಬರತ್ತೇನಪ್ಪ?’ಎಂದು ಹುಟ್ಟೇಶನನ್ನು ಕೇಳಿದರು.

‘ಬರಲ್ಲ.’

‘ಹಸು ಎಮ್ಮೆ ತೊಳೆದು ಅಭ್ಯಾಸ ಇದ್ಯ?’

‘ಇಲ್ಲ. ಆದ್ರೆ ನೋಡಿದ್ದೀನಿ.’

‘ನಿನ್ ತಿಗಾ ತೊಳ್ಯೋ ಅಭ್ಯಾಸಾನಾದ್ರು ಇದ್ಯೇನಪ್ಪ?’ಎಂದು ತೀರ್ಥರೂಪರ ಕಡೆಗೆ ತಿರುಗಿ ಗಹಗಹಿಸಿನಗಲಾರಂಭಿಸಿದರು.’ಸುಮ್ನೆ ತಮಾಷೆ ಮಾಡಿದೆ.ಬೆಂಗಳೂರಲ್ಲಿ ನಮ್ ಸ್ನೇಹಿತರ ಮಗ ಒಬ್ಬ ಕಂಪ್ನಿನಡೆಸ್ತಿದಾನೆ. ಅವನ ಕಾರ್ ಡ್ರೈವರಿಗೆ ವಯಸ್ಸಾಯ್ತಂತೆ.ರಾತ್ರಿ ಹೊತ್ತು ಕಣ್ಣು ಮಂಜು ಅಂತಾನಂತೆ. ಅದಕ್ಕೆ ಒಬ್ಬಗಟ್ಟಿ ಆಳಿದ್ರೆ ಹೇಳಿ ಅಂದಿದಾರೆ.ನಿಂಗೆ ಇಷ್ಟ ಇದ್ರೆ ಹೇಳ್ತೀನಿ.ಸ್ವಲ್ಪ ದಿನ ಹಸು ಎಮ್ಮೆ ತೊಳೆದ ಹಾಗೆ ಕಾರ್ ತಿಕ್ಕಿತೊಳೆಯೋದು ಮಾಡ್ಕೊಂಡಿರು. ಹಂಗೆ ಡ್ರೈವಿಂಗ್ಕಲ್ತ್ಕೋ.’ ಎಂದು ಸಲಹೆ ಸೂಚನೆ ಎರಡನ್ನೂ ಸೇರಿಸಿಸುಯೋಗವನ್ನು ಮುಂದಿಟ್ಟರು.

ಎರಡು ದಿನ ಕಳೆದರು ಹುಟ್ಟೇಶ ಉತ್ತರ ಕೊಟ್ಟಿರಲಿಲ್ಲ.ಅಂದು ರಾತ್ರಿ ಊಟಕ್ಕೆ ಕೂತಾಗ ತಂದೆಯವರೇ ಆ ವಿಚಾರತೆಗೆದರು. ’ನೋಡು ಹುಟ್ಟೇಶ, ಈ ವಯಸ್ಸಲ್ಲಿ ದುಡೀಬೇಕು.ಈಗಿರೋ ಪರಿಸ್ಥಿತಿಯಲ್ಲಿ ಕನಸ್ಗೂ  ಕಾಸ್ ಕಟ್ಟಬೇಕಾಗಿದೆ.ಅಂಥದ್ರಲ್ಲಿ ಖಾಲಿ ಇದ್ರೆ ಆಗಲ್ಲ ಮರಿ. ಬೆಂಗ್ಳೂರೇನ್ಸಣ್ಣೂರಲ್ಲ. ರಾಯರು ಹೇಳಿದ ಕೆಲಸಕ್ಕೆಸೇರಿಕೋ.ಮನುಷ್ಯಂಗೆ ಕಾಯಕ ಮುಖ್ಯ. ನಾಳೆ ದಿನಯಾರು ಹೊಟ್ಟೇಗ್ ಹಾಕಲ್ಲ. ನಿನ್ ಪಾಡು ನೀನೆನೋಡ್ಕಬೇಕು.’ ಎಂದು ಗಂಭೀರವಾಗಿ ಹೇಳಿದರು.

ತಟ್ಟೆಯಲ್ಲಿದ್ದ ಅನ್ನ ಸೇರಿರಲಿಲ್ಲ. ಮರುದಿನ ಬೆಳಗ್ಗೆರಾಯರಿಗೆ ತೀರ್ಥರೂಪರು ಕರೆ ಮಾಡಿ ಮಗ ಅಂದೇಬೆಂಗಳೂರಿಗೆ ತೆರಳುವುದಾಗಿ ತಿಳಿಸಿದ್ದರು. ಮೂರು ಶರ್ಟುಎರಡು ಪ್ಯಾಂಟು ಕಟ್ಟಿಕೊಂಡು ಹುಟ್ಟೇಶ ಬದುಕುರೂಪಿಸಿಕೊಳ್ಳುವುದಕ್ಕೆ ಹೊರಟ. ಕೆಲವೇ ದಿನಗಳಲ್ಲಿ ಕಾರುಕಲಿತು ಹುಟ್ಟೇಶ ಡ್ರೈವರ್ ಆದ.

ಮದುವೆ ನಿಶ್ಚಯವಾಗಿತ್ತು. ಹುಟ್ಟೇಶನ ತಾಯಿ ಕೌಸಲ್ಯನಕುಟುಂಬಕ್ಕೆ ಅವನ ಅಸಲಿ ಕಸಬು ಹೇಳಲಿಲ್ಲ. ಕಾರ್ಡ್ರೈವರ್ ಆಗಿದ್ದ ಹುಟ್ಟೇಶನನ್ನು ಕಂಪನಿಯಲ್ಲಿಕೆಲಸಕ್ಕಿದ್ದಾನೆ ಎಂದು ಕಥೆ ಕಟ್ಟಿದರು. ಇದರಿಂದ ತಂದೆಗೆಕಸಿವಿಸಿಯಾಗಿತ್ತು. ಸುಳ್ಳು ಹೇಳಿದ ಮೇಲೆಕಾಪಾಡಿಕೊಳ್ಳೋದು ತಮ್ಮ ಧರ್ಮ ಎನ್ನುವಂತೆ ಅದೇಸುಳ್ಳನ್ನು ಸಾವಿರ ಬಾರಿ ಹೇಳಿ ರೂಢಿ ಮಾಡಿದರು. ಇಂದುಹುಟ್ಟೇಶ ಅದೇ ಸುಳ್ಳನ್ನು ಹೊಟ್ಟೆಯೊಳಗೆ ಜೋಪಾನವಾಗಿಕಾಪಾಡಿಕೊಂಡು ಬರುತ್ತಿದ್ದಾನೆ.

ಪಕ್ಕದಲ್ಲಿ ಮಲಗಿರುವ ಮಗು ಮತ್ತು ಹೆಂಡತಿಯನ್ನು ಕಂಡುಎಲ್ಲಾ ವಿಚಾರಗಳು ಕಣ್ಣ ಮುಂದೆ ತೇಲಿಹೋದಂತಾಯಿತು.ಅದೇಕೋ ದುಃಖ ಉಮ್ಮಳಿಸಿಬಿಟ್ಟಿತು. ಕಣ್ಣೀರುತಂದುಕೊಂಡರೆ ಮಲಗಿರುವವರು ಎದ್ದಾರು ಎಂದುನೋವನ್ನು ಹಾಗೆ ಜೀರ್ಣಿಸಿಕೊಂಡನು.

ಒಂದು ಸುಳ್ಳನ್ನು ಮುಚ್ಚಿಹಾಕೋಕೆ ನೂರಾರು ಸುಳ್ಳುಹುಟ್ಟೋದು ಸಹಜ. ಆದರೆ ಸುಳ್ಳನ್ನ ನೆನಪಿನಲ್ಲಿಟ್ಟು ಅದನ್ನಸರಿಯಾದ ಜಾಗದಲ್ಲಿ ಸರಿಯಾದ ಸಮಯದಲ್ಲಿ ಬಳಕೆಮಾಡುವ ಯಾತನೆ ಹುಟ್ಟೇಶನಿಗೆ ಅನುಭವಕ್ಕೆ ಬಂದಿತ್ತು.ಅಪ್ಪ ಒಂದು ದಿನ ಇವನಿಗೆ ನುಡಿದದ್ದು ನೆನಪಿಗೆ ಬಂತು. ’ಕಹಿಯಾದ ಸತ್ಯಾನ ಯಾವತ್ತು ನುಡಿಬ್ಯಾಡ, ಸಿಹಿಯಾದಸುಳ್ಳನ್ನ ಮಂಡಿಸಬ್ಯಾಡ. ಇದನ್ನ ಮರೆತ್ರೆ, ನಿನ್ನ ಪಾಡು ನನ್ನಥರ ಆಗತ್ತೆ. ಇಲ್ಲಿ ಕಾಯಕಕ್ಕೆ ಮಾತ್ರ ಬೆಲೆ.’ ಎಂದಿದ್ದತಂದೆಯ ಧ್ವನಿ ಇಂದು ಕಿವಿಯಲ್ಲಿ ಗುನುಗುತಿತ್ತು.ಕಂಪನಿಯಲ್ಲಿ ಕೆಲಸಕ್ಕಿದ್ದೇನೆ ಎಂದು ಹೇಳಿದ್ದ ದೊಡ್ಡಸುಳ್ಳನ್ನು ಮುಚ್ಚಿಹಾಕಲು ಹುಟ್ಟೇಶ ಸಾವಿರಾರು ಕಟ್ಟುಕಥೆಗಳನ್ನ ಹೇಳಿ ಕೌಸಲ್ಯಾಳನ್ನ ಸಮಾಧಾನ ಮಾಡುತ್ತಿದ್ದ.ಇತ್ತೀಚೆಗೆ ಹಿರಿಮೆಗೋ, ಮಾತಿನ ಅಮಲಿನಲ್ಲೋಕಂಪನಿಯಿಂದ ನನಗೊಂದು ಕಾರ್ ಕೊಟ್ಟಿದ್ದಾರೆ ಎಂದುಮನೆಯಲ್ಲಿ ಸುಳ್ಳು ಹೇಳಿ ಬಿಟ್ಟಿದ್ದ. ದಿನನಿತ್ಯ ಕಾರು ಓಡಿಸಿಓಡಿಸಿ ಆ ಕಾರು ತನ್ನದೇ ಆದಂತೆ ಭಾಸವಾಗಿಹೋಗಿತ್ತು. ಈಕಲ್ಪನೆಯನ್ನು ನಿಜವೆಂದು ತನ್ನ ಅಜಾಗೃತ ಮನಸ್ಸೇಒಪ್ಪಿಬಿಟ್ಟಿತ್ತು. ಆದರೆ ಅದೇಕೆ ತನ್ನದಲ್ಲದ್ದನ್ನ ತನ್ನದೆಂದುಕಲ್ಪಿಸಿಕೊಂಡ? ಸತ್ಯದ ತಲೆಯ ಮೇಲೆ ಹೊಡೆದಂತೆಮನೆಯಲ್ಲೇಕೆ ಸುಳ್ಳು ಹೇಳಿದ? ಕೌಸಲ್ಯ ಮತ್ತು ಶಾಂತಿಯಸಂತೋಷವನ್ನು ನೋಡಲು ಅವರೆದುರು ಆ ಸುಳ್ಳುಹೇಳಿದನೆ? ಆದರೆ ಆ ಸುಳ್ಳನ್ನು ಅನುಭವಿಸಿ ಅದಾಗಲೆಅವನ ಮನದಾಳದಲ್ಲಿ ಸತ್ಯವೆಂದು ಬೇರೂರಿತ್ತು.ಹಾಗಾದರೆ ತನ್ನ ಅಂತರಂಗಕ್ಕೆ ಒಂದು ತೆರನಾದಪೀಡನರತಿಯ ಸುಖಕ್ಕೆ ಆ ರೀತಿಯ ಸುಳ್ಳುಹುಟ್ಟುಹಾಕಿಕೊಂಡು ತನಗೆ ತಾನೆ ಸಮಾಧಾನಮಾಡಿಕೊಂಡನೇ? ತನ್ನ ಸ್ವಂತಕ್ಕೆ ಒಂದು ಕಾರನ್ನುಕೊಂಡುಕೊಳ್ಳಲಾಗುವುದಿಲ್ಲ ಎನ್ನುವುದು ಒಂದುಕಹಿಯಾದ ಸತ್ಯ,ತನ್ನದಲ್ಲದ ಕಾರನ್ನು ತನ್ನದು ಎಂದುಹೇಳಿಕೊಂಡಿರುವುದು ಸಿಹಿಯಾದ ಸುಳ್ಳು. ’ಕಹಿಯಾದಸತ್ಯಾನ ಯಾವತ್ತು ನುಡಿಬ್ಯಾಡ,ಸಿಹಿಯಾದ ಸುಳ್ಳನ್ನಮಂಡಿಸಬ್ಯಾಡ.’ ಎಂಬ ತಂದೆಯ ಮಾತುಗಳುಮರುಕಳಿಸಿತು. ಯಾವುದೋ ಬಲೆಯಲ್ಲಿ ಸಿಕ್ಕಿ ಅದರಿಂದಹೊರಗೆ ಬರಲು ಅಸಾಧ್ಯವಾಗದ ಭಾವನೆ ಅವನಲ್ಲಿಮೂಡಿತು. ಆ ಭಯ,ಆತಂಕ,ಸಂಕೋಚಗಳನ್ನಅನುಭವಿಸಿಕೊಂಡೇ ಹುಟ್ಟೇಶ ಮಗ್ಗಲು ಮಲಗಿದ. ಎಷ್ಟುಹೊತ್ತಿಗೆ ನಿದ್ರೆ ಆವರಿಸಿತೋ ತಿಳಿಯಲಿಲ್ಲ.

ರಣರಂಗದ ನಡುವೆ ತಪ್ಪಿಸಿಕೊಳ್ಳುವ ಯತ್ನದಲ್ಲಿ ಹುಟ್ಟೇಶಓಡಿ ಹೋಗುತ್ತಿದ್ದಾನೆ. ಆದರೆ ಕಾಲುಗಳು ಸಹಯಮಾಡುತ್ತಿಲ್ಲ. ತಾನು ಕನಸಿನಲ್ಲಿದ್ದಾನೆ ಎನ್ನುವ ಜಾಗೃತೆಅವನಿಗಿದ್ದರೂ ಕಣ್ಣು ಬಿಡುವುದಕ್ಕಾಗುತ್ತಿಲ್ಲ. ಇನ್ನೇನುಯಾರೋ ಹಿಂದಿನಿಂದ ಕತ್ತಿಯಿಂದ ತಿವಿಯಬೇಕುಅಷ್ಟರಲ್ಲಿ ಹುಟ್ಟೇಶ ಎದ್ದು ಕೂತ. ಕಣ್ಣುಗಳುಕೆಂಪುಗಟ್ಟಿದ್ದವು. ತಲೆ ಸಿಡಿಯುತ್ತಿತ್ತು. ಗೋಡೆಗೆನೇತುಹಾಕಿದ್ದ ಗಡಿಯಾರದಲ್ಲಿ ಸಮಯನೋಡಿದ.ನಾಲ್ಕುವರೆ ದಾಟಿತ್ತು. ಎಂಥದ್ದೋ ಒಂದುಧೈರ್ಯ ಧಿಡೀರನೆ ಅವನಲ್ಲಿ ಕಾಣಿಸುತ್ತಿತ್ತು. ಮನಸಿನಲ್ಲಿದ್ದಕ್ಲಿಷ್ಟ ದಾರಿ ಈಗ ಸುಲಭವಾಗಿದೆ.ಎಲ್ಲವೂ ನಿರಾಳವಾಗಿಕಾಣುತ್ತಿದೆ. ಹುಟ್ಟೇಶ ತನ್ನ ಚಿಂತೆಯನ್ನು ಮೀರಲು ಒಂದುನಿರ್ಧಾರ ಮಾಡಿದನು.ಆ ನಿರ್ಧಾರ ಸಮಯ ಕಳೆದಂತೆಇನ್ನು ಗಟ್ಟಿಯಾಯಿತು. ಏನೋ ಸಾಧಿಸಿದ ಸಂಭ್ರಮದಿಂದಮೈ ರೋಮಾಂಚನವಾಯ್ತು. ಹಾಗೆ ಕಣ್ಣು ಮುಚ್ಚಿದವನಿಗೆನಾಲ್ಕು ತಾಸು ಘಾಡವಾದ ನಿದ್ರೆ ಆವರಿಸಿತು. ಈ ಬಾರಿಕನಸಿನ ಕಾಟವಿರಲಿಲ್ಲ.

ಹುಟ್ಟೇಶನ ಧಣಿಗಳು ಗಂಗಾಧರ ಸ್ವಾಮಿ. ಗಂಗಾಧರಸ್ವಾಮಿ ಮೈಸೂರಿನ ಇಟ್ಟಿಗೆಗೂಡಿನವನು. ಹುಟ್ಟುಶ್ರೀಮಂತ. ಅಪ್ಪ ಮಾಡಿದ ಆಸ್ತಿಯನ್ನು ನಿಭಾಯಿಸಿಕೊಂಡುಹೋದರೆ ಸಾಕು ಜೀವನ ನಡೆಯುತ್ತಿತ್ತು. ಆದರೆ ಗಂಗಾಧರಸ್ವಾಭಿಮಾನಿ. ಅಪ್ಪನ ಆಸ್ತಿ ಅಪ್ಪನದು. ತನ್ನ ದುಡಿಮೆತನ್ನದು ಎಂದು ಬೆಂಗಳೂರಿಗೆ ಹೊರಟು ರೈಲು ಹತ್ತಿದ್ದ.ಮದ್ದೂರು ಸಮೀಪ ಟಿಕೆಟ್ ಕಲೆಕ್ಟರ್ ಇವನ ಬಳಿ ಟಿಕೆಟ್ಇಲ್ಲವೆಂದು ಕಾಲರ್ ಹಿಡಿದು ಹೊರ ದಬ್ಬಿದ್ದ. ಮತ್ತೊಂದುರೈಲು ಹತ್ತಲು ಜೇಬಲ್ಲಿ ದುಡ್ಡಿರಲಿಲ್ಲ. ಆಗ ಗಂಗಾಧರನಿಗೆಹತ್ತೊಂಬತ್ತು ವರ್ಷ. ಸುಖದಲ್ಲೇ ಬೆಳೆದಿದ್ದರೂ ಛಲದಿಂದದುಡಿಯುವ ಹಟ ಇತ್ತು. ಮದ್ದೂರು ರೈಲ್ವೇ ಸ್ಟೇಶನ್ಪಕ್ಕದಲ್ಲಿದ್ದ ಕ್ಯಾಂಟೀನ್ ಒಂದರಲ್ಲಿ ಮಾಣಿಯಾಗಿ ಕೆಲಸಕ್ಕೆಸೇರಿದ. ಹೊಟ್ಟೆ ತುಂಬ ಊಟವೇನೋ ಸಿಕ್ಕುತ್ತಿತ್ತು. ಆದರೆಮೈ ಮುರಿವಂತಹ ಕೆಲಸ. ಶುರುವಿನಲ್ಲಿ ಎರಡೇ ಟೇಬಲ್ನೋಡಿಕೊಳ್ಳುತ್ತಿದ್ದ. ಅದೇ ಸುಸ್ತು ಮಾಡಿಬಿಡುತ್ತಿತ್ತು.ನಂತರ ನಾಲ್ಕು, ನಾಲ್ಕರಿಂದ ಐದು. ರಾತ್ರಿಯಾಗುವಷ್ಟರಲ್ಲಿಮೈಲಿರೋ ಶಕ್ತಿ ತಲೆಯಲ್ಲಿರೋ ವಿಚಾರ ಎರಡುಖಾಲಿಯಾಗಿಹೋಗುತ್ತಿತ್ತು. ಉಂಡು ಕ್ಯಾಂಟೀನಿನಲ್ಲೇಮಲಗಿದಾಗ ಮನೆಯ ನೆನಪಾಗುತ್ತಿತ್ತು. ಅಕ್ಕರೆಯಿಂದಕಾಣುತ್ತಿದ್ದ ಅಮ್ಮ. ಹೆಮ್ಮೆಯಿಂದ ಓಡಾಡುತ್ತಿದ್ದ ಅಪ್ಪ,ಇಬ್ಬರೂ ಬೇಕೆನಿಸುತ್ತಿತ್ತು. ಅಪ್ಪಿ ಹಿಡಿದು ಇನ್ನೆಂದೂಬಿಡುವುದಿಲ್ಲ ಎಂದು ಕೂಗಿ ಹೇಳ ಬೇಕೆನಿಸುತ್ತಿತ್ತು. ನೆನಪಿನಸುಳಿಯಲ್ಲಿ ಮುಳುಗಿದಾಗ ಕಣ್ಣುತುಂಬಿ ಬರುತ್ತಿತ್ತು.ಮಕಾಡೆಯಾಗಿ ದಿಂಬಿಗೆ ಮುಖವಿಟ್ಟು ಬಿಕ್ಕಿ ಬಿಕ್ಕಿಅಳುತ್ತಿದ್ದನು. ಅಪ್ಪ ಅಮ್ಮ ಸುಖವಾಗಿರಲಿ ಎಂದು  ಆಗಾಗ್ಗೆತಲೆಯತ್ತಿ ಆಕಾಶದತ್ತ ನೋಡಿ ದೇವರನ್ನುಕೇಳಿಕೊಳ್ಳುವವನಂತೆ ತನ್ನ ಅಂತರಾತ್ಮಕ್ಕೆಹೇಳಿಕೊಳ್ಳುತ್ತಿದ್ದ. ತನ್ನ ಕಾಲಿನ ಮೇಲೆ ತಾನು ನಿಲ್ಲಬೇಕುಎನ್ನುವ ಆದರ್ಶ ಮಾತ್ರ ಅವನನ್ನು ಮನೆಯಿಂದಹೊರನಡೆಯುವ ಹಾಗೆ ಮಾಡಿತ್ತು, ತಂದೆ ತಾಯಿಯಮೇಲೆ ವಯಕ್ತಿಕವಾಗಿ ಯಾವ ಕೋಪವೂ ಇರಲಿಲ್ಲ.ಆಆದರ್ಶದ ಬೆನ್ನಟ್ಟಿ ಹೋಗುತ್ತಿರುವಾಗ ಈ ನೋವು ಸಹಜಎಂದು ಅರಿತು ಮತ್ತೆ ಬೆಳಗ್ಗೆ ಎದ್ದು ಕೆಲಸಕ್ಕೆಹಾಜರಾಗುತ್ತಿದ್ದ.

ಅತ್ತ ಗಂಗಾಧರನ ತಂದೆ ತಾಯಿ ಹೋಮ ಹವನಗಳನ್ನಮಾಡಿಸಿದರು. ಜ್ಯೋತಿಷಿಗಳ ಹತ್ತಿರ ದಿನಗಟ್ಟಲೆಕುಳಿತಿರುತ್ತಿದ್ದರು. ಒಬ್ಬ ಜ್ಯೋತಿಷಿ ನಿಂಬೆಹಣ್ಣನ್ನು ಹಣೆಯಬಳಿ ಹಿಡಿದು ’ನಿಮ್ಮುಡ್ಗ ದೊಡ್ ಮನ್ಸ ಆಗ್ತಾನೆ ಅಂತತಾಯಿ ನುಡೀತಾವ್ಳೆ. ಆಳು ಕಾಳು ಆಸ್ತಿ ಪಾಸ್ತಿ ಎಲ್ಲಾಮಾಡ್ತಾನೆ. ತಾಯಿ ನುಡೀತಾಳೆ,ತಾಯಿ ನುಡೀತಾಳೆ’ ಅಂದುಬಿಟ್ಟಿದ್ದರು. ಅಮ್ಮನಿಗೆ ಒಂದು ರೀತಿಯ ನೆಮ್ಮದಿಯಾದರೆಅಪ್ಪನಿಗೆ ಶೂನ್ಯಭಾವ ಕಾಡಲು ಶುರುವಾಗಿತ್ತು.ಕೆಲದಿನಗಳಲ್ಲಿ ಗಂಗಾಧರನ ತಂದೆ ಇದೇ ಚಿಂತೆಯಲ್ಲಿಹಾಸಿಗೆ ಹಿಡಿದರು. ಇದ್ದ ಒಬ್ಬ ಮಗನು ತಮ್ಮ ಖಾಂದಾನಿಗೆವಾರಸುದಾರನಾಗಿ ಉಳಿಯಲಿಲ್ಲವಲ್ಲ ಎಂದು ಬಂದನೆಂಟರ ಮುಂದೆ ಅಳುತ್ತಿದ್ದರು. ಗಂಗಾಧರ ಎಲ್ಲರ ಕಣ್ಣಲ್ಲುದಾರಿ ತಪ್ಪಿದವನಾಗಿ ಹೋದ. ಒಂದು ದಿನ ಗಂಗಾಧರನತಾಯಿ ಸೆರಗಲ್ಲಿ ಕಣ್ಣಂಚಲ್ಲಿ ಜಿನುಗುತ್ತಿದ್ದ ಕಣ್ಣೀರನ್ನುತಿಕ್ಕಿಕೊಳ್ಳುತ್ತ ಗಂಡನ ಮುಂದೆ ಕೂತರು. ’ಅವ್ನೆಲ್ಲೋಹಾಳಾಗವ್ನೆ.ಸತ್ನೋ ಬದ್ಕವ್ನೋ ದ್ಯಾವ್ರೆ ಬಲ್ಲ.ಕೊಂಡಿ ಕಳಚಿಬಿತ್ತು ಅಂತ ಹರ ಸಿವಾ ಅಂದ್ಕಂಡ್ ಸುಮ್ಕಿರದ್ ಬಿಟ್ಟು.ಪಿರಾಣ ಕಳ್ಕಳಕ್ಕೆ ತುದಿಗಾಲಲ್ಲಿ ನಿಂತಿವ್ರಲ್ಲ. ನನ್ ಬಗ್ಗೆ ವಸಿಯೋಚ್ನೆ ಮಾಡ್ಬಾರದ?’

‘ನೀನು ಪಿರಾಣ ಕಳ್ಕ.’

‘ಏನ್ ನೀವಾಡ ಮಾತು?ಸಾಯೋದು ಅಂದ್ರೆ ಮಕ್ಳ್ಆಟಿಕೇನ? ನಾವ್ ಸತ್ರೆ ಪರಿಹಾರ ಸಿಗ್ತದ? ಈ ಆಳು ಕಾಳುಮನೆ ಮಠ ಎಲ್ಲಾವ ಯಾರ್ ನೋಡ್ಕಳಾದು.’

’ನಾವಿದ್ರು ಯಾರ್ ನೋಡ್ಕತಾವ್ರೆ?’ ಎಂದು ಗಂಗಾಧರನತಂದೆ ಎರಡು ನಿಮಿಷ ಸುಮ್ಮನೆ ಛಾವಣಿ ನೋಡುತ್ತಾಮಲಗಿದ್ದರು. ’ಒಂದೊಂದ್ ಸರ್ತಿ ಅನ್ಸುತ್ತೆ. ನಾನ್ದುಡ್ದುದ್ದು ಯಾಕೆ? ಯಾರಿಗೋಸ್ಕರ ಅಂತ? ನಮ್ ಬದ್ಕನ್ನಭದ್ರ ಮಾಡ್ಕಳಕ್ಕಾ ಅಥ್ವ ಮಗಿ ಬದ್ಕನ್ನ ಭದ್ರ ಮಾಡೋಕ?ಎಲ್ಡು ಸುಳ್ಳಾಗೋಯ್ತಲ್ಲ ಈಗ.’ ಎಂದು ಹೆಂಡತಿಯ ಕೈಹಿಡಿದರು. ಮಂಪರು ಮಾತುಗಳು ಹಾಗೆ ಸಾಗಿತು ’ಗಂಗಸುಖ್ವಾಗಿರ್ತಾನೆ ಅಂತೀಯ?’

‘ಆ  ಜ್ಯೋತಿಸ್ಯದೋರ್ ಹೇಳೋರಲ್ಲ. ತಿಂದ್ಕಂಡ್ಉಂಡ್ಕಂಡ್ ವೈನಾಗೆ ಇರ್ತಾನೆ ಬುಡ್ರಿ.’ ಎಂದು ಹೇಳುವಾಗಆಕೆಗೆ ಅಳು ಬಂದಂತಾಯಿತು. ಗಂಟಲು ಕಟ್ಟಿದಂತಾಗಿಗಂಡನನ್ನು ತಬ್ಬಿ ಅತ್ತಳು. ಇದಾದ ಮೂರು ದಿನಕ್ಕೆಗಂಗಾಧರನ ತಂದೆ ತೀರಿಹೋದರು. ತಾಯಿ ಇನ್ನಷ್ಟುಮಂಕಾದರು. ಗಂಗಾಧರನಿಗೆ ವಿಷಯ ತಿಳಿಸಲೂಸಾಧ್ಯವಾಗಲಿಲ್ಲ. ಕೆಲವರು ಗಂಗಾಧರ ಮದ್ದೂರು ರೈಲ್ವೆಕ್ಯಾಂಟೀನಲ್ಲಿ ಕಾಣಿಸಿಕೊಂಡಿದ್ದ ಎಂದು ಹೇಳಿದ್ದರು.ಹುಡುಕಿಸಲು ಹುಡುಗರನ್ನು ಕಳಿಸಿದಾಗ ಅಲ್ಲಿ ಗಂಗಾಧರಕೆಲಸ ಬಿಟ್ಟು ಬಾಂಬೇಗೋ ಪೂಣಾಕ್ಕೋ ಹೋಗಿದಾನೆಎಂದು ತಿಳಿಸಿದ್ದರು. ಕಾಲ ಕಳೆದಂತೆ ಅವನ ಆಸೆ ತಾಯಿಗೆಬತ್ತಿ ಹೋಗಿತ್ತು.

ರಾತ್ರಿ ನಿದ್ದೆ ಕೆಟ್ಟು ಬೆಳಗ್ಗೆ ತಣ್ಣನೆಯ ನೀರಿನಲ್ಲಿ ಮುಖತೊಳೆಯುವಾಗ ಧಣಿಗಳಿಂದ ಹುಟ್ಟೇಶನಿಗೆ ಕರೆ ಬಂತು.ತಕ್ಷಣ ಮೈಸೂರಿಗೆ ಹೋಗಬೇಕಾಗಿತ್ತು. ತನ್ನ ನಿರ್ಧಾರವನ್ನುಗುಂಡಿಗೆಯ ಆಳದಲ್ಲಿ ಗಟ್ಟಿಯಾಗಿ ಬಿತ್ತಿಕೊಂಡಿದ್ದನು.ಇಂದು ಧಣಿಗಳ ಜೊತೆಗೆ ಮಾತನಾಡಬೇಕು. ಮನೆಯಲ್ಲಿಹೇಳಿರುವ ಸುಳ್ಳಿನಿಂದ ತನ್ನಲ್ಲಿ ಉಂಟಾಗಿರುವ ಅಪರಾಧಿಮನೋಭಾವವನ್ನು ತೊಳೆದುಹಾಕಿಕೊಳ್ಳಬೇಕು. ಹೆಂಡತಿಗೆಸುಳ್ಳು ಹೇಳುವುದು ಧರ್ಮವಲ್ಲ. ಎಲ್ಲಾ ಸರಿ ಹೋಗಬೇಕುಎಂದುಕೊಂಡೇ ಧಣಿಗಳ ಮನೆಯ ಕಡೆಗೆ ಹೊರಟ.

ಬೆಳಗ್ಗೆ ಇಟ್ಟಿಗೆಗೂಡಿನ ಮನೆಗೆ ಗಂಗಾಧರ ಕಾರಲ್ಲಿ ಬಂದುಇಳಿದ. ಬಿಳಿ ರೇಶ್ಮೆ ಶರ್ಟು.ಅದಕ್ಕೆ ತಕ್ಕಪ್ಯಾಂಟು.ಬೆರಳಿಗೊಂದು ಉಂಗುರ. ಚಿನ್ನದ ಸರಗಳು.ಬೆಂಗಳೂರಲ್ಲಿ ರಿಯಲ್ ಎಸ್ಟೇಟ್ ನಡೆಸುವವನ ಹಾಗೆಕಾಣುತ್ತಿದ್ದ. ಮನೆಯ ಬಾಗಿಲಿನ ಬಳಿ ನಿಂತು ಕದ ತಟ್ಟಿದ.  ಕೆಲಸದಾಕೆಯೊಬ್ಬಳು ಬಾಗಿಲು ತೆಗೆದು ’ಯಾರು?’ ಎಂದುಕೇಳಿದಳು.

‘ಅಪ್ಪ ಅವ್ವ ಎಲ್ಲಿ?’ ಎಂದು ಸಂತೋಷದಿಂದಲೇ ಕೇಳಿದ.

‘ಯಾವಪ್ಪ ಅವ್ವ? ಇದು ಅನಾಥಾಶ್ರಮ ಸ್ವಾಮಿ’ ಎಂದುಆಕೆ ಬಾಗಿಲು ಹಾಕಿದಳು. ಗಂಗಾಧರನಿಗೆ ಮರದ ತುಂಡಲ್ಲಿಬೆನ್ನಿಗೆ ಬಾರಿಸಿದ ಹಾಗಾಯ್ತು. ಏನು ತಿಳಿಯದವನಂತೆಕಾರ್ ನಿಂತಿದ್ದ ಕಡೆಗೆ ನಡೆದು ಬಂದ. ಅವನ ಕಾರ್ ಚಾಲಕಹುಟ್ಟೇಶ,ತನ್ನ ಧಣಿಗಳನ್ನು ಕಂಡು ದಿಗಿಲುಗೊಂಡುಕಾರಲ್ಲಿದ್ದ ನೀರಿನ ಬಾಟಲ್  ಹಿಡಿದು ಹತ್ತಿರಬಂದ. ಬೇಡಎನ್ನುವಂತೆ ಕೈಯಾಡಿಸಿ ಗಂಗಾಧರ ಮನೆಯ ಪಕ್ಕದಲ್ಲಿದ್ದಔಷಧಿಯ ಅಂಗಡಿಯತ್ತ ಹೆಜ್ಜೆ ಹಾಕಿದ. ತಾನುಹುಟ್ಟಿದಾಗಲಿಂದಲೂ ಆ ಅಂಗಡಿ ಅಲ್ಲೇ ಇತ್ತು. ಹಾಗಾಗಿತನ್ನ ವಿಚಾರ, ತನ್ನ ತಂದೆ ತಾಯಿಯ ವಿಚಾರ ಅವರಿಗೆತಿಳಿದಿರಲೇಬೇಕು ಎಂದುಕೊಂಡು ಅಂಗಡಿಯ ಮುಂದೆಹೋಗಿ ನಿಂತ. ಅಂಗಡಿಯವನು ಸುಮಾರು ಗಂಗಾಧರನವಯಸ್ಸಿನವನೆ.ಇವನ ಗುರುತು ಸಿಕ್ಕಲಿಲ್ಲ. ‘ನಾನು,ನಿಂಗಪ್ಪನ ಮಗ ಗಂಗಾಧರ ಸ್ವಾಮಿ’ ಎಂದು ಇವನೇ ತನ್ನಪರಿಚಯ ಹೇಳಿದ. ಅಂಗಡಿಯವನ ಮುಖದಲ್ಲಿ ಏನೂಹೊಳೆಯದ ಭಾವ ಕವಿಯಿತು. ಗಂಗಾಧರನೇ ಮಾತುಮುಂದುವರೆಸಿದ.

‘ಅಪ್ಪ ಅವ್ವ?’

ಅಂಗಡಿಯವನಿಗೆ ಪರಿಸ್ಥಿತಿ ಅರ್ಥವಾಗಿ ’ಕೂತ್ಕೋಗಂಗಾಧರ. ಏನು ಕುಡೀತ್ಯ? ಕಾಪಿ ಜೂಸು?’ ಎಂದುಗಂಗಾಧರನನ್ನು ಅಂಗಡಿಯ ಮುಂದೆ ಕೂಡಿಸಿದ.ಪೆಚ್ಚುಮುಖವನ್ನು ಹಿಡಿದು ಗಂಗಾಧರ ಬೊಂಬೆಯಂತೆಕುಳಿತ.

ಗಂಗಾಧರನ ಮನಸ್ಸು ನೂರಾರು ಕಡೆಗೆ ಸುಳಿದುಬರುತ್ತಿತ್ತು. ಈ ಅಂಗಡಿಯವನು ತನ್ನ ಬಾಲ್ಯದ ಗೆಳೆಯಶ್ರೀಧರ. ಇವರ ತಂದೆ ಬದರಿನಾಥ ತನ್ನ ತಂದೆಗೆಆಪ್ತರಾಗಿದ್ದರು. ಈಗ ಗುರುತು ಸಿಕ್ಕದಷ್ಟುದೂರವಾಗಿದ್ದೇವೆ. ಅಪ್ಪ ಅವ್ವನ ವಿಚಾರ ಇವನಿಗೆತಿಳಿದಿರಬಹುದ ಎಂದು ಯೋಚಿಸುತ್ತಿರುವಷ್ಟರಲ್ಲಿ ಶ್ರೀಧರಒಂದು ಬಾಟಲ್ ಕೋಲ ಗಂಗಾಧರನ ಮುಂದೆ ಹಿಡಿದ.ಅದನ್ನು ಕುಡಿದ ಗಂಗಾಧರ ’ಅಪ್ಪ ಅವ್ವ ಹೋಗ್ಬಿಟ್ರ?’ಎಂದು ಕೇಳಿದ.

‘ಹೂಂ’  ಎಂದು ತಲೆತಗ್ಗಿಸಿಯೇ ಉತ್ತರ ಕೊಟ್ಟ ಶ್ರೀಧರ.

‘ನನ್ನ ಚಿಂತೇಲೆ ಹೋದ್ರ?’

’ಹೂಂ’

ಗಂಗಾಧರ ಮತ್ತೇನು ಮಾತನಾಡಲಿಲ್ಲ. ಅಂತರಾಳಕ್ಕೆರಭಸವಾದ ಪೆಟ್ಟು ಬಿದ್ದ ನೋವು ಅನುಭವವಾಯಿತು.ಎರಡು ನಿಮಿಷ ಮೌನವಾಗಿ ಕುಳಿತಿದ್ದ. ತನ್ನ ಬದುಕನ್ನರೂಪಿಸಿಕೊಳ್ಳಲು ಹೋಗಿ ತಂದೆ ತಾಯಿಯ ಬದುಕನ್ನಬರಡು ಮಾಡಿದೆ. ನಾನೊಬ್ಬ ಪಾಪಿ.ಇನ್ನು ಕರ್ಮಸುತ್ತಿಕೊಳ್ಳೋದು ಖಚಿತ ಎಂದುಕೊಂಡು ತನ್ನ ಹುಟ್ಟುಮನೆಯಕಡೆಗೆ ತಿರುಗಿ ನೋಡದೆ ಹಾಗೆ ಕಾರಿನ ಒಳಗೆಕುಳಿತನು.

‘ವಾಪಸ್ ಹೋಗೋಣ ಸಾರ್?’ ಎಂದು ಹುಟ್ಟೇಶ ಕೇಳಿದ.

ಅವನ ಕಡೆಗೆ ಗಂಗಾಧರನ ಗಮನ ಹೋಗಲಿಲ್ಲ. ತನ್ನಬೇರನ್ನು ತಾನೆ ಕಡಿದೆ. ಅದೂ ತನಗೆ ತಿಳಿಯದೆ. ತಾನೊಬ್ಬಸ್ವಾರ್ಥಿ. ತಂದೆ ತಾಯಂದಿರನ್ನು ನೋಡಿಕೊಳ್ಳುವುದ ತನ್ನಧರ್ಮವಾಗಿತ್ತು. ಆ ಧರ್ಮಕ್ಕೆ ಕೊಳ್ಳಿ ಇಟ್ಟುಬಿಟ್ಟೆ. ತಾನೆಂತಪಾಪಿ ಎಂದು ಹಾಗೆ ಕಣ್ಣುಮುಚ್ಚಿಕೊಂಡ.ಮದ್ದೂರಿನದಿನಗಳು ಕಾಡಲು ಶುರುವಾಯ್ತು.

 

Facebook ಕಾಮೆಂಟ್ಸ್

Rohit Padaki: ಕನ್ನಡದ ಯುವ ಲೇಖಕರಲ್ಲಿ ಒಬ್ಬರು. ದೃಶ್ಯ ಮಾಧ್ಯಮದಲ್ಲಿ ಸಾಕಷ್ಟು ಕಾರ್ಯ ನಿರ್ವಹಿಸಿ ಬಿಗ್ ಬಾಸ್, ವೀಕೆಂಡ್ ವಿತ್ ರಮೇಶ್ ಎಂಬ ಶೋಗಳಿಗೆ ಇವರ ಬರವಣಿಗೆಯಿದೆ. ಇತ್ತೀಚೆಗೆ ಬಿಡುಗಡೆಯಾದ ಆಟಗಾರ ಚಿತ್ರಕ್ಕೆ ಸಂಭಾಷಣೆ ಸಾಹಿತ್ಯ ಇವರದೇ ಆಗಿತ್ತು. ಮೊನಚಾದ ಪದಗಳಿಗೆ ಹೆಸರುವಾಸಿಯಾಗಿರುವ ಇವರ ಬರಹ ಪ್ರಭಾವಶಾಲಿ, ಹಾಗು ಹೊಸತನ ತುಂಬಿರುತ್ತದೆ.
Related Post