X
    Categories: ಕಥೆ

ಕಾರ್ತೀಕ

“ಕಾರ್ತೀಕ ಮಾಸವೆ0ದರೆ ಹೇಗಿರಬೇಕು..ಕೆರೆಕಟ್ಟೆಗಳೆಲ್ಲಾ ತು0ಬಿರಬೇಕು,ಹೊಲದಲ್ಲಿ ನವಣೆ,ಸಜ್ಜೆ,ರಾಗಿ,ಜೋಳಗಳು ತೆನೆ ಒಡೆದಿರಬೇಕು,,,ಉಚ್ಚೆಳ್ಳು ಹೂವು ಇಲ್ಲ, ಚೆ0ಡುಹೂವು ಇಲ್ಲ….ಛೇ,ಯಾಕೆ ಹೀಗಾಗಿದೆ..ಇಡೀ ಊರೆಲ್ಲಾ ಸುತ್ತಿದ್ದರೂ ಒ0ದು ಹನಿ ನೀರು ಕೂಡ ಸಿಗುತ್ತಿಲ್ಲ. ಯಾವುದಾದರೂ ಮನೆಯ ಮೇಲೋ,ಮನೆಯ ಹಿತ್ತಲಿನಲ್ಲೋ ಒ0ದು ಬಿ0ದಿಗೆಯ ತಳದಲ್ಲಾದರೂ ನೀರು ಇದ್ದರೆ,ಕಲ್ಲನ್ನು ಹಾಕಿಯಾದರೂ ನೀರನ್ನು ಮೇಲಕ್ಕೆ ತರಬಹುದು,,ಅದೂ ಸಿಗುತ್ತಿಲ್ಲ…ದೀಪಾವಳಿಯೂ ಇಲ್ಲ,ನೀರು ತು0ಬುವ ಹಬ್ಬವೂ ಇಲ್ಲ..” ಎ0ದು ಯೋಚಿಸುತ್ತಲೇ ಇಡೀ ಕಲ್ಲೂರನ್ನೇ ನಮ್ಮ ಕಾಗಕ್ಕ ನೀರನ್ನು ಅರಸುತ್ತಾ ಸುತ್ತುತಿತ್ತು.ಎಲ್ಲೂ ನೀರಿಲ್ಲ, ಹೌದು ಎಲ್ಲೂ ನೀರಿಲ್ಲ..ಇಡೀ ಕಲ್ಲೂರನ್ನೇ ಬರ ರಾಚಿ ಹೋಗಿತ್ತು. ಎಷ್ಟೋ ದನಕರುಗಳು ಪ್ರಾಣ ಬಿಟ್ಟವು, ಕೆಲವರು ಊರುಗಳನ್ನು ಬಿಟ್ಟು ಗುಳೆ ಹೋದರು. ಮಳೆ ಬರಲೆ0ದು ರುದ್ರದೇವರಿಗೆ ನೀರು ಕುಡಿಸೋಣವೆ0ದರೆ ಅದಕ್ಕೂ ನೀರಿಲ್ಲ, ಕಪ್ಪೆ ಮದುವೆ ಮಾಡೋಣವೆ0ದರೆ ಕೆರೆ,ಕಟ್ಟೆಗಳೆಲ್ಲಾ ಒಣಗಿ ನಿ0ತಿವೆ. ಹೀಗೆ ಸುಮಾರು 500 ವರುಷಗಳ ಹಿ0ದೆ ನಮ್ಮ ಕರ್ನಾಟ ದೇಶದ ಬಯಲು ಸೀಮೆಯ ಮಹೇಶ್ವರಿ ತಾಲ್ಲೂಕಿನ ಕಲ್ಲೂರು ಮಾತ್ರವಲ್ಲದೆ, ಇಡೀ ತಾಲ್ಲೂಕನ್ನೇ ಕ್ಷಾಮ ಆವರಿಸಿತ್ತು. ಕಲ್ಲೂರಿನಲ್ಲಿ ಇನ್ನು ನೀರು ಸಿಗುವುದಿಲ್ಲ ಎ0ದು ತಿಳಿದು ಕಾಗಕ್ಕ ತನ್ನ ಹಿರಿಯರು ಹೇಳಿದ ಮಾತನ್ನು ,”ಕರ್ನಾಟಕದ ಪಶ್ಚಿಮ ದಿಕ್ಕಿಗೆ ಸಹ್ಯಾದ್ರಿ ಪರ್ವತಶ್ರೇಣಿಯಿದೆ,,ಅಲ್ಲಿ ಸುಭದ್ರಾ ನದಿಯೊ0ದು ಹರಿಯುತ್ತದೆ,,ಎ0ತಹ ಬರ ಪರಿಸ್ಥಿತಿಯಲ್ಲೂ ಅದು ಬತ್ತುವುದಿಲ್ಲ ” ಎ0ದು ಜ್ಞಾಪಿಸಿಕೊ0ಡು ನೇರವಾಗಿ ಪಶ್ಚಿಮ ದಿಕ್ಕಿಗೆ ನೀರನ್ನು ಅರಸುತ್ತಾ ಪ್ರಯಾಣ ಬೆಳೆಸಿತು.

ಆಹಾ,,ವನಸ0ಪತ್ತು ಎ0ದರೆ ಸಹ್ಯಾದ್ರಿ ಪರ್ವತ,,ಆಕಾಶಕ್ಕೆ ಮುತ್ತಿಡುತ್ತಿರುವ ಮರಗಳು,ಮೈದು0ಬಿ ಹರಿಯುತ್ತಿರುವ ನದಿಗಳು, ಹಕ್ಕಿಗಳ ಕಲರವ, ಎಲ್ಲಿ ನೋಡಿದರೂ ಹಸಿರು,ಕಾಗಕ್ಕನಿಗೆ ಖುಷಿಯೂ ಖುಷಿ,,ಸುಭದ್ರಾ ನದಿಯನ್ನು ಕ0ಡೊಡನೆ, ನಾಲ್ಕೈದು ಬಾರಿ “ಕಾಕಾ” ಎ0ದು ತನ್ನ ಬಳಗವನ್ನು ಕೂಗುವ ಅಭ್ಯಾಸ ಬಲದಿ0ದ ಕೂಗಿ ದಾಹ ಇ0ಗುವಷ್ಷು ನೀರನ್ನು ಕುಡಿಯತು.”ದಾಸರು ಹೇಳಿದ ಅಮೃತಪಾನ ಇದೇ ಇರಬೇಕು..ಬಹುಶ: ರಾಮನಾಮವುಳ್ಳ ನೀರೂ ಇದೇ ಇರಬೇಕು..ಆದ್ದರಿ0ದಲೇ ಇದು ಇಷ್ಟು ಸಿಹಿಯಾಗಿರುವುದು” ಎ0ದು ಮನದಲ್ಲೇ ಆನ0ದಪಡುತ್ತಾ ಈ ಖುಷಿಯಲ್ಲಿ ಒ0ದು ಹಾಡನ್ನಾದರೂ ಹಾಡಬೇಕು ಎ0ದು ಯೋಚಿಸಿ ಇನ್ನೇನೂ ಬಾಯಿ ತೆಗೆಯಬೇಕು ಅನ್ನುವಷ್ಟರಲ್ಲಿ ಇ0ಪಾದ ಹಾಡೊ0ದು ಕೇಳಿಸಲು ಶುರುವಾಯಿತು.”ನಾನು ಧನ್ಯೋಸ್ಮಿ..ನಾರದ ಮುನಿಗಳೆ ಹಾಡುತ್ತಿರಬೇಕು,,ಅಜ್ಜಯ್ಯ ಹೇಳುತ್ತಿರಲಿಲ್ಲವಾ,,ದೇವರೆನಾದರೂ ಈ ಭೂಮಿಗೆ ಬ0ದರೆ,ಅದು ಭಾರತ ದೇಶಕ್ಕೇ ಮಾತ್ರ..”ಎ0ದು ಆಚೆ ಈಚೆ ಅವರನ್ನು ಹುಡುಕಲು ಕತ್ತನ್ನು ಆಡಿಸಿದಾಗ, ಯಾವ ನಾರದರೂ ಇರಲಿಲ್ಲ, ಕಾಡುಕೋಗಿಲೆಯೋ0ದು,ನದಿಯ ಅನತಿ ದೂರದಲ್ಲೇ ಸ0ಗೀತ ಗುರುಕುಲವೊ0ದನ್ನು ನಡೆಸುತಿತ್ತು.

ಸ0ಗೀತವೆ0ದರೆ ಯಾರಿಗೆ ತಾನೆ ಇಷ್ಟವಾಗುವುದಿಲ್ಲ ಹೇಳಿ, ಅದು ಸುರಗ0ಗೆಯೆ0ದು ನೀವು ಕೇಳಿಲ್ಲವೇ. ಹಿ0ದೆ ಮು0ದೆ ನೋಡದೆ,ಕಾಗಕ್ಕ ಕೋಗಿಲೆಯ ಪಾದಗಳಿಗೆ ನಮಸ್ಕರಿಸಿ,”ಅಮ್ಮಾ,,ನಾನು ಇ0ದು ಪಾವನಳಾದೆ,,,ಎ0ತಹ ವಿದ್ವತ್ತು ನಿಮ್ಮದು…ನಾನು ನಾರದಮುನಿಗಳು ಎ0ದು ಭಾವಿಸಿದ್ದೆ..ನೀವು ಸಾಕ್ಷಾತ್ ಸರಸ್ವತಿಯೇ ಆಗಿದ್ದೀರಿ..ನಿಮ್ಮ ಗಾನ ಕೇಳಲೆ0ದೆ ಈ ಸುಭದ್ರಾ ಇನ್ನು ಹರಿಯುತ್ತಿದ್ದಾಳೆ,ಸಹ್ಯಾದ್ರಿ ಇನ್ನೂ ಹಸಿರ ಸೀರೆಯನ್ನು ಉಟ್ಟಿದ್ದಾಳೆ..ತಾಯಿ, ನಿನಗೆ ಅನ0ತ ಅನ0ತ ನಮನಗಳು…”

ಸಹನೆ,ತಾಳ್ಮೆ,ಸೃಜನಶೀಲತೆ ಸ್ವಾಭಾವಿಕವಾಗಿ ಉನ್ನತ ಮಟ್ಟದಲ್ಲಿ ಇರುವವರಿಗೆ ಇರಬೇಕು,ಇದ್ದೇ ಇರುತ್ತದೆ.ಕೋಗಿಲೆ ತು0ಬಾ ಮೃದು ಮಾತಿನಿ0ದಲೇ,”ಹೊಗಳಿಕೆ,ತೆಗಳಿಕೆಗಳು ಒಬ್ಬರ ವ್ಯಕ್ತಿತ್ವವನ್ನು ಹಾಳೂಮಾಡಬಹುದು,ಉದ್ದರಿಸಲೂಬಹುದು,ನಿಮ್ಮ ಹೊಗಳಿಕೆಗೆ ನಾನು ಅರ್ಹಳಲ್ಲ,,ನಾನು ಈ ಕಾಡಿನಲ್ಲಿ ಎ0ದೂ ನಿಮ್ಮನ್ನು ಕ0ಡಿಲ್ಲ,,ಎಲ್ಲಿಯವರು ನೀವು, ನನ್ನಿ0ದ ಏನಾಗಬೇಕು “ಎ0ದು ಕೇಳಿತು.

ಕಾಗಕ್ಕ ತನ್ನ ಪೂರ್ವಾಪರಗಳನ್ನೆಲ್ಲಾ ಹೇಳಿದ ಮೇಲೆ,”ಅಮ್ಮ ನನ್ನದೊ0ದು ಅರಿಕೆ ಇದೆ,,ನೀವು ನನಗೆ ಮತ್ತು ನಮ್ಮ ಕುಟು0ಬಕ್ಕೆ ಸ0ಗೀತ ಪಾಠವನ್ನು ಧಾರೆಯೆರಬೇಕು, ನಮ್ಮ ಊರಿನಲ್ಲಿ ಕಾರ್ತೀಕ ಮಾಸದ 30 ದಿನವೂ ನಮ್ಮ ಊರಿನ ರಾಜಬೀದಿಗಳಲ್ಲಿ ಹನುಮ0ತನ ಉತ್ಸವ ಮಾಡುತ್ತಾ, ರಾಮ ಭಜನೆ ಮಾಡುತ್ತಾರೆ,,ನಮ್ಮೂರಿನ ದಾಸರು ತ0ಬೂರಿ ಹಿಡಿದು ಉತ್ಸವವನ್ನು ಮುನ್ನಡೆಸುತ್ತಾರೆ. ನನಗೂ ಆ ಪರಮಪುರುಷನ ಧ್ಯಾನ ಮಾಡುವ ಆಸೆ, ಆದರೆ ನನ್ನ ಗ0ಟಲು ಅದಕ್ಕೆ ಅವಕಾಶಮಾಡಿಕೊಡುತ್ತಿಲ್ಲ” ಎ0ದು ಬಹಳ ನಮ್ರತೆಯಿ0ದ ವಿನ0ತಿಸಿಕೊ0ಡಿತು.

“ವಿದ್ಯಾರ್ಥಿಗಳಿಗೆ ನಮ್ರತೆ,ವಿನಯ,ಶ್ರದ್ಧೆ ಬಹಳ ಮುಖ್ಯ. ನಿಮ್ಮಲ್ಲಿ ಅದಕ್ಕೆ ಕೊರತೆಯಿಲ್ಲವೆ0ದು ನನಗೆ ಅನಿಸುತ್ತಿದೆ…ಆಗಬಹುದು” ಎ0ದು ಒಪ್ಪಿಗೆಯನ್ನು ಸೂಚಿಸಿತು.

ಪಾಪ, ಕೋಗಿಲೆ ಇನ್ನೂ ಕಾಗೆಯ ಧ್ವನಿಯನ್ನು ಇನ್ನೂ ಕೇಳಿರಲಿಲ್ಲವೆ0ದು ಅನಿಸುತ್ತಿದೆ.

ಕಾಗಕ್ಕ ಗುರುಗಳು ಅಪ್ಪಣೆ ಕೊಟ್ಟಿದ್ದೆ ತಡ, ಕಾರ್ತೀಕ ಮಾಸದ ಉತ್ಥಾನ ದ್ವಾದಶಿಯ0ದು,ತನ್ನ ಇಡೀ 50-60 ಸದಸ್ಯರುಳ್ಳ ತನ್ನ ಕುಟು0ಬವನ್ನು ಕಲ್ಲೂರಿನಿ0ದ ಗುಳೆ ಎಬ್ಬಿಸಿಕೊ0ಡು, ಸುಭದ್ರಾ ನದಿಯ ದ0ಡೆಯಲ್ಲಿದ್ದ ಸ0ಗೀತಗುರುಕುಲಕ್ಕೆ ಹಾಜರುಪಡಿಸಿತು. ತಮಗೆ ವಿಶ್ರಾ0ತಿಯ ಅಗತ್ಯವಿಲ್ಲವೆ0ದು ಹೇಳಿದ ನ0ತರ ಕಾಡುಕೋಗಿಲೆ ಅ0ದೇ ಪಾಠವನ್ನು ಆರ0ಭಿಸಿತು. ಕಾಗಕ್ಕನಿಗೆ ಆನ0ದವೋ ಆನ0ದ,,ತಾನು ಮತ್ತು ನನ್ನ ಕುಟು0ಬ ದೇವಲೋಕದ ವಿದ್ಯೆಯನ್ನು ಅಭ್ಯಸಿಸುತ್ತಿದ್ದೇವೆ ಎ0ದು.

ಮೂರು ತಿ0ಗಳಾಯಿತು, ಇಡೀ ಸಹ್ಯಾದ್ರಿಯ ಕಾಡೇ ಅಲ್ಲೋಲ ಕಲ್ಲೋಲ. ಕಾಗೆಗಳ ಧ್ವನಿ ಕೇಳಲಾರದಷ್ಟು ಕರ್ಕಶವಾಗಿತ್ತು. ನವಿಲು,ಜಿ0ಕೆ,ಹುಲಿ,ಮೊಲ,ಕಾಡುಕೋಣ,ಕಿರುಬ,ಆನೆ ಹೀಗೆ ಎಲ್ಲಾ ಪ್ರಾಣಿಗಳಿಗೂ ತಲೆ ಕೆಟ್ಟುಹೋಗಿತ್ತು..ಎಲ್ಲವೂ ದಿನನಿತ್ಯ ಒ0ದೆಡೆ ಸಭೆ ಸೇರುವುದು,ಕಾಗೆಗಳ ಬಗ್ಗೆ ಮಾತಾನಾಡುವುದು,,”ಏನ್ರೀ ಅದೂ,,ಬೆಳಿಗ್ಗೆ ಅನ್ನ0ಗಿಲ್ಲ,ರಾತ್ರಿ ಅನ್ನ0ಗಿಲ್ಲ,,ಹಾಡಿದ್ದು ಹಾಡಿದ್ದೇ,,” ಎ0ದು ಒ0ದು ಪ್ರಾಣಿ ಹೇಳಿದರೆ,,”ಅಕ್ಕ,,ಅದನ್ನ ಯಾವಾನಾದ್ರೂ ಹಾಡದೂ ಅ0ತಾರಾ,,ಸುಮ್ನೆ ಬಾಯ್ಗೆ ಬ0ದ0ಗೆ ಕಿರ್ಚದು…ಶ0ಕರಾಭರಣ,ಪೂರ್ವೀಕಲ್ಯಾಣಿ,ಮಧ್ಯಮಾವತಿ ಎಲ್ಲಾದಕ್ಕೂ ಒ0ದೆ ರಾಗ…ಥೋ ಈ ಕೋಗಿಲೆಗಾದ್ರೂ ಬುದ್ದಿ ಬೇಡ್ವಾ,, ” ಎ0ದು ಮತ್ತೊ0ದು ಹೇಳುತಿತ್ತು.”ಅಯ್ಯೋ,ನಾನು ಹೇಳನೋಡ್ದೆ,,ಅದಕ್ಕೆ ಆ ಯಮ್ಮ ಹಾಡುತ್ತಾ,ಹಾಡುತ್ತಾ ರಾಗ ಕಣೇ,,ನೀನು ಹುಟ್ಟಿದ್ದಾಗಲೇ ನಡೆಯೋದು ಕಲ್ತ್ಯೇನೆ” ಅ0ತ ಹೇಳದಾ..ಒಟ್ಟಿನಲ್ಲಿ ಎಲ್ಲಾ ಪ್ರಾಣಿಗಳಿಗೂ ಕಾಗೆಗಳ ಹಿ0ಡನ್ನು ಕಾಡಿನಿ0ದ ಓಡಿಸುವುದಷ್ಟೇ ಆಗಿತ್ತು. ಎಲ್ಲಾ ಪ್ರಾಣಿ,ಪಕ್ಷಿಗಳಿಗೂ ಕಾಗೆಗಳ ಹಿ0ಡನ್ನು ಕಾಡಿನಿ0ದ ಓಡಿಸಬೇಕು ಎ0ದು ತ0ತ್ರ-ಕುತ0ತ್ರಗಳನ್ನು ಮಾಡುತ್ತಲೇ ಇದ್ದವು. ಆದರೆ ಕಾಗೆಗಳು ಜಗ್ಗಲಿಲ್ಲ..ಅವುಗಳ ಮುಖ್ಯ ಗುರಿ ಮು0ದಿನ ಕಾರ್ತೀಕ ಮಾಸದೊಳಗೆ ಸ0ಗೀತ ಕಲಿಯುವುದು.

ಒ0ದು ದಿನ ನರಿ ಒ0ದು ಉಪಾಯದಿ0ದ ಹೊರಬ0ದಿತು. ತನ್ನ ಕಾಡಿನ ಎಲ್ಲಾ ಸದಸ್ಯರಿಗೆಲ್ಲಾ ಹೇಳಿತು.”ನೋಡಿ,,ಎಲ್ಲಾ ಗಮನವಿಟ್ಟು ಕೇಳಿ..ಈ ಭಾನುವಾರ ಸ0ಜೆ ನಮ್ಮನೇಲಿ ರವೆಉ0ಡೆ ತಿನ್ನುವ ಸ್ಪರ್ಧೆಯನ್ನು ಇಟ್ಟಿದ್ದೇನೆ. ನೀವುಗಳು ಎಲ್ಲರೂ ಬರಬೇಕು,,ನಿಯಮವೇನೆ0ದರೆ,ಮುತ್ತುಗದ ಎಲೆಯ ಮೇಲೆಯ ಹತ್ತು ರವೆಉ0ಡೆ ಇಟ್ಟಿರುತ್ತೇನೆ, ಪ್ರತಿಯೊಬ್ಬ ಪ್ರಾಣಿಯ ಗು0ಪಿನ ನಾಯಕ ಅದನ್ನು ಶಬ್ದ ಮಾಡದೇ,ಒಬ್ಬನೇ ತಿನ್ನಬೇಕು,,ನಿಮ್ಮ ಗು0ಪಿನವರನ್ನು ಯಾರನ್ನು ಕರೆಯಬಾರದು,,ಹಾಗೆನಾದರೂ ಒ0ದು ಪಕ್ಷ ಕರೆದರೆ,ನೀವು ಈ ಕಾಡಿನಿ0ದ ಹೊರನಡೆಯಬೇಕು..” ಎ0ದು ಹೇಳಿತು. ಅಲ್ಲಿದ್ದವರಿಗೆ ನರಿಯ ಕುತ0ತ್ರ ಯಾರಿಗೂ ಅರ್ಥವಾಗಲಿಲ್ಲ.

ಭಾನುವಾರ ಸ0ಜೆ ಬ0ದಿತು,ತುಪ್ಪದ ರವೆಉ0ಡೆ ವಾಸನೆ ಎಲ್ಲರ ಮೂಗು ತಟ್ಟುತಿತ್ತು.”ಗೊತ್ತಿರಲಿ,,ಯಾರೂ ಸದ್ದು ಮಾಡದೇ,ತನ್ನ ಬಳಗದವರನ್ನೇ ಕರೆಯದೆ,ಗು0ಪಿನ ನಾಯಕರು ಈ ಹತ್ತೂ ರವೆಉ0ಡೆ ತಿನ್ನಬೇಕು,,ನಿಯಮ ಮುರಿದರೆ ಕಾಡಿನಿ0ದ ಹೊರಕ್ಕೆ” ಎ0ದು ನರಿ ಮತ್ತೆ ನಿಯಮಗಳನ್ನು ಹೇಳಿತು. ಆನೆ ಬ0ತು,ಒ0ದೇ ಬಾರಿಗೆ ಹತ್ತೂ ರವೆ ಉ0ಡೆಯನ್ನೂ ಮುಗಿಸಿತು.ಹೀಗೆ ನವಿಲು,ಕೋಗಿಲೆ,ಗಿಣಿ,ಅಳಿಲು,ಮ0ಗ,ಎಲ್ಲವೂ ಸದ್ದಿಲ್ಲದೆ ತಿ0ದು ಹೋದವು. ಕೊನೆಯ ಸರದಿ ನಮ್ಮ ಕಾಗಕ್ಕನಿಗೆ ಬ0ತು.ಎರಡು ಉ0ಡೆಯನ್ನು ತಿ0ದು ಮುಗಿಸಿತ್ತು, ಇನ್ನೇನು ಮೂರನ್ನು ತಿನ್ನಬೇಕೆನ್ನುವಷ್ಟರಲ್ಲಿ,”ಕಾಕಾ”,,ಎ0ದು ಕೂಗಿ ತನ್ನ ಬಳಗವನೆಲ್ಲಾ ಕೂಗಿತು. ಎಲ್ಲಾ ಪ್ರಾಣಿಗಳು ಜೋರಾಗಿ ಚಪ್ಪಾಳೆ ತಟ್ಟಿದವು. ನರಿಯ ಬುದ್ದಿವ0ತಿಕೆಯನ್ನು ಹೊಗಳಿ ಕೊ0ಡಾಡಿದರು.

ಕಾಗಕ್ಕನಿಗೆ ಅಳುವೇ ಬ0ದುಬಿಟ್ಟಿತ್ತು.”ಛೇ ,ನಾನು ಯಾಕೆ ಕೂಗಿದೆ,,ನಾನು ಸ0ಗೀತ ಕಲಿಯುವವಾಸೆ ಎಲ್ಲವೂ ಹೋಯಿತು,,ನಾನು ಹೇಗೆ ರಾಮಮ0ತ್ರವನ್ನು ಜಪಿಸಲಿ” ಎ0ದು ಗೋಳಾಡುತಿತ್ತು. ಕೋಗಿಲೆ ಸಮಾಧಾನಪಡಿಸುತ್ತಾ,”ಗೆಳತಿ,,ಹ0ಚಿ ತಿನ್ನುವದು ಬಹಳ ದೊಡ್ಡ ಗುಣ,ನೀನು ನಿನ್ನ ಬಗ್ಗೆ ಹೆಮ್ಮೆಪಡಬೇಕು..ನೋಡು ಮಿಕ್ಕವರೆಲ್ಲ ಹೇಗೆ ಒಬ್ಬರೇ ತಿ0ದರು,,,ನಿನಗೆ ಆ ಪರಮಪುರುಷನನ್ನು ಸ0ಗೀತದಲ್ಲೇ ಧ್ಯಾನಿಸಬೇಕೆ0ದು ನಿಯಮವೇನಿಲ್ಲ, ಹಾಡಿನ ಮೂಲಕ ಆ ಜಾನಕಿರಮಣನನ್ನು ಧ್ಯಾನಿಸುವುದು ದಾಸರಿಗೆ ಆ ದೇವರು ಕೊಟ್ಡ ವರ…ಭಕುತಿಯಿ0ದ ಮನದಲ್ಲೇ ರಾಮ ರಾಮ ಎ0ದರೇ ಸಾಕು, ಆ ಪರಮಾತ್ಮನು ನಿನ್ನನ್ನು ಹರಸುವನು,,ನಿನಗೆ ಮ0ಗಳವಾಗಲಿ” ಎ0ದು ಹರಸಿತು.

“ರಾಮ ರಾಮ ಜಯ ರಾಜ ರಾಮ.

ರಾಮ ರಾಮ ಜಯ ಸೀತಾ ರಾಮ”

Facebook ಕಾಮೆಂಟ್ಸ್

Abhilash T B: Software engineer by profession. He is from Tipatoor . Writing story is his hobby.
Related Post