Contact Us

ರೀಡೂ ಬಳಗಕ್ಕೆ ನಿಮಗೆ  ಸ್ವಾಗತ , ನಿಮ್ಮ ಬರಹಗಳನ್ನು  ಈ ಕೆಳಗಿನ ಮಿಂಚಂಚೆಗೆ ಕಳುಹಿಸಿ writeforus@readoo.in

ನಮಗೆ ಬರೆಯಲು

ನಿಮ್ಮ ಬರಹಗಳು ಮೇಲೆ ಇರುವಂತಹ ಯಾವುದೇ ವಿಷಯಕ್ಕೆ ಸಂಬಂಧಿಸಿದ್ದಾಗಿರಬಹುದು, ಆದರೆ ಈ ಕೆಳಗಿನ ನಿಯಮಗಳನ್ನು ಮೀರದಿರಲಿ :

೧. ಬರಹವು ನಿಮ್ಮ ಸ್ವಂತದ್ದಾಗಿರಲಿ ಜೊತೆಗೇ ನಿಮ್ಮ ವೈಯಕ್ತಿಕ ಬ್ಲಾಗ್ ಅಲ್ಲದೇ ಇನ್ನೆಲ್ಲೂ ಪ್ರಕಟವಾಗದೇ ಇದ್ದರೆ ಉಚಿತ.

೨. ನಿಮ್ಮ ಬರಹ ಇದರಿಂದ ಮೊದಲೇ ಪ್ರಕಟವಾಗಿದ್ದರೂ, ಅದರ ಪೂರ್ತಿ ಹಕ್ಕು ನಿಮ್ಮದಾಗಿರಲಿ.

೩. ಲೇಖನ ಕನಿಷ್ಟ ೩೦೦ ಶಬ್ದ , ಗರಿಷ್ಟ ೧೫೦೦ ಶಬ್ದವನ್ನು ಹೊಂದಿರಲಿ. ನಿಮ್ಮ ಬರಹವು ದೀರ್ಘವಾಗಿದ್ದಲ್ಲಿ, ಅದನ್ನು ಕಂತುಗಳಲ್ಲಿ ಪ್ರಕಟಿಸಲು ಅನುಕೂಲವಾಗುವಂತೆ ಕಳುಹಿಸಿ.

೪. ಲೇಖನಕ್ಕೆ ಸೂಕ್ತವಾದ ಚಿತ್ರವೂ ಜೊತೆಗಿರಲಿ, ಚಿತ್ರವು ಹಕ್ಕುಗಳನ್ನು ಹೊಂದಿದ್ದರೆ ನಮೂದಿಸುವುದನ್ನು ಮರೆಯಬೇಡಿ.

೫. ರಾಜಕೀಯದ ಕುರಿತಾದ ಹಾಸ್ಯ-ವ್ಯಂಗ್ಯ ಇದ್ದರೆ ನಿಮ್ಮದೇ ಸ್ವಂತದ್ದಾಗಿರಲಿ, ಇತರರ ಅಲೋಚನೆಯನ್ನು ನೀವು ಕ್ರೋಢೀಕರಿಸಿದ್ದರೆ ಮೂಲ ಲೇಖಕರ ಹೆಸರನ್ನು ನಿಮ್ಮ ಬರಹದಲ್ಲಿ ನಮೂದಿಸಿ.

೬. ಸರಿಯಾದ ಮಾಹಿತಿ ಸಂಗ್ರಹಿಸುವುದರೊಂದಿಗೆ ಲೇಖನ ಬರೆಯಿರಿ, ನಿಮ್ಮ ಲೇಖನಗಳಿಗೆ ಬರುವ ಅಭಿಪ್ರಾಯ – ಪ್ರತಿಕ್ರಿಯೆ – ಚರ್ಚೆಗಳಿಗೆ ನೀವೇ ಜವಾಬ್ದಾರರಾಗಿರುತ್ತೀರಿ.

೭. ವಿವಿಧೆಡೆಯಿಂದ ಮಾಹಿತಿ ಸಂಗ್ರಹಿಸಿ ಅದಕ್ಕೆ ಬರಹ ರೂಪ ಕೊಟ್ಟಿದ್ದರೆ, ಮೂಲ ಮಾಹಿತಿಯನ್ನು ನೀಡಿರಬೇಕು ಅಲ್ಲದೇ ಮೂಲ ಮಾಹಿತಿಗೆ ಯಾವುದೇ ಧಕ್ಕೆಯಾಗದಂತಿರಬೇಕು.

೮. ವೈಯಕ್ತಿಕ ನಿಂದನೆ, ಇನ್ನೊಬ್ಬರ ಅಪಹಾಸ್ಯದಂತಹ ಬರಹಗಳನ್ನು ರೀಡೂ ಬಳಗ ಸ್ವಾಗತಿಸುವುದಿಲ್ಲ, ಪ್ರಕಟಣೆಯ ಎಲ್ಲಾ ಹಕ್ಕುಗಳು ಸಂಪಾದಕೀಯ ಮಂಡಳಿಗೆ ಸೇರಿದ್ದು.

೯. ಬರಹಗಳು ನಮ್ಮ ಅಪೇಕ್ಷೆಯ ಮಟ್ಟಕ್ಕೆ ತಲುಪದಿದ್ದರೆ, ಸಣ್ಣ – ಪುಟ್ಟ ಸಲಹೆ – ಸೂಚನೆಗಳನ್ನು ಸಂಪಾದಕೀಯ ಮಂಡಳಿ ನೀಡಬಹುದು.

೧೦. ಲೇಖಕ ಹಾಗೂ ರೀಡೂ, ಲೇಖನದ ಹಕ್ಕನ್ನು ಹೊಂದಿರುತ್ತದೆ, ಹಾಗೂ ಲೇಖನದ ವಸ್ತುವನ್ನು ವೆಬ್’ಸೈಟ್’ನ ಪ್ರೊಮೋಷನ್’ಗೆ ಬಳಸುವ ಹಕ್ಕನ್ನು ರೀಡೂ ತಂಡ ಪಡೆದಿರುತ್ತದೆ.

೧೧. ಸಾಮಾಜಿಕ ಜಾಲತಾಣಗಳಾದ ಫೇಸ್’ಬುಕ್, ಟ್ವಿಟ್ಟರ್’ಗಳಲ್ಲಿ ಬರಹಗಳನ್ನು ಹಂಚಿಕೊಳ್ಳುವುದರೊಂದಿಗೆ, ಬರಹ ಹೆಚ್ಚು ಜನರನ್ನು ತಲುಪುವಂತೆ  ಮಾಡುವುದನ್ನು ಸ್ವಾಗತಿಸುತ್ತೇವೆ.

೧೨. ಸದ್ಯದ ಪರಿಸ್ಥಿತಿಯಲ್ಲಿ, ರೀಡೂ ತಂಡ ಯಾವುದೇ ಸಂಭಾವನೆಯನ್ನು ನೀಡುತ್ತಿಲ್ಲ, ಮುಂದೆ ಯಾವುದೇ ಬದಲಾವಣೆಗಳಾದಲ್ಲಿ ತಿಳಿಸಲಾಗುವುದು.

 

ಪ್ರಶ್ನೆಗಳಿದ್ದಲ್ಲಿ ಇಲ್ಲಿ ಕೇಳಬಹುದು

Your Name (required)

Your Email (required)

Subject

Your Message