Author - vinutha perla

ಕವಿತೆ

ಸಂತೆಯಲ್ಲಿ ಬದುಕು ಕಟ್ಟಿಕೊಂಡವರು

ಸುಡುವ ಬಿಸಿಲೇ ಕಣ್ಣಿಗೆ ರಾಚುತ್ತಿದೆ.. ಧೂಳು ರಪ್ಪೆಂದು ಮತ್ತೆ ಕಣ್ಣಿಗೆ ಹೊಡೆಯುತ್ತಿದೆ ಬಣ್ಣ ಬಣ್ಣದ ಬಲೂನು, ಬಳೆಗಳು, ಜುಮುಕಿ ನೋಡುತ್ತಾ ಸಾಗುವ ಮಂದಿಗೆ ಸಂಭ್ರಮ, ಸಡಗರ ಜನರು, ಜನಜಂಗುಳಿಯ ನಡುವೆ ಹತಾಶೆಯ ನಿಟ್ಟುಸಿರು ಯಾರಿಗೂ ಕೇಳಿಸುತ್ತಿಲ್ಲ..   ಎಲ್ಲೆಲ್ಲಿಂದಲೋ ಕೊಳ್ಳಲು ಬಂದವರು ಅಳೆದೂ, ತೂಗಿ ಕೊಳ್ಳದೆ ಮುಂದೆ ಸಾಗುವರು.. ಇವತ್ತಿನ ತುತ್ತಿಗಾಯ್ತು...

ಅಂಕಣ

ಮಹಾನಗರದಲ್ಲಿ ಮಳೆಯೆಂದರೆ ಬರೀ ಕಿರಿಕಿರಿ

ಹೀಗನಿಸೋಕೆ ಶುರುವಾಗಿದ್ದು ತೀರಾ ಇತ್ತೀಚಿಗೆ..ಅತಿಯಾಗಿ ಪ್ರೀತಿಸುತ್ತಿದ್ದ ಮಳೆ, ಅತಿ ಭಯಂಕರವೆನಿಸಿದ್ದು ನಿಮಗೆ ಅಚ್ಚರಿಯೆನಿಸಿದ್ರೂ, ಹಾಗನಿಸೋಕೆ ಬಲವಾದ ಕಾರಣವೂ ಇದೆ. ಮಹಾನಗರದಲ್ಲಿ ಸುರಿಯವುದು ಊರಲ್ಲಿ ಸುರಿಯುವ ಅದ್ಭುತ ಮಳೆಯಲ್ಲ. ಬದಲಾಗಿ ರೇಜಿಗೆ ಹುಟ್ಟಿಸುವ ಅತಿಭಯಂಕರ ಜಲಪ್ರಳಯ.. ಮಳೆಯೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಮಳೆ ಅದೊಂದು, ಅದ್ಭುತ..ಹನಿ...

ಕವಿತೆ

ನಾಳೆಯ ನಿರೀಕ್ಷೆಯಲ್ಲಿ

ವರುಷ ವರುಷಗಳೇ ಕಳೆದುಹೋಯಿತು , ಒಳ್ಳೆಯ ದಿನಗಳ ಕಾಯುವಿಕೆಯಲ್ಲಿ ಕನಸುಗಳಿಗೂ ಜೀವ ಬರುತ್ತದೆ ಎಂಬ ಆಸೆಯಲ್ಲಿ ಬರೀ ನಿರೀಕ್ಷೆಯಲ್ಲಿ.. ನಿನ್ನೆಯ ದಿನಗಳಲ್ಲಿ ಖುಷಿಯಿರಲ್ಲಿಲ್ಲ ಇಂದಿನ ದಿನಗಳಲ್ಲೂ ಖುಷಿಯಿಲ್ಲ ಬರುವ ನಾಳೆಯಲ್ಲಾದರೂ ಖುಷಿಯಿರಬಹುದೆಂಬ ಆಸೆ.. ಕಣ್ಣೀರನ್ನು ಕಾಣದಂತೆ ಅಡಗಿಸಿಟ್ಟು ನಿತ್ಯ ನಗುವಿನ ಮುಖವಾಡ ಹೊತ್ತು ಬರೀ ನಟನೆಯನ್ನೇ ಜೀವಾಳವಾಗಿಸಿದ ಬದುಕು...

ಅಂಕಣ

ಗಾಂಧಿಬಜಾರ್’ನಲ್ಲಿ ಕಾಡಿದ ಮುಖಗಳು

ವಾರವೆಲ್ಲಾ ಫುಲ್ ಡೇ ಬಿಝಿ. ಬೆಳಗ್ಗೆ 8ಕ್ಕೆ ಮನೆ ಬಿಟ್ಟರೆ ಸಂಜೆ ಟ್ರಾಫಿಕ್‍ನಲ್ಲಿ ಸಿಕ್ಕಾಕೊಂಡು ಮನೆ ಸೇರುವ ಹೊತ್ತಿಗೆ ಮತ್ತೆ ಎಂಟು. ಅಡಿಗೆ ಮಾಡಿ,ತಿಂದಂತೆ ಮಾಡಿ ಮಲಗಿದ ಐದೇ ನಿಮಿಷದಲ್ಲಿ ಬೆಳಗು. ಸಾಕಪ್ಪಾ ಸಾಕು ಈ ಆಫೀಸ್ ಕಿರಿಕಿರಿ ಅಂತಿರುವಾಗ್ಲೇ ರಿಲ್ಯಾಕ್ಸ್ ಆಗೋಕೆ ಒಂದು ಸಂಡೇ. ಪ್ರತಿ ಭಾನುವಾರ ನಾವು ತಪ್ಪದೇ, ವಿಸಿಟ್ ಮಾಡೋ ಪ್ಲೇಸ್‍ಗಳಲ್ಲಿ ಒಂದು...

ಅಂಕಣ

ಪ್ರಪಂಚದಲ್ಲಿ ಪರಮಸುಖಿಗಳು ಅಂದ್ರೆ ಅವ್ರು ಮಾತ್ರ…!

ಮನುಷ್ಯನಿಗೆ ಆಸೆ, ಆಮಿಷಗಳು ಜಾಸ್ತಿ. ಎಲ್ಲ ಇದ್ದರೂ ಅತೃಪ್ತಿ. ಮತ್ತೇನಕ್ಕೋ ತುಡಿತ. ಆಸೆ,ಹಂಬಲಗಳಿಗೆ ಕೊನೆಯಿಲ್ಲ. ಬೇಕು, ಬೇಕು ಅನ್ನೋ ಬಯಕೆಗಳಿಗೆ ಪೂರ್ಣ ವಿರಾಮವಿಲ್ಲ ಎಲ್ಲಾ ಇದ್ದರೂ, ಇನ್ನೇನೋ ಬೇಕು ಅನ್ನೋ ತುಡಿತದಲ್ಲೇ ಬದುಕು ಮುಂದುವರೆಯುತ್ತಿರುತ್ತದೆ. ಹೊತ್ತಿಗೆ ತುತ್ತು, ಮೈ ತುಂಬಾ ಬಟ್ಟೆ ಇದ್ದವನಿಗೆ ಮಧ್ಯಮ ವರ್ಗದ ಬದುಕಿನ ಆಸೆ. ಮನೆಯಲ್ಲಿ...