ಮರಳು-೧

“ಎಷ್ಟೇ ಮಾಡಿದರೂ ಆಗಿ ಮುಗಿಯದ ಕೆಲಸವಿದು. ನೆಮ್ಮದಿ ಎಂಬುದಿಲ್ಲಿ ಮರೀಚಿಕೆಯಾಗಿಬಿಟ್ಟಿದೆ. ಸಾಧನೆಯೆಂದರೆ ವಿದೇಶದಲ್ಲಿ ಉನ್ನತ ಶಿಕ್ಷಣ ಮುಗಿಸಿ, ಎಲ್ಲರಿಗಿಂತ ಹೆಚ್ಚು ಹಣ ಸಿಗುವ ಉದ್ಯೋಗಕ್ಕೆ ಸೇರಿ ಎದೆಯುಬ್ಬಿಸಿಕೊಂಡು ನಡೆಯುವುದು ಎಂದರಿತ್ತಿದ್ದೆ. ನಿನ್ನೆ ಮೊನ್ನೆಯಷ್ಟೇ ಸೇರಿದ ಕೆಲಸವಿದು. ನೋಡ ನೋಡುತ್ತಲೇ ಐದು ವರ್ಷಗಳಾಗಿಬಿಟ್ಟಿದೆ! ಇಂದು ನಾನು ಸಾಧಿಸಿರುವುದೇನೆಂದು ಒಮ್ಮೆ ಹಿಂತಿರುಗಿ ನೋಡಿದರೆ ಕೇವಲ ಶೂನ್ಯ. ಸಿಗುವ ಸಂಬಳಕ್ಕೆ ಇನ್ನೂ ಕೆಲ ಶೂನ್ಯಗಳನ್ನು ಸೇರಿಸಿಕೊಳ್ಳುವ ಭರದಲ್ಲಿ ಬದುಕನ್ನೇ ಶೂನ್ಯವಾಗಿಸಿಕೊಂಡುಬಿಟ್ಟೆನೆ? ಸಣ್ಣವನಿದ್ದಾಗ ಒಂದು ರೂಪಾಯಿ ಸಿಕ್ಕಾಗ ಸಿಗುತ್ತಿದ್ದ ಆ ಖುಷಿ ಇಂದು … Continue reading ಮರಳು-೧