ಕಗ್ಗಕೊಂದು ಹಗ್ಗ ಹೊಸೆದು..

ಕಗ್ಗಕೊಂದು ಹಗ್ಗ ಹೊಸೆದು ಮಗ್ಗದ ನೂಲಲಿ ಬೆಸೆದು ಹಿಗ್ಗಿಸಿ ಸುತನಾಂತಃಕರಣ ಕೊಡಲುಡುಗೊರೆಯಾಭರಣ || ವಿಶ್ವ ಚಿತ್ತ ಬ್ರಹ್ಮಾಂಡ ಸತ್ಯ ಬದುಕಿನ ಸತ್ವಗಳೆಲ್ಲವ ನಿತ್ಯ ಅರಿವಾಗಿಸುತೆಲೆ ಚಿಗುರಲೆ ಬೇರಾಗಬಹುದು ಎಳಸಲೆ || ಬಿಚ್ಚಿಡಲು ಗಂಟು ಗಂಟದಲ್ಲ ಗಂಟಲಿನಾಳಕಿಳಿಸೆ ಸರಳವಲ್ಲ ಗರಳದಂತಿದ್ದರು ಮೆಟರೆಗಿಡೆ ನೀಲಕಂಠನಂತೆ ನೆಲೆಸಿಬಿಡೆ || ಅರಿತವರಾರು ಅದರೆಲ್ಲ ಆಳ ಅರಿತಷ್ಟು ಉದುರಲದೆ ಸಕಲ ಕುದುರಿದಷ್ಟು ಮುದುರದೆ ದೆಶೆ ಸ್ವಾದಿಸಲ್ಹಳೆ ದ್ರಾಕ್ಷಾರಸ ಮೂಸೆ || ಕಲಿಸಬಯಸಿ ಹೊರಟ ಲೆಕ್ಕ ಕಲಿಯುವ ಸ್ವತಃ ಜತೆ ಸಮತೂಕ ಕಲಿತು ಕಲಿಸಿ ಕಲಿಯದ … Continue reading ಕಗ್ಗಕೊಂದು ಹಗ್ಗ ಹೊಸೆದು..