ಕಗ್ಗಕೊಂದು ಹಗ್ಗ ಹೊಸೆದು…

ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೧೬ ______________________________ ಇಳೆಯಬಿಟ್ಟಿನ್ನುಮೆತ್ತಲುಮೈದದ ಪ್ರೇತ | ವಲೆವಂತೆ ಲೋಕ ತಲ್ಲಣಿಸುತಿಹುದಿಂದು || ಹಳೆಧರ್ಮ ಸತ್ತಿಹುದು ಹೊಸಧರ್ಮ ಹುಟ್ಟಿಲ್ಲ | ತಳಮಳಕೆ ಕಡೆಯೆಂದೊ? – ಮಂಕುತಿಮ್ಮ || ಇಹ ಜೀವನದಲ್ಲಿ ದೇಹವೊಂದರೊಳಗಿನ ಜೀವವಾಗಿರುವ ತನಕ, ಈ ಭೂಮಿಯ ಮೇಲೆ ಹೇಗೊ ಬದುಕಿರಲೊಂದು ಲೌಕಿಕ ರಹದಾರಿಯಾದರು ಇರುತ್ತದೆ – ಭೌತಿಕ ದೇಹದ ರೂಪದಲ್ಲಿ. ಅಂತಹ ಜೀವಾತ್ಮ, ತಾನು ಧರಿಸಿದ ದೇಹ ಸಾವಿಗೀಡಾಗುತ್ತಿದ್ದಂತೆ ಅದನ್ನು ತ್ಯಜಿಸಿ ಒಂದೊ ಮೇಲಿನದಾವುದೊ ಲೋಕಕ್ಕೆ ತೆರಳಬೇಕು (ಮುಕ್ತಿ, ಮೋಕ್ಷದ ಪರಿಕಲ್ಪನೆಯಡಿ), … Continue reading ಕಗ್ಗಕೊಂದು ಹಗ್ಗ ಹೊಸೆದು…