Archive - May 2017

ಅಂಕಣ

ಸಾಫ್ಟ್’ವೇರ್ ‘ವಾರ್’ಅಂತ್ಯ…

ಅದೊಂದು ಶುಕ್ರವಾರ. ಮೋಡ ಕವಿದ ವಾತಾವರಣ. ಬಹುಷಃ ಸೂರ್ಯ ‘ವರ್ಕ್ ಫ್ರೊಮ್ ಹೋಮ್’ ಮಾಡುತ್ತಿದ್ದಿರಬೇಕು. ಇಡೀ ಜಗತ್ತೇ ವಾರಾಂತ್ಯದ ಗುಂಗಿನಲ್ಲಿದ್ದಂತೆ ಭಾಸವಾಗುತ್ತಿತ್ತು. ಸೋಮವಾರ ಹಾಗೂ ಮಂಗಳವಾರ ಸಹ ರಜೆ ಇದ್ದಿದ್ದರಿಂದ ಅದೊಂದು ಉದ್ದದ ವಾರಾಂತ್ಯ ಎನ್ನಬಹುದು. ಹಾಗಾಗಿ ಸಾಫ್ಟ್‌ವೇರ್ ಕಂಪನಿಗಳಲ್ಲೆಲ್ಲ ಒಂದು ಸಣ್ಣ ಹಬ್ಬದ ವಾತಾವರಣ. ಕೆಲವರು ಇನ್ನೂ...

ಕಥೆ

ನೆನಪು ಭಾಗ – 2

ಮೊದಲನೆ ಭಾಗ: ನೆನಪು ಭಾಗ -೧ ಗಿಜಿ ಗಿಜಿ ಗುಡುವ ಜನ ಜಂಗುಳಿಯ ಮಧ್ಯೆ ಕಾಲದ ಪರಿವೆಯೆ ಇಲ್ಲದೆ ಅದು ಹೇಗೆ ಇಷ್ಟೊಂದು ವರ್ಷ ಬದುಕಿಬಿಟ್ಟೆ? ಯಾರೊ ಕಟ್ಟಿದ ಮನೆ ಅದ್ಯಾರ್ಯಾರು ಬಂದು ಉಳಿದು ಹೋದ ಮನೆಯೊ ಏನೊ ಶಿಥಿಲಾವಸ್ಥೆಯಲ್ಲಿ ಈಗಲೊ ಆಗಲೊ ಅಂತಿರುವ ಮನೆಗೆ ಬಹುಶಃ ನಾನೇ ಕೊನೆಯ ಬಾಡಿಗೆಯವಳಾಗಿರಬೇಕು. ಈಗ ಗೊತ್ತಾಗುತ್ತಿದೆ ಮನೆಯ ಅವಸ್ಥೆ. ಇಷ್ಟು ದಿನ ಗಮನಿಸಿರಲೇ...

ಅಂಕಣ

ಸದ್ದಿಲ್ಲದೇ ಮಾರಕವಾಗುತ್ತಿರುವ ಟೂತ್‍ಬ್ರಶ್ ಬಳಕೆ:

 ದಿನಾ ಬೆಳಿಗ್ಗೆ ಎದ್ದ ತಕ್ಷಣ ನಾವು ಮಾಡುವ ಮೊದಲ ಕೆಲಸವೆಂದರೆ, ಹಲ್ಲುಜ್ಜುವುದು. ನಂತರ ಉಳಿದ ಕೆಲಸ-ಕಾರ್ಯಗಳು. ಕೊನೆಗೆ ದಿನದ ಮುಕ್ತಾಯದ ಸಮಯದಲ್ಲಿ, ಅಂದರೆ ರಾತ್ರಿ ಮಲಗುವ ಮೊದಲು ಮತ್ತೆ ಹಲ್ಲುಜ್ಜುತ್ತೇವೆ. ಇದೇನು ಹಲ್ಲುಜ್ಜುವ ಕಾರ್ಯವನ್ನು ವಿಶೇಷ ಎಂಬಂತೆ, ಲೇಖನದ ಪ್ರಾರಂಭದಲ್ಲಿ ಹೇಳುತ್ತಿದ್ದಾರಲ್ಲಾ, ಎಂದು ಆಶ್ಚರ್ಯವಾಗಬೇಡಿ. ಇದನ್ನು ಹೇಳುವುದಕ್ಕೂ ಬಲವಾದ...

ಕಥೆ

ನೆನಪು ಭಾಗ -೧

ನಟ್ಟಿರುಳ ರಾತ್ರಿ. ನಿಶ್ಯಬ್ಧ ವಾತಾವರಣ. ದೂರದಲ್ಲಿ ನಾಯಿಗಳ ಗೂಳಿಡುವ ಸದ್ದು. ನೆರಳೇ ಕಾರಣ ಇರಬೇಕು ಕೂಗಲು. ಅಲ್ಲೊಂದು ಇಲ್ಲೊಂದು ಮಿಣುಕು ದೀಪ. ಯಕ್ಷಗಾನ ಮುಗಿಸಿಯೊ ಅಥವಾ ನಿದ್ದೆಯನ್ನು ತಡೆಯಲಾಗದೆಯೊ ಅಥವಾ ಛೆ, ಇದು ಯಾಕೊ ಭಾಗವತ ಹಾಡುವವನು ಸರಿ ಇಲ್ಲವೆಂದೊ ಮನೆ ಕಡೆ ದಾರಿ ಹಿಡಿದಿರುವ ಮಂದಿಯ ಕೈಯಲ್ಲಿ ಮಾತಿನ ಜೊತೆ ಒಂದು ಬೆಳಕಿನ ಸಲಕರಣೆ. ಸೂಡಿ ಹಿಡಿದವನ ಕೈ...

ಅಂಕಣ

ಮರೆಯುವ ಮುನ್ನ…

ನೋಡ ನೋಡುತ್ತಿದ್ದಂತೆ ೨ ವರ್ಷಗಳು ಉರುಳಿ ಹೋದವು. ಆದರೆ ನೆನಪುಗಳು ಮಾತ್ರ ಶಾಶ್ವತ. ಕೆಲವು ನೆನಪುಗಳು ಮರೆಯಲು ಅಸಾಧ್ಯ. ಇನ್ನು ಕೆಲವು ನೆನಪುಗಳನ್ನು ಮರೆಯಲೇಬಾರದು. ಅಂತಹುದೇ ಒಂದು ಸುಂದರ ನೆನಪು ನನ್ನ ಸ್ನೇಹಿತರುಗಳೊಂದಿಗೆ…  ಮರೆಯುವ ಮುನ್ನ ಅದ್ಭುತವಾದ ನೆನಪುಗಳನ್ನು ಮೆಲುಕು ಹಾಕಿದರೆ ಹೇಗೆ? ನೀವು ನಿಮ್ಮ ನೆನಪಿನ ಬುತ್ತಿಯನ್ನು ತೆರೆದು ಒಮ್ಮೆ...

ಅಂಕಣ

ಭಾರತ ಸಾಧಿಸಿದ ಸಂಪರ್ಕ!

ಸಂವಹನ ಎಂಬುವುದಕ್ಕೆ ಹುಟ್ಟಿಲ್ಲ. ಅದು ಜೀವದೊಂದಿಗೇ ಹುಟ್ಟಿದ ಕಲೆ. ಹುಟ್ಟಿದ ಮಗು ಜೋರಾಗಿ ಅಳುತ್ತದಲ್ಲ? ಅದು ಮಗು ಸಂವಹಿಸಲು ಉಪಯೋಗಿಸುವ ವಿಧಾನವೇ. ಶಿಲಾಯುಗದ ಗೊರಿಲ್ಲಾದಿಂದ ಹಿಡಿದು ಸರ್ವ ಪ್ರಾಣಿಗಳೂ ಸಂವಹಿಸಲು ಒಂದಿಲ್ಲೊಂದು ವಿಧಾನವನ್ನು ಅನುಸರಿಸುತ್ತಿದ್ದವು. ಶಿಳ್ಳೆ, ಕೇಕೆ, ಕೈಸನ್ನೆ ಹೀಗೆ… ನಂತರ ಮನುಷ್ಯ ಭಾಷೆ ಕಲಿತ, ಬರವಣಿಗೆ ಕಲಿತ.  ಬರುಬರುತ್ತ...

ಅಂಕಣ

ನಾರಾಯಣ ಮೂರ್ತಿಯವರೊಂದಿಗೆ ಒಂದು ಸಂದರ್ಶನ…

ನಾರಾಯಣ ಮೂರ್ತಿ ಭಾರತದ ಐಟಿ ಇಂಡಸ್ಟ್ರಿಯ ದಿಗ್ಗಜರಲ್ಲಿ ಒಬ್ಬರು. ೧೯೮೧ರಲ್ಲಿ ಆರಂಭಿಸಿದ ಇನ್ಫೋಸಿಸ್ ಭಾರತದ ೬ನೇ ಅತಿದೊಡ್ಡ ಕಂಪನಿಯಾಗಿದೆ. ಈ ಸಂದರ್ಶನದಲ್ಲಿ ಮೂರ್ತಿಯವರು ತಾವು ಪಡೆದ ಮೌಲ್ಯಯುತ ಸಲಹೆಗಳ ಬಗ್ಗೆ, ನಾಯಕತ್ವ, ಕಾರ್ಯನಿರ್ವಹಣೆ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ ಹಾಗೂ ಇಂದಿನ ಯುವ ಪೀಳಿಗೆಗೆ ತಮ್ಮ ಕೆಲವು ಸಲಹೆಗಳನ್ನು ಕೂಡ ನೀಡಿದ್ದಾರೆ. ನೀವು...

Featured ಅಂಕಣ

ಉದ್ಯೋಗ ಕ್ಷೇತ್ರವನ್ನು ಬೆಂಬಿಡದೇ ಕಾಡುತ್ತಿರುವ ಅಟೋಮೇಶನ್ ಮತ್ತು ಕೃತ್ರಿಮ ಜಾಣ್ಮೆ!!

ಹಿಂದೆ ಎತ್ತುಗಳ ಮೂಲಕ ಬಹಳ ಕಷ್ಟಪಟ್ಟು ಉಳುಮೆ ಮಾಡುತ್ತಿದ್ದ ರೈತಾಪಿ ವರ್ಗ ಇಂದು ಸುಲಭವಾಗಿ ಟ್ರಾಕ್ಟರ್ ಮೂಲಕ ಉಳುಮೆ ಮಾಡುತ್ತಿದ್ದಾರೆ. ಹಿಂದೆ ಕಾರ್ಮಿಕರು ಲೇತಿನ ಮುಂದೆ ಗಂಟೆಗಟ್ಟಲೇ ನಿಂತು ತಯಾರಿಸುತ್ತಿದ್ದ ಗೇರ್, ನಟ್ಟು, ಬೋಲ್ಟ್ ಗಳು ಈಗ ಒಂದು ಪ್ರೋಗ್ರಾಮೀನ ಮೂಲಕ ಅಳತೆ ಸೆಟ್ ಮಾಡಿದರೆ ಕ್ಷಣಮಾತ್ರದಲ್ಲಿ ರಾಶಿ ರಾಶಿ ಸಂಖ್ಯೆಯಲ್ಲಿ ತಯಾರಾಗಿ ಬೀಳುತ್ತವೆ...

ಅಂಕಣ

ರಾಮ್’ದೇವ್’ರಿಂದ ಸಾಧ್ಯವಾಗಿದ್ದು ಬೇರೆಯವರಿಗೇಕೆ ಸಾಧ್ಯವಾಗಿಲ್ಲ?

ಟೀವಿ ವಾಹಿನಿಗಳು,ಪತ್ರಿಕೆಗಳು ಅಷ್ಟೇ ಏಕೆ ಕ್ರಿಕೆಟ್ ಸೇರಿದಂತೆ ಎಲ್ಲಾ ಕ್ರೀಡೆಗಳು, ಸಿನಿಮಾ ಕಾರ್ಯಕ್ರಮಗಳು ಎಲ್ಲವೂ ನಡೆಯುವುದು ಜಾಹೀರಾತುದಾರರಿಂದಲೇ. ನಾವು ಹಲವಾರು ವರ್ಷಗಳಿಂದ ನೋಡುತ್ತಿರುವಂತೆ ಹೆಣ್ಣಿನ ದೇಹವನ್ನು ಮಾದಕವಾಗಿ ತೋರಿಸಲೇಬೇಕೆನ್ನುವ ಅಲಿಖಿತ ನಿಯಮವನ್ನು ಎಲ್ಲಾ ಉತ್ಪನ್ನಗಳ ಜಾಹೀರಾತುಗಳೂ ಪಾಲಿಸಿಕೊಂಡು ಬರುತ್ತಿವೆ. ಶೇವಿಂಗ್ ಬ್ಲೇಡಿನ...

ಅಂಕಣ

ಬಂದರು ಬಂದರೆ ಜನಜೀವನಕ್ಕೇನು ಆಸರೆ…?

     “ಹರಿಯುವಲಿ ನೆಲೆಯಾದೆ, ನಿಂತಲ್ಲಿ ಹೊನ್ನಾದೆ, ನಿಲ್ಲದೇ ಸಾಗಿದರೆ ಸಾಗರಕೆ ಅಮೃತವಾದೆ” ಎಂಬ ಕವಿ ವಾಣಿಯು ಉತ್ತರಕನ್ನಡ ಜಿಲ್ಲೆಯ ಶಿರಸಿಯ ಶಂಕರಹೊಂಡ ಎಂಬಲ್ಲಿ ಜನಿಸಿ, ಪಶ್ಚಿಮ ಘಟ್ಟದ ಮೇಲಿಂದ ಹರಿದು ಬಂದು ಅಘನಾಶಿನಿ ಗ್ರಾಮದಲ್ಲಿ ಅರಬ್ಬೀ ಸಮುದ್ರವನ್ನು ಸೇರುವ ‘ಅಘನಾಶಿನಿ’ ನದಿಗೆ ಸಲ್ಲುತ್ತದೆ. “ಅಘ” ಎಂದರೆ ಪಾಪ. ಪಾಪವನ್ನ ನಾಶ ಮಾಡುವ ಸಾಮರ್ಥ್ಯವಿರುವ ಈ...