Featured

Featured ಅಂಕಣ

ಮೌನ: ಜಗವ ಬೆಳಗುವ ಶಕ್ತಿ! ಸದಾಶಿವನಾಗಲು ಬೇಕಾದ ಯುಕ್ತಿ!

ಕಾವೇರಿ ತುಂಬಿ ಹರಿದಿದ್ದಳು. ಅಂದು ಅವಳು ಹರಿಯುತ್ತಿದ್ದುದೇ ಹಾಗೆ. ತುಂಬಿದ ವನಸಿರಿಯ ನಡುವಿನಿಂದ ಬ್ರಹ್ಮಗಿರಿಯ ಮಡಿಲಿನಿಂದ ಉದಿಸಿ ಬಳುಕಿ ಬರುತ್ತಿದ್ದ ಚೆಲುವೆ ಅವಳು. ಈರೋಡಿನ ಸಮೀಪದ ಕೋಡುಮುಡಿಯಲ್ಲಿ ಹರಿವಾಗ ತನ್ನ ತೀರದ ಮರಳ ರಾಶಿಯಲ್ಲಿ ಧ್ಯಾನಕ್ಕೆ ಕುಳಿತವನೊಬ್ಬನನ್ನು ತನ್ನೊಳಗೆ ಅಡಗಿಸಿಕೊಂಡೇ ಹರಿದಳು. ಮೂರು ತಿಂಗಳವರೆಗೂ ಅವಳದ್ದು  ಮೇರೆ ಮೀರಿದ ಅಬ್ಬರ...

Featured ಅಂಕಣ

ಅಪ್ಪನಂತಾಗದ ದಿಟ್ಟ ಮಗಳು ಇಂದಿರಾ!

ಇಂದಿರಾ ಗಾಂಧಿಯವರ ವ್ಯಕ್ತಿತ್ವವನ್ನು ಅವಲೋಕಿಸುವಾಗ, ಆಕೆಯಲ್ಲೊಂದು ಅಭದ್ರತಾ ಭಾವವಿದ್ದಿದ್ದದ್ದು ಕಾಣುತ್ತದೆ. ಆ ಅಭದ್ರತೆಯ ಭಾವವೇ ಆಕೆಯ ವರ್ತನೆಯನ್ನು ನಿಯಂತ್ರಿಸುತ್ತಿತ್ತು. ಸಿಟ್ಟು, ಸೇಡು, ಸರ್ವಾಧಿಕಾರಿ ಮನಸ್ಸು, ಸಂಶಯ, ಅಸಹನೆ, ಅಳುಕು ಇವೆಲ್ಲವೂ ಮೊಳಕೆಯೊಡೆದದ್ದೇ ಆ ಅಭದ್ರತೆಯ ಕಾರಣದಿಂದ. ಅವರ ಜೀವನದ ವೈರುಧ್ಯಗಳನ್ನೇ ನೋಡಿ, ಒಮ್ಮೊಮ್ಮೆ ಗಟ್ಟಿತನದಿಂದ...

Featured ಅಂಕಣ ಕೇಳೋದೆಲ್ಲಾ ತಮಾಷೆಗಾಗಿ

ಕತ್ತರಿಸುವವರು ಕಣ್ಣೀರು ಹಾಕಲಿ ಎಂದು ವರ ಕೇಳಿದೆಯೆ ಈರುಳ್ಳಿ?

ಕೇಳೋದೆಲ್ಲಾ ತಮಾಷೆಗಾಗಿ – 2   ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬರುವುದು ಏಕೆ? ಬುದ್ಧಿವಂತನಿಗೆ ಮೂರು ಕಡೆ ಎಂಬ ಜನಪದ ಕತೆ ನೀವು ಕೇಳಿರಬಹುದು. ಕಳ್ಳನೊಬ್ಬ ಹೋಗಿ ಹೋಗಿ ಒಂದು ಈರುಳ್ಳಿ ಮಂಡಿಯಿಂದ ಗೋಣಿಚೀಲದಷ್ಟು ಈರುಳ್ಳಿ ಕದ್ದನಂತೆ. ಕದ್ದವನು ಸಿಕ್ಕಿಬೀಳದೇ ಇರುತ್ತಾನೆಯೇ? ಸಿಕ್ಕಿಬಿದ್ದ. ಅವನನ್ನು ಕದ್ದ ಮಾಲಿನ ಸಮೇತ ರಾಜರ ಸಮ್ಮುಖಕ್ಕೆ ತರಲಾಯಿತು...

Featured ಅಂಕಣ

ಸಾಂಸ್ಕೃತಿಕ ನಗರಿಯ ಸಂಸ್ಕೃತಿಯ ರಾಯಭಾರಿ: ರಘು ದೀಕ್ಷಿತ್

ಮೊದಲ ಭಾಗ:  ಸಾಂಸ್ಕೃತಿಕ ನಗರಿಯ ಸಂಸ್ಕೃತಿಯ ರಾಯಭಾರಿ: ರಘು ದೀಕ್ಷಿತ್  ರಾಕ್ ಬ್ಯಾಂಡ್ ಎಂದರೆ – ಇಂಗ್ಲಿಷ್ ಹಾಡುಗಳು ಎನ್ನುವುದು ಸಾಮಾನ್ಯನ ಅರಿವು; ಅದನ್ನೂ ಮೀರಿ ಕನ್ನಡ ಜಾನಪದ ಹಾಡುಗಳು, ಷರೀಫರ ತತ್ತ್ವಯುತ ಹಾಡುಗಳು ಮುಂತಾದವುಗಳನ್ನು ಆಯ್ಕೆ ಮಾಡುವ ಧೈರ್ಯ ಆಲೋಚನೆ ಹೇಗೆ ಬಂತು? ಧೈರ್ಯ ಇರಲಿಲ್ಲ. ಒಮ್ಮೆ ನಾನು ಅತ್ತೆ ಮನೆಯಲ್ಲಿದ್ದೆ, ಅಲ್ಲೊಂದು...

Featured ಅಂಕಣ

ಸಾಂಸ್ಕೃತಿಕ ನಗರಿಯ ಸಂಸ್ಕೃತಿಯ ರಾಯಭಾರಿ:  ರಘು ದೀಕ್ಷಿತ್

ಜನಪ್ರಿಯತೆ ಎನ್ನುವ ಕುದುರೆಯ ಹಿಂದೆ ಓಡದೆ ಹಲವು ವರ್ಷಗಳ ನಿರಂತರ ಪರಿಶ್ರಮದಿಂದ ಗೆಲವಿನ ಶಿಖರವನ್ನು ತಲಪಿರುವ ರಘು ದೀಕ್ಷಿತ್, ತಾನು ಸಾಧಿಸಿದ್ದೇನೆ ಎಂದರೆ ಅದು ಅಹಂ ಆಗುತ್ತದೆ ಎನ್ನುವ ಹಂಬಲ ವ್ಯಕ್ತಿ. ಅಪ್ಪಟ ಅಯ್ಯಂಗಾರೀ ಮನೆತನದಿಂದ ಬಂದಿರುವ ಇವರು ತಮ್ಮ ಅಂತರಾಳದಲ್ಲಿ ಭಾರತೀಯತೆಯ ಬಗ್ಗೆ ಆಳವಾದ ಪ್ರೀತಿ-ಗೌರವ ಬೆಳೆಸಿಕೊಂಡು ಬಂದಿದ್ದಾರೆ. ಭಾರತೀಯತೆ...

Featured ಅಂಕಣ

ಫೇಸ್‍ಬುಕ್  ಬಿಡುತ್ತೀರಾ? ಈಗಲೇ ಬಿಡಿ!

“ಫೇಸ್‍ಬುಕ್ ಬಿಡಬೇಕು ಅಂದುಕೊಂಡಿದ್ದೇನೆ. ದಿನಕ್ಕೆ ಮೂರ್ನಾಲ್ಕು ಗಂಟೆ ಅದರಲ್ಲೇ ಕಳೆದುಹೋಗ್ತದೆ ಮಾರಾಯ್ರೆ! ಬೆಳಗ್ಗೆ ಎದ್ದ ಮೇಲೆ ನಾನು ಮಾಡುವ ಮೊದಲ ಕೆಲಸವೇ ಮೊಬೈಲ್ ಉಜ್ಜಿ ಫೇಸ್‍ಬುಕ್‍ನಲ್ಲಿ ಎಷ್ಟು ಲೈಕ್, ಕಾಮೆಂಟ್ ಬಂದಿದೆ ನೊಡೋದು! ನಿಮಿಷಕ್ಕೊಮ್ಮೆಯಾದರೂ ಮೊಬೈಲು ನೋಟಿಫಿಕೇಷನ್‍ಗಳನ್ನು ತೋರಿಸುವುದರಿಂದ ಅವುಗಳನ್ನು ನೋಡದೆ ನಿರ್ವಾಹ ಇಲ್ಲ...

Featured ಅಂಕಣ

ಸಮಾಜದ ಸ್ವಾಸ್ಥ್ಯಕ್ಕಿಲ್ಲ ಬೆಲೆ, ಜಯಂತಿ ಆಚರಣೆಗೇ ಮೊದಲ ಆದ್ಯತೆ…

“ಯಾರು ಏನೇ ಹೇಳಲಿ, ಎಷ್ಟೇ ವಿರೋಧಿಸಿದರೂ ಸರಿ, ನಾನು ಟಿಪ್ಪು ಜಯಂತಿ ಮಾಡಿಯೇ ಸಿದ್ಧ” ಎಂದು ನಮ್ಮ ಕರ್ನಾಟಕ ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರು ಹೇಳಿಕೆ ನೀಡಿದಾಗಿನಿಂದ, ಮೊದಲೇ ಟಿಪ್ಪು ಜಯಂತಿ ವಿರೋಧಿಸುತ್ತಿದ್ದವರೆಲ್ಲರೂ ಮತ್ತಷ್ಟು ಉಗ್ರವಾಗಿ, ಕರ್ನಾಟಕದ ತುಂಬೆಲ್ಲಾ ಟಿಪ್ಪು ಜಯಂತಿ ವಿರೋಧಿ ಅಲೆಯೇ ಬಿಸಿ-ಬಿಸಿ ಸುದ್ದಿಯಾಗಿದೆ ಇಂದು...

Featured ಅಂಕಣ

ಇಲಿಯನ್ನು ಮಾತ್ರವಲ್ಲ, ಹೆಗ್ಗಣಗಳನ್ನೂ ಹಿಡಿದೇ ಹಿಡಿಯುತ್ತಾರೆ!

ನವೆಂಬರ್ 8, 2016.. ಪ್ರತಿಯೊಬ್ಬ ಭಾರತೀಯನೂ ಮರೆಯಲು ಸಾಧ್ಯವೇ ಇಲ್ಲ! ಜನರನ್ನು ಒಂದು ಕ್ಷಣ ತಬ್ಬಿಬ್ಬುಗೊಳಿಸಿದ, ಹಲವಾರು ದಿನ ಗೊಂದಲಕ್ಕೀಡು ಮಾಡಿದ, ಗಂಟೆಗಟ್ಟಲೆ ಬ್ಯಾಂಕಿನ ಮುಂದೆ ಕ್ಯೂ ನಿಲ್ಲಿಸಿದ ದಿನ ಅದು. ಜನ ಎದ್ದು ಬಿದ್ದು ಕ್ಯೂನಲ್ಲಿ‌ ನಿಂತದ್ದು, ಕ್ಯೂ ನಿಂತೂ ಕೂಡ ನೋಟು ಸಿಗದೇ ಹಿಡಿಶಾಪ ಹಾಕಿದ್ದು, ಬ್ಯಾಂಕಿನ ಸಿಬ್ಬಂದಿ ಜೊತೆ ಜಗಳವಾಡಿದ್ದು, ಅಲ್ಯಾರೋ...

Featured ಅಂಕಣ

ಇನ್ನೂರು ವರ್ಷಗಳ ನಂತರ ಅಸ್ಸಾಂ ಎಸ್ಟೇಟ್ ಕಾರ್ಮಿಕರಿಗೆ ಸ್ವಾತಂತ್ರ್ಯ ಸಿಕ್ಕಿದ್ದು – ಡಿಮಾನಿಟೈಜೇಷನ್ ಕೊಡುಗೆ

ಡಿಮಾನಿಟೈಜೇಷನ್ ಆದ ದಿನ ಏನಾಯ್ತು? ಡಿಮಾನಿಟೈಜೇಷನ್ ಬಗ್ಗೆ ಬ್ಯಾಂಕುಗಳಿಗೆ ಮೊದಲೇ ಗೊತ್ತಿತ್ತಾ? ದೇಶದ ಜನರಿಗೆ ನೋಟು ಅಮಾನ್ಯೀಕರಣದಿಂದ ಆದ ಲಾಭ ಏನು ಎನ್ನುವುದನ್ನು ಜಗತ್ತಿನ ಅತೀ ದೊಡ್ಡ ಬ್ಯಾಂಕ್ ನಲ್ಲಿ ಒಂದಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಚೇರ್ಮನ್’ಗಿಂತ ಮಿಗಿಲಾಗಿ ಇನ್ನು ಯಾರು ಹೇಳಬಲ್ಲರು? ನನಗೆ ನೋಟಿಗಾಗಿ ಸಾಲಿನಲ್ಲಿ ನಿಂತ ನೆನಪಿದೆ. ನೋಟು...

Featured ಅಂಕಣ

ಹರ್ಮನ್ ಹೆಸ್ಸೆ ಎಂಬ ಜರ್ಮನ್ ‘ಭಾರತೀಯ’…

‘ಸಿದ್ಧಾರ್ಥ’ ಎಂದು ಪುಸ್ತಕದ ಹೆಸರು ಕೇಳಿದಾಕ್ಷಣ ಮೊದಲು ನೆನಪಾಗಿದ್ದು ಗೌತಮ ಬುದ್ಧ. ಬುದ್ಧನಿಗೆ ಸಂಬಂಧಪಟ್ಟ ಪುಸ್ತಕವೆಂದೇ ಭಾವಿಸಿಯೇ ಓದಲು ಶುರುವಿಟ್ಟುಕೊಂಡಿದ್ದು. ಅದರೆ ಅದು ಸಂಪೂರ್ಣವಾಗಿ ಒಂದು ಕಾಲ್ಪನಿಕ ಕಥೆ ಎಂದು ನಂತರ ತಿಳಿದದ್ದು. ತನ್ನನ್ನು ತಾನು ಅರಿಯುವ ಹಂಬಲದಿಂದ ಹೊರಡುವ ಸಿದ್ಧಾರ್ಥನೆಂಬ ಹುಡುಗನ ಕಥೆ. ಭಾರತೀಯ ಧಾರ್ಮಿಕ ಅಲೋಚನೆಗಳನ್ನೊಳಗೊಂಡ ಈ...