ಪರಿಸರದ ನಾಡಿ ಬಾನಾಡಿ

ಅಂಕಣ ಪರಿಸರದ ನಾಡಿ ಬಾನಾಡಿ

ಊರ್ಣನಾಭನಿಗೊಂದು ನಮಸ್ಕಾರ ಕಾರ್ಯಾಗಾರ

ಸಮಸ್ತ ಜೀವಸಂಕುಲದ ಸ್ಥಿತಿಕರ್ತನಾದ ಪದುಮನಾಭನ ಬಗೆಗೆ ನೀವೆಲ್ಲ ತಿಳಿದಿರುವಿರಿ. ಪದುಮನಾಭನು ತನ್ನ ಜವಾಬ್ದಾರಿಯನ್ನು ಸಮರ್ಪಕವಾಗಿ ಈಡೇರಿಸುತ್ತಿದ್ದರೆ ಅದಕ್ಕೆ ಮಹತ್ತರ ಸಹಕಾರ ನೀಡುತ್ತಿರುವ ಊರ್ಣನಾಭನ ಬಗ್ಗೆ ನೀವೇನಾದರೂ ತಿಳಿದಿದ್ದೀರಾ? ಹೀಗೊಬ್ಬ ಊರ್ಣನಾಭನಿಲ್ಲದಿರುತ್ತಿದ್ದರೆ ಇಲ್ಲಿ ನಾವು ನೀವೆಲ್ಲ ಮೂಸುವ ಹೂವು, ತಿನ್ನುವ ಹಣ್ಣು ಇರುತ್ತಿರಲಿಲ್ಲ. ಬಹುಶಃ ಹಸು...

Featured ಪರಿಸರದ ನಾಡಿ ಬಾನಾಡಿ

ರೈತನಿಂದು ಇಬ್ಬಂದಿ, ಬಲೆಯೊಳಗೆ ಬಂಧಿ

ಇತ್ತೀಚೆಗೆ ಪತ್ರಿಕೆಯೊಂದರಲ್ಲಿ ಮೈಸೂರು ಸಮೀಪ ಮಾವಿನ ಮರದ ಫಸಲಿನ ರಕ್ಷಣೆಗಾಗಿ ಬಲೆ ಹಾಕಿದ್ದರಿಂದ ನೂರಾರು ಗಿಣಿಗಳು ಸತ್ತಿರುವ ವರದಿ ಬಂದಿತ್ತು. ಆ ವರದಿಗೆ ಸ್ಪಂದಿಸಿದ ಅನೇಕರು, ರೈತರು ಭಯಂಕರ ಕ್ರೂರಿಗಳು, ಕರುಣೆಯೇ ಇಲ್ಲದವರು, ಬಲೆ ಹಾಕಿದ ರೈತನಿಗೆ ನೇಣು ಹಾಕಬೇಕು ಎಂಬಿತ್ಯಾದಿ ಪ್ರತಿಕ್ರಿಯೆಗಳನ್ನು ಕೊಟ್ಟಿದ್ದಾರೆ! ಅವರುಗಳ ಪಕ್ಷಿ ಕಾಳಜಿ, ಪರಿಸರ ಪ್ರೇಮ...

Featured ಪರಿಸರದ ನಾಡಿ ಬಾನಾಡಿ

ಟಿಟ್ಟಿಭ – 24*7

ಹಕ್ಕಿ ವೀಕ್ಷಣೆಯನ್ನು ನಾನು ಹವ್ಯಾಸವಾಗಿ ಕಳೆದ ಹತ್ತು ವರ್ಷಗಳಿಂದ ಮಾಡುತ್ತಾ ಬಂದಿದ್ದೇನೆ. ಕರ್ನಾಟಕದ ದಕ್ಷಿಣ ಭಾಗ ಮತ್ತು ಪಶ್ಚಿಮದ ಕರಾವಳಿಯಲ್ಲಿ ಅಡ್ಡಾಡಿದ್ದೇನೆ. ನಾನೆಲ್ಲೇ ಹೋದರು ಅಲ್ಲಿನ ವಾತಾವರಣಕ್ಕನುಸಾರವಾಗಿ ಒಂದಿಲ್ಲಾ ಒಂದು ವಿಶಿಷ್ಠ ಪ್ರಬೇಧ ಸಿಗುತ್ತದೆ. ಅದು ಪ್ರಾಣಿ, ಪಕ್ಷಿ, ಚಿಟ್ಟೆ, ಜೇಡ. ಕೀಟ ಅಥವಾ ಗಿಡವಿರಬಹುದು. ಪ್ರಕೃತಿಯಲ್ಲಿ ಅಡಗಿದ್ದನ್ನು...

Featured ಪರಿಸರದ ನಾಡಿ ಬಾನಾಡಿ

ಚಾರಣದಲ್ಲಿ ಕಂಡ ಬಾನಾಡಿಗಳು – 1

  ಕಳೆದ ನವೆಂಬರ್ ತಿಂಗಳಲ್ಲಿ (2016) ಯೂತ್ ಹಾಸ್ಟೇಲ್ ಗಂಗೋತ್ರಿ ಘಟಕ, ಮೈಸೂರು ವತಿಯಿಂದ ಶಿವಮೊಗ್ಗ ಜಿಲ್ಲೆಯ ಕೊಲ್ಲೂರು ಸಮೀಪದ ಹಿಡ್ಲುಮನೆ ಜಲಪಾತ ಮತ್ತು ಸಾಗರ ಸಮೀಪದ ದಬ್ಬೆ ಜಲಪಾತಗಳಿಗೆ ಚಾರಣವನ್ನೇರ್ಪಡಿಸಿದ್ದರು. ನಾನು ಸೇರಿ ಐವತ್ತು ಮಂದಿ ಆ ಚಾರಣಕ್ಕೆ ಅಂದು ಸಿದ್ದರಿದ್ದೆವು. ಯೂತ್ ಹಾಸ್ಟೇಲ್‍ನ ಚಾರಣದ ಮಜವೇ ಬೇರೆ. ಅವರುಗಳು ಆಯ್ದುಕೊಳ್ಳುವ ಜಾಗಗಳೇ...

Featured ಪರಿಸರದ ನಾಡಿ ಬಾನಾಡಿ

ಅತಿ ವೇಗಿ ಕಂದು ಚಾಣ

ಮೂರು ವರ್ಷಗಳ ಹಿಂದೆ, ನಾನು ನನ್ನ ಗೆಳೆಯರೊಂದಿಗೆ ಕುದುರೆಮುಖ ಶಿಖರವನ್ನೇರಿದ್ದೆವು. ಕರ್ನಾಟಕದಲ್ಲಿರುವ ಚಾರಣ ತಾಣಗಳಲ್ಲಿ ಇದು ಪ್ರಸಿದ್ಧ ಮತ್ತು ಕಠಿಣ. ಬೆಟ್ಟದ ತಟದಿಂದ ತುದಿಗೇರಲು ನಾವಾದರೋ ಸುಮಾರು ಆರು ಗಂಟೆ ಸಮಯವನ್ನು ತೆಗೆದುಕೊಂಡಿದ್ದೆವು. ನಮ್ಮ ಚಾರಣವೆಂದರೆ ಅದು ಬರೀ ಏರುವುದಲ್ಲ, ಏರುವಾಗ ಅಲ್ಲಿರುವ ಗಿಡ ಮರಗಳನ್ನು ನೋಡುವುದು, ವಿಶೇಷವಾದ ಗಿಡಗಳನ್ನು...

Featured ಪರಿಸರದ ನಾಡಿ ಬಾನಾಡಿ

ಶುಕಲೋಕದಲ್ಲೊಂದು ಸುತ್ತು – 3

ಶುರುವಿನೆರಡು ಕಂತುಗಳಲ್ಲಿ ಶುಕಗಳ ಮುದ್ದು ಪುಟಗಳನ್ನು ನೋಡಿರುವಿರಿ. ಶುಕಲೋಕದ ಪ್ರೀತಿ, ಮಮಕಾರವನ್ನು ಉಂಡಿರುವಿರಿ. ನಾನೀಗ ಗಿಳಿಗಳ ಇನ್ನೊಂದು ಮುಖವನ್ನು ಪರಿಚಯಿಸುವೆ. ಗಿಳಿಗಳಿಗೆ “ Flying Monkey ’’ ಎಂಬ ಹೆಸರುಂಟು. ನಿಜಕ್ಕೂ ಇವು ಹಾರುವ ಮಂಗಗಳೇ. ಮಂಗಗಳು ಸಾಮಾನ್ಯವಾಗಿ ತಮ್ಮ ಅಗತ್ಯಕ್ಕೆ ಎಷ್ಟು ಬೇಕೋ ಅಷ್ಟು ತಿನ್ನುವುದಿಲ್ಲ. ತಾವು ತಿನ್ನುವುದಕ್ಕಿಂತ...

Featured ಪರಿಸರದ ನಾಡಿ ಬಾನಾಡಿ

ಶುಕಲೋಕದಲ್ಲೊಂದು ಸುತ್ತ – ಭಾಗ 2

ಶುಕಲೋಕದಲ್ಲೊಂದು ಸುತ್ತ ಮುದ್ದಿನ ಗಿಳಿ ಗಿಳಿ ಎಂದಾಕ್ಷಣ ಅನೇಕರಿಗೆ ಅದರ ಮುದ್ದಾದ ಮೈ ನೆನಪಾಗುತ್ತದೆ. ಅದರೊಂದಿಗೆ ಅದರ  ಚುಯ್ ಚುಯ್ ಕೂಗು ಕೆಲವೊಮ್ಮೆ ಹಿತವಾಗಿಯೂ ಮತ್ತೆ ಕೆಲವೊಮ್ಮೆ ಕರ್ಕಶವಾಗಿಯೂ ಕೇಳೀತು. ಅದೇನಿದ್ದರೂ ಅವರವರ ಭಾವಕ್ಕೆ! ಭಾವುಕನಾದ ಮಾನವನ ಸಾಂಗತ್ಯದಲ್ಲಿ ಗಿಳಿಯ ಆ ಕೂಗು ಮಾತಾಗಿ ಮಾರ್ಪಡುತ್ತದೆ. ನಾವಾಡುವ ಅನೇಕ ಪದಗಳನ್ನು ಅವು...

Featured ಪರಿಸರದ ನಾಡಿ ಬಾನಾಡಿ

ಶುಕಲೋಕದಲ್ಲೊಂದು ಸುತ್ತ

ಪಕ್ಷಿ ಎಂದೊಡನೆ ಎಲ್ಲರಿಗೂ ಮೊದಲಿಗೆ ನಮ್ಮ ರಾಷ್ಟ್ರ ಪಕ್ಷಿಯಾದ ಬಣ್ಣ ಬಣ್ಣದ ನವಿಲು ನೆನಪಾದೀತು. ಕೆಲವರಿಗೆ ಮಾಧುರ್ಯದ ಕೋಗಿಲೆಯಾದೀತು. ಇನ್ನು ಕೆಲವರಿಗೆ ಮನೆ ಮುಂದೆ ಹರಟುವ ಕಾಗೆ. ಮತ್ತೆ ಕೆಲವರಿಗೆ ಗಲೀಜು ಮಾಡುವ ಪಾರಿವಾಳ, ಆಗಾಗ ಮರೆಯಾಗುತ್ತಿರುವ ಗುಬ್ಬಚ್ಚಿ ನೆನಪಾದೀತು. ಹೀಗೆ ಪಕ್ಕನೆ ನೆನಪಾಗುವ ಹಕ್ಕಿಗಳ ಸಾಲಿನಲ್ಲಿ ಮೊದ ಮೊದಲಿಗೆ ಬರುವ ಇನ್ನೊಂದು ಹಕ್ಕಿ...

Featured ಪರಿಸರದ ನಾಡಿ ಬಾನಾಡಿ

ಬಾನಾಡಿಗಳಲ್ಲಿ “ಅಪ್ಪ”ನ ಪಾತ್ರ

ಜೂನ್ ಹತ್ತೊಂಬತ್ತರಂದು  ವಿಶ್ವದೆಲ್ಲೆಡೆ ಅಪ್ಪಂದಿರ ದಿನಾಚರಣೆಯನ್ನು ಆಚರಿಸಿಯಾಗಿದೆ. ಅವರಿವರು ಅಪ್ಪನನ್ನು ಎಷ್ಟು ಪೀತಿಸುತ್ತಾರೋ, ಗೌರವಿಸುತ್ತಾರೋ ಗೊತ್ತಿಲ್ಲ, ಅಂತೂ ಫೇಸ್ ಬುಕ್, ಟ್ವಿಟರ್ ಗಳಲ್ಲಿ ಅಪ್ಪನೊಂದಿಗಿನ ಫೋಟೋಗಳನ್ನು ಒಂದು ದಿನದ ಮಟ್ಟಿಗೆ ಹಂಚಿಕೊಂಡವರೇ. ಆ ಪ್ರೀತಿ, ಗೌರವ ದಿನವೊಂದಕ್ಕೆ ಸೀಮಿತವಾಗದಿದ್ದರೆ ಹಾಗೊಂದು ದಿನವನ್ನು ಆಚರಿಸುವ...

Featured ಪರಿಸರದ ನಾಡಿ ಬಾನಾಡಿ

ಬಾನಾಡಿಗಳೂ ಹೇಳುತ್ತಿವೆ – “ ಚಾಮುಂಡಿಬೆಟ್ಟ ಉಳಿಸಿ ’’

ಮೈಸೂರು  ಎಂದಾಕ್ಷಣ ಎಲ್ಲರ ಚಿತ್ತದಲ್ಲಿ ಬರುವ ಮೊದಲ ಕೆಲ ಚಿತ್ರಣಗಳಲ್ಲಿ ಚಾಮುಂಡಿ ಬೆಟ್ಟವೂ ಒಂದು. ಮಹಿಷಾಸುರನನ್ನು ಸಂಹರಿಸಿದ ನಂತರ ತಾಯಿ ಚಾಮುಂಡಿ ನೆಲೆನಿಂತ ತಾಣವೀ ಬೆಟ್ಟ. ಪುರಾತನವೂ, ಪುರಾಣಗಳಲ್ಲಿ ಉಲ್ಲೇಖಿಸಿರುವ ಮಹಾಬಲೇಶ್ವರನ ದೇವಸ್ಥಾನವೂ ಇಲ್ಲಿದೆ. ಮೈಸೂರು ಜಿಲ್ಲೆಗೇ ಪ್ರಮುಖ, ಮೈಸೂರು ಪೇಟೆಯ ನಡುವೆ ಇರುವ ಈ ಬೆಟ್ಟ, ಪೇಟೆಯ ವಾಯುಮಾಲಿನ್ಯವನ್ನು...