Author - Nagaraj Mukari

ಅಂಕಣ

ಸ್ಮಶಾನದಲ್ಲಿಯ ಖರ್ಜೂರಗಳು!

‘…ದಾರಿಯುದ್ದಕ್ಕೂ ಯೋಚಿಸುತ್ತಿದ್ದೆ, ಜೀವ ಇದ್ದಾಗ ಪ್ರೀತಿಸುವ ದೇಹವನ್ನು ಜೀವ ಹೋದಾಕ್ಷಣ ಅದನ್ನು ಪ್ರೀತಿಸುವುದಿರಲಿ ಹತ್ತಿರ ಹೋಗುವುದಕ್ಕೂ ಹೆದರುತ್ತೇವೆ.’ ಎಲ್ಲರಂತಿರಲಿಲ್ಲ ಆ ಬ್ರಾಹ್ಮಣರ ಹುಡುಗ, ಸುಬ್ರಹ್ಮಣ್ಯ ಭಟ್ಟ. ಎಂಟೊಂಭತ್ತು ವರುಷದವ ಇರಬಹುದು. ಅವನ ಸಮಾನ ವಯಸ್ಕರಿಗಿಂತ ಆಟ ಪಾಠಗಳಲ್ಲಿ ಭಿನ್ನವಾಗಿದ್ದ. ಎಲ್ಲರಂತೆ ಅವನೂ ಶಾಲೆಗೆ...

ಅಂಕಣ

ನನ್ನಂತೆ ಸಹಸ್ರಾರು ನಾಸ್ತಿಕರು ಇಂದು ಆಸ್ತಿಕರಾಗಿದ್ದಾರೆಂದರೆ…

ಅಲ್ಲಿ ನೆರೆದಿದ್ದ ಐದು ಲಕ್ಷ ಜನರ ಮಧ್ಯೆ, ಅರವತ್ತು ಅಡಿ ಎತ್ತರದ ರಥ ಬಿದ್ದಿತು! ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಲಿಲ್ಲ. ನಾಲ್ಕೈದು ಜನರಿಗೆ ಸಣ್ಣ ಪ್ರಮಾಣದಲ್ಲಿ ಗಾಯಗಳಷ್ಟೆ. ಆದರೆ ರಥೋತ್ಸವದ ಕೇಂದ್ರ ಬಿಂದು ಬಳ್ಳಾರಿ ಜಿಲ್ಲೆಯ ಕೊಟ್ಟೂರಿನ ಶ್ರೀಗುರು ಕೊಟ್ಟೂರೇಶ್ವರನ ಬಂಗಾರದ ಮುಖಾರವಿಂದ ಅಂದು ಮುಕ್ಕಾಗಿ ಹೋಗಿತ್ತು. ಎಲ್ಲಿಯ ದೇವರು? ಯಾಕೀ ಯಜ್ಞ...

ಅಂಕಣ

ಎತ್ತರಕ್ಕೆ ಬೆಳೆಯಲು ಜಾಣನೆಂಬ ಅಹಂಗೆ ಪೆಟ್ಟಾಗಲೇ ಬೇಕು..

ನಾಲ್ಕನೇ ತರಗತಿಯಲ್ಲಿ ಕ್ಲಾಸ್ ಟೀಚರ್ ಆಗಿ ಇದ್ದಿದ್ದು ಒಬ್ಬರೇ ಮಾಸ್ಟರು,ಅದು ಕೊಟ್ರಪ್ಪ ಮಾಸ್ಟರು. ನನ್ನ ನೆಚ್ಚಿನ, ಜೀವನದಲ್ಲಿ ನೆನೆಪಿಟ್ಟುಕೊಳ್ಳುವಂತಹ ವ್ಯಕ್ತಿತ್ವದವರು. ಅವರೊಬ್ಬರೇ ಕನ್ನಡ, ವಿಜ್ಞಾನ, ಸಮಾಜ ಮತ್ತು ಗಣಿತ ಪಾಠವನ್ನು ಅತೀ ಸಂತೋಷವಾಗಿ ಹೇಳಿಕೊಡುತ್ತಿದ್ದುದು. ತಿಂಗಳಿಗೊಮ್ಮೆ ಪರೀಕ್ಷೆ. ಗರಿಷ್ಟ ಅಂಕ ಇಪ್ಪತೈದು. ಸರಿ ಸುಮಾರು ಎಲ್ಲಾ ವಿಷಯಗಳಲ್ಲೂ...

Featured ಅಂಕಣ

ಲಾಸ್ಟ್ ಬುಕ್..!

ಬರೆದದ್ದು ಮೂರು ಅದರಲ್ಲಿ ಇದು “ಲಾಸ್ಟ್ ಬುಕ್” ಏನಿದು ಎಂದು ಹುಬ್ಬೇರಿಸುವವರೇ ಹೆಚ್ಚು. ನನ್ನ ಮಗ ಅಭಿ ಕೇಳಿಯೇ ಬಿಟ್ಟ ‘ಪಪ್ಪಾ..ನೀ ಇನ್ನು ಮುಂದೆ ಪುಸ್ತಕ ಬರೆಯೋದೇ ಇಲ್ವಾ..?’ ಮುಗ್ಧ ಪ್ರಶ್ನೆ. ನನ್ನ ಹೆಂಡತಿನೂ ‘ಹೆಸರು ಚೆನ್ನಾಗಿದೆ ಆದರೆ ಬೇರೆಯದೂ ಇದ್ದಿದ್ದರೆ ಇನ್ನೂ ಚೆನ್ನಾಗಿತ್ತು’ ಎಂದು ಅರೆ ಮನಸ್ಸಿಂದಲೇ ಹೇಳಿದಳು. ನಿಮಗೂ ಅನ್ನಿಸಿರಬಹುದು ಯಾಕೀ ಟೈಟಲ್...