Archive - March 2017

ಅಂಕಣ

ಸಾವು ಸೋಲಲ್ಲ…!!

ಇಂದು ಜ್ಯಾಕ್ ಸೊಬಿಯಾಕ್ ನೆನಪಾಗುತ್ತಿದ್ದಾನೆ. ಇಂದು ಮಾತ್ರವಲ್ಲ ‘ಆಸ್ಟಿಯೋಸರ್ಕೋಮ’ ಎಂದಾಗ, ಗಿಟಾರ್’ನ್ನು ಕಂಡಾಗ, ಧೈರ್ಯ ಹಾಗೂ ಆತ್ಮವಿಶ್ವಾಸಗಳ ಮಾತುಗಳು ಬಂದಾಗೆಲ್ಲಾ ಆತ ನೆನಪಾಗುತ್ತಾನೆ. ಜ್ಯಾಕ್ ಬಗ್ಗೆ ಈ ಹಿಂದೆಯೂ ಹೇಳಿದ್ದೆ. ಕೆಲ ವ್ಯಕ್ತಿಗಳು ನಮಗೆ ಹತ್ತಿರದಿಂದ ಪರಿಚಯವಿಲ್ಲದಿದ್ದರೂ, ಮುಖಾಮುಖಿಯಾಗಿ ಭೇಟಿಯಾಗಿಲ್ಲದಿದ್ದರೂ, ಅವರೊಂದಿಗೆ ಮಾತನಾಡದಿದ್ದರೂ...

ಅಂಕಣ

ರಾಜಕಾರಣಿಗಳ ದುಂಡಾವರ್ತನೆಗೆ ಕೊನೆ ಎಂದು??

ಘಟನೆ ೧: ಗೂಂಡಾ ರಾಜಕಾರಣಿ ಎಂದೇ ಹೆಸರುವಾಸಿಯಾಗಿರುವ ಸಮಾಜವಾದಿ ಪಕ್ಷದ ಆಜಂ ಖಾನ್ ಅಧಿಕಾರ ಕಳೆದುಕೊಂಡು ಮಾಜಿ ಸಚಿವನಾಗಿದ್ದರೂ ನೂತನ ಸರಕಾರ ಅಸ್ತಿತ್ವಕ್ಕೆ ಬರುವ ವರೆಗೆ ತನ್ನ ಅಧಿಕಾರ ಚಲಾವಣೆ ಮಾಡಬಹುದು ಅನ್ನುವ ಅಧಿಕಾರದ ಮದದಲ್ಲಿ ವಿಭಾಗೀಯ ಅಧಿಕಾರಿಯೊಬ್ಬರಿಗೆ ಆವಾಜ್ ಹಾಕುತ್ತಾರೆ. ರಸ್ತೆಯ ಗುಣಮಟ್ಟ ಕಳಪೆಯಾಗಿದ್ದರಿಂದ ಸಿಡಿಮಿಡಿಗೊಂಡು ಈ ರೀತಿಯ ರಸ್ತೆಗಳಲ್ಲಿ...

ಅಂಕಣ

ಬೇವು ನುಂಗಿ, ಬೆಲ್ಲ ಸವಿದು ನವಸಂವತ್ಸರವ ಸ್ವಾಗತಿಸೋ ಯುಗಾದಿ

 ಋತುಗಳ ರಾಜ ವಸಂತ ಕಾಲಿಟ್ಟನೆಂದರೆ ಎಲ್ಲೆಲ್ಲೂ ಜೀವಕಳೆಯ ಸಂಭ್ರಮ ಪಲ್ಲವಿಸುತ್ತದೆ. ಹಳೆಬೇರಿನ ಆಧಾರದ ಮೇಲೆ ಹೊಸ ಚಿಗುರು ಬಿರಿಯುವ ಈ ಕಾಲ ಪ್ರಕೃತಿಯ ನಿರಂತರ ಚಲನಶೀಲತೆಯ ಮಹಾನ್ ದ್ಯೋತಕವೂ ಹೌದು ಮತ್ತು ಮಾನವನ ಬದುಕಿನ ಏರಿಳಿತಗಳನ್ನು ಪ್ರತಿಬಿಂಬಿಸುವ ಅರ್ಥಪೂರ್ಣ ರೂಪಕವೂ ಹೌದು. ಹೊಸ ಟಿಸಿಲಿನ ಲವಲವಿಕೆ ಹಾಗೂ ತಾಜಾತನಗಳಂತಹ ಪ್ರಕೃತಿದತ್ತ ಪ್ರಭಾವಳಿಯೊಂದಿಗೆ...

ಕಥೆ

ಕಿರುಕತೆಗಳು

 ದಾನ   ಹೋಟೆಲ್ಲಿನ ಮಾಣಿ ಬೆಳಗ್ಗೆ ಎಲ್ಲ ಟೇಬಲ್ಲಿನ ಧೂಳು ಝಾಡಿಸಿ ಒರೆಸಿದ. ತಿಂಡಿಗಳೆಲ್ಲ ತಯಾರಾಗಿದ್ದವು. ಬಿಸಿಬಿಸಿ ವಡಾ, ಇಡ್ಲಿ, ದೋಸೆ, ಟೀ, ಕಾಫಿ, ಸಜ್ಜಿಗೆ, ರವಾ ಕೇಸರಿ, ಬೋಂಡ, ತಯಾರಾದ ಎಲ್ಲ ತಿಂಡಿಯ ಪಟ್ಟಿ ತಯಾರಿಸಿ, ಬೆಲೆಪಟ್ಟಿ ಹಾಕಿ ಹೊಟೆಲ್ಲಿನ ಮುಂದೆ ಬೋರ್ಡ್ ನೇತು ಹಾಕಿ ಗಲ್ಲಾಪೆಟ್ಟಿಗೆ ಮೇಲೆ ಕೂರುತ್ತಿದ್ದಂತೆ…   “ಅರೆರೆರೆ...

ಅಂಕಣ

ನಿಮ್ಮ ತಂದೆ ತಾಯಿಯರನ್ನು ವೃದ್ಧಾಶ್ರಮಕ್ಕೆ ಸೇರಿಸುವ ಮುನ್ನ ಸ್ವಲ್ಪ ಯೋಚಿಸಿ

 ಅದು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನಲ್ಲಿರುವ ವೃದ್ಧಾಶ್ರಮ. ಆತನಿಗೆ ವಯಸ್ಸು ಸುಮಾರು 80 ರ ಮೇಲಾಗಿರಬಹುದು. ಆತನ ಮಗ ಅವನನ್ನು ಅಲ್ಲಿ ತಂದು ಬಿಟ್ಟು ಸುಮಾರು 5 ರಿಂದ 6 ವರ್ಷಗಳೇ ಕಳೆದಿತ್ತು. ಈ 6 ವರ್ಷಗಳಲ್ಲಿ ಆತನ ಮಗ ಅವನನ್ನು ನೋಡಲು ಬಂದಿದ್ದು, ಕೇವಲ ಬೆರಳೆಣಿಕೆಯಷ್ಟು ಸಲ ಮಾತ್ರ. ಆತನ ಮಗನಿಗೆ ಹಣಕ್ಕೇನೂ ಕೊರತೆಯಿರಲಿಲ್ಲ, ತಿಂಗಳಿಗೆ ಲಕ್ಷಾಂತರ ರೂ...

Featured ಅಂಕಣ

ಆಸ್ಕರ್ : ಮರುಭೂಮಿಯ ಓಯಸಿಸ್`ನಂತೇಕೆ?

89 ವರ್ಷದ ಸುದೀರ್ಘ ಇತಿಹಾಸ. ದೇಶ ವಿದೇಶಗಳ ಸಾವಿರಾರು ಸ್ಪರ್ಧಿಗಳು. ಜಗತ್ತಿನ ಪ್ರತಿಯೊಬ್ಬ ಸಿನಿ ತಾರೆಯ ಮಹತ್ತರವಾದ ಕನಸು. ಕರಿ ಸೂಟು-ಬೂಟಿನ ಉಡುಗೆಯಿಂದ ಮಾತಿಗಿಳಿಯುವ ನಿರೂಪಕರು. ಅಲ್ಲಿ ನಿರೂಪಣೆಯ ಅವಕಾಶ ಸಿಕ್ಕರೂ ಅದೇ ಮಹಾನ್ ಸಾಧನೆ! ಅತಿ ಕ್ಲಿಷ್ಟವಾದ ಆಯ್ಕೆಯ ವಿಧಾನ. ಪ್ರಶಸ್ತಿಯ 24 ವರ್ಗಗಳು. ಪ್ರಶಸ್ತಿಯ ಮೊತ್ತ ಮಾತ್ರ ಶೂನ್ಯ!  3.8 ಕೆಜಿಯ ಪ್ರತಿಮೆ...

ಅಂಕಣ

ಸಿಹಿ-ಕಹಿಯ ಸಮಾಚಾರ

ಸವಿ ಸವಿ ಸಡಗರ, ಸಂಭ್ರಮದ ಸುಮಧುರ ಕ್ಷಣಗಳೇ ಹಬ್ಬದ ಹಿಗ್ಗು. ಇವು ಬದುಕಿನ ಮಬ್ಬು ಮಾಸುವಂತೆ ಮಾಡಿ, ಮಾಸದ ಖುಷಿಯ ಕಳೆಯನ್ನು ಮೈಮನಗಳಲ್ಲೆಲ್ಲಾ ಹಬ್ಬಿಸಿಬಿಡುತ್ತವೆ. ಹಲವು ಹಬ್’ಗಳ ಜಪದಲ್ಲೇ ಮುಳುಗಿಹೋಗುವ ಇಂದಿನವರಿಗೆ ತಮ್ಮದೇ ಮನೆಯಲ್ಲಿ ನಡೆಯುವ ಹಬ್ಬಗಳ ಬಗ್ಗೆ ಮಾತ್ರ ಆಸಕ್ತಿಯೇ ಇಲ್ಲ. ಹಬ್ಬ ಹರಿದಿನವೆಂದರೇ ಸಿಹಿ. ಅದೇಕೆ ತಾರತಮ್ಯ? ಎಲ್ಲ ಹಬ್ಬಗಳಲ್ಲೂ...

ಅಂಕಣ

ನನಗೂ ಒಂದು ಮನಸ್ಸಿದೆ…

“ನಾನು ಹೆಣ್ಣಾದರೆ ಏನಂತೆ, ಮನುಷ್ಯಳಲ್ಲವೇ? ಈ ಜಗದಲ್ಲಿರೋ ಪಾಪವನ್ನೆಲ್ಲ ನನ್ನ ಮೇಲೆ ಹೊರಿಸಿದ ಜನರಿಗೆ, ನನಗೂ ಒಂದು ಮನಸ್ಸಿದೆ ಎಂದು ಯಾವಾಗ ತಿಳಿಯುವುದು? ಎಂದಿನಿಂದಲೂ ಈ ಅನ್ಯಾಯ ನನ್ನ ಮೇಲೇ ಏಕೆ? ಆ ದಿನ ನಾನು ನನ್ನವನನ್ನು ಮೊದಲ ಬಾರಿ ಕಂಡಾಗ, ನನ್ನ ಅದೃಷ್ಟವೇ ಅದೃಷ್ಟವೆಂದು ಹಿಗ್ಗಿದ್ದೆ. ನನ್ನ ಸಖಿಯರಿಗೆಲ್ಲಾ ಅವನನ್ನು ತೋರಿಸಿ ನನ್ನ ಅದೃಷ್ಟವ...

ಅಂಕಣ

ಅವರವರ ಭಾವಕ್ಕೆ ಅವರವರ ಭಕುತಿಗೆ

ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೫೨ ಗಗನನೀಲಿಮೆಯೆನ್ನ ಕಣ್ಗೆ ಸೊಗವೀವಂತೆ | ಮುಗಿವ ತರಣಿಯ ರಕ್ತ ಹಿತವೆನಿಸದೇಕೋ ! || ಸೊಗದ ಮೂಲವದೆಲ್ಲಿ ನೀಲದೊಳೊ ಕೆಂಪಿನೊಳೊ | ಬಗೆವೆನ್ನ ಮನಸಿನೊಳೊ ? – ಮಂಕುತಿಮ್ಮ || ೦೫೨ || ಗಗನನೀಲಿಮೆಯೆನ್ನ ಕಣ್ಗೆ ಸೊಗವೀವಂತೆ | ನೀಲಾಕಾಶದ ಮುದವೀವ ಭಾವವನ್ನು ಯಾರು ತಾನೆ ಅಲ್ಲಗಳೆಯಲಾದೀತು? ಅದು ಎಲ್ಲರಿಗು ಹಿತವೆನಿಸುವ...

Uncategorized

‘ಸೀಡ್’ಬಾಲ್ ಅಭಿಯಾನ – ಹಸಿರಾಗಿಸೋಣ ಧರೆಯನ್ನ  

ಅಬ್ಬಬ್ಬಾ ಎಂಥಾ ಉರಿ ಬಿಸಿಲು, ಹೊರಗೆ ಕಾಲಿಡುವುದು ಅಸಾಧ್ಯ, ಮನೆ ಒಳಗೆ ಕುಳಿತರೂ ಬೆವತುಕೊಳ್ಳುವ ಸ್ಥಿತಿ, ರಾತ್ರಿಯಂತೂ ಸೆಕೆಗೆ ನಿದ್ದೆಯೇ ಇಲ್ಲ, ಮಹಡಿ ಮೇಲೆ ನಿಂತರೂ ತಣ್ಣಗಿನ ಗಾಳಿ ಬೀಸುವುದಿಲ್ಲ. ಕಳೆದ ಕೆಲ ವರ್ಷಗಳಿಂದ ಬೇಸಿಗೆ  ಆರಂಭವಾದೊಡನೆ ಎಲ್ಲರ ಬಾಯಲ್ಲೂ ಕೇಳಿ ಬರುವ ಮಾತುಗಳಿವು. ಅಭಿವೃದ್ಧಿಯ ಹೆಸರಿನಲ್ಲಿ ಮರಗಳನ್ನೆಲ್ಲ ಕಡಿದು, ಕಿಟಿಕಿ, ಬಾಗಿಲು...