Featured ಅಂಕಣ

ನಾವು ಬದಲಾದರೆ ಮಾತ್ರ ದೇಶ ಬದಲಾದೀತು…

ಮೋದಿ ಮೊನ್ನೆ ಟೌನ್ ಹಾಲಿನಲ್ಲಿ ಗೋರಕ್ಷಕರ ಬಗ್ಗೆ ಮಾತನಾಡಿದ್ದು ದೇಶಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಕೆಲವರು ಮೋದಿಯ ಮಾತನ್ನು ಸಮರ್ಥಿಸಿಕೊಂಡರೆ ಹಿಂದೂ ಸಂಘಟನೆಗಳ ನಾಯಕರೇ ಆ ಮಾತನ್ನು ವಿರೋಧಿಸಿದರು. ಒಂದು ದೊಡ್ಡ ಭಾಷಣದಲ್ಲಿ ಪ್ರಸ್ತಾಪಿಸಲಾದ ಒಂದೇ ಒಂದು ಪ್ಯಾರ ಇಡೀಯ ದೇಶದ ಗಮನವನ್ನು ಸೆಳೆಯಿತು. ದುರಾದೃಷ್ಟವೆಂದರೆ ಯಾವ ವಿಷಯ ಚರ್ಚೆಯಾಗಬೇಕಿತ್ತೋ ಅದಾಗಲಿಲ್ಲ. ಮೋದಿ ಆವತ್ತು my gov ಬಗ್ಗೆ ದೇಶದ ಆಯ್ದ ನಾಗರೀಕರ ಸಮಾವೇಶವನ್ನುದ್ದೇಶಿಸಿ ಮಾತನಾಡಿದ್ದರು. ಆ ಸಮಾವೇಶದಲ್ಲಿ ದೇಶದ ಬೆಳವಣಿಗೆಗೆ ಬೇಕಾಗುವ ಎಲ್ಲಾ ಪೂರಕ ಅಂಶಗಳನ್ನು ನಾಗರೀಕರಿಂದಲೇ ಪಡಕೊಂಡಿದ್ದರು. ನಿಜಾರ್ಥದಲ್ಲಿ ಆ ಎಲ್ಲಾ ಬೆಳವಣಿಗೆಗಳ ಕುರಿತು ಚರ್ಚೆಯಾಗಬೇಕಿತ್ತು. ಆದರೆ ನಮಗೆ ಮತ್ತು ನಮ್ಮ ಮಾಧ್ಯಮಗಳಿಗೆ ಬರೀ ನಕಾರಾತ್ಮಕ, ಅತಿರಂಜಿತ ವಿಷಯಗಳು ಮಾತ್ರ ಬೇಕಾಗುವುದಲ್ಲವೇ? ಆ ದಿನದ ಸಕಾರಾತ್ಮಕ  ವಿಚಾರಗಳೆಲ್ಲಾ ಮೂಲೆಗೆ ಸರಿದವು.

IMG-20160807-WA0026

Screenshot (23)

ಆ ಎರಡು ದಿನದ ಸಮಾವೇಶದಲ್ಲಿ ನಮ್ಮ ಸಮೀಪದ ಮೂಡಬಿದರೆಯವರಾದ ಪ್ರಸನ್ನ ಕಾಕುಂಜೆ ಭಾಗವಹಿಸಿದ್ದರು. ಕಳೆದ ವರ್ಷದ “ಮನ್ ಕಿ ಬಾತ್” ಕಾರ್ಯಕ್ರಮವೊಂದರಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತದ  ನಿಯಂತ್ರಣದ ಕುರಿತು ಇನ್ನೂ ಹೆಚ್ಚಿನ ಕಾಳಜಿ ವಹಿಸುವಂತೆ ಪ್ರಧಾನಿಗೆ ಸಲಹೆ ನೀಡಿ ಮೆಚ್ಚುಗೆ ಗಳಿಸಿದ್ದ ಪ್ರಸನ್ನ ಅವರನ್ನು ಭಾರತ ಸರಕಾರ ಈ ಸಮಾವೇಶಕ್ಕೆ ಆಹ್ವಾನಿಸಿತ್ತು. ಆ ಎರಡು ದಿನದ ಸಮಾವೇಶದಲ್ಲಿ ಭಾಗವಹಿಸಿದ ಅನುಭವವನ್ನು ಪ್ರಸನ್ನ ಅವರ ಮಾತಿನಲ್ಲೇ ಕೇಳೋಣ.

Prasanna (3)a

“ಮೊದ ಮೊದಲಿಗೆ ಮನ್ ಕೀ ಬಾತ್’ನಲ್ಲಿ ಮಾತನಾಡಬೇಕೆಂದು ಅನಿಸಿರಲಿಲ್ಲ. ಆದರೆ ನನ್ನ ಕಾರ್ಯಕ್ಷೇತ್ರವಾದ ಮೂಡಬಿದರೆಯ ಆಸುಪಾಸಿನಲ್ಲಿ ಹಲವಾರು ರಸ್ತೆ ಅಪಘಾತಗಳನ್ನು ಗಮನಿಸುತ್ತಿದ್ದೆ. ಸಣ್ಣ ಪ್ರಾಯದ ಹುಡುಗರೆಲ್ಲಾ ರ್ಯಾಶ್ ಡ್ರೈವಿಂಗ್ ಮಾಡಿ ಸಾಯುವುದನ್ನು ನೋಡುವಾಗ ಖೇದವಾಗುತ್ತಿತ್ತು. ನಮ್ಮಲ್ಲಿ ಎಷ್ಟೇ ಟ್ರಾಫಿಕ್ ರೂಲ್ಸುಗಳಿದ್ದರೂ ಆ ರೂಲುಗಳು ನಮ್ಮ ಮನೆಯಿಂದಲೇ ಆರಂಭವಾಗಬೇಕು. ಈ ನಿಟ್ಟಿನಲ್ಲಿ ಜನರಿಗೆನಾದರೂ ಒಳ್ಳೆಯ ಕರೆ ಕೊಡಿ ಎಂದು ವಿನಂತಿಸೊಣ ಅಂತ ಮನ್ ಕಿ ಬಾತ್’ನಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದೆ. ಮೋದಿಯವರು ಅದನ್ನು ಸಕಾರಾತ್ಮಕವಾಗಿ ತೆಗೆದುಕೊಂಡು ನನಗೆ ಮತ್ತಷ್ಟು ಸ್ಪೂರ್ತಿ ನೀಡಿದರು.

ಮೊನ್ನೆ ನಡೆದ ಸಮಾವೇಶದಲ್ಲಿ ಈ ವಿಷಯಗಳನ್ನೂ ಸೇರಿಸಿ mygov ನಲ್ಲಿ ಮತ್ತಷ್ಟು ಜನರು ಪಾಲ್ಗೊಳ್ಳುವಂತೆ ಮಾಡಲು ಹಲವಾರು ಕಾರ್ಯಯೋಜನೆಯನ್ನು ಹಾಕಿಕೊಳ್ಳಲಾಯಿತು. ಇದುವರೆಗೆ ಸಾಮಾನ್ಯ ನಾಗರೀಕರಿಗೆ ದೇಶದ ಆಡಳಿತದಲ್ಲಿ ಭಾಗವಹಿಸುವ, ತನ್ನ ಸಲಹೆಯನ್ನು ಮುಕ್ತವಾಗಿ ಹೇಳುವ ಯಾವುದೇ ವ್ಯವಸ್ಥೆಯಿರಲಿಲ್ಲ. mygov ಮೂಲಕ ಈಗ ಅದೂ ಕೂಡಾ ಸಾಧ್ಯವಾಗಿದೆ. ದೇಶದ ಸಕಾರಾತ್ಮಕ ಬೆಳವಣಿಗೆಯ ದೃಷ್ಟಿಯಿಂದ ನಾವೆಲ್ಲರೂ ಅದರಲ್ಲಿ ಸಕ್ರೀಯವಾಗಿ ಭಾಗವಹಿಸಬೇಕಾದುದು ಅತೀ ಅಗತ್ಯ.

ಮೊನ್ನೆಯ ಸಮಾವೇಶದಲ್ಲಿ ಸಣ್ಣ ವಯಸ್ಸಿನ ಹುಡುಗನಿಂದ ಹಿಡಿದು ಹಿರಿಯ ನಾಗರೀಕರೂ ಪಾಲ್ಗೊಂಡಿದ್ದರು. ನಮ್ಮೆಲ್ಲರ ಸಲಹೆಯನ್ನು ಪ್ರಧಾನಮಂತ್ರಿಯವರು ಸಾವಧಾನದಿಂದ ಆಲಿಸುವಾಗ ದೇಶದ ಪ್ರಗತಿಯ ಕುರಿತಾಗಿ ಅವರಿಗೆ ಇರುವ ಕಾಳಜಿ ಎದ್ದು ಕಾಣುತ್ತಿತ್ತು,

ಡಿಜಿಟಲ್ ಇಂಡಿಯಾ, ಮೇಕ್ ಇನ್ ಇಂಡಿಯಾದಂತಹ ಯೋಜನೆಯಿಂದ ಸಾಮಾನ್ಯ ಜನರಿಗೇನೂ ಲಾಭವಿಲ್ಲ ಅಂತ ಕೆಲವರು ಹೇಳುತ್ತಿದ್ದಾರೆ. ಮೋದಿಯಿಂದಾಗಿ ಕಳೆದೆರಡು ವರ್ಷದಲ್ಲಿ ಏನು ಬದಲಾವಣೆಯಾಯ್ತು ಅಂತ ಪ್ರಶ್ನಿಸುತ್ತಿದ್ಡಾರೆ. ಆದರೆ ಈ ಎಲ್ಲಾ ಯೋಜನೆಗಳು ಭಾರತದ ಭವಿಷ್ಯದ  ದೂರದೃಷ್ಟಿಯುಳ್ಳಂತಹ ಯೋಜನೆಗಳು. ಒಮ್ಮಿಂದೊಮ್ಮೆಲೆ ಬದಲಾವಣೆಯನ್ನು ತರಲು ಮೋದಿಯೇನು ಜಾದೂಗಾರನಲ್ಲವಲ್ಲಾ? ಅಷ್ಟಕ್ಕೂ ಬೇರೆಯವರನ್ನು ಅದೆಷ್ಟೋ ವರ್ಷಗಳಿಂದ ಸಹಿಸಿಕೊಂಡು ಬಂದಿದ್ದೇವೆ, ಮೋದಿಯನ್ನು ಪೂರ್ಣ ಐದು ವರ್ಷ ಸಹಿಸಿಕೊಳ್ಳಲು ಸಾಧ್ಯವಿಲ್ಲವೇ? ನಾನು ಒಂದೇ ಒಂದು ಮಾತು ಹೇಳುತ್ತೇನೆ. “KEEP CALM & TRUST MODI” ಅಷ್ಟೆ.

ನಮ್ಮ ಯಾವುದೇ ವ್ಯವಸ್ಥೆಯನ್ನು ದೂರುವ ಮುನ್ನ ನಾವೆಷ್ಟು ಆ ವ್ಯವಸ್ಥೆಯ ಭಾಗವಾಗಿದ್ದೇವೆ, ನಮ್ಮ ಕೊಡುಗೆಯೇನಿದೆ ಎಂಬುವುದು ಮುಖ್ಯವಾಗುತ್ತದೆ. ಭಾರತದಂತಹ ಬೃಹತ್ ರಾಷ್ಟ್ರದಲ್ಲಿ ಬದಲಾವಣೆಯನ್ನು ಬರೀಯ ಸರಕಾರದಿಂದ ಮಾತ್ರ ನಿರೀಕ್ಷಿಸಲು ಸಾಧ್ಯವಾಗದು. ಸ್ವಚ್ಛ ಭಾರತ ಯಶಸ್ವಿಯಾಗಲಿಲ್ಲವೆಂದರೆ ಅದು ಯಾರ ತಪ್ಪು? ನಮ್ಮದೋ? ಅಥವಾ ಆ ಐಡಿಯಾವನ್ನು ತಂದ ಪ್ರಧಾನಿದೋ? ಬದಲಾವಣೆಯೆನ್ನುವುದು ನಾವು ಬದಲಾದರೆ ಮಾತ್ರ ಸಾಧ್ಯವಿದೆ, ನಮ್ಮ ಮೆಂಟಾಲಿಟಿ ಬದಲಾದರೆ ಮಾತ್ರ ಸಾಧ್ಯವಿದೆ. ಇಲ್ಲದಿದ್ದರೆ ಮೋದಿ ಇನ್ನಿಪ್ಪತ್ತು ವರ್ಷ ನಮ್ಮನ್ನಾಳಿದರೂ ಪೂರ್ಣ ಪ್ರಮಾಣದ ಬದಲಾವಣೆಯನ್ನು ತರಲು ಸಾಧ್ಯವಿಲ್ಲ.”

ಇಷ್ಟೆಲ್ಲಾ ಹೇಳುವಾಗ ಪ್ರಸನ್ನ ಅವರ ಧ್ವನಿಯಲ್ಲಿ ಪ್ರಧಾನಿಯವರ ಮೇಲೆ ಅವರಿಟ್ಟಂತಹ ಅಪಾರ ವಿಶ್ವಾಸ ಪ್ರತಿಧ್ವನಿಸುತ್ತಿತ್ತು. ದೇಶದ ಬದಲಾವಣೆಯ ಪ್ರಕ್ರೀಯೆಯಲ್ಲಿ ನಾವೂ ಸಹ ಭಾಗವಹಿಸಬೇಕೆನ್ನುವ ಉತ್ಸಾಹ ಚಿಮ್ಮುತ್ತಿತ್ತು.

Facebook ಕಾಮೆಂಟ್ಸ್

ಲೇಖಕರ ಕುರಿತು

Readoo Staff

Tailored news content, just for you.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!